ಚಾಟ್ ಲಾಕ್ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್, ಸಂದೇಶ ಕಾಣದಂತೆ ಪ್ರೈವೇಟ್ ಮಾಡಲು ಅವಕಾಶ!

By Suvarna NewsFirst Published Apr 29, 2023, 5:10 PM IST
Highlights

ವ್ಯಾಟ್ಸ್ಆ್ಯಪ್ ಇತ್ತೀಚಗೆ ಒಂದರ ಮೇಲೊಂದರಂತೆ ಸರಣಿ ಫೀಚರ್ಸ್ ಪರಿಚಯಿಸುತ್ತಿದೆ. ಇದೀಗ ಬಹುತೇಕ ಬಳಕೆದಾರರ ಬಯಸಿದ ಚಾಟ್ ಲಾಕ್ ಫೀಚರ್ಸ್ ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಚಾಟ್‌ನ್ನು ಲಾಕ್ ಮಾಡಬಹುದು, ಅಥವಾ ಕಾಣದಂತೆ ಪ್ರೈವೇಟ್ ಮಾಡಿಕೊಳ್ಳಬಹುದು. 

ನವದೆಹಲಿ(ಏ.29): ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಸಿಹಿ ಸುದ್ದಿ. ನಿಮ್ಮ ಚಾಟ್ ಮೆಸೇಜ್‌ಗಳನ್ನು ಲಾಕ್ ಮಾಡಲು ಇದೀಗ ವ್ಯಾಟ್ಸ್ಆ್ಯಪ್ ಚಾಟ್ ಲಾಕ್ ಫೀಚರ್ ಪರಿಚಯಿಸಿದೆ. ಬಳಕೆದಾರರ ಖಾಸಗಿತನ ಹಾಗೂ ಚಾಟ್ ಗೌಪ್ಯತೆಗೆ ಒತ್ತು ನೀಡಿರುವ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ. ಈ ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ಚಾಟ್ ಮೆಸೇಜ್‌ಗಳನ್ನು ಲಾಕ್ ಮಾಡಿಕೊಳ್ಳಬುಹುದು. ಇದರಿಂದ ಚಾಟ್ ಮಸೇಜ್ ಪ್ರೈವೇಟ್ ಆಗಲಿದೆ. ಯಾರಿಗೂ ಕಾಣಿಸಿವುದಿಲ್ಲ. ಲಾಕ್ ಒಪನ್ ಮಾಡಿದರೆ ಮಾತ್ರ ಈ ಸಂದೇಶಗಳು ಕಾಣಿಸಲಿದೆ. ಸದ್ಯ ನೂತನ ಫೀಚರ್ಸ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಕೆಲವೇ ವಾರದಲ್ಲಿ ಎಲ್ಲಾ ಬಳಕೆದಾರರಿಗೆ ನೂತನ ಫೀಚರ್ಸ್ ಲಭ್ಯವಾಗಲಿದೆ.

ವ್ಯಾಟ್ಸ್ಆ್ಯಪ್‌ನಲ್ಲಿ ಪ್ರತಿಯೊಬ್ಬರ ಚಾಟ್ ಪೇಜ್‌ನ ಮೇಲ್ಬಾಗದಲ್ಲಿರುವ ಮೂರ ಚುಕ್ಕೆ ಬಟನ್‌ಲ್ಲಿ ಲಾಕ್ ಚಾಟ್ ಆಯ್ಕೆ ನೀಡಲಾಗಿದೆ. ಈ ಆಯ್ಕೆ ಕ್ಲಿಕ್ ಮಾಡಿದರೆ ಚಾಟ್ ಮೆಸೇಜ್ ಲಾಕ್ ಆಗಲಿದೆ. ಲಾಕ್ ಚಾಟ್‌ನಲ್ಲಿ ವ್ಯಕ್ತಿಯ ಚಾಟ್‌ಗಳು ಸಂಪೂರ್ಣ ಪ್ರೈವೇಟ್ ಆಗಲಿದೆ. ಆದರೆ ಸ್ಟೇಟಸ್ ಹಾಗೂ ಕಾಲ್ಸ್ ವಿವರಗಳನ್ನು ನೋಡಬಹುದಾಗಿದೆ. ಈ ಚಾಟ್ ಲಾಕ್ ಫೀಚರ್‌ನಿಂದ ವ್ಯಾಟ್ಸ್ಆ್ಯಪ್ ಬಳಕೆದಾರರು ವೈಯುಕ್ತಿಕ, ಗೌಪ್ಯ ಮಾಹಿತಿಗಳ ಚಾಟ್ ಮೆಸೇಜ್‍ಗಳನ್ನು ಲಾಕ್ ಮಾಡಿಕೊಳ್ಳಬಹುದು.

ಬಳಕೆದಾರರ ಭದ್ರತೆಗೆ 3 ಹೊಸ ಫೀಚರ್‌ ಬಿಡುಗಡೆ ಮಾಡಿದ ವಾಟ್ಸಾಪ್‌

ಇಷ್ಟಕ್ಕೆ ಈ ಫೀಚರ್ಸ್ ಸೌಲಭ್ಯ ಮುಗಿದಿಲ್ಲ. ಚಾಟ್ ಲಾಕ್ ಕ್ಲಿಕ್ ಮಾಡಿ ಸಂದೇಶಗಳನ್ನು ಲಾಕ್ ಮಾಡಿದ ಬಳಿಕ ಆ್ಯಪ್‌ನಲ್ಲಿ ಪ್ರತ್ಯೇಕ ಚಾಟ್ ಲಾಕ್ ಫೋಲ್ಡರ್ ಲಭ್ಯವಾಗಲಿದೆ. ಈ ಫೋಲ್ಡರ್‌ನಲ್ಲಿ ಲಾಕ್ ಮಾಡಿದ ಎಲ್ಲಾ ಚಾಟ್ಸ್ ಲಭ್ಯವಾಗಲಿದೆ. ಈ ಫೋಲ್ಡರ್‌ನ್ನು ಫಿಂಗರ್‌ಪ್ರಿಂಟ್ ಅನ್‍‌ಲಾಕ್ ಮೂಲಕ ತೆರೆದು ಚಾಟ್ಸ್ ನೋಡಬಹುದು. ಒಂದು ವೇಳೆ ನಿಮ್ಮ ವ್ಯಾಟ್ಸ್ಆ್ಯಪ್‌ನ್ನು ಯಾರಾದರು ಒಪನ್ ಮಾಡಿದರೆ, ಅಥವಾ ನಿಮಗೆ ಬಂದಿರುವ ಸಂದೇಶಗಳನ್ನು ತಡಕಾಡಿದರೆ, ಲಾಕ್ ಚಾಟ್ ಫೋಲ್ಡರ್ ತೆರೆಯಲು ಸಾಧ್ಯವಿಲ್ಲ. ಈ ಫೋಲ್ಡರ್ ತೆರೆಯಲು ನಿಮ್ಮ ಫಿಂಗರ್ ಪ್ರಿಂಟ್ ಲಾಕ್ ಅವಶ್ಯಕವಾಗಿದೆ.

ಫಿಂಗರ್ ಪ್ರಿಂಟ್ ಮೂಲಕವೇ ಚಾಟ್ ಲಾಕ್ ಮಾಡುವ ಅವಕಾಶ ಸಿಗಲಿದೆ. ಇದರಿಂದ ವ್ಯಾಟ್ಸ್ಆ್ಯಪ್ ಚಾಟ್ಸ್ ಹೆಚ್ಚು ಸುರಕ್ಷಿತವಾಗಿ ಚಾಟ್ ಲಾಕ್ ಫೋಲ್ಡರ್‌ನಲ್ಲಿ ಸೇರಿಕೊಳ್ಳಲಿದೆ. ಈ ಫೀಚರ್ಸ್ ಇಡೀ ವ್ಯಾಟ್ಸ್ಆ್ಯಪ್ ಲಾಕ್ ಮಾಡುವ ಬದಲು ನಿಮಗೆ ಅಗತ್ಯವಿರುವ ಚಾಟ್ಸ್ ಲಾಕ್ ಮಾಡಲು ಅವಕಾಶ ನೀಡಲಿದೆ. ಬೀಟಾ ವರ್ಶನ್‌ನಲ್ಲಿ ಟೆಸ್ಟಿಂಗ್ ಮಾಡುತ್ತಿರುವ ವ್ಯಾಟ್ಸ್ಆ್ಯಪ್ ಶೀಘ್ರದಲ್ಲೇ ನೂತನ ಫೀಚರ್ಸ್ ಬಳಕೆದಾರರಿಗೆ ಬಿಡುಗಡೆ ಮಾಡಲಿದೆ.

Whatsapp New features ಇಮೇಜ್‌ನಿಂದ ಟೆಕ್ಸ್ಟ್ ಕಾಪಿ ಮಾಡಲು ಅವಕಾಶ, ಹೊಸ ಫೀಚರ್ಸ್‌ನಿಂದ ಹಲವು ಲಾಭ!

ಇತ್ತೀಚೆಗೆ ವ್ಯಾಟ್ಸ್ಆ್ಯಪ್ 4 ಫೋನ್‌ಗಳಲ್ಲಿ ಒಂದೇ ವ್ಯಾಟ್ಸ್ಆ್ಯಪ್ ಖಾತೆ ಬಳಸುವ ಫೀಚರ್ಸ್ ಬಿಡುಗಡೆ ಮಾಡಿದೆ. ಒಂದೇ ವಾಟ್ಸಾಪ್‌ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಬಳಸಲು ಅವಕಾಶ ಒದಗಿಸಲಾಗಿದೆ. ಈ ಮೊದಲು ಕೇವಲ ಒಂದೇ ಮೊಬೈಲ್‌ನಲ್ಲಿ ಬಳಕೆ ಅವಕಾಶ ನೀಡಲಾಗಿತ್ತು. ಮೂಲ ಫೋನ್‌ನಲ್ಲಿ ಲಾಗ್‌ಔಟ್‌ ಆಗದೇ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಮಾಡುವ ರೀತಿ ಇನ್ನು ಮುಂದೆ ಹಲವು ಮೊಬೈಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಪ್ರಪಂಚದ ಯಾವ ಭಾಗದಿಂದಾದರೂ ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಿರುವ ವ್ಯವಸ್ಥೆಯನ್ನು ನಾವು ರೂಪಿಸಿದ್ದೆವು. ಇದೀಗ ಅದನ್ನು ಮತ್ತಷ್ಟುವಿಸ್ತರಿಸಿ ಹಲವು ಮೊಬೈಲ್‌ಗಳಲ್ಲಿ ಒಂದೇ ಖಾತೆ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

click me!