ಮೈಕ್ರೋಸಾಫ್ಟ್ ಸ್ಥಗಿತ ಸಮಸ್ಯೆ ಪತ್ತೆ ಹಚ್ಚಿದ ಕ್ರೌಡ್‌ಸ್ಟ್ರೈಕ್, ಇದು ಸೈಬರ್ ದಾಳಿಯಲ್ಲ ಎಂದು ಸ್ಪಷ್ಟನೆ!

By Chethan Kumar  |  First Published Jul 19, 2024, 4:47 PM IST

ಇಂದು ಭಾರತ ಸೇರಿದಂತೆ ವಿಶ್ವಾದ್ಯಂತ ಮೈಕ್ರೋಸಾಫ್ಟ್ ದಿಢೀರ್ ಸ್ಥಗಿತಗೊಂಡು ಹಲವು ಅನಾಹುತಗಳೇ ಸಂಭವಿಸಿದೆ. ಕ್ರೌಡ್‌ಸ್ಟ್ರೈಕ್ ಅಪ್‌ಡೇಟ್‌ನಿಂದ ಕಾಣಿಸಿಕೊಂಡ ಈ ಸಮಸ್ಯೆಗೆ ಬಳಕೆದಾರರು ಹೈರಣಾಗಿದ್ದಾರೆ. ಇದೀಗ ಕ್ರೌಡ್‌‌ಸ್ಟ್ರೈಕ್ ಸಮಸ್ಯೆ ಹತ್ತೆ ಹಚ್ಚಿ ಸರಿಪಡಿಸುತ್ತಿದೆ.


ನವದೆಹಲಿ(ಜು.19) ಮೈಕ್ರೋಸಾಫ್ಟ್ ಸೇವೆಯಲ್ಲಿ ಎದುರಾದ ಸಮಸ್ಯೆಯಿಂದ ಸಿಸ್ಟಮ್ ದಿಢೀರ್ ಶಡೌನ್ ಆಗುವ ಮೂಲಕ ವಿಶ್ವಾದ್ಯಂತ ಬಳಕೆದಾರರು ಪರದಾಡಿದ್ದಾರೆ. ವಿಮಾನ ಸೇವೆ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಈ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಭಾರಿ ಆಕ್ರೋಶ, ಟೀಕೆ, ಮೀಮ್ಸ ಹರಿದಾಡಿದೆ. ಇದರ ಬೆನ್ನಲ್ಲೇ ಕ್ರೌಡ್‌ಸ್ಟ್ರೈಕ್ ಸಮಸ್ಯೆ ಪತ್ತೆ ಹಚ್ಚಿ, ಸರಿಪಡಿಸುವಲ್ಲಿ ನಿರತವಾಗಿದೆ. ಈ ಕುರಿತು ಕ್ರೌಡ್‌ಸ್ಟ್ರೈಕ್ ಅಧಿಕೃತ ಮಾಹಿತಿ ನೀಡಿದೆ. ಇದು ಭದ್ರತಾ ಸಮಸ್ಯೆ ಅಥವಾ ಸೈಬರ್ ದಾಳಿಯಲ್ಲ ಎಂದು ಸ್ಪಷ್ಟಪಡಿಸಿೆ.

ಮೈಕ್ರೋಸಾಫ್ಟ್‌ನಲ್ಲಿರುವ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್ ಇತ್ತೀಚೆಗೆ ಮಾಡಿದ ಅಪ್‌ಡೇಟ್ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಪ್‌ಡೇಟ್‌ನಿಂದ ವಿಂಡೋಸ್ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮೈಕ್ರೋಸಾಫ್ಟ್ ಕ್ರೌಡ್‌ಸ್ಟ್ರೈಕ್ ಸಮಸ್ಯೆಯಾಗುತ್ತಿದ್ದಂತೆ ಬ್ಯಾಂಕಿಂಗ್ ಕ್ಷೇತ್ರ, ವಿಮಾನಯಾನ ಸೇರಿದಂತೆ ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕ್ರೌಡ್‌ಸ್ಟ್ರೈಕ್ ಸಮಸ್ಯೆ ಪತ್ತೆ ಹಚ್ಚಿ ಇದೀಗ ಪರಿಹಾರ ಒದಗಿಸುತ್ತಿದೆ.

Tap to resize

Latest Videos

undefined

ಜಗತ್ತಿನೆಲ್ಲೆಡೆ ಹಠಾತ್ ಆಫ್ ಆದ ಮೈಕ್ರೋಸಾಫ್ಟ್‌ ವಿಂಡೋ ಸಿಸ್ಟಂ: ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ

ಈ ಕುರಿತು ಮಾಹಿತಿ ನೀಡಿರುವ ಕ್ರೌಡ್‌ಸ್ಟ್ರೈಕ್ ಸಿಇಒ ಜಾರ್ಜ್ ಕುರ್ಜ್, ಸಮಸ್ಯೆಯನ್ನು ಕಂಪನಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ತಜ್ಞರು, ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ ಸಮಸ್ಯೆ ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲೇ ಎಲ್ಲವೂ ಪರಿಹಾರವಾಗಲಿದೆ. ಕ್ರೌಡ್‌ಸ್ಟ್ರೈಕ್ ಸಮಸ್ಯೆ ಕೇವಲ ವಿಂಡೋಸ್ ಹೋಸ್ಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಮ್ಯಾಕ್ಸ್ ಹಾಗೂ ಲಿನಕ್ಸ್ ಹೋಸ್ಟ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಇದು ಯಾವುದೇ ಭದ್ರತಾ ಸಮಸ್ಯೆ ಅಥವಾ ಸೈಬರ್ ದಾಳಿಯಲ್ಲಿ. ತಾಂತ್ರಿಕ ಸಮಸ್ಯೆ ಪತ್ತೆ ಹಚ್ಚಲಾಗಿದೆ ಎಂದು ಜಾರ್ಜ್ ಕುರ್ಜ್ ಹೇಳಿದ್ದಾರೆ.

ತಾಂತ್ರಿಕ ತಂಡ ನಿರಂತವರಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಯಾವುದೇ ಸಮಯದಲ್ಲಿ ನೆರವು ಬೇಕಾದಲ್ಲಿ ಕ್ರೌಡ್‌ಸ್ಟ್ರೈಕ್ ತಂಡ ಸಂರ್ಕಿಸಬಹುದು. ಅಧಿಕೃತ ಮೂಲಗಳ ಮೂಲಕ ತಂಡ ಗ್ರಾಹಕರ ಸೇವೆ ಸದಾ ಸಿದ್ದವಿದೆ ಎಂದು ಜಾರ್ಜ್ ಕುರ್ಜ್ ಹೇಳಿದ್ದಾರೆ. ಥರ್ಡ್ ಪಾರ್ಟಿ ಮಾಡಿದ ಸಾಫ್ಟ್‌ವೇರ್ ಅಪ್‌ಡೇಟ್‌ನಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದಿದೆ.

 

CrowdStrike is actively working with customers impacted by a defect found in a single content update for Windows hosts. Mac and Linux hosts are not impacted. This is not a security incident or cyberattack. The issue has been identified, isolated and a fix has been deployed. We…

— George Kurtz (@George_Kurtz)

 

ಮೈಕ್ರೋಸಾಫ್ಟ್ ಬಳಕೆದಾರರು ಇಂದು ದಿಢೀರ್ ಸಿಸ್ಟಮ್ ಶಡೌನ್ ಸಮಸ್ಯೆ ಎದರಿಸಿದ್ದಾರೆ. ಕೆಲಸ ಮಾಡುತ್ತಿದ್ದಂತೆ ಸಿಸ್ಟಮ್ ಸ್ಕ್ರೀನ್ ಮೇಲೆ ಸಮಸ್ಯೆ ಸಂದೇಶ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ತನ್ನಷ್ಟಕ್ಕೆ ಶಡೌನ್ ಆಗಿದೆ. ಇದರಿಂದ ಹಲವರು ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದೆ.ಸಿಸ್ಟಮ್ ಸಮಸ್ಯೆಯಿಂದ ಗ್ರಾಹಕರ ಸೇವೆ ನೀಡುತ್ತಿರುವ ಹಲವು ಕಂಪನಿಗಳಿಗೂ ಸೇವೆ ನೀಡಲು ಸಾಧ್ಯವಾಗಿಲ್ಲ. ಈ ಕುರಿತು ಹಲವು ಮೀಮ್ಸ್ ಕೂಡ ಹರಿದಾಡಿದೆ.

ತುಮಕೂರು: ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ
 

click me!