ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್, ಫ್ಯಾಕ್ಟರಿಯಿಂದ ನೇರವಾಗಿ ಗ್ರಾಹಕರ ಕೈಗೆ ಉತ್ಪನ್ನ!

By Suvarna News  |  First Published Apr 17, 2023, 4:49 PM IST

ಭಾರತದಲ್ಲಿ ಆ್ಯಪಲ್ ಕಂಪನಿಯ ಮೊಟ್ಟ ಮೊದಲ ಸ್ಟೋರ್ ನಾಳೆ ಉದ್ಘಾಟನೆಗೊಳ್ಳಲಿದೆ. ಇದೀಗ ಗ್ರಾಹಕರು ಆ್ಯಪ್ ಮಳಿಗೆಗೆ ಆಗಮಿಸಿ ಆ್ಯಪಲ್ ಉತ್ಪನ್ನಗಳ ಅನುಭವ ಪಡೆದುಕೊಳ್ಳಬಹುದು. ಇಷ್ಟೇ ಅಲ್ಲ ಆ್ಯಪಲ್ ಸರ್ವೀಸ್ ಸೇರಿದಂತೆ ಎಲ್ಲಾ ರೀತಿಯ ಪರಿಹಾರಗಳು ಸಿಗಲಿದೆ. 


ಮುಂಬೈ(ಏ.17): ಭಾರತದಲ್ಲಿ ಆ್ಯಪಲ್ ಉತ್ಪನ್ನಗಳು ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಅದರಲ್ಲೂ ಐಫೋನ್‌ಗೆ ಮುಗಿಬೀಳುವ ಗ್ರಾಹಕರ ಸಂಖ್ಯೆ ದೊಡ್ಡದಿದೆ. ಇದೀಗ ಗ್ರಾಹಕರ ಅನೂಕೂಲಕ್ಕಾಗಿ ಆ್ಯಪಲ್ ಭಾರತದಲ್ಲಿ ಮೊಟ್ಟ ಮೊದಲ ಸ್ಟೋರ್ ನಾಳೆ(ಏ.18) ಉದ್ಘಾಟನೆಗೊಳ್ಳಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ ಆ್ಯಪಲ್ ಸ್ಟೋರ್ ಇಂದಿನಿಂದ ಗ್ರಾಹಕರಿಗೆ ಸೇವೆ ನೀಡುತ್ತಿದೆ. 

ಆ್ಯಪಲ್ ಸ್ಟೋರ್‌ಗೆ ಆಗಮಿಸುವ ಗ್ರಾಹಕರಿಗೆ ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಫ್ಯಾಕ್ಟರಿಯಿಂದ ನೇರವಾಗಿ ಸ್ಟೋರ್‌ಗೆ ಉತ್ಪನ್ನಗಳು ಆಗಮಿಸಲಿದೆ. ಹೀಗಾಗಿ ಮಾರುಕಟ್ಟೆ ಬೆಲೆಗಿಂತ ಅಗ್ಗದಲ್ಲಿ ಆ್ಯಪಲ್ ಉತ್ಪನ್ನಗಳು ಗ್ರಾಹಕರ ಕೈಗೆ ಸಿಗಲಿದೆ. 

Latest Videos

undefined

'ಹಲೋ ಮುಂಬೈ' ಎಂದ ಭಾರತದ ಮೊದಲ ಆಪಲ್ ಸ್ಟೋರ್!

ಆ್ಯಪಲ್ ಮಳಿಗೆ ಉದ್ಘಾಟನೆಗಾಗಿ ಭಾರತಕ್ಕೆ ಆಗಮಿಸಿರುವ ಸಿಇಒ ಟಿಮ್ ಕುಕ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ಅತ್ಯಂತ ಸುಂದರ ಸಂಸ್ಕೃತಿ ಹೊಂದಿದೆ ದೇಶ. ಭಾರತದಲ್ಲಿ ಸುದೀರ್ಘ ವ್ಯಾಪಾರ ವಹಿವಾಟು ಹಾಗೂ ಗ್ರಾಹಕರ ಜೊತೆಗಿನ ಅವಿನಾಭ ಸಂಬಂಧ ಹೊಂದಿರುವ ಆ್ಯಪಲ್ ಇದೀಗ ಮೊದಲ ಮಳಿಗೆ ಆರಂಭಿಸಿದೆ. ಭಾರತದಲ್ಲಿ ಈ ರೀತಿ ಆ್ಯಪಲ್ ಮಲಿಗೆ ಎಲ್ಲಾ ನಗರ, ಪಟ್ಟಣಕ್ಕೆ ವಿಸ್ತರಣೆಗೊಳ್ಳಲಿದೆ. ಇದೀಗ ಮೊದಲ ಹಂತದಲ್ಲಿ ಮುಂಬೈನಲ್ಲಿ ಆರಂಭಗೊಂಡಿದೆ ಎಂದಿದ್ದಾರೆ.

ಅಮೆರಿಕ ಮೂಲದ ಆ್ಯಪಲ್‌ ಸಂಸ್ಥೆಯ ಮೊತ್ತಮೊದಲ ಮಳಿಗೆ ಏ.18ರಂದು ಉದ್ಘಾಟನೆಗೊಳ್ಳಲಿದೆ. 2ನೇ ಮಳಿಗೆ ಏ.20ರಂದು ದೆಹಲಿಯಲ್ಲಿ ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗಾಗಿ ಸಂಸ್ಥೆಯ ಸಿಇಒ ಟಿಮ್‌ ಕುಕ್‌ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮತ್ತು ದೆಹಲಿಯ ಸಾಕೇತ್‌ ಮಾಲ್‌ನಲ್ಲಿ ಆ್ಯಪಲ್‌ ಮಳಿಗೆಗಳು ನಿರ್ಮಾಣಗೊಂಡಿವೆ.  

ಸಂಬಳ ಸಿಕ್ಕಾಪಟ್ಟೆ ಹೆಚ್ಚು ಎಂದಿದ್ದ ಟಿಮ್‌ ಕುಕ್‌ಗೆ ಶೇ.50ರಷ್ಟು ವೇತನ ಕಡಿತ ಮಾಡಿದ ಆಪಲ್‌!

ಭಾರತದಲ್ಲಿ ಆ್ಯಪಲ್ ಮೊಬೈಲ್ ಉತ್ಪಾದನೆ ತ್ವರಿತಗತಿಯಲ್ಲಿ ಆಗುತ್ತಿದೆ. ಇದರ ಪರಿಣಾಮ ವಿದೇಶಗಳಿಗೆ ರಫ್ತು ಪ್ರಮಾಣದಲ್ಲಿ ಐಪೋನ್ ಮೊದಲ ಸ್ಥಾನದಲ್ಲಿದೆ. ಭಾರತ ಇದೀಗ ಆ್ಯಪಲ್ ಕಂಪನಿಯ ಪ್ರಮುಖ ಕೇಂದ್ರಬಿಂದುವಾಗಿದೆ. ಭಾರತದಿಂದ ವಿದೇಶಕ್ಕೆ ರಫ್ತು ಮಾಡಲಾದ ಮೊಬೈಲ್‌ ಫೋನ್‌ಗಳ ಮೊತ್ತ ಫೆಬ್ರವರಿ ಅಂತ್ಯಕ್ಕೆ  78000 ಕೋಟಿ ರು.ಗೆ ತಲುಪಿದೆ ಎಂದು ಮೊಬೈಲ್‌ ಉದ್ಯಮ ಸಂಸ್ಥೆಯಾದ ಐಸಿಇಎ ಹೇಳಿದೆ. ಈ ಪೈಕಿ ಶೇ.50ರಷ್ಟುಮೊಬೈಲ್‌ ಫೋನ್‌ ಆ್ಯಪಲ್‌ ಕಂಪನಿಯದ್ದಾಗಿದ್ದರೆ, ಉಳಿದ ಶೇ.40ರಷ್ಟುಸ್ಯಾಮ್‌ಸಂಗ್‌ ಕಂಪನಿಯದ್ದಾಗಿದೆ. ಉಳಿದ ಶೇ.10ರಷ್ಟುಮೊಬೈಲ್‌ ಇನ್ನು ಇತರೆ ಕಂಪನಿಗಳು ರಫ್ತು ಮಾಡಿವೆ. ಪ್ರಸಕ್ತ ವರ್ಷ 82000 ಕೋಟಿ ಮೊತ್ತದ ಮೊಬೈಲ್‌ ರಫ್ತು ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಧಿಸುವ ಗುರಿ ಇದೆ ಎಂದು ಸಂಸ್ಥೆ ಹೇಳಿದೆ. 2021-22ರಲ್ಲಿ ಭಾರತದ ಮೊಬೈಲ್‌ ರಫ್ತಿನ ಪ್ರಮಾಣ 45,100 ಕೋಟಿ ರು.ನಷ್ಟಿತ್ತು.
 

click me!