WhatsApp ಹೊಸ ಫೀಚರ್, ಗ್ರೂಪ್ ಕಾಲ್‌ನಲ್ಲಿ ಮಹತ್ತರ ಬದಲಾವಣೆ!

By Suvarna News  |  First Published May 15, 2023, 4:43 PM IST

ವ್ಯಾಟ್ಯ್ಆ್ಯಪ್ ಪ್ರತಿ ವಾರ ಹೊಸ ಹೊಸ ಫೀಚರ್ ಪರಿಚಯಿಸುತ್ತಿದೆ. ಇದೀಗ ಗ್ರೂಪ್ ಕಾಲ್‌ನಲ್ಲಿ ಮಹತ್ತರ ಬದಲಾವಣೆ ಮಾಡಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಫೀಚರ್ ಬಿಡುಗಡೆ ಮಾಡಿದೆ. ನೂತನ ಫೀಚರ್ ಕುರಿತ ಮಾಹಿತಿ ಇಲ್ಲಿದೆ.


ಸ್ಯಾನ್‌ಫ್ರಾನ್ಸಿಸ್ಕೋ(ಮೇ.15): ಮೆಸೇಜ್ ಎಡಿಟ್, ಸಂದೇಶ ಕಾಣದಂತೆ ಪ್ರೈವೈಟ್ ಮಾಡುವ ಅವಕಾಶ ಸೇರಿದಂತೆ ಹತ್ತು ಹಲವು ಫೀಚರ್ಸ್ ಪರಿಚಯಿಸಿರುವ ವ್ಯಾಟ್ಸ್ಆ್ಯಪ್ ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಫೀಚರ್ ಬಿಡುಗಡೆ ಮಾಡಿದೆ. ಗ್ರೂಪ್ ಕಾಲ್‌ನಲ್ಲಿ ಹೊಸ ಫೀಚರ್ಸ್ ಸೇರಿಸಲಾಗಿದೆ.ಇಷ್ಟು ದಿನ ಗ್ರೂಪ್ ಕಾಲ್ ಬಟನ್ ಕ್ಲಿಕ್ ಮಾಡಿದರೆ ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರಿಗೆ ಕರೆ ಹೋಗುತ್ತಿತ್ತು. ಆದರೆ ಹೊಸ ಫೀಚರ್ಸ್ ಮೂಲಕ ಗ್ರೂಪ್‌ನಲ್ಲಿರುವ ಆಯ್ದ ವ್ಯಕ್ತಿಗಳಿಗೆ ಕರೆ ಮಾಡುವ ಅವಕಾಶ ನೀಡಲಾಗಿದೆ. ಇದರಿಂದ ಗ್ರೂಪ್ ಕಾಲ್ ಮಾಡುವಾಗ ಅನಗತ್ಯವಾಗಿ ಎಲ್ಲರಿಗೂ ಕರೆ ಮಾಡುವುದನ್ನು ತಪ್ಪಿಸಬಹುದು. 

ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಕುರಿತು WABetaInfo  ಹೇಳಿದೆ. ಮ್ಯಾಕ್ OS ಹೊಸ ಫೀಚರ್ ಮೂಲಕ ಬಳಕೆದಾರರಿಗೆ ಗ್ರೂಪ್ ಕಾಲ್ ಫೀಚರ್ಸ್ ನೀಡಲಾಗಿದೆ. ಗ್ರೂಪ್ ಕಾಲ್‌ನಲ್ಲಿ ಆಯ್ದ ವ್ಯಕ್ತಿಗಳಿಗೆ ಕರೆ ಮಾಡುವ ಫೀಚರ್ಸ್ ವಿಡಿಯೋ ಹಾಗೂ ಆಡಿಯೋ ಕಾಲ್ ಎರಡಕ್ಕೂ ಅನ್ವಯವಾಗುತ್ತದೆ. ಇಷ್ಟೇ ಅಲ್ಲ ಗ್ರೂಪ್ ಕಾಲ್ ಆಯ್ಕೆ ಫೀಚರ್ಸ್ ಆಡಿಯಲ್ಲಿ ಒಂದು ಗ್ರೂಪ್‌ನಲ್ಲಿನ ಆಯ್ದ ವ್ಯಕ್ತಿಗಳನ್ನು ಸೇರಿಸಿ ಕಾಲ್ ಗ್ರೂಪ್ ಮಾಡಲು ಅವಕಾಶವಿದೆ. ಈ ಫೀಚರ್ಸ್‌ನಲ್ಲಿ ಗ್ರೂಪ್‌ನಲ್ಲಿ 20 ಸದಸ್ಯರಿದ್ದರೆ, ಇದರಲ್ಲಿ 7 ಸದಸ್ಯರಿಗೆ ಮಾತ್ರ ಕರೆ ಮಾಡಲು ಇಚ್ಚಿಸಿದರೆ ಇದೇ ಗ್ರೂಪ್‌ನಲ್ಲಿ ಕಾಲ್ ಗ್ರೂಪ್ ಮಾಡಿ ಈ 7 ಸದಸ್ಯರನ್ನು ಸೇರಿಸಲುಸಾಧ್ಯವಿದೆ.

Tap to resize

Latest Videos

undefined

 

ಮಲಗಿದ್ದಾಗಲೂ ವಾಟ್ಸಪ್‌ನಿಂದ ಮೈಕ್ರೋಫೋನ್‌ ದುರ್ಬಳಕೆ: ಟ್ವೀಟರ್‌ ಸಿಬ್ಬಂದಿ ಫೋದ್‌ ದಬಿರಿ ಗಂಭೀರ ಆರೋಪ

ನೂತನ ಫೀಚರ್ಸ್ ಬಿಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಹೊಸ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಸೆಲೆಕ್ಟ್ ಕಾಲ್ ಆಯ್ಕೆಯಲ್ಲಿ ಗರಿಷ್ಠ 7 ಮಂದಿ ಆಯ್ಕೆ ಮಾಡಿ ಕರೆ ಮಾಡಬಹುದು. ಈ ಕರೆಯ ನಡುವೆ ಗರಿಷ್ಠ 32 ಸದಸ್ಯರು ಸೇರಿಕೊಳ್ಳುಲು ಅಕಾಶ ನೀಡಲಾಗಿದೆ. 

4 ಫೋನ್‌ಗಳಲ್ಲಿ ಒಂದೇ ವಾಟ್ಸಾಪ್‌ ಖಾತೆ ಬಳಕೆ:  ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್‌ ಅ್ಯಪ್‌ ಇದೀಗ ಹೊಸ ಫೀಚರ್‌ವೊಂದನ್ನು ಬಿಡುಗಡೆ ಮಾಡಿದ್ದು, ಈಗ ಒಂದೇ ವಾಟ್ಸಾಪ್‌ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಬಳಸಲು ಅವಕಾಶ ಒದಗಿಸಲಾಗಿದೆ. ಈ ಮೊದಲು ಕೇವಲ ಒಂದೇ ಮೊಬೈಲ್‌ನಲ್ಲಿ ಬಳಕೆ ಅವಕಾಶ ನೀಡಲಾಗಿತ್ತು.ಮೂಲ ಫೋನ್‌ನಲ್ಲಿ ಲಾಗ್‌ಔಟ್‌ ಆಗದೇ ಡೆಸ್‌್ಕಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಮಾಡುವ ರೀತಿ ಇನ್ನು ಮುಂದೆ ಹಲವು ಮೊಬೈಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಪ್ರಪಂಚದ ಯಾವ ಭಾಗದಿಂದಾದರೂ ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಿರುವ ವ್ಯವಸ್ಥೆಯನ್ನು ನಾವು ರೂಪಿಸಿದ್ದೆವು. ಇದೀಗ ಅದನ್ನು ಮತ್ತಷ್ಟುವಿಸ್ತರಿಸಿ ಹಲವು ಮೊಬೈಲ್‌ಗಳಲ್ಲಿ ಒಂದೇ ಖಾತೆ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ಅಪರಿಚಿತ ಅಂತಾರಾಷ್ಟ್ರೀಯ ಕರೆ ಹಾವಳಿ: ನಂಬರ್‌ ಬ್ಲಾಕ್‌ಗೆ ವಾಟ್ಸಾಪ್‌ ಸೂಚನೆ

click me!