ಬೇರೆಯವರ ಲೊಕೇಷನ್ ಹೀಗೆ ಟ್ರ್ಯಾಕ್ ಮಾಡಿ; ಆದ್ರೆ ಮಿಸ್ ಯೂಸ್ ಮಾಡ್ಕೊಬೇಡಿ

By Mahmad Rafik  |  First Published Oct 28, 2024, 1:33 PM IST

ಗೆಳೆಯರು ಅಥವಾ ಆಪ್ತರು ಸುಳ್ಳು ಹೇಳಿ ಬೇರೆಡೆ ಹೋಗಿದ್ದರೆ ಅವರ ಲೊಕೇಷನ್ ಟ್ರ್ಯಾಕ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.


ನವದೆಹಲಿ: ಹಲವು ಬಾರಿ ಗೆಳೆಯರು, ಸಂಬಂಧಿಕರು ಸೇರಿದಂತೆ ಅತ್ಯಾಪ್ತರು ಸುಳ್ಳು ಹೇಳಿ ಎಲ್ಲೋ ಹೋಗಿರುತ್ತಾರೆ. ಫೋನ್ ಮಾಡಿದ್ರೆ ತಾವು ಎಲ್ಲಿದ್ದೇವೆ ಎಂಬ ಗುಟ್ಟನ್ನು ಬಿಟ್ಟುಕೊಡಲ್ಲ. ಆದರೆ ನೀವು ಕುಳಿತ ಸ್ಥಳದಿಂದಲೇ ಬೇರೆಯವರು ಎಲ್ಲಿದ್ದಾರೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

ಇಂದು ತಂತ್ರಜ್ಞಾನ ಊಹಿಸದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಲಭ್ಯವಿರೋ ತಂತ್ರಜ್ಞಾನ ಬಳಸಿ ಎಲ್ಲವನ್ನು ಕಂಡು ಹಿಡಿಯಬಹುದಾಗಿದೆ. ಮೊಬೈಲ್ ನೆಟ್‌ವರ್ಕ್ ಬಳಸಿ ಲೊಕೇಷನ್ ಟ್ರ್ಯಾಕ್ ಪತ್ತೆ ಮಾಡಬಹುದು. ಈ ಮೂಲಕ ನಿಮ್ಮ ಗೆಳೆಯ ಅಥವಾ ಆಪ್ತರು ಎಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಲೊಕೇಶನ್ ಟ್ರ್ಯಾಕ್ ಮಾಡೋದು ಹೇಗೆ ಎಂಬುದರ ಕುರಿತಾದ ರೀಲ್ಸ್ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. @therajivmakhni ಇನ್‌ಸ್ಟಾಗ್ರಾ ಖಾತೆಯಲ್ಲಿ ಈ ರೀಲ್ಸ್ ಅಪ್ಲೋಡ್ ಮಾಡಲಾಗಿದೆ.

Latest Videos

undefined

ಲೊಕೇಶನ್ ಟ್ರ್ಯಾಕ್ ಮಾಡೋದು ಹೇಗೆ?
ಮೊದಲಿಗೆ ಗೂಗಲ್‌ಗೆ ಹೋಗಿ ಯಾವುದಾದರೂ ಸುಂದರವಾದ ಫೋಟೋ ಯುಆರ್‌ಎಲ್ ಕಾಪಿ ಮಾಡಿಕೊಳ್ಳಿ. ನಂತರ ಗೂಗಲ್‌ನಲ್ಲಿ   https://iplogger.org/ ಎಂದು ಟೈಪ್ ಮಾಡಿ. ಈ ಲಿಂಕ್ ಓಪನ್ ಆದಾಗ ಅಲ್ಲಿ ಕಾಣುವ ಶಾರ್ಟ್ ಲಿಂಕ್ ಬಾಕ್ಸ್‌ನಲ್ಲಿ ಕಾಪಿ ಮಾಡಿಕೊಂಡಿರುವ ಯುಆರ್‌ಎಲ್ ಪೇಸ್ಟ್ ಮಾಡಿ. ನಂತರ ಕೆಳಗೆ ನಿಮಗೆ ಶಾರ್ಟ್‌ ಲಿಂಕ್ ಸಿಗುತ್ತದೆ. ಈ ಲಿಂಕ್ ಕಾಪಿ ಮಾಡಿಕೊಂಡು ನಿಮ್ಮ ಆಪ್ತರಿಗೆ ವಾಟ್ಸಪ್ ಮಾಡಿ. ಈ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮ ಆಪ್ತ ಈ ಸಮಯದಲ್ಲಿ ಎಲ್ಲಿದ್ದಾರೆ ಎಂಬುವುದು https://iplogger.org/ ಕಾಣಿಸುತ್ತದೆ. ಹೀಗೆ ಬೇರೆಯವರ ಲೊಕೇಷನ್ ಸುಲಭವಾಗಿ ಟ್ರ್ಯಾಕ್ ಮಾಡಬಹುದು. 

ಇದನ್ನೂ ಓದಿ: ವ್ಯಾಟ್ಸಾಪ್‌ನಲ್ಲಿದೆ ವಾಯ್ಸ್ ರೀತಿ ರಿಯಲ್ ಟೈಮ್ ವಿಡಿಯೋ ಮೆಸೇಜ್, ಬಳಸುವುದು ಹೇಗೆ?

ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ
ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಪೊಲೀಸರು ಅನಾಮಧೇಯ ಕರೆ ಮತ್ತು ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ನಿಮಗೆ ಲಾಟರಿಯಲ್ಲಿ ಹಣ ಸಿಕ್ಕಿದ್ದು, ಬಹುಮಾನ ನಿಮ್ಮದಾಗಿಸಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ರೀತಿಯಲ್ಲಿ ಮೆಸೇಜ್ ಬರುತ್ತಿರುತ್ತವೆ. ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದ್ರೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಯಾರೊಂದಿಗೆ ನಿಮ್ಮ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು. ಯಾವುದೇ ಬ್ಯಾಂಕ್‌ಗಳು ಕರೆ ಮಾಡಿ ಒಟಿಪಿ ಕೇಳಲ್ಲ ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಲಹೆ ಸಹ ನೀಡಿದೆ.

iಇದನ್ನೂ ಓದಿ: ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಗುಡ್ ನ್ಯೂಸ್, ಬರುತ್ತಿದೆ ಮಹತ್ವದ ಪ್ರೈವೈಸಿ ಫೀಚರ್!

click me!