ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್, AI ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್!

By Chethan Kumar  |  First Published May 23, 2024, 2:58 PM IST

ವ್ಯಾಟ್ಸ್ಆ್ಯಪ್ ಬಳಕೆದಾರರು ಇದೀಗ ತಮ್ಮ ಪ್ರೊಫೈಲ್ ಫೋಟೋವನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಜನರೇಟ್ ಮಾಡಲು ಅವಕಾಶವಿದೆ. ಮತ್ತಷ್ಟು ಸುಂದರವಾಗಿ ಹಾಗೂ ಊಹೆಗೂ ನಿಲುಕದ ರೀತಿಯಲ್ಲಿ ಪ್ರೊಫೆಲ್ ಪಿಕ್ ಜನರೇಟ್ ಮೂಡುವ ನೂತನ ಎಐ ಪ್ರೊಫೈಲ್ ಫೀಚರ್ಸ್ ಪರಿಚಯಿಸುತ್ತಿದೆ.
 


ನವದೆಹಲಿ(ಮೇ.23) ವ್ಯಾಟ್ಸ್ಆ್ಯಪ್ ಈಗಾಲೇ ತನ್ನ ಬಳಕೆದಾರರಿಗೆ ಹಲವು ಅಪ್‌ಡೇಟ್ ಫೀಚರ್ ನೀಡಿದೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಜಮಾನ. ಎಲ್ಲವನ್ನೂ ಎಐ ನಿಯಂತ್ರಿಸುತ್ತಿದೆ. ಇದೀಗ ಎಐ ಫೀಚರ್ಸ್ ವ್ಯಾಟ್ಸಾಪ್ ಬಳಕೆದಾರರು ಲಭ್ಯವಾಗುತ್ತಿದೆ.  ವ್ಯಾಟ್ಸ್ಆ್ಯಪ್ ಇದೀಗ ಬಳಕೆದಾರರಿಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರೊಫೈಲ್ ಫೋಟೋ ಫೀಚರ್ಸ್ ನೀಡುತ್ತಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ತಮ್ಮ ವ್ಯಾಟ್ಸ್ಆ್ಯಪ್ ಪ್ರೊಫೈಲ್‌ಗೆ ಎಐ ಜನರೇಟೆಡ್ ಫೋಟೋ ಬಳಸಲು ಸಾಧ್ಯವಾಗಲಿದೆ.

WA ಬೀಟಾ ಇನ್ಫೋ ಪ್ರಕಾರ ವ್ಯಾಟ್ಸಾಪ್ ಇದೀಗ ಹೊಸ ಫೀಚರ್ ಅಪ್‌ಡೇಟ್ ಮಾಡುತ್ತಿದೆ. ಎಐ ಪ್ರೊಫೈಲ್ ಪಿಕ್ ಫೀಚರ್ಸ್ ಮೂಲಕ ಬಳಕೆದಾರರ ವ್ಯಾಟ್ಸ್ಆ್ಯಪ್ ಅನುಭವನ್ನು ಮತ್ತಷ್ಟು ಉತ್ತಮಪಡಿಸಲು ಸಜ್ಜಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ ಪಿಕ್ಟರ್‌ನ್ನು ಎಐ ಮೂಲಕ ಜನರೇಟ್ ಮಾಡಬಹುದು. ಬಳಕೆದಾರರ ಆಸಕ್ತಿ, ಮೂಡ್, ಅಭಿರುಚಿಗೆ ತಕ್ಕಂತೆ ಸ್ಟೈಲೀಶ್, ಸಾಂಪ್ರದಾಯಿಕ ಅಥವಾ ಮಾಡರ್ನ್ ಫೋಟೋ ಜನರೇಟ್ ಮಾಡಲು ಸಾಧ್ಯವಿದೆ. ಈ ಫೋಟೋವನ್ನು ಪ್ರೊಫೈಲ್ ಫೋಟೋ ಆಗಿ ಬಳಸಿಕೊಳ್ಳಲು ವ್ಯಾಟ್ಸ್ಆ್ಯಪ್ ಅವಕಾಶ ನೀಡುತ್ತಿದೆ.

Tap to resize

Latest Videos

undefined

WhatsApp ಬಳಕೆದಾರರಿಗೆ ಗುಡ್ ನ್ಯೂಸ್, ಸ್ಟೇಟಸ್‌ ವಿಡಿಯೋ ನೀತಿಯಲ್ಲಿ ಬದಲಾವಣೆ!

ನೂತನ ಫೀಚರ್ಸ್‌ನಿಂದ ಬಳಕೆದಾರರ ಕಸ್ಟಮೈಸ್ ಪ್ರೊಫೈಲ್ ಪಿಕ್ ಬಳಸ ಬಹುದು. ಈ ಮೂಲಕ ಬಳಕೆದಾರರು ಅತ್ಯುತ್ತಮ ಪ್ರೊಫೈಲ್ ಪಿಕ್ ಬಳಸಲು ಸಾಧ್ಯವಿದೆ. ಫೀಚರ್ಸ್ ಕೇವಲ ಸುಂದರ ಫೋಟೋ ಜನರೇಟ್ ಹಾಗೂ ಬಳಸುವುದು ಮಾತ್ರವಲ್ಲ, ಬಳಕೆದಾರರ ಖಾಸಗಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಬಳಕೆದಾರರು ಪ್ರೊಫೈಲ್ ಪಿಕ್ಟರನ್ನು ಮತ್ತೊಬ್ಬರು ಹಂಚಿಕೊಳ್ಳುವುದು ತಪ್ಪಲಿದೆ. ಎಐ ಜನರೇಟರ್ ಫೋಟೋ ಆಗಿರುವ ಕಾರಣ ಬಳಕೆದಾರರ ತಮ್ಮ ಅಸಲಿ ಫೋಟೋಗಳು ಮತ್ತೊಬ್ಬರ ಕೈಸೇರುವುದು ತಪ್ಪಲಿದೆ. ಅಸಲಿ ಫೋಟೋ ಇತರರ ಕೈಸೇರಿ ಎದುರಾಗುವ ಅಪಾಯದ ಪ್ರಮಾಣವನ್ನು ಎಐ ಫೀಚರ್ ಕಡಿಮೆ ಮಾಡಲಿದೆ. ಇನ್ನು ಈಗಾಗಲೇ ಪ್ರೊಫೈಲ್ ಇಮೇಜ್ ಸ್ಕ್ರೀನ್‌ಶಾಟ್ ತೆಗೆಯಲು ಅವಕಾಶ ನಿರಾಕರಿಸಲಾಗಿದೆ. ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಟ್ಸಾಪ್ ಎಐ ಫೀಚರ್ಸ್ ಪರಿಚಿಯಿಸುತ್ತಿದೆ.

ವಾಟ್ಸ್ಆಪ್‌ಗೆ ಬಂತು ಹೊಸ ಅಪ್‌ಡೇಟ್‌, ಮಿಸ್‌ ಆಗಿ 'ಡಿಲೀಟ್‌ ಫಾರ್‌ ಮೀ' ಒತ್ತಿದ್ರೂ ಈಗ Undo ಮಾಡ್ಬಹುದು!

ಎಐ ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್ಸ್ ಆಯ್ಕೆ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಈಗಾಗಲಾ ಟೆಸ್ಟಿಂಗ್ ಪ್ರಯೋಗಗಳು ಮುಗಿದಿದೆ. ಈಗಾಗಲೇ ವ್ಯಾಟ್ಸ್ಆ್ಯಪ್ ಡಿಲೀಟ್ ಫಾರ್ ಎವ್ರಿಒನ್ ಮಾಡಲು ಹೋಗಿ ತಪ್ಪಾಗಿ ಡಿಲೀಟ್ ಫಾರ್ ಮಿ ಮಾಡಿದ್ದರೆ, UNDO ಮಾಡಲು ಅವಕಾಶ ನೀಡಲಾಗಿದೆ. ಈ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ. 
 

click me!