ಬಳಕೆದಾರರಿಗೆ ಬಂಪರ್ ಕೊಡುಗೆ, ಇಂಟರ್ನೆಟ್ ಇಲ್ಲದೆಯೂ ವರ್ಕ್ ಆಗಲಿದೆ ವ್ಯಾಟ್ಸಾಪ್!

By Chethan KumarFirst Published Jul 23, 2024, 5:09 PM IST
Highlights

ವ್ಯಾಟ್ಸಾಪ್ ಇದೀಗ ಮತ್ತೊಂದು ಬಂಪರ್ ಫೀಚರ್ ಪರಿಚಯಿಸುತ್ತಿದೆ. ಬಳಕೆದಾರರು ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ವ್ಯಾಟ್ಸ್ಆ್ಯಪ್ ಬಳಸಬಹುದು. ಐಫೋನ್ ಹಾಗೂ ಆ್ಯಂಡ್ರಾಯ್ಡ್ ಫೋನ್ ಎರಡಲ್ಲೂ ಈ ಫೀಚರ್ ಕಾರ್ಯನಿರ್ವಹಿಸಲಿದೆ.
 

ನವದೆಹಲಿ(ಜು.23) ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಪ್ರತಿ ಬಾರಿ ಹೊಸ ಹೊಸ ಫೀಚರ್ ನೀಡುತ್ತಾ ಬಂದಿದೆ. ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವನ್ನು ಕೂಡ ವ್ಯಾಟ್ಸಾಪ್ ನೀಡಿದೆ. ಇದೀಗ  ವ್ಯಾಟ್ಸಾಪ್ ಮತ್ತೊಂದು ಹೊಚ್ಚ ಫೀಚರ್ ಪರಿಚಯಿಸುತ್ತಿದೆ. ಈ ಫೀಚರ್ ಮೂಲಕ ಇಂಟರ್ನೆಟ್ ಇಲ್ಲದೆಯೂ ವ್ಯಾಟ್ಸಾಪ್ ಕಾರ್ಯನಿರ್ವಹಿಸಲಿಗೆ. ಫೋಟೋ, ವಿಡಿಯೋ, ಫೈಲ್ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಆ್ಯಂಡ್ರಾಯ್ಡ್ ಹಾಗೂ ಐಫೋನ್ ಎರಡೂ ಬಳಕೆದಾರರು ಈ ಫೀಚರ್ ಲಭ್ಯವಾಗಲಿದೆ.

ಹೊಸ ಫೀಚರ್ ಸದ್ಯ ಬಿಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರಿಗೆ ಈ ಫೀಚರ್ ಲಭ್ಯವಾಗಲಿದೆ. ಸದ್ಯ ಫೋಟೋ, ವಿಡಿಯೋ, ಫೈಲ್ ಮತ್ತೊಬ್ಬರ ವ್ಯಾಟ್ಸಾಪ್‌ಗೆ ಶೇರ್ ಮಾಡಲು ಇಂಟರ್ನೆಟ್ ಅತ್ಯಗತ್ಯ. ಆದರೆ ಹೊಸ ಫೀಚರ್‌ನಿಂದ ಫೈಲ್ ಶೇರಿಂಗ್‌ಗೆ ಇಂಟರ್ನೆಟ್ ಅಗತ್ಯವಿಲ್ಲ. ನಿಮ್ಮ ಫೋನ್‌ನಲ್ಲಿ ಡೇಟಾ ಇಲ್ಲದಿದ್ದರೂ ಫೈಲ್ ಶೇರಿಂಗ್ ಸಾಧ್ಯವಿದೆ. ಹತ್ತರಿದ ವ್ಯಾಟ್ಸಾಪ್ ಖಾತೆಗೆ ಇಂಟರ್ನೆಟ್ ಇಲ್ಲದೆಯೂ ಫೈಲ್ ಶೇರಿಂಗ್ ಸಾಧ್ಯತೆ ಫೀಚರನ್ನು ವ್ಯಾಟ್ಸಾಪ್ ಪರಿಚಯಿಸುತ್ತಿದೆ.

Latest Videos

ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್, AI ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್!

ಹೈಕ್ವಾಲಿಟಿ ಫೋಟೋ, ವಿಡಿಯೋ ಹಾಗೂ ಡ್ಯಾಕ್ಯುಮೆಂಟ್‌ಗಳನ್ನು ಪಕ್ಕದ ವ್ಯಾಟ್ಸಾಪ್ ಖಾತೆಗೆ ಇಂಟರ್ನೆಟ್ ಇಲ್ಲದೆ ಶೇರ್ ಮಾಡಲು ಹೊಸ ಫೀಚರ್ ಮೂಲಕ ಸುಲಭವಾಗಲಿದೆ. ಇಷ್ಟೇ ಅಲ್ಲ ಅದೇ ಕ್ವಾಲಿಟಿಯಲ್ಲಿ ಫೋಟೋ, ವಿಡಿಯೋಗಳು ಶೇರ್ ಆಗಲಿದೆ. ಅದೆಷ್ಟೆ ದೊಡ್ಡ ಗಾತ್ರದ ಫೈಲ್‌ಗಳನ್ನು ಇಂಟರ್ನೆಟ್ ಇಲ್ಲದೆ ಸುಲಭವಾಗಿ ಹಂಚಿಕೊಳ್ಳಬಹುದು. ಐಫೋನ್‌ನಲ್ಲಿರುವ ಏರ್‌ಡ್ರಾಪ್ ಫೀಚರ್ ರೀತಿಯಲ್ಲೇ ವ್ಯಾಟ್ಸಾಪ್ ಹೊಸ ಫೀಚರ್ ನೀಡುತ್ತಿದೆ. 

ಈ ಫೀಚರ್ ಮೂಲಕ ಇಂಟರ್ನೆಟ್ ಬಳಸದೆ ಅಥವಾ ಇಲ್ಲದೆ ಫೈಲ್ ಶೇರ್ ಮಾಡಲು ಕೆಲ ವಿಧಾನಗಳಿವೆ. ಪ್ರಮುಖವಾಗಿ ನಿಮ್ಮ ಹತ್ತಿರದ ವ್ಯಾಟ್ಸಾಪ್ ಖಾತೆಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗಲಿದೆ. ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಹಂಚಿಕೊಳ್ಳಬೇಕಿರುವ ಫೈಲ್ ಆಯ್ಕೆ ಮಾಡಿ ಸೆಂಡ್ ಮಾಡಿದರೆ ಸಾಕು. ಅದೇ ಕ್ವಾಲಿಟಿ, ಅದೇ ಗಾತ್ರದಲ್ಲಿ ಫೈಲ್ ಶೇರ್ ಆಗಲಿದೆ. ಹೊಸ ಫೀಚರ್ ಬಳಕೆದಾರರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ.

ಈ ಹಿಂದೆ ಫೈಲ್ ಶೇರ್ ಮಾಡಲು ಶೇರ್ ಇಟ್ , ಬ್ಲೂಟೂಥ್ ಮೂಲಕ ಹಂಚಿಕೊಳ್ಳಲಾಗುತ್ತಿತ್ತು. ಇದರ ಅಭಿವೃದ್ಧಿಪಡಿಸಿದ ವರ್ಶನ್ ಇದೀಗ ವ್ಯಾಟ್ಸ್ಆ್ಯಪ್ ನೀಡುತ್ತಿದೆ.  ಹೊಸ ಫೀಚರ್ ಮೂಲಕ ಅದೆಷ್ಟೇ ಫೈಲ್‌ನ್ನೂ ಒಂದೇ ಬಾರಿ ಹಂಚಿಕೊಳ್ಳಲು ಸಾಧ್ಯವಿದೆ. 

WhatsApp ಬಳಕೆದಾರರಿಗೆ ಗುಡ್ ನ್ಯೂಸ್, ಸ್ಟೇಟಸ್‌ ವಿಡಿಯೋ ನೀತಿಯಲ್ಲಿ ಬದಲಾವಣೆ!

click me!