ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!

Published : Nov 06, 2020, 08:35 PM IST
ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!

ಸಾರಾಂಶ

ಭಾರತದ ವ್ಯವಹಾರಗಳೆಲ್ಲ ಡಿಜಿಟಲೀಕರಣವಾಗಿದೆ. ಪ್ರಮುಖವಾಗಿ ಹಣ ಪಾವತಿ, ಬಿಲ್ ಪಾವತಿ ಸೇರಿದಂತೆ ಹಣದ ವ್ಯವಹಾರಗಳು ಇದೀಗ ಆ್ಯಪ್ ಮೂಲಕ UPI ಪೇಮೆಂಟ್ ಮಾಡಲಾಗುತ್ತಿದೆ. ಭಾರತದಲ್ಲಿ ಗೂಗಲ್ ಪೇ, ಫೋನ್ ಫೇ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ವ್ಯಾಟ್ಸಾಪ್ ಪೇ ಆರಂಭಗೊಳ್ಳುತ್ತಿದೆ.  

ನವದೆಹಲಿ(ನ.06):  ಭಾರತದಲ್ಲಿ ವ್ಯಾಟ್ಸಾಪ್ ಬಳಕೆ, ಜನಪ್ರಿಯತೆ ಹಾಗೂ ಅವಲಂಬನೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಶಾಲಾ ಮಕ್ಕಳಿಂದ ಹಿಡಿದು, ಪ್ರತಿಯೊಬ್ಬರು ವ್ಯಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಬಹುತೇಕ ವ್ಯವಹಾರಗಳು ವ್ಯಾಟ್ಸಾಪ್ ಮೂಲಕವೇ ನಡೆಯುತ್ತಿದೆ. ಹೀಗಾಗಿ ವ್ಯಾಟ್ಸಾಪ್ ಭಾರತದಲ್ಲಿ ಬರೋಬ್ಬರಿ 40 ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ವ್ಯಾಟ್ಸಾಪ್ ಮತ್ತೊಂದು ಬಹುನಿರೀಕ್ಷಿತ ಫೀಚರ್ಸ್ ವ್ಯಾಟ್ಸಾಪ್ ಪೇ ಆರಂಭಿಸಿದೆ.

ವಾಟ್ಸಾಪ್‌ನಲ್ಲೂ ಬಂದಿದೆ ತನ್ನಿಂತಾನೇ ‘ಅಳಿಸುವ ಮೆಸೇಜ್‌’ ಆಯ್ಕೆ

UPI ಪೇಮೆಂಟ್ ವ್ಯವಹಾರಕ್ಕೆ ಭಾರತದ ರಾಷ್ಟ್ರೀಯ ಪಾವತಿ ನಗಮ(NPCI) ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ . ಈ ಮೂಲಕ ಕಳೆದೆರಡು ವರ್ಷಗಳಿಂದ ಪ್ರಾಯೋಗಿಕ ಹಂತದಲ್ಲಿದ್ದ ವ್ಯಾಟ್ಸಾಪ್ ಪೇ ಇದೀಗ ಭಾರತದಲ್ಲಿ ಆರಂಭಗೊಳ್ಳುತ್ತಿದೆ. ಇನ್ನು ಗೂಗಲ್ ಪೇ, ಫೋನ್ ಪೇ ರೀತಿಯಲ್ಲಿ ವ್ಯಾಟ್ಸಾಪ್ ಪೇ ಮೂಲಕ ಹಣದ ವ್ಯವಹಾರ ಸುಲಭವಾಗಿ ನಡೆಸಬಹುದು.

QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?

2018ರಲ್ಲಿ ಭಾರತದಲ್ಲಿ ವ್ಯಾಟ್ಸಾಪ್ ಪೇಮೆಂಟ್ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಸುರಕ್ಷತೆ ಹಾಗೂ ಇತರ ಪಾಲಿಸಿ ಕುರಿತು ಭಾರತ ಪಾವತಿ ನಿಗಮ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಹೀಗಾಗಿ ಭಾರತದ ನೀತಿ ನಿಯಮಕ್ಕೆ ಅನುಸಾರವಾಗಿ ಕೆಲ ಆ್ಯಪ್ ಡೇಟಾದಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಅನುಮತಿಗಾಗಿ ಮನವಿ ಮಾಡಿತ್ತು. ಇದೀಗ NPCI ಗ್ರೀನ್ ಸಿಗ್ನಲ್ ನೀಡಿದೆ.

ಥರ್ಡ್ ಪಾರ್ಟಿ ಆ್ಯಪ್ ತಿಂಗಳಿಗೆ ಒಟ್ಟು ಹಣದ ವ್ಯಹಾರದ ಶೇಕಡಾ 30ರಷ್ಟು ಮಾತ್ರ ಮಾಡಲು  ಭಾರತ ಪಾವತಿ ನಿಗಮ ಅನುಮತಿ ನೀಡಿದೆ. ಇತ್ತ ವ್ಯಾಟ್ಸಾಪ್ 160 ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಸದ್ಯ ವ್ಯಾಟ್ಸಾಪ್ ಬಳಕೆ ಮಾಡುತ್ತಿರುವ ಬಳಕೆದಾರರು, ತಮ್ಮ ವ್ಯಾಟ್ಸಾಪ್ ಅಪ್‌ಡೇಟ್ ಮಾಡಿಕೊಂಡರೆ ವ್ಯಾಟ್ಸಾಪ್ ಪೇ ಫೀಚರ್ಸ್ ಲಭ್ಯವಾಗಲಿದೆ.

ಅಪ್‌ಡೇಟ್ ವೇಳೆ ವ್ಯಾಟ್ಸಾಪ್ ಪೇಮೆಂಟ್ ಆಯ್ಕೆ ಬಯಸುವುದಾದರೆ, ಬ್ಯಾಂಕ್ ಖಾತೆಯನ್ನು ವ್ಯಾಟ್ಸಾಪ್ ಜೊತೆ ಲಿಂಕ್ ಮಾಡಿಕೊಳ್ಳಬೇಕು. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್