
ಇನ್ಸ್ಟಾಗ್ರಾಮ್ ಬಳಕೆದಾರರು ವಿಡಿಯೋ, ಫೋಟೋಗೆ ಲೈಕ್ಸ್, ಕಮೆಂಟ್ ಮಾಡದೆ, ಡೌನ್ಲೋಡ್ ಕೂಡ ಮಾಡದೆ ಕದ್ದು ಮುಚ್ಚಿ ಸೇವ್ ಮಾಡಿಕೊಳ್ಳುವ ಹವ್ಯಾಸ ಯಾರಿಗಿದೆ? ಫೇವರಿಟ್ ಅಥವಾ ಬುಕ್‌ಮಾರ್ಕ್ ಫೀಚರ್ ಮೂಲಕ ಪೋಸ್ಟ್ ಮಾಡಿದ ವ್ಯಕ್ತಿಗೂ ತಿಳಿಯದ ರೀತಿಯಲ್ಲಿ ಪೋಸ್ಟ್ ಸೇವ್ ಮಾಡಿಕೊಳ್ಳುವರ ಸಂಖ್ಯೆ ದೊಡ್ಡದಿದೆ. ಹೀಗಿ ನೀವು ನಿಮ್ ಹುಡುಗಿ, ಹುಡುಗ ಅಥವಾ ಕ್ರಶ್ ಫೋಟೋ, ವಿಡಿಯೋ ಅವರಿಗೆ ಗೊತ್ತಿಲ್ಲದಂತೆ ಸೇವ್ ಮಾಡಿದ್ದೀರಾ? ಹಾಗಾದರೆ ಹೊಸ ಫೀಚರ್ ಪ್ರಕಾರ ನಿಮ್ಮ ಹೆಸರು ಬಹಿರಂಗವಾಗಲಿದೆ. ಇದೀಗ ಇನ್‌ಸ್ಟಾಗ್ರಾಂ ಹೊಸ ಫೀಚರ್ ಪರಿಚಯಿಸುತ್ತಿದೆ ಅನ್ನೋ ಮಾತುಗಳು ಕೇಳಬರುತ್ತಿದೆ. ಈ ಪೈಕಿ ಇಷ್ಟು ದಿನ ಪೋಸ್ಟ್ ಯಾರು ಲೈಕ್ಸ್ ಮಾಡಿದ್ದಾರೆ ಅನ್ನೋದು ತೋರಿಸುತ್ತಿದ್ದ ಇನ್‌ಸ್ಟಾ ಇನ್ಮುಂದೆ ಯಾರೆಲ್ಲಾ ಸೇವ್ ಮಾಡಿದ್ದಾರೆ ಅನ್ನೋದು ಕೂಡ ಬಹಿರಂಗ ಮಾಡಲಿದೆ ಅನ್ನೋ ಮಾತು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಇನ್‌ಸ್ಟಾದಲ್ಲಿ ಮೀಮ್ಸ್ ಹರಿದಾಡುತ್ತಿದೆ.
ಇನ್‌ಸ್ಟಾ ಅತ್ಯಂತ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆ ಮಾಡುವು ಸೋಶಿಯಲ್ ಮೀಡಯಾ ಪೈಕಿ ಒಂದಾಗಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಂ ಹಲವು ಫೀಚರ್ಸ್ ಪರಿಚಯಿಸಿದೆ. ಬಳಕೆದಾರರ ಬೇಡಿಕೆಗೆ ತಕ್ಕಂತೆ ಕೆಲ ಫೀಚರ್ಸ್ ನೀಡಿದೆ. ಇದೀಗ ಇನ್‌ಸ್ಟಾಗ್ರಾಂ ಲೈಕ್ಸ್ ರೀತಿಯಲ್ಲೇ ಪೋಸ್ಟ್ ಸೇವ್ ಮಾಡಿಕೊಂಡವರ ಹೆಸರು ಬಹಿರಂಗ ಪಡಿಸುವ ಫೀಚರ್ ಪರಿಚಯಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ.
ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಕೂಡುಗೆ, ನಿಮ್ಮ ಫೋಟೋವನ್ನೇ ಸ್ಟಿಕ್ಕರ್ ಆಗಿ ಪರಿವರ್ತಿಸುವ ಫೀಚರ್!
ಇಷ್ಟು ದಿನ ಕದ್ದು ಮುಚ್ಚಿ ಪೋಸ್ಟ್ ಹಾಕಿದವರಿಗೆ ಗೊತ್ತಿಲ್ಲದಂತೆ ಫೋಟೋ, ವಿಡಿಯೋಗಳನ್ನು ಸೇವ್ ಮಾಡಿಕೊಂಡವರಿಗೆ ಈ ಫೀಚರ್ ಸಂಕಷ್ಟ ತರಲಿದೆ. ಕಾರಣ ಪೋಸ್ಟ್ ಹಾಕಿದವರಿಗೆ ತಮ್ಮ ಪೋಸ್ಟನ್ನು ಯಾರು ಸೇವ್ ಮಾಡಿಕೊಂಡಿದ್ದಾರೆ ಅನ್ನೋ ಜಾತಕ ಬಯಲಾಗಲಿದೆ. ಲೈಕ್ಸ್, ಕಮೆಂಟ್ ಹಾಕದೆ, ನೇರವಾಗಿ ಸೇವ್ ಮಾಡಿ ಮತ್ತೆ ಮತ್ತೆ ನೋಡುವ ರಸಿಕರ ಈ ಫೀಚರ್ ಉಪಯೋಗಕಕ್ಕಿಂತ ಅಪಾಯವನ್ನೇ ತರಲಿದೆ.
ಈ ಚರ್ಚ ಶುರುವಾದ ಬೆನ್ನಲ್ಲೇ ಇದೀಗ ಇನ್‌ಸ್ಟಾದಲ್ಲಿ ಮೀಮ್ಸ್ ಹರಿದಾಡುತ್ತಿದೆ. ಇಲ್ಲೀವರೆಗೆ ಸಾವಿರಾರು ಪೋಸ್ಟ್‌ಗಳನ್ನು ಸೇವ್ ಮಾಡಿಕೊಂಡವರು ಅನ್ ಸೇವ್ ಮಾಡಲು ಬೆವರು ಸುರಿಸುತ್ತಿರುವ ಮೀಮ್ಸ್ ವೈರಲ್ ಆಗುತ್ತಿದೆ.
ಸದ್ಯ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನ್ನು ಯಾರು ಸೇವ್ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗುವುದಿಲ್ಲ. ಒಟ್ಟು ಎಷ್ಟು ಬಾರಿ ಪೋಸ್ಟ್ ಸೇವ್ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನು ಕಲೆಹಾಕಲು ಸಾಧ್ಯವಿದೆ. ಆದರೆ ಸೇವ್ ಮಾಡಿಕೊಂಡವರ ಹೆಸರು ಬಹಿರಂಗಪಡಿಸುವ ಫೀಚರ್ ಪರಿಚಯಿಸುವ ಕುರಿತು ಇನ್‌ಸ್ಟಾಗ್ರಾಂ ಅಥವಾ ಮಾತೃಸಂಸ್ಥೆ ಮೆಟಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
Take A Break: ಸಾಮಾಜಿಕ ಜಾಲತಾಣದಿಂದ ವಿರಾಮ ತೆಗೆದುಕೊಳ್ಳಲು ಇನ್ಸ್ಟಾಗ್ರಾಮ್ ನೋಟಿಫಿಕೆಶನ್!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.