Whats App: ಲಾಸ್ಟ್ ಸೀನ್ ಸ್ಟೇಟಸ್ ಮೆರೆಮಾಚುವ ಫೀಚರ್ ಶೀಘ್ರ

By Suvarna News  |  First Published Nov 14, 2021, 4:05 PM IST

ತ್ವರಿತ ಸಂದೇಶ ಸಂವಹನದಲ್ಲಿ ಕ್ರಾಂತಿಗೆ ಕಾರಣವಾಗಿರುವ ಮೆಟಾ (Meta) ಒಡೆತನದ ವಾಟ್ಸಾಪ್ (Whatsapp) ಅನೇಕ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗೆಯೇ, ವಾಟ್ಸಾಪ್ ಚಾಟ್‌ನಲ್ಲಿ ಲಾಸ್ಟ್ ಸೀನ್ (Last Seen) ಸ್ಟೇಟಸ್ ಮರೆ ಮಾಚುವ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದ, ಶೀಘ್ರವೇ ಬಳಕೆದಾರರಿಗೆ ಇದು ಲಭ್ಯವಾಗಲಿದೆ ಎನ್ನಲಾಗಿದೆ.


ಬಹು ಜನರು ಬಳಸುವ ವಾಟ್ಸಾಪ್ (Whatsapp) ತನ್ನ ಬಳಕೆದಾರರ ಅಗತ್ಯ ಹಾಗೂ ಬೇಡಿಕೆಗೆ ತಕ್ಕಂತೆ ಅನೇಕ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸಾಪ್ ಚಾಟ್‌ನಲ್ಲಿ ಲಾಸ್ಟ್ ಸೀನ್  (Last Seen) ಸ್ಟೇಟಸ್ ಕಾಣದಿರುವಂತೆ ಮಾಡುವ ಆಪ್ಷನ್‌ ಬಳಕೆದಾರರ ಬೇಡಿಕೆಯಾಗಿತ್ತು. ಲಾಸ್ಟ್ ಸೀನ್ ಹೈಡ್ ಮಾಡುವ ಫೀಚರ್ ಅನ್ನು ವಾಟ್ಸಾಪ್ ಅಭಿವೃದ್ಧಿಪಡಿಸುತ್ತಿದೆ.

ಮೆಟಾ (Meta) ಒಡೆತನದ ವಾಟ್ಸಾಪ್, ನಿಗದಿತ ವ್ಯಕ್ತಿಯ ಲಾಸ್ಟ್ ಸೀನ್ ಸ್ಟೇಟಸ್ ಅನ್ನು ಹೈಡ್ ಮಾಡುವ ಫೀಚರ್ ಅನ್ನು ಶೀಘ್ರವೇ ಪರಿಚಯಿಸಲಿದೆ. GSMArena ವರದಿಯ ಪ್ರಕಾರ, Android ಬೀಟಾ ಆವೃತ್ತಿಯ ವಾಟ್ಸಾಪ್( WhatsApp) ಈಗ ನಿಮ್ಮ "ಲಾಸ್ಟ್ ಸೀನ್" ಸ್ಟೇಟಸ್ ಅನ್ನು ನಿರ್ದಿಷ್ಟಪಡಿಸಿದ ವ್ಯಕ್ತಿಗಳಿಂದ ಮರೆಮಾಡಬಹುದು. ವರದಿಯ ಪ್ರಕಾರ, ವೈಶಿಷ್ಟ್ಯವು ಕೆಲವು ತಿಂಗಳುಗಳಿಂದ ಸಕ್ರಿಯ ಅಭಿವೃದ್ಧಿಯಲ್ಲಿದೆ ಮತ್ತು ಇದು ಬೀಟಾ ಬಳಕೆದಾರರು ಅಪ್ಲೈ ಮಾಡುತ್ತಿದ್ದಾರೆ.

Tap to resize

Latest Videos

undefined

Tech News: YouTubeನಲ್ಲಿ ಇನ್ನು ಮುಂದೆ ಡಿಸ್‌ಲೈಕ್ ಕೌಂಟ್ ಕಾಣಲ್ಲ!

ಲಾಸ್ಟ್ ಸೀನ್ ಹೈಡ್ ಮಾಡುವ ಆಪ್ಷನ್ ಅನ್ನು ಕಂಪನಿಯು ಶೀಘ್ರವೇ ಎಲ್ಲ ಬಳಕೆದಾರರಿಗೆ ಮುಕ್ತ ಮಾಡಬಹುದು. ವಾಟ್ಸಾಪ್ ಬಳಕೆದಾರರು ತಮ್ಮ "ಲಾಸ್ಟ್ ಸೀನ್" ಸ್ಥಿತಿಯನ್ನು ನಿರ್ದಿಷ್ಟ ವ್ಯಕ್ತಿಗಳ ಮತ್ತು ಯಾರೊಬ್ಬರ ಬ್ಲಾಕ್‌ಲಿಸ್ಟ್ ಹೊರತುಪಡಿಸಿ, ಅವರ ಸಂಪರ್ಕಗಳು ಸೇರಿದಂತೆ ಎಲ್ಲರಿಗೂ ಗೋಚರಿಸುವಂತೆ ಕಾನ್ಫಿಗರ್ ಮಾಡಲು ಸಾಧ್ಯವಾಗುತ್ತದೆ.

WhatsApp community features; ಇದರಿಂದ ಸರಳವಾಗಲಿದೆ Group Talks

ತ್ವರಿತ ಸಂದೇಶ ರವಾನೆಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ಮೆಟಾ ಕಂಪನಿ ಒಡೆತನದ ವಾಟ್ಸಾಪ್ (Whatsapp) ಹೊಸ ಫೀಚರ್ ಮೇಲೆ ಕೆಲಸ ಮಾಡುತ್ತಿದೆ. ಈ ಫೀಚರ್ ಪೂರ್ಣಗೊಂಡ ನಂತರ ವಾಟ್ಸಾಪ್‌ನಲ್ಲಿ ಗ್ರೂಪ್ ಟಾಕ್ಸ್ ಮತ್ತಷ್ಟು ಸರಳವಾಗಲಿದೆ. ವಾಟ್ಸಾಪ್‌ನ ಈ ಹೊಸ ಫೀಚರ್ ಅನ್ನು ಮೊದಲು XDA Developer ಮತ್ತು ಈಗ WABetaInfo ಪತ್ತೆ ಹಚ್ಚಿವೆ. ಇದು ಮೂಲಭೂತವಾಗಿ ಹೊಸ ಲೊಕೆಷನ್ ಆಗಿದ್ದು, ಗುಂಪು ನಿರ್ವಾಹಕರು (Admin) WhatsApp ನಲ್ಲಿ ಗುಂಪುಗಳ ಮೇಲೆ ಹೆಚ್ಚುವರಿ ನಿಯಂತ್ರಣವನ್ನು ಹೊಂದಿರುತ್ತಾರೆ. ಗ್ರುಪ್ ನಿಯಂತ್ರಣಕ್ಕೆ ಈ ಹೊಸ ಫೀಚರ್ ಸಾಕಷ್ಟು ನೆರವು ನೀಡುತ್ತದೆ. ಮಾಹಿತಿಯ ಹರಿವನ್ನು ನಿಯಂತ್ರಿಸಲು, ನಿರ್ವಾಹಕರು ಗುಂಪುಗಳಲ್ಲಿ 'ಸಮುದಾಯ'ಗಳನ್ನು ನಿರ್ಮಿಸಬಹುದು.

Fitbit New Features: ಇಸಿಜಿ, ಬ್ಲಡ್ ಗ್ಲುಕೂಸ್ ಟ್ರಾಕರ್ ಸೇರಿ ಇನ್ನಿತರ ಉಪಯೋ

ವಾಟ್ಸಾಪ್ ರೂಪಿಸುತ್ತಿರುವ ಈ ಹೊಸ ಫೀಚರ್ ಅನ್ನು ನೀವು ಪ್ರಸಿದ್ಧ ಚಾಟ್ ಸಾಫ್ಟ್‌ವೇರ್ Discord's Communityಗೆ ಹೋಲಿಸಬಹುದಾಗಿದೆ. ಒಮ್ಮೆ ಸರ್ವರ್ (ಅಥವಾ WhatsApp ನಲ್ಲಿ ಗುಂಪುಗಳು) ರೂಪುಗೊಂಡ ನಂತರ, ನಿರ್ವಾಹಕರು ಸಮುದಾಯವನ್ನು ನಿರ್ಮಿಸಬಹುದು. ವೈಯಕ್ತಿಕ ಆಹ್ವಾನಗಳನ್ನು ಪಠ್ಯ/ಇಮೇಲ್ ಮೂಲಕ ಕಳುಹಿಸುವ ಮೂಲಕ ಅಥವಾ ಕ್ಲಿಕ್ ಮಾಡಬಹುದಾದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಈ ಗುಂಪು ಸೇರಬಹುದು. ಅಂತಿಮ ಆವೃತ್ತಿಯ ಬಗ್ಗೆ ತಿಳಿದಿಲ್ಲವಾದರೂ, WABeta ಪ್ರಕಾರ WhatsApp ಇದೇ ವಿಧಾನವನ್ನು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, WhatsApp ಸಮುದಾಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಖಾಸಗಿ ಚಾಟ್ ರೂಂ ರೀತಿಯಲ್ಲೇ ಇರಲಿದೆ ಎನ್ನಲಾಗುತ್ತಿದೆ. ಒಂದು ಸ್ಕ್ರೀನ್‌ಶಾಟ್ ಸಮುದಾಯ ಚಿಹ್ನೆಯನ್ನು ತೋರಿಸುತ್ತದೆ ಅಥವಾ ವೃತ್ತದೊಳಗಿನ ಚೌಕಾಕಾರದ ಬಾಕ್ಸ್‌ನೊಳಗೆ ಪ್ರದರ್ಶನವನ್ನು ತೋರಿಸುತ್ತದೆ. ವರದಿಯ ಪ್ರಕಾರ, ನಿರ್ವಾಹಕರು (Admin) ಈ ಗುಂಪು ಚಾಟ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ಕಮ್ಯುನಿಟಿಗೆ ಬೇಕಾಗುವ ಪ್ರಮುಖವಾದ ಕೆಲವು ಗುಂಪುಗಳನ್ನು ಮಾಡುತ್ತಾರೆ. ಎಲ್ಲ ನಿಯಂತ್ರಣದ ಅಧಿಕಾರಗಳು ಅಡ್ಮಿನ್ ಬಳಿಯೇ ಇರಲಿವೆ. 

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

ಉದಾಹರಣೆಗೆ, ಪದವಿ ಕೋರ್ಸ್ ಅನ್ನು ಕಮ್ಯುನಿಟಿ ಎಂದು ಪರಿಗಣಿಸಬಹುದು ಮತ್ತು ಅದರ ಎಲ್ಲಾ ಬೋಧನಾ ಕೋರ್ಸ್‌ಗಳು ಈ ಕಮ್ಯುನಿಟಿಯಲ್ಲಿ ಭಾಗವಹಿಸುವ ಗುಂಪುಗಳಾಗಿವೆ. ಈ ರೀತಿಯಾಗಿ ಒಂದು  ಸಮುದಾಯ ಅಥವಾ ಗುಂಪು ರೂಪಿಸಿಕೊಳ್ಳಬಹುದು. ಮೆಟಾ (ಈ ಹಿಂದೆ Facebook ಎಂಬ ಹೆಸರಿತ್ತು)-ಮಾಲೀಕತ್ವದ ಸಂದೇಶ ಸೇವೆಯು ಮಾರ್ಪಾಡುಗಳಿಗೆ ಒಳಗಾಗಬಹುದಾದರೂ, WhatsApp ಸಮುದಾಯವು ಎಲ್ಲಾ ಗುಂಪುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರಿಗೆ ಸಹಾಯ ಮಾಡುವ ಪರಿಕರಗಳನ್ನು ಅಡ್ಮಿನ್‌ಗಳಿಗೆ ಒದಗಿಸಲಿದೆ.

click me!