ಟ್ವಿಟರ್ ಪ್ರತಿಸ್ಪರ್ಧಿ ನೂತನ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಜುಲೈ 6ಕ್ಕೆ ಲಾಂಚ್, ಎಲಾನ್ ಮಸ್ಕ್‌ಗೆ ಠಕ್ಕರ್!

By Chethan Kumar  |  First Published Jul 4, 2023, 6:11 PM IST

ಟ್ವೀಟ್ ವೀಕ್ಷಣೆಗೆ ಮಿತಿ, ಲಾಗಿನ್ ಸೇರಿದಂತೆ ಹಲುವ ನೀತಿಗಳನ್ನು ರೂಪಿಸಿರುವ ಎಲಾನ್ ಮಸ್ಕ್ ವಿರುದ್ಧ ಟೀಕೆ, ಆಕ್ರೋಶ ಹೆಚ್ಚಾಗುತ್ತಿದೆ. ಇದೀಗ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ನೂತನ ಥ್ರೆಟ್ಸ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಜುಲೈ 6 ರಿಂದ ನೂತನ ಆ್ಯಪ್ ಬಳಕೆದಾರರಿಗ ಲಭ್ಯವಿದೆ.
 


ನವದೆಹಲಿ(ಜು.04) ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಒಂದಲ್ಲ ಒಂದು ನಿರ್ಬಂಧ ವಿಧಿಸಲಾಗುತ್ತಿದೆ. ಇದೀಗ ಟ್ವೀಟ್ ವೀಕ್ಷಣೆಗೂ ಮಿತಿ ಹೇರಲಾಗಿದೆ. ಇಷ್ಟೇ ಅಲ್ಲ ಟ್ವೀಟ್ ವೀಕ್ಷಣೆಗೆ ಲಾಗಿನ್ ಕಡ್ಡಾಯ ಮಾಡಲಾಗಿದೆ. ಟ್ವೀಟ್ ಮಿತಿ ನಿಯಮ ಭಾರಿ ಟೀಕೆಗೆ ಕಾರಣವಾಗಿದೆ. ಆಕ್ರೋಶದ ಬೆನ್ನಲ್ಲೇ ಮಿತಿ ಏರಿಕೆ ಮಾಡಿದರೂ ಬಳಕೆದಾರರ ಕೋಪ ತಣ್ಣಗಾಗಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ನೂತನ ಆ್ಯಪ್ ಬಿಡುಗಡೆ ಮಾಡುತ್ತಿದೆ. ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಜುಲೈ 6 ರಿಂದ ನೂತನ ಆ್ಯಪ್ ಬಳೆಕೆಗೆ ಲಭ್ಯವಿದೆ.

ಟ್ವಿಟರ್ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಇದಕ್ಕೆ ಪ್ರತಿಸ್ಪರ್ಧಿಯಾಗಿ, ಟ್ವಿಟರ್‌ಗಿಂತ ಹೆಚ್ಚು ಅಡ್ವಾನ್ಸ್ ಆಗಿರುವ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಹೊಸ ಕ್ರಾಂತಿ ಮಾಡಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮೆಟಾ ಮಾಲೀಕತ್ವದ ಸಾಮಾಜಿಕ ಮಾಧ್ಯಮ ಬಳಕೆದಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸುಲಭವಾಗಿ ಅತೀ ಹೆಚ್ಚು ಬಳಕೆದಾರರನ್ನು ನೂತನ ಇನ್‌ಸ್ಟಾಗ್ರಾಂ ಥ್ರೆಡ್ಸ್ ಪಡೆಯಲಿದೆ ಎಂಬ ಚರ್ಚೆ ಶುರುವಾಗಿದೆ.

Tap to resize

Latest Videos

undefined

ಫ್ರೀ ಡೇಟಾ ಇದ್ದರೂ ಬೇಕಾದಷ್ಟು ಟ್ವೀಟ್ ವೀಕ್ಷಣೆಗಿಲ್ಲ ಅನುಮತಿ, ಟೀಕೆ ಬಳಿಕ ಲಿಮಿಟ್ ಹೆಚ್ಚಿಸಿದ ಮಸ್ಕ್!

ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್, ಟ್ವಿಟರ್ ರೀತಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಸಂದೇಶ, ವಿಡಿಯೋ, ಇಮೇಜ್ ಸೇರಿದಂತೆ ಹಲವು ಬಳಕೆಗಾರರ ಆಸಕ್ತಿಯ ವಿಷಗಳ ಪೋಸ್ಟ್, ಪ್ರಮೋಟ್, ನೆಟ್‌ವರ್ಕ್ ವಿಸ್ತರಣೆ ಸೇರಿದಂತೆ ಹಲವು ಸೇವೆ ನೀಡುತ್ತಿದೆ. ಮೂಲಗಳ ಪ್ರಕಾರ ಟ್ವಿಟರ್‌ಗಿಂತಲೂ ಹೆಚ್ಚು ಅಡ್ವಾನ್ಸ್ ಆಗಿದೆ. ಇಷ್ಟೇ ಅಲ್ಲ ಇಲ್ಲಿ ಥ್ರೆಡ್ಸ್ ವೀಕ್ಷಣೆಗೆ ಯಾವುದೇ ಮಿತಿಗಳಲ್ಲಿ.

ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ನೂತನ ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಲಿಸ್ಟ್ ಆಗಿದೆ. ಜುಲೈ 6 ರಿಂದ ಡೌನ್ಲೋಡ್‌ಗೆ ಲಭ್ಯವಿದೆ. ಇತ್ತ ಆ್ಯಂಡ್ರಾಯ್ಡ್ ವರ್ಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲೂ ಥ್ರೆಡ್ಸ್ ಆ್ಯಪ್ ಲಿಸ್ಟಿಂಗ್ ಆಗಿದೆ. ಜನವರಿ ತಿಂಗಳಿನಿಂದ ಇನ್‌ಸ್ಟಾಗ್ರಾಂ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದೀಗ ಅಂತಿಮ ರೂಪ  ಪಡೆದಿದೆ.

ಟ್ವಿಟರ್ ಪ್ರತಿ ದಿನ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಬಳಕೆದಾರರು ಬೇಸತ್ತಿದ್ದಾರೆ. ಟ್ವಿಟರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕೂ ಆ್ಯಪ್ ಹೆಚ್ಚು ಜನಪ್ರಿಯವಾಗುತ್ತಿದೆ. ಟ್ವಿಟರ್ ನಿರ್ಬಂಧಗಳಿಂದ ಕೂ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದೀಗ ಇನ್‌ಸ್ಟಾಗ್ರಾಂ ಥ್ರೆಡ್ಸ್ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಟ್ವಿಟರ್‌ಗೆ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರತಿಸ್ಪರ್ಧೆ ಎಂದರೆ ಮೆಟಾ. ಮೆಟಾ ಮಾಲೀಕತ್ವದಲ್ಲಿ ಫೇಸ್‌‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸ್ಆ್ಯಪ್ ಪ್ರಮುಖ ಸಾಮಾಜಿಕ ಮಾಧ್ಯಮಗಳನ್ನು ಹೊಂದಿದೆ. ಇದೀಗ ಥ್ರೆಡ್ಸ್ ಸೇರಿಕೊಳ್ಳುತ್ತಿದೆ.

ಟ್ವಿಟರ್‌ನಲ್ಲಿ ಮಹತ್ತರ ಬದಲಾವಣೆ ಮಾಡಿದ ಎಲಾನ್ ಮಸ್ಕ್, ಟ್ವೀಟ್ ವೀಕ್ಷಿಸಲು ಸೈನ್ ಇನ್ ಕಡ್ಡಾಯ!

ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟ್ವಿಟರ್ ಸಾಕಷ್ಟು ಬದಲಾವಣೆ ಕಂಡಿದೆ. ಇಷ್ಟೇ ಅಲ್ಲ ಅಷ್ಟೇ ಟೀಕೆಗಳನ್ನು ಎದುರಿಸಿದೆ. ಇತ್ತೀಚೆಗೆ ಟ್ವೀಟರ್‌ನ ಲೋಗೊವನ್ನು ನಾಯಿ ಚಿಹ್ನೆಗೆ ಬದಲಾಯಿಲಾಗಿತ್ತು. ಭಾರಿ ಟೀಕೆ ಬಳಿಕ ಮತ್ತೆ ಹಳೆಯ ನೀಲಿ ಹಕ್ಕಿಯ ಚಿತ್ರವನ್ನೇ ಆ ಜಾಗಕ್ಕೆ ತಂದಿದ್ದಾರೆ. ಟ್ವೀಟರ್‌ ಮೂಲ ಲೋಗೊ ಬದಲಾವಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಚರ್ಚೆ ನಡೆದಿತ್ತು. ಆದರೆ ಮೊಬೈಲ್‌ ಆವೃತ್ತಿಯಲ್ಲಿ ಲೋಗೊ ಬದಲಾವಣೆ ಆಗಿರಲಿಲ್ಲ.

click me!