ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್; 21 ಹೊಸ ಇಮೋಜಿ ಸೇರ್ಪಡೆ, ಗ್ರೂಪ್ ಆಡ್ಮಿನ್ ಮತ್ತೊಂದು ಅಧಿಕಾರ!

By Suvarna News  |  First Published Mar 13, 2023, 3:48 PM IST

ವ್ಯಾಟ್ಸ್ಆ್ಯಪ್ ಗ್ರಾಹಕರಿಗೆ ಮತ್ತೆ ಹೊಸ ಫೀಚರ್ಸ್  ನೀಡುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಪರಿಚಯಿಸಿದೆ. ಇದೀಗ 21 ಹೊಸ ಇಮೋಜಿಗಳನ್ನು ಸೇರಿಸಿದೆ. ಇದರ ಜೊತೆಗೆ ಗ್ರೂಪ್ ಅಡ್ಮಿನ್‌ಗೆ ಮತ್ತೊಂದು ಅಧಿಕಾರವನ್ನು ನೀಡಿದೆ. ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಕುರಿತ ವಿವರ ಇಲ್ಲಿವೆ.


ನವದೆಹಲಿ(ಮಾ.13): ವ್ಯಾಟ್ಸ್ಆ್ಯಪ್ ಇದೀಗ ಕೇವಲ ಮೇಸೇಜಿಂಗ್ ಪ್ಲಾಟ‌್‌ಫಾರ್ಮ್ ಆಗಿ ಮಾತ್ರ ಉಳಿದಿಲ್ಲ. ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿರುವ ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಗ್ರಾಹಕರಿಗೆ ನೀಡಿದೆ. ಇದೀಗ ವ್ಯಾಟ್ಸ್ಆ್ಯಪ್ ಮತ್ತಷ್ಟು ಹೊಸ ಫೀಚರ್ಸ್ ಗ್ರಾಹಕರಿಗೆ ನೀಡುತ್ತಿದೆ. ನೂತನ ಫೀಚರ್ಸ್ ಆ್ಯಂಡ್ರಾಯ್ಡ್, iOS ಹಾಗೂ ಡೆಸ್ಕ್‌ಟಾಪ್ ಬಳಕೆದಾರರಿಗೆ ನೂತನ ಫೀಚರ್ಸ್ ಲಭ್ಯವಾಗಲಿದೆ. ವ್ಯಾಟ್ಸ್ಆ್ಯಪ್ Wabetainfo ಪ್ರಕಾರ, ವ್ಯಾಟ್ಸ್ಆ್ಯಪ್ ಚಾಟ್‌ಗೆ ಇದೀಗ ಹೊಸ 21 ಇಮೋಜಿ ಸೇರಿಸಲಾಗಿದೆ. ಸದ್ಯ ಬೆಟಾ ವರ್ಶನ್‌ನಲ್ಲಿ ಇಮೋಜಿಗಳು ಲಭ್ಯವಿದೆ. ಸತತ ಟೆಸ್ಟಿಂಗ್ ಮೂಲಕ ವ್ಯಾಟ್ಸ್ಆ್ಯಪ್ ಇದೀಗ ಹೊಸ ಇಮೋಜಿಗಳನ್ನು ಗ್ರಾಹಕರಿಗೆ ಲಭ್ಯವಾಗಿಸಿದ್ದಾರೆ. ಇದರ ಜೊತೆಗೆ ಗ್ರೂಪ್ ಅಡ್ಮಿನ್ ಮತ್ತೊಂದು ಅಧಿಕಾರ ನೀಡಲಾಗಿದೆ. ಗ್ರೂಪ್ ಸದಸ್ಯರು ಎಷ್ಟಿರಬೇಕು ಅನ್ನೋದು ನಿಯಂತ್ರಿಸುವ ಅಧಿಕಾರವನ್ನು ಗ್ರೂಪ್ ಅಡ್ಮಿನ್‌ಗೆ ನೀಡಲಾಗಿದೆ.

ಗ್ರೂಪ್ ಅಡ್ಮಿನ್‌ಗೆ ಗ್ರೂಪ್ ಮೇಲೆ ಮತ್ತಷ್ಟು ನಿಯಂತ್ರಣ ನೀಡಲಾಗಿದೆ. ಗ್ರೂಪ್ ಸದಸ್ಯರ ಸಂಖ್ಯೆ ಎಷ್ಟಿರಬೇಕು ಅನ್ನೋದು ಅಡ್ಮಿನ್ ನಿರ್ಧರಿಸಲು ಅವಕಾಶ ನೀಡಲಾಗಿದೆ. ಇದರಿಂದ ಗ್ರೂಪ್ ಆಡ್ಮಿನ್ ನಿಗಧಿಪಡಿಸಿದ ಸದಸ್ಯರಗಿಂತ ಹೆಚ್ಚು ಸದಸ್ಯರು ಗ್ರೂಪ್‌ ಸೇರಲು ಸಾಧ್ಯವಿಲ್ಲ. ಇನ್‌ವೈಟ್ ಲಿಂಕ್(ಆಮಂತ್ರಣದ ಲಿಂಕ್) ಮೂಲಕ ವ್ಯಾಟ್ಸ್ಆ್ಯಪ್ ಗ್ರೂಪ್ ಸೇರುವಲ್ಲಿ ಈ ಫೀಚರ್ಸ್ ನೆರವಾಗಲಿದೆ. ಗ್ರೂಪ್ ಆಡ್ಮಿನ್ ಇನ್‌ವೈಟ್ ಮಾಡಿದ ಲಿಂಕ್ ಮೂಲಕ ಗ್ರೂಪ್ ಸೇರಿಕೊಳ್ಳಬಹುದು. ಆದರೆ ಅಡ್ಮಿನ್ ಈ ಗ್ರೂಪ್‌ನಲ್ಲಿ ಎಷ್ಟು ಸದಸ್ಯರಿರಬೇಕು, ಎಷ್ಟು ಮಂದಿ ಸೇರಿಕೊಳ್ಳಬಹುದು ಅನ್ನೋದನ್ನು ಮೊದಲೇ ನಿರ್ಧರಿಸಿ ಇನ್‌ವೈಟ್ ಲಿಂಕ್ ಕಳುಹಿಸಬಹುದು. ಇದರಿಂದ ನಿಗದಿತ ಮಿತಿ ತಲುಪಿದ ಬಳಿಕ ಇನ್‌ವೈಟ್ ಲಿಂಕ್ ಮೂಲಕ ಗ್ರೂಪ್ ಸೇರಲು ಸಾಧ್ಯವಿಲ್ಲ. ಗ್ರೂಪ್ ಚಾಟ್ ಮತ್ತಷ್ಟು ಸಕ್ರಿಯವಾಗಿಸಲು ಹಾಗೂ ಅನಗತ್ಯ ಕಿರಿಕಿರಿ ತಪ್ಪಿಸಲು ಈ ಫೀಚರ್ಸ್ ಸೇರಿಸಲಾಗಿದೆ.

Latest Videos

undefined

Whatsapp ಬಳಕೆದಾರರಿಗೆ ಮತ್ತೊಂದು ಬಂಪರ್ ಫೀಚರ್, ಕಾಲ್ ಶೆಡ್ಯೂಲ್ ಆಯ್ಕೆ ಲಭ್ಯ!

21 ಹೊಸ ಇಮೋಜಿ ಹಾಗೂ ಗ್ರೂಪ್ ಅಡ್ಮಿನ್ ಅಧಿಕಾರ ಕುರಿತ ಫೀಚರ್ಸ್ ಬೆಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಈ ಫೀಚರ್ಸ್ ಲಭ್ಯವಾಗಲಿದೆ. ಬಳಕೆದಾರರು ವ್ಯಾಟ್ಸ್ಆ್ಯಪ್ ಆಪ್‌ಡೇಟ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಮೂಲಕ ವ್ಯಾಟ್ಸ್ಆಫ್ ಹೊಸ ಫೀಚರ್ಸ್‌ನೊಂದಿಗೆ ಬಳಕೆದಾರರ ಚಾಟಿಂಗ್ ಹಾಗೂ ಗ್ರೂಪ್ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದೆ. 21 ಹೊಸ ಇಮೋಜಿ ಚಾಟಿಂಗ್ ಪ್ರಿಯರಿಗೆ ಹೆಚ್ಚು ಬಳಕೆಯಾಗುವಂತೆ ಸೇರಿಸಲಾಗಿದೆ. ಈ ಇಮೋಜಿಗಳನ್ನು ವ್ಯಾಟ್ಸ್ಆ್ಯಪ್ ಯೂನಿಕೋಡ್ 15.0 ಅಡಿಯಲ್ಲಿ ಅಭಿವೃದ್ಧಿಪಡಿಸಿ ನೀಡಲಾಗಿದೆ. 

ಡಿಸೆಂಬರ್‌ನಲ್ಲಿ ಭಾರತದ 36.77 ಲಕ್ಷ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್!

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಹೈ ಕ್ವಾಲಿಟಿ ಫೋಟೋ ಕಳುಹಿಸುವ ಫೀಚರ್ಸ್ ಸೇರಿಸಲಾಗಿದೆ. ವಾಟ್ಸಾ​ಪ್‌​ನಲ್ಲಿ ಕಳು​ಹಿ​ಸ​ಲಾ​ಗುವ ಫೋಟೋ​ಗ​ಳ ಗುಣ​ಮ​ಟ್ಟ​ವನ್ನು ಕಡಿ​ಮೆ ಮಾಡ​ಲಾ​ಗು​ತ್ತದೆ ಎಂಬ ದೂರು ಸದಾ ಬಳ​ಕೆ​ದಾ​ರ​ರಿಂದ ಕೇಳಿ​ಬ​ರು​ತ್ತಿ​ತ್ತು. ಹಾಗಾಗಿ ಇದನ್ನು ಬಗೆ​ಹ​ರಿ​ಸಲು ನಿರ್ಧ​ರಿ​ಸಿ​ರುವ ವಾಟ್ಸಾಪ್‌ ಉತ್ತಮ ಗುಣ​ಮ​ಟ್ಟ​ದಲ್ಲೇ ಫೋಟೋ​ಗ​ಳನ್ನು ಕಳು​ಹಿ​ಸಲು ಅವ​ಕಾ​ಶ​ವನ್ನು ಒದ​ಗಿ​ಸಲು ನಿರ್ಧ​ರಿ​ಸಿದೆ. ಈಗಾ​ಗಲೇ ಬೀಟಾ ಆವೃತ್ತಿ ಬಳಕೆ ಮಾಡು​ತ್ತಿ​ರುವವರಿಗೆ ಈ ಸೌಲ​ಭ್ಯ​ವನ್ನು ಒದ​ಗಿ​ಸ​ಲಾ​ಗಿದೆ. ಇದ​ಕ್ಕಾಗಿ ಫೋಟೋ ಕಳು​ಹಿ​ಸು​ವು​ದಕ್ಕೂ ಮೊದಲು ಗುಣ​ಮ​ಟ್ಟ​ವನ್ನು ಆಯ್ಕೆ ಮಾಡಲು ಅವ​ಕಾಶ ಒದ​ಗಿ​ಸ​ಲಾ​ಗಿದೆ. ಈ ಹೊಸ ವೈಶಿಷ್ಟ್ಯ​ದಿಂದ ವಾಟ್ಸಾಪ್‌ ಟೆಲಿ​ಗ್ರಾಂ ವಿರುದ್ಧ ಮತ್ತಷ್ಟುಬಲ​ಶಾ​ಲಿ​ಯಾ​ದಂತಾ​ಗಿದೆ ಎನ್ನಲಾಗಿದೆ.

click me!