WhatsApp ಬಳಕೆದಾರರಿಗೆ ಗುಡ್ ನ್ಯೂಸ್, ವಿಡಿಯೋ ಕಾಲ್‌ನಲ್ಲಿ ಹೊಸ ಫೀಚರ್!

By Suvarna News  |  First Published Jul 24, 2023, 11:52 AM IST

ಬಳಕೆದಾರರ ಅನುಕೂಲಕ್ಕಾಗಿ ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಇದೀಗ ವಿಡಿಯೋ ಕಾಲ್‌ನಲ್ಲಿ ಬಹುದಿನಗಳ ಬೇಡಿಕೆಯನ್ನು ವ್ಯಾಟ್ಸ್ಆ್ಯಪ್ ಈಡೇರಿಸಿದೆ. ವಿಡಿಯೋ ಕಾಲ್ ಹೊಸ ಫೀಚರ್ ಜೊತೆ ಚಾಟ್ ಟ್ರಾನ್ಸ್‌ಫರ್ ಹಾಗೂ ಹೊಸ ಸ್ಟಿಕ್ಕರ್ ಜಾರಿ ಮಾಡಿದೆ.


ನವದೆಹಲಿ(ಜು.24) ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ವ್ಯಾಟ್ಸ್ಆ್ಯಪ್ ಈಡೇರಿಸಿದೆ. ಇದೀಗ ವ್ಯಾಟ್ಸ್ಆ್ಯಪ್‌ ವಿಡಿಯೋ ಕಾಲ್ ವೇಳೆ ಲ್ಯಾಂಡ್‌ಸ್ಕೇಪ್ ಮೂಡ್ ಪ್ರವರ್ತಿಸಲಿದೆ. ಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪೋರ್ಟ್ರೈಟ್ ಮೂಡ್ ಮಾತ್ರ ಅನಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್‌ನಿಂದ ವಿಡಿಯೋ ಕಾಲ್ ಮಾಡುಲ ಬಳಕೆದಾರರು ಮೊಬೈಲ್‌ನ್ನು ಪೋರ್ಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್ ಯಾವುದೇ ಮೂಡ್‌ನಲ್ಲೂ ಕರೆ ಮಾಡಿ ಸಂಭಾಷಣೆ ನಡೆಸಬಹುದು. ಹೊಸ ಫೀಚರ್ ಇದಕ್ಕೆ ಅನುಮತಿ ನೀಡಲಿದೆ.

ವಿಡಿಯೋ ಕಾಲ್ ವೇಳೆ ಲ್ಯಾಂಡ್‌ಸ್ಕೇಪ್ ಮೂಡ್‌ನಲ್ಲಿ ಮೊಬೈಲ್ ಇಟ್ಟು ಸಂಭಾಷಣೆ ನಡೆಸಲು ಅಥವಾ ಇನ್ನಿತರ ಕಾರಣಗಳಿಗೆ ಬಳಕೆದಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಇದೀಗ ಬಳಕೆದಾರರು ಮೊಬೈಲ್‌ನ್ನು ಲ್ಯಾಂಡ್‌ಸ್ಕೇಪ್ ಮೂಡ್‌ನತ್ತ ತಿರುಗಿಸಿದರೆ ವಿಡಿಯೋ ಕಾಲ್‌ಗೆ ಯಾವುದೇ ಸಮಸ್ಯೆ ಇಲ್ಲ. ಕರೆಯಲ್ಲಿರುವ ವ್ಯಕ್ತಿ ಅಥವಾ ಚಿತ್ರಗಳು ಉಲ್ಟಾ ಕಾಣುವುದಿಲ್ಲ. ಬಳಕೆದಾರರ ಮುಂದಿದ್ದ ಸಮಸ್ಯೆಯೊಂದನ್ನು ವ್ಯಾಟ್ಸ್ಆ್ಯಪ್ ಬಗೆಹರಿಸಿದೆ.

Latest Videos

undefined

AI ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಸ್ಕಾಮ್, ವ್ಯಾಟ್ಸ್ಆ್ಯಪ್ ಮೂಲಕ 40 ಸಾವಿರ ಕಳೆದುಕೊಂಡ ಯುವಕ!

ಲ್ಯಾಂಡ್‌ಸ್ಕೋಪ್ ಮೂಡ್ ವಿಡಿಯೋ ಕಾಲ್ ಜೊತೆಗೆ ಕಾಲ್ ಸೈಲೆಂಟ್ ಫೀಚರನ್ನು ವ್ಯಾಟ್ಸ್ಆ್ಯಪ್ ಪರಿಚಯಿಸಿದೆ. ಈ ಮೂಲಕ ಅನಗತ್ಯ, ಸ್ಪ್ಯಾಮ್ ಕಾಲ್, ಅಪರಿಚಿತ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ವ್ಯಾಟ್ಸ್ಆ್ಯಪ್ ಸೆಟ್ಟಿಂಗ್ ಮೂಲಕ ಪ್ರೈವೈಸ್ ಕಾಲ್ ಆಯ್ಕೆ ಮಾಡಿದರೆ ಕಿರಿಕಿರಿಯಿಂದ ದೂರ ಉಳಿಯಲು ಸಾಧ್ಯವಿದೆ. ಅಪರಿಚಿತ ಮತ್ತು ಸ್ಪಾ್ಯಮ್‌ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್‌ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್‌ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್‌ ಮಾಡುವ ಹೊಸ ಫೀಚರನ್ನು ವಾಟ್ಸಾಪ್‌ ಬಿಡುಗಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿ ಸೈಲೆಂಟ್‌ ಅನ್‌ನೋನ್‌ ನಂಬ​ರ್‍ಸ್ ಆಯ್ಕೆಯನ್ನು ಎನೇಬಲ್‌ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್‌ ಸೈಲೆಂಟ್‌ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್‌ ಬಗ್‌ರ್‍, ಈಗ ವಾಟ್ಸಾಪ್‌ ಅನ್‌ನೋನ್‌ ಕಾಲ್‌ಗಳನ್ನು ಸೈಲೆಂಟ್‌ ಮಾಡಲಿದೆ. ಆ್ಯಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇಷ್ಟಕ್ಕೇ ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಕತೆ ಮುಗಿದಿಲ್ಲ. ಇದೀಗ ವ್ಯಾಟ್ಸ್ಆ್ಯಪ್ ಚಾಟ್ ಟ್ರಾನ್ಸ್‌ಫರ್ ಆಯ್ಕೆಯನ್ನು ನೀಡಿದೆ. ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವ್ಯಾಟ್ಸ್ಆ್ಯಪ್‌ನ ಚಾಟ್‌ಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಟ್ರಾನ್ಸ್‌ಫರ್ ಮಾಡಲು ಈ ಫೀಚರ್‌ನಿಂದ ಸಾಧ್ಯವಿದೆ. ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ ಟ್ರಾನ್ಸ್‌ಫರ್ ಸುಲಭವಾಗಿ ಮಾಡಲು ಸಾಧ್ಯವಿದೆ. ಹೊಸ ಫೀಚರ್‌ನಿಂದ ಐಫೋನ್‌ಗೂ ಚಾಟ್ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ. ಇದರ ಜೊತೆಗೆ ವ್ಯಾಟ್ಸ್ಆ್ಯಪ್ ಹೊಸ ಹೊಸ ಸ್ಟಿಕ್ಕರ್ ಬಿಡುಗಡೆ ಮಾಡಿದೆ. 

ಕ್ಲೌಡ್ ಬ್ಯಾಕ್ಅಪ್ ಇಲ್ಲದೆ ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ಸ್ ಟ್ರಾನ್ಸ್‌ಫರ್‌ಗೆ WhatsApp ಅವಕಾಶ!
 

click me!