ಪಬ್‌ಜಿ ಪ್ರಿಯರಿಗೆ ಡಬಲ್ ಖುಷಿ, ಮೊಬೈಲ್ ಗೇಮ್ ರಿ ಲಾಂಚ್‌ಗೆ ಸರ್ಕಾರ ಅನುಮತಿ!

By Suvarna News  |  First Published May 19, 2023, 5:43 PM IST

ಭಾರತದಲ್ಲಿ ನಿಷೇಧಗೊಂಡಿದ್ದ ಪಬ್‌ಜಿ ಗೇಮ್ ಇದೀಗ ಮತ್ತೆ ಬರುತ್ತಿದೆ. ಈ ಬಾರಿ ಹಲವು ಬದಲಾವಣೆಯೊಂದಿಗೆ ಭಾರತದಲ್ಲಿ ಪಬ್‌ಜಿ ಗೇಮ್ ರಿ ಲಾಂಚ್ ಆಗುತ್ತಿದೆ. ಕೇಂದ್ರ ಸರ್ಕಾರ ಪಬ್‌ಜಿ ರಿ ಲಾಂಚ್‌ಗೆ ಅನುಮತಿ ನೀಡಿದೆ.


ನವದೆಹಲಿ(ಮೇ.19): ಭಾರತದಲ್ಲಿ ಎರಡು ವರ್ಷದ ಬಳಿಕ ಪಬ್‌ಜಿ ಮೊಬೈಲ್ ಗೇಮ್ ಮತ್ತೆ ಬಿಡುಗಡೆಯಾಗುತ್ತಿದೆ. ಆಟದಲ್ಲೂ ಕೆಲ ಬದಲಾವಣೆ, ಸುರಕ್ಷತೆ ಸೇರಿದಂತೆ ಹಲವು ಬದಲಾವಣೆ ಮಾಡಿಕೊಂಡಿರುವ ಸೌತ್ ಕೊರಿಯಾದ ಕ್ರಾಫ್ಟನ್ ಕಂಪನಿಗೆ ಪಬ್‌ಜಿಗೆ ರಿ ಲಾಂಚ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ ಆರಂಭಿಕ ಹಂತದಲ್ಲಿ 3 ತಿಂಗಳ ಪ್ರಾಯೋಗಿಕವಾಗಿ ಲಾಂಚ್ ಮಾಡಲು ಸರ್ಕಾರ ಸೂಚಿಸಿದೆ. ಈ ಮೂರು ತಿಂಗಳಲ್ಲಿ ಸಾಧಕ ಬಾಧಕ ಗಮನಿಸಿ ಮುಂದಿನ ನಿರ್ಧಾರ ಕೈಗೊಲ್ಳು ನಿರ್ಧರಿಸಲಾಗಿದೆ.

ದಕ್ಷಿಣ ಕೊರಿಯಾದ ಕ್ರಾಫ್ಟನ್ ಕಂಪನಿಯ ಪಬ್‌ಜಿ ಗೇಮ್ ಭಾರತ ಸೇರಿದಂತೆ ವಿಶ್ವಾದ್ಯಂತ ಭಾರಿ ಜನಪ್ರಿಯವಾಗಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪಬ್‌ಜಿ ಬ್ಯಾಟಲ್‌ಗ್ರೌಂಡ್ ಗೇಮ್ ಹಾಗೂ ಇತರ 117 ಚೀನಾ ಆ್ಯಪ್‌ಗಳನ್ನು ನಿಷೇಧಿಸಿತ್ತು. ಭಾರತದ ಸಾರ್ವಭೌಮತೆ, ಏಕತೆ, ಹಿತಾಸಕ್ತಿ ಹಾಗೂ ಭದ್ರತೆ  ಧಕ್ಕೆ ತರುತ್ತಿದೆ ಅನ್ನೋ ಕಾರಣದಿಂದ ಈ ಆ್ಯಪ್‌ಗಳನ್ನು ನಿಷೇಧಿಸಿತ್ತು.ಪಬ್‌ಜಿ ಗೇಮಿಂಗ್ ಆ್ಯಪ್ ಚೀನಾ ಜೊತೆ ನಂಟು ಹೊಂದಿತ್ತು. ಜೊತೆಗೆ ಪಬ್‌ಜಿ ಮೇಲೆ ಹಲವು ಪೋಷಕರು ದೂರು ನೀಡಿದ್ದರು. ಹೀಗಾಗಿ ಚೀನಾ ಆ್ಯಪ್ ಜೊತೆಗೆ ಪಬ್‌ಜಿ ಕೂಡ ನಿಷೇಧಗೊಂಡಿತ್ತು.  ಇದೇ ವೇಳೆ ಕ್ರಾಫ್ಟನ್ ಕಂಪನಿ, ಭಾರತದಲ್ಲಿ ಪಬ್‌ಜಿಯನ್ನು ರಿ ಲಾಂಚ್ ಮಾಡುವುದಾಗಿ ಹೇಳಿತ್ತು. ಪಬ್‌ಜಿ ಮೊಬೈಲ್ ಇಂಡಿಯಾ ಮೂಲಕ ಬ್ಯಾಟಲ್‌ಗ್ರೌಂಡ್ ಗೇಮ್ ಇದೀಗ ರಿಲಾಂಚ್ ಆಗುತ್ತಿದೆ.

Tap to resize

Latest Videos

ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್‌ ಮಾಡಿದ ಅಫ್ಘಾನಿಸ್ತಾನ

ದಕ್ಷಿಣ ಕೊರಿಯಾದ ಕ್ರಾಫ್ಟನ್ ಕಂಪನಿ, ಪಬ್‌ಜಿ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ತೆರೆದಿದೆ. ಕಾರ್ಪೋರೇಟ್ ಆಫೈರ್ಸ್ ಸಚಿವಾಲಯದಲ್ಲಿ ಹೊಸ ಕಂಪನಿಯನ್ನು ನೋಂದಾವಣಿ ಮಾಡಿಕೊಳ್ಳಲಾಗಿದೆ. ಪಬ್‌ಜಿ ಮೊಬೈಲ್ ಇಂಡಿಯಾ ಮೂಲಕ ಭಾರತದಲ್ಲಿನ ಪಬ್‌ಜಿ ಗೇಮ್, ಡೇಟಾ ಎಲ್ಲವೂ ಇಲ್ಲಿಯೇ ಸ್ಟೋರೇಜ್ ಆಗಲಿದೆ. 

ಶೀಘ್ರದಲ್ಲೇ ಪಬ್‌ಜಿ ಇಂಡಿಯಾ ರಿ ಲಾಂಚ್ ಆಗುತ್ತಿದೆ. ಗ್ರಾಹಕರು ಮತ್ತೆ ಪಬ್‌ಜಿ ಬ್ಯಾಟಲ್‌ಗ್ರೌಂಡ್ ಹೋರಾಟ ಆನುಭವಿಸಬಹುದು. ಮೇ ತಿಂಗಳಲ್ಲಿ ಪಬ್‌ಜಿ ಲಾಂಚ್ ಮಾಡುವುದಾಗಿ ಕಂಪನಿ ಹೇಳಿತ್ತು. ಜೂನ್ ಮೊದಲ ವಾರದಲ್ಲೇ ಪಬ್‌ಜಿ ಭಾರತದಲ್ಲಿ ರಿ ಲಾಂಚ್ ಆಗುವ ಸಾಧ್ಯತೆ ಹೆಚ್ಚಿದೆ. 

ಪ್ಲೇ ಸ್ಟೋರ್‌, ಆಪಲ್‌ ಸ್ಟೋರ್‌ನಿಂದ 'ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ' ಬ್ಯಾನ್

ಶೀಘ್ರದಲ್ಲೇ ಪಬ್‌ಜಿ ಇಂಡಿಯಾ ರಿ ಲಾಂಚ್ ಆಗುತ್ತಿದೆ. ಗ್ರಾಹಕರು ಮತ್ತೆ ಪಬ್‌ಜಿ ಬ್ಯಾಟಲ್‌ಗ್ರೌಂಡ್ ಹೋರಾಟ ಆನುಭವಿಸಬಹುದು. ಮೇ ತಿಂಗಳಲ್ಲಿ ಪಬ್‌ಜಿ ಲಾಂಚ್ ಮಾಡುವುದಾಗಿ ಕಂಪನಿ ಹೇಳಿತ್ತು. ಜೂನ್ ಮೊದಲ ವಾರದಲ್ಲೇ ಪಬ್‌ಜಿ ಭಾರತದಲ್ಲಿ ರಿ ಲಾಂಚ್ ಆಗುವ ಸಾಧ್ಯತೆ ಹೆಚ್ಚಿದೆ. 

ಭಾರತದಲ್ಲಿ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಕಾರ್ಯಾಚರಣೆಯನ್ನು ಪುನಾರಂಭ ಮಾಡಲು ಅನುಮತಿ ನೀಡಿರುವ ಭಾರತೀಯ ಆಡಳಿತಕ್ಕೆ ಆಭಾರಿಗಳಾಗಿದ್ದೇವೆ. ಕಳೆದ ಕೆಲವು ತಿಂಗಳವರೆಗೆ ನಮಗೆ ಬೆಂಬಲ ನೀಡುತ್ತಾ ಕಾಯುತ್ತಿದ್ದ ನಮ್ಮ ಭಾರತೀಯ ಗೇಮಿಂಗ್ ಸಮುದಾಯಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ಸದ್ಯದಲ್ಲೇ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಾಗಲಿದೆ ಎಂದು ತಿಳಿಸಲು ನಮಗೆ ಹರ್ಷವೆನಿಸುತ್ತಿದೆ ಎಂದು ಕ್ರಾಫ್ಟನ್  ಇಂಡಿಯಾದ ಸಿಇಒ ಸಿಯಾನ್ ಹ್ಯುನಿಲ್ ಸೋಹ್ನ್ ಹೇಳಿದ್ದಾರೆ. 

ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ನ ಚಟುವಟಿಕೆಗಳನ್ನು ಪುನಾರಂಭ ಮಾಡಲು ಅವಕಾಶ ನೀಡಿರುವ ಭಾರತ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು  ಕ್ರಾಫ್ಟನ್ ಇಂಡಿಯಾದ  ಮುಖ್ಯಸ್ಥ ವಿಭೋರ್ ಕುಕ್ರೇಟಿ ಹೇಳಿದ್ದಾರೆ.  ಕ್ರಾಫ್ಟನ್, ಇಂಕ್ ದಕ್ಷಿಣ ಕೊರಿಯಾದ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿದ್ದು, ಸ್ಥಳೀಯವಾದ ಕಾನೂನು, ನೀತಿ-ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವ ಸಂಸ್ಥೆಯಾಗಿದೆ. ಇದರ ಬೆಳವಣಿಗೆಯನ್ನು ಬೆಂಬಲಿಸಲು, ಉಳಿಸಿಕೊಳ್ಳಲು ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ಗೇಮಿಂಗ್ ಪರಿಸರ ವ್ಯವಸ್ಥೆಯ ಸಹಯೋಗದೊಂದಿಗೆ ನಾವೀನ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವು ಈ ಡೊಮೇನ್ ನಲ್ಲಿ ಮುಂಚೂಣಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಿರಂತರ ಕೆಲಸ ಮಾಡುತ್ತಿದ್ದೇವೆ ಎಂದು ವಿಭೋರ್ ಕುಕ್ರೇಟಿ ಹೇಳಿದ್ದಾರೆ.

click me!