ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಲಾಂಚ್ ಬೆನ್ನಲ್ಲೇ ಶಾಕ್, ಪ್ರತಿಸ್ಪರ್ಧಿ ಟ್ವಿಟರ್‌ನಿಂದ ಕಾನೂನು ಹೋರಾಟ!

By Suvarna NewsFirst Published Jul 7, 2023, 3:24 PM IST
Highlights

ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಇದೀಗ  ಹೊಚ್ಚ ಹೊಸ ಥ್ರೆಡ್ಸ್ ಆ್ಯಪ್ ಬಿಡುಗಡೆ ಮಾಡಿದೆ. ನೂತನ ಆ್ಯಪ್‌ಗೆ ಭಾರತದಲ್ಲಿ ನಿಧಾನಗತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹೆಚ್ಚಿನ ಡನ್ಲೋಡ್ ಕಂಡಿದೆ. ಆದರೆ ಆ್ಯಪ್ ಬಿಡುಗಡೆ ಬೆನ್ನಲ್ಲೇ ಟ್ವಿಟರ್ ಕೆರಳಿದೆ. ಇದೀಗ ಕಾನೂನು ಹೋರಾಟಕ್ಕೆ ಸಜ್ಜಾಗಿದೆ

ನವದೆಹಲಿ(ಜು.07) ವಿಶ್ವದಲ್ಲಿ ಮೈಕ್ರೋಬ್ಲಾಗಿಂಗ್‌ ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌ಗೆ ಅಗ್ರಸ್ಥಾನ. ಆದರೆ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಹಲವು ಬದಲಾವಣೆ ತರಲಾಗಿದೆ. ಇದು ಬಳಕೆದಾರರಿಗೆ ಕಿರಿಕಿರಿ ತಂದಿಟ್ಟಿದೆ. ಭಾರತ ಕೂ ಸೇರಿದಂತೆ ಕೆಲ ಪ್ರತಿಸ್ಪರ್ಧಿಗಳಿದ್ದರೂ ಮಾರುಕಟ್ಟೆಯಲ್ಲಿ ಟ್ವಿಟರ್‌ಗೆ ಪ್ರಬಲ ಪ್ರತಿಸ್ಪರ್ಧಿಗಳಿರಲಿಲ್ಲ. ಹೀಗಾಗಿ ಟ್ವಿಟರ್ ವಿಶ್ವದ ಅತೀ ದೊಡ್ಡ ಮೈಕ್ರೋಬ್ಲಾಗಿಂಗ್‌ಸಾಮಾಜಿಕ ಜಾಲತಾಣವಾಗಿದೆ. ಇದೀಗ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಬಿಡುಗಡೆ ಮಾಡಿದೆ. ಟ್ವಿಟರ್ ಪ್ರತಿಸ್ಪರ್ಧಿಯಾಗಿರುವ ನೂತನ ಆ್ಯಪ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಇದರ ಬೆನ್ನಲ್ಲೇ ಟ್ವಿಟರ್ ಕೆರಳಿದೆ. ಇದೀಗ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ. 

ಮೆಟಾ ಸಂಸ್ಥೆ ತನ್ನ ನೂತನ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್‌ಗೆ ಟ್ವಿಟರ್‌ನ ಮಾಜಿ ಉದ್ಯೋಗಿಗಳನ್ನು ಆಯ್ಕೆ ಮಾಡಿದೆ. ಕೆಲಸಕ್ಕೆ ಸೇರಿಸಿಕೊಂಡಿದೆ. ಉದ್ದೇಶಪೂರ್ವಕವಾಗಿ ಟ್ವಿಟರ್ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.ಇದರಿಂದ ಟ್ವಿಟರ್ ಸಂಸ್ಥೆಯ ವ್ಯಾಪಾರ ರಹಸ್ಯ, ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್, ಟ್ವಿಟರ್ ಕೋಡಿಂಗ್, ಟ್ವಿಟರ್ ನಿರ್ವಹಣೆ ಸೇರಿದಂತೆ ಟ್ವಿಟರ್‌ ಸಾಮಾಜಿಕ ಜಾಲತಾಣವನ್ನೇ ನಕಲು ಮಾಡಲಾಗಿದೆ. ಈ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಟ್ವಿಟರ್ ಆರೋಪಿಸಿದೆ.

ಟ್ವಿಟರ್ ಪ್ರತಿಸ್ಪರ್ಧಿ ನೂತನ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್

ಟ್ವಿಟರ್ ಕಾನೂನು ಹೋರಾಟದ ಎಚ್ಚರಿಕೆ ಬೆನ್ನಲ್ಲೇ ಇತ್ತ ಥ್ರೆಡ್ಸ್ ಕೂಡ ತಿರುಗೇಟು ನೀಡಿದೆ. ಥ್ರೆಡ್ಸ್‌ನಲ್ಲಿರುವ ಎಂಜಿನೀಯರಿಂಗ್ ತಂಡದಲ್ಲಿ ಟ್ವಿಟರ್‌ನ ಯಾವುದೇ ಮಾಜಿ ಉದ್ಯೋಗಿಗಳಿಲ್ಲ. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ. ಥ್ರೆಡ್ಸ್ ಹೊಸ ತಂಡದೊಂದಿದೆ ಕಾರ್ಯನಿರ್ವಹಿಸುತ್ತಿದೆ ಎಂದು ಥ್ರೆಡ್ಸ್ ಹೇಳಿದೆ. ಬುಧವರಾ ರಾತ್ರಿ ನೂತನ ಥ್ರೆಡ್ಸ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಕೆಲವೇ ಹೊತ್ತಲ್ಲಿ ಥ್ರೆಡ್ಸ್ 10 ಮಿಲಿಯನ್ ಡನ್ಲೋಡ್ ಕಂಡಿದೆ.  ಥ್ರೆಡ್ಸ್ ಬಿಡುಗಡೆ ಬೆನ್ನಲ್ಲೇ  ಎಲಾನ್ ಮಸ್ಕ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದರು.ಥ್ರೆಡ್ಸ್ ಟ್ವೀಟರ್‌ನ ಕಾಪಿ ಪೇಸ್ಟ್‌’ ಎಂದಿದ್ದಾರೆ.  

ಥ್ರೆಡ್ಸ್ ಆ್ಯಪ್‌ನಲ್ಲೂ ಟ್ವೀಟರ್‌ ಮಾದರಿಯಲ್ಲಿ ಲೈಕ್‌, ರೀಪೋಸ್ಟ್‌, ರಿಪ್ಲೈ ಅಥವಾ ಕೋಟ್‌ ಬಟನ್‌ಗಳಿವೆ. ಟ್ವೀಟರ್‌ನಲ್ಲಿ 280 ಅಕ್ಷರಗಳ ಮಿತಿಯಿದ್ದರೆ, ಥ್ರೆಡ್ಸ್ ನಲ್ಲಿ 500 ಅಕ್ಷರಗಳ ಮಿತಿಯಿದೆ. ಲಿಂಕ್‌ಗಳು, ಫೋಟೋಗಳು ಹಾಗೂ 5 ನಿಮಿಷ ಅವಧಿಯ ವಿಡಿಯೋಗಳನ್ನು ಕೂಡ ಟೆಕ್ಸ್ಟ್‌ಜೊತೆ ಇದರಲ್ಲಿ ಪೋಸ್ಟ್‌ ಮಾಡಬಹುದು. ಇನ್‌ಸ್ಟಾಗ್ರಾಂ ಬಳಕೆದಾರರು ಅದೇ ಯೂಸರ್‌ ಐಡಿಯೊಂದಿಗೆ ಇದರಲ್ಲಿ ಲಾಗಿನ್‌ ಆಗಬಹುದು. ಹೊಸ ಗ್ರಾಹಕರು ಮೊದಲು ಇನ್‌ಸ್ಟಾಗ್ರಾಂ ಖಾತೆ ತೆರೆದು, ಬಳಿಕ ಇಲ್ಲಿಗೆ ಲಾಗಿನ್‌ ಆಗಬೇಕು.

ಫೇಸ್ಬುಕ್‌ಗೂ ಬಂತು ಥ್ರೆಡ್: ಬಿಡುಗಡೆಯಾದ ದಿನವೇ 1 ಕೋಟಿಗೂ ಹೆಚ್ಚು ಬಳಕೆದಾರರು

ಬಿಡುಗಡೆಯಾದ ಬೆನ್ನಲ್ಲೇ ಥ್ರೆಡ್ಸ್‌ನಲ್ಲಿ ಜನರ ವೈಯಕ್ತಿಕ ಮಾಹಿತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಏಕೆಂದರೆ ಈ ಆ್ಯಪ್‌ ಜನರ ಆರೋಗ್ಯ, ಆರ್ಥಿಕ, ಸಂಪರ್ಕ, ಬ್ರೌಸಿಂಗ್‌ ಮತ್ತು ಸಚ್‌ರ್‍ ಹಿಸ್ಟರಿ, ಲೊಕೇಶನ್‌, ಖರೀದಿ ಆಸಕ್ತಿ ಮುಂತಾದ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ಆ್ಯಪ್‌ ಸ್ಟೋರ್‌ನಲ್ಲಿರುವ ಮಾಹಿತಿ ಹೇಳುತ್ತದೆ. ಈ ಬಗ್ಗೆ ಎಚ್ಚರಿಕೆ ನೀಡಿ ಟ್ವೀಟರ್‌ನ ಸಹ ಸಂಸ್ಥಾಪಕ ಜಾಕ್‌ ಡೋರ್ಸಿ ಹಾಗೂ ಮಾಲಿಕ ಎಲಾನ್‌ ಮಸ್‌್ಕ ಟ್ವೀಟ್‌ ಮಾಡಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಸೋಷಿಯಲ್‌ ಮೀಡಿಯಾ ತಜ್ಞರು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

click me!