Latest Videos

ಈ 35 ಸ್ಮಾರ್ಟ್‌ಫೋನ್‌ನಲ್ಲಿ ವ್ಯಾಟ್ಸ್ಆ್ಯಪ್ ಶೀಘ್ರದಲ್ಲೇ ಸ್ಥಗಿತ, ಲಿಸ್ಟ್‌ನಲ್ಲಿದೆಯಾ ನಿಮ್ಮ ಪೋನ್?

By Chethan KumarFirst Published Jun 28, 2024, 12:22 PM IST
Highlights

ವ್ಯಾಟ್ಸಾಪ್ ಇಲ್ಲದೆ ಜೀವನ ಮುಂದೆ ಸಾಗದಷ್ಟು ಅವಲಂಬಿತರಾಗಿದ್ದೇವೆ. ಆದರೆ ಶೀಘ್ರದಲ್ಲೇ  35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಈ 35 ಫೋನ್ ಯಾವುದು? ನಿಮ್ಮ ಫೋನ್ ಈ ಲಿಸ್ಟ್‌ನಲ್ಲಿದೆಯಾ ಚೆಕ್ ಮಾಡಿ.
 

ನವದೆಹಲಿ(ಜೂ.28) ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಹುತೇಕರ ಜೀವನದಲ್ಲಿ ಹಾಸು ಹೊಕ್ಕಿದೆ. ಕಚೇರಿ, ಕುಟುಂಬ, ಆಪ್ತರು, ಶಾಲಾ ಕಾಲೇಜು ಗಳೆಯರ ಬಳಗ ಹೀಗೆ ಎಲ್ಲರೂ ವ್ಯಾಟ್ಸ್ಆ್ಯಪ್ ಮೂಲಕ ಕನೆಕ್ಟ್ ಆಗಿದ್ದಾರೆ. ಹಲವು ಕಚೇರಿಗಳ ಕೆಲಸಗಳು, ಸಂಪರ್ಕ, ಚರ್ಚೆ ಇದೇ ವ್ಯಾಟ್ಸಾಪ್ ಮೂಲಕವೇ ನಡೆಯುತ್ತಿದೆ. ಆದರೆ ಇದೀಗ ಮಹತ್ವದ ಅಪ್‌ಡೇಟ್ ಲಭ್ಯವಾಗಿದೆ. ಶೀಘ್ರದಲ್ಲೇ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಕೆನಾಲ್ ಟೆಕ್ ವರದಿ ಪ್ರಕಾರ ಸ್ಯಾಮ್‌ಸಂಗ್, ಮೊಟೊರೊಲಾ, ಆ್ಯಪಲ್,ಸೋನಿ, ಎಲ್‌ಜಿ ಸೇರಿದಂತೆ ಕೆಲ ಬ್ರ್ಯಾಂಡ್‌ನ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಸ್ಥಗಿತವಾಗುತ್ತಿದೆ.

ವ್ಯಾಟ್ಸಾಪ್ ಹೊಸ ಸುರಕ್ಷತಾ ಫೀಚರ್ಸ್ ಪರಿಚಯಿಸಿದೆ. ಹಳೇ ಸೆಫ್ಟಿ ಫೀಚರ್ಸ್‌ಗೆ ಮತ್ತಷ್ಟು ಫೀಚರ್ಸ್ ಸೇರಿಸಲಾಗಿದೆ. ಈ ಮೂಲಕ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವ್ಯಾಟ್ಸ್ಆ್ಯಪ್ ಅಪ್‌ಡೇಟ್‌ನಿಂದ ಕೆಲ ಸ್ಮಾರ್ಟ್‌ಫೋನ‌್‌ಗಳು ಈ ಅಪ್‌ಡೇಟ್ ಸಪೂರ್ಟ್ ಮಾಡುವುದಿಲ್ಲ. ಪ್ರಮುಖವಾಗಿ ಆ್ಯಂಡ್ರಾಯ್ಡ್ 5.0 ವರ್ಶನ್, ಆ್ಯಪಲ್ ಐಫೋನ್ iOS 12 ವರ್ಶನ್ ಹಾಗೂ ಇದಕ್ಕಿಂತ ಹಳೆಯ ವರ್ಶನ್ ಫೋನ್‌ಗಳು ಹೊಸ ಫೀಚರ್ಸ್ ಬೆಂಬಲಿಸುವುದಿಲ್ಲ. ಹೀಗಾಗಿ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ.

ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್, AI ಜನರೇಟೆಡ್ ಪ್ರೊಫೈಲ್ ಫೋಟೋ ಫೀಚರ್!

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3, ಗ್ಯಾಲಸ್ಕಿ ಎಸ್3 ಮಿನಿ, ಗ್ಯಾಲಕ್ಸಿ ಎಸ್‌4 ಮಿನಿ, ಮೋಟೊರೋಲಾ ಮೋಟೋ ಜಿ, ಮೋಟೋ ಎಕ್ಸ್, ಆ್ಯಪಲ್ ಬ್ರ್ಯಾಂಡ್‌ನ ಐಫೋನ್ 6, ಐಫೋನ್ ಎಸ್‌ಇ ಮಾಡೆಲ್ ಸೇರಿದಂತೆ ಕೆಲ ಪ್ರಮುಖ ಮಾಡಲ್ ಫೋನ್‌ಗಳಲ್ಲಿ ವ್ಯಾಟ್ಸಾಪ್ ಸ್ಥಗತಿಗೊಳ್ಳುತ್ತಿದೆ. ಬಳಕೆದಾರರು ತಮ್ಮ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಬಳಕೆ ಮುಂದುವರಿಸಲು, ಡಿವೈಸ್ ಅಪ್‌ಡೇಟ್ ಮಾಡಬೇಕಿದೆ. ಆದರೆ ಡಿವೈಸ್ ಅಪ್‌ಡೇಟ್‌ನಿಂದ ಹಳೇ ಫೋನ್ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್: ಗ್ಯಾಲಸ್ಕಿ ಏಸ್ ಪ್ಲಸ್,ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಕ್ಸ್‌ಪ್ರೆಸ್ 2, ಗ್ಯಾಲಕ್ಸಿ ಗ್ರ್ಯಾಂಡ್, ಗ್ಯಾಲಕ್ಸಿ ನೋಟ್ 3, ಗ್ಯಾಲಕ್ಸಿ ಎಸ್3 ಮಿನಿ, ಗ್ಯಾಲಕ್ಸಿ ಎಸ್‌4 ಆ್ಯಕ್ಟೀವ್, ಗ್ಯಾಲಕ್ಸಿ ಎಸ್‌4 ಮಿನಿ, ಗ್ಯಾಲಕ್ಸಿ ಎಸ್‌4 ಝೂಮ್.
ಆ್ಯಪಲ್: ಐಫೋನ್5, ಐಫೋನ್ 6, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್, ಐಫೋನ್ ಎಸ್‌ಇ.
ಹುವೈ: ಆ್ಯಸೆಂಡ್ ಪಿ6 ಎಸ್, ಆ್ಯಸೆಂಡ್ ಜಿ525, ಹುವೈ ಸಿ199, ಹುೈ ಜಿಎಕ್ಸ್1ಎಸ್, ಹುವೈ ವೈ625
ಲೆನೊವೊ: ಲೆನೊವೊ 46600, ಲೆನೊವೊ ಎ858ಟಿ, ಲೆನೊವೊ ಪಿ70, ಲೆನೊವೊ ಎಸ್890
ಸೋನಿ: Xಪೆರಿಯಾ Z1, Xಪೆರಿಯಾ ಇ3
ಎಲ್‌ಜಿ: ಆಪ್ಟಿಮಸ್ 4X HD, ಆಪ್ಟಿಮಸ್ ಜಿ, ಆಪ್ಟಿಮಸ್ ಜಿ ಪ್ರೊ, ಆಪ್ಟಿಮಸ್ ಎಲ್7

ವಾಟ್ಸ್ಆಪ್‌ಗೆ ಬಂತು ಹೊಸ ಅಪ್‌ಡೇಟ್‌, ಮಿಸ್‌ ಆಗಿ 'ಡಿಲೀಟ್‌ ಫಾರ್‌ ಮೀ' ಒತ್ತಿದ್ರೂ ಈಗ Undo ಮಾಡ್ಬಹುದು!
 

click me!