ಆನ್‌ಲೈನ್ ಡ್ರೆಸ್ ಶಾಪಿಂಗ್‌ನಲ್ಲೇ ವರ್ಚುವಲ್ ಟ್ರೈ, AI ಪರಿಚಯಿಸಿದ ಗೂಗಲ್!

By Suvarna News  |  First Published Jun 15, 2023, 5:12 PM IST

ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಹಾಗೂ ಚಾಟ್‌ಜಿಪಿಟಿ ಇದೀಗ ವಿಶ್ವವನ್ನೇ ಆಳಲು ಸಜ್ಜಾಗುತ್ತಿದೆ. ಪ್ರತಿಯೊಂದು ಕ್ಷೇತ್ರವೂ ಇದೀಗ AI ಮೊರೆ ಹೋಗುತ್ತಿದೆ. ಇದು ಆನ್‌ಲೈನ್ ಶಾಪಿಂಗ್‌ಗೂ ಆವರಿಸಿದೆ. ನೀವು ಖರೀದಿಸುವ ಬಟ್ಟೆ ನಿಮ್ಮಮ ದೇಹಕ್ಕೆ ಹೊಂದಿಕೆಯಾಗುತ್ತಾ? ಫಿಟ್ಟಿಂಗ್ ಸರಿ ಇದೆಯಾ ಅನ್ನೋದನ್ನು AI ಮೂಲಕ ವರ್ಚುವಲ್ ಟ್ರೈ ಮಾಡಬಹುದು. 


ನವದೆಹಲಿ(ಜೂ.15): ಆನ್‌ಲೈನ್ ಶಾಪಿಂಗ್‌ನಲ್ಲಿ ಬಟ್ಟೆ ಖರೀದಿಸುವಾಗ ಎದುರಾಗುವ ಸವಾಲು ಅಂದರೆ ಸೈಜ್. ಈ ಡ್ರೆಸ್ ನಮಗೆ ಆಗುತ್ತಾ? ಸರಿ ಕಾಣುತ್ತಾ, ಫಿಟ್ಟಿಂಗ್ ಸರಿ ಇರುತ್ತಾ ಸೇರಿದಂತೆ ಹಲವು ಸವಾಲು ಎದುರಾಗುತ್ತದೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ. ನೀವು ಖರೀದಿಸಲು ಇಚ್ಚಿಸುವ ಡ್ರೆಸ್ ನಿಮಗೆ ಸರಿಯಾಗುತ್ತಾ ಅನ್ನೋದನ್ನು ವರ್ಚುವಲ್ ಟ್ರೈ ಮಾಡಬಹುದು. ಇದಕ್ಕಾಗಿ ಗೂಗಲ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪರಿಚಯಿಸುತ್ತಿದೆ. ಗೂಗಲ್ ಆರ್ಟಿಪೀಶಿಯಲ್ ಇಂಟೆಲಿಜೆನ್ಸ್ ಮೂಲಕ ವರ್ಚುವಲ್ ಟ್ರೈ ಆನ್ ಟೂಲ್ ಅಭಿವೃದ್ಧಿಪಡಿಸಿದೆ. 

ಆನ್‌ಲೈನ್ ಶಾಪಿಂಗ್ ಮೂಲಕ ಖರೀದಿಸಲು ಇಚ್ಚಿಸುವ ಬಟ್ಟೆಗಳು ನಿಮಗೆ ಹೊಂದಿಕೆಯಾಗುತ್ತಾ ಅನ್ನೋದನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು. ಗ್ರಾಹಕರು ನಿಮ್ಮ ಸೈಜ್, ಕಲರ್ ಸೇರಿದಂತೆ ಇತರ ಆಯ್ಕೆಗಳನ್ನು ಗಮನದಲ್ಲಿಟ್ಟು ಡ್ರೆಸ್ ಆಯ್ಕೆ ಮಾಡಿದರೆ ಸಾಕು. ಬಳಿಕ ವರ್ಚುವಲ್ ಟ್ರೈ ಆನ್ ಟೂಲ್ ಮೂಲಕ ಈ ಡ್ರೆಸ್ ನಿಮಗೆ ಹೇಗೆ ಕಾಣುತ್ತೆ ಅನ್ನೋದನ್ನು ಪರಿಶೀಲನೆ ಮಾಡಬಹುದು. 

Latest Videos

undefined

 

ಮಾನವನ ಮಿದುಳಿಗಿಂತ ಚಾಟ್‌ಜಿಪಿಟಿ ಪ್ರಭಾವಶಾಲಿಯಲ್ಲ; ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹೀಗೆ ಹೇಳಿದ್ಯಾಕೆ ?

ಗೂಗಲ್ ಈಗಾಗಲೇ ಅಮೆರಿಕದ ಕೆಲವು ಶಾಪಿಂಗ್‌ನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಅಳವಡಿಸಿದೆ. ಇದರಿಂದ ಆನ್‌ಲೈನ್ ಶಾಪಿಂಗ್ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಕಾರಣ ಕೆಲ ಗ್ರಾಹಕರು ಆನ್‌ಲೈನ್ ಮೂಲಕ ಬಟ್ಟೆ ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ವರ್ಚುವಲ್ ಟ್ರೈ ಬಳಿಕ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮೂಲಕ ಫಿಂಗರ್ ಪ್ರಿಂಟ್ ಸೃಷ್ಟಿಸಲು ಸಾಧ್ಯವಿದೆ ಅನ್ನೋದು ಬಹಿರಂಗವಾಗಿದೆ.   ‘ಕೃತಕ ಬುದ್ಧಿಮತ್ತೆ’ಯನ್ನು ಬಳಸಿಕೊಂಡು ನಕಲಿ ಬೆರಳಚ್ಚುಗಳನ್ನು ಸೃಷ್ಟಿಸಬಹುದು ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಐವರು ವಿಜ್ಞಾನಿಗಳ ತಂಡವೊಂದು ಎಚ್ಚರಿಕೆ ರೂಪದ ಸಂಶೋಧನೆಯೊಂದನ್ನು ನಡೆಸಿದೆ. ಹೀಗಾಗಿ ವ್ಯಕ್ತಿಯ ನಿಖರ ಗುರುತು ಪತ್ತೆಗೆ ಬಳಸಲಾಗುವ ಬೆರಳಚ್ಚು ವಿಧಾನವೂ ಇನ್ನು ಸುರಕ್ಷಿತವಲ್ಲ ಎಂದು ಸಾಬೀತಾಗಿದೆ.

 

ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!

ಬಯೋಮೆಟ್ರಿಕ್‌ ಯಂತ್ರಗಳಲ್ಲಿ ‘ನರವ್ಯೂಹ ಜಾಲ’ದ ತಂತ್ರಜ್ಞಾನ ಬಳಸಿ ವ್ಯಕ್ತಿಯ ಬೆರಳಚ್ಚನ್ನು ಸ್ಕಾ್ಯನ್‌ ಮಾಡಲಾಗುತ್ತದೆ. ಈ ಬೆರಳಚ್ಚನ್ನು ಲಾಕ್‌ ಆದ ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ ಆನ್‌ ಮಾಡಲು ಮತ್ತು ಕಚೇರಿಗಳಲ್ಲಿನ ಬೆರಳಚ್ಚು ಆಧರಿತ ಹಾಜರಾತಿ ವ್ಯವಸ್ಥೆಗೆ ಬಳಸಲಾಗುತ್ತದೆ. ಆದರೆ ‘ನರವ್ಯೂಹ ಜಾಲ’ದ ತಂತ್ರಜ್ಞಾನದಲ್ಲಿ ದಾಖಲಾದ ಬೆರಳಚ್ಚುಗಳನ್ನು ದುರ್ಬಳಕೆ ಮಾಡಿಕೊಂಡು ‘ಕೃತಕ ಬುದ್ಧಿಮತ್ತೆ’ (ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌) ಮೂಲಕ ಬಹುತೇಕ ಯಥಾವತ್ತಾಗಿ ನಕಲಿ ಬೆರಳಚ್ಚುಗಳನ್ನು ಸೃಷ್ಟಿಮಾಡಬಹುದಾಗಿದೆ. ಈ ಮೂಲಕ ವ್ಯಕ್ತಿಯೊಬ್ಬ ಬೆರಳಚ್ಚನ್ನೇ ಪಾಸ್‌ವರ್ಡ್‌ ಆಗಿ ಇಟ್ಟುಕೊಂಡಿದ್ದಲ್ಲಿ ಅದನ್ನು ಕೃತಕ ಬುದ್ಧಿಮತ್ತೆಯ ಬೆರಳಚ್ಚು ಮೂಲಕ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ ಎಮದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
 

click me!