ವ್ಯಾಟ್ಸ್ಆ್ಯಪ್‌ನಲ್ಲಿ ಡಿಲೀಟ್ ಫಾರ್ ಎವ್ರಿವನ್ ಮಾಡಿದ ಮೆಸೇಜ್ ಓದುವುದು ಹೇಗೆ? ಇಲ್ಲಿದೆ ಟಿಪ್ಸ್!

By Chethan Kumar  |  First Published Oct 19, 2024, 10:23 PM IST

ವ್ಯಾಟ್ಸ್ಆ್ಯಪ್‌ನಲ್ಲಿ ತಪ್ಪಿ ಮೆಸೇಜ್ ಮಾಡಿದರೆ ಡಿಲೀಟ್ ಫಾರ್ ಎವ್ರಿವನ್ ಆಯ್ಕೆ ಲಭ್ಯವಿದೆ. ಈ ಮೂಲಕ ಸಂದೇಶ ಡಿಲೀಟ್ ಮಾಡಲು ಸಾಧ್ಯವಿದೆ. ಆದರೆ ಡಿಲೀಟ್ ಫಾರ್ ಎವ್ರಿವನ್ ಮಾಡಿ ಮಾಯವಾಗಿರುವ ಸಂದೇಶದೊಳಗಿನ ಕುತೂಹಲ ತಿಳಿದೊಳ್ಳಲು ಸುಲಭ ವಿಧಾನವಿದೆ. ಈ ಟಿಪ್ಸ್ ಫಾಲೋ ಮಾಡಿದರೆ ನಿಮಗೆ ಯಾರಾದರೂ ಮೆಸೇಜ್ ಕಳುಹಿಸಿ ಡಿಲೀಟ್ ಮಾಡಿದ್ದರೆ ಅದೇ ಮೆಸೇಜ್ ಓದಲು ಸಾಧ್ಯ.


ವ್ಯಾಟ್ಸ್ಆ್ಯಪ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಿಶ್ವದಲ್ಲಿ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಆ್ಯಪ್. ಕಚೇರಿ, ಕುಟುಂಬ, ಸ್ನೇಹಿತರು, ಶಾಲೆ, ಕಾಲೇಜು ಸೇರಿದಂತೆ ಎಲ್ಲೆಡೆ ವ್ಯಾಟ್ಸ್ಆ್ಯಪ್ ಅತ್ಯವಶ್ಯಕವಾಗಿದೆ. ಹಲವು ಕಂಪನಿಗಳು ಇದೇ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ವ್ಯಾಟ್ಸ್ಆ್ಯಪ್ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್ ಪರಿಚಯಿಸಿದೆ. ಈ ಪೈಕಿ ತಪ್ಪಿ ಮಸೇಜ್ ಮಾಡಿದರೆ ಡಿಲೀಟ್ ಮಾಡುವ ಅವಕಾಶ, ಅಕ್ಷರಗಳು ತಪ್ಪಿದ್ದರೆ ಎಡಿಟ್ ಮಾಡುವ ಅವಕಾಶ ಸೇರಿದಂತೆ ಹಲವು ಫೀಚರ್ ನೀಡಿದೆ. ಕೆಲವೊಮ್ಮೆ ಗ್ರೂಪ್ ಅಥವಾ ವೈಯುಕ್ತಿವಾಗಿ ಏನೋ ಮೆಸೇಜ್ ಮಾಡಿ ತಕ್ಷಣ ಡಿಲೀಟ್ ಫಾರ್ ಎವ್ರಿವನ್ ಮಾಡಿ ಅಳಿಸಿ ಬಿಡುತ್ತಾರೆ. ಆದರೆ ಮೆಸೇಜ್ ಸ್ವೀಕರಿಸಿ ನೋಡುವ ಮೊದಲೇ ಡಿಲೀಟ್ ಆದಾಗ ಕುತೂಹಲವೂ ಹೆಚ್ಚಾಗುತ್ತಿದೆ. ಈ ಮೆಸೇಜ್‌ನಲ್ಲಿ ಏನಿರಬಹುದು ಅನ್ನೋ ಚರ್ಚೆಗಳು, ಚಾಟ್ ನೆಡೆಯುವುದು ಸಾಮಾನ್ಯ. ಇದೀಗ ಯಾರ ನೆರವೂ ಇಲ್ಲದೆ ಈ ರಿತಿ ಅಳಿಸಿ ಹೋದ ಡಿಲೀಟ್ ಫಾರ್ ಎವ್ರಿವನ್ ಮೆಸೇಜ್ ಓದಲು ಸಾಧ್ಯವಿದೆ.

ಸುಲಭ ವಿಧಾನದ ಮೂಲಕ ಡಿಲೀಟ್ ಫಾರ್ ಎವ್ರಿವನ್ ಮೆಸೇಜ್ ರಿಸ್ಟೋರ್ ಮಾಡಿ ಓದಲು ಸಾಧ್ಯವಿದೆ. ಇದಕ್ಕೆ ಈ ಮೆಸೇಜ್ ಕಳುಹಿಸಿ ಡಿಲೀಟ್ ಮಾಡಿದರವರ ನೆರವು ಬೇಕಿಲ್ಲ, ಅವರಿಗೆ ಗೊತ್ತಿಲ್ಲದಂತೆಯೇ ಈ ಮೆಸೇಜ್ ನೋಡಿ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಿಂಪಲ್ ಟಿಪ್ಸ್ ಫಾಲೋ ಮಾಡಬೇಕು.

Tap to resize

Latest Videos

undefined

ವ್ಯಾಟ್ಸಾಪ್‌ನಲ್ಲಿದೆ ವಾಯ್ಸ್ ರೀತಿ ರಿಯಲ್ ಟೈಮ್ ವಿಡಿಯೋ ಮೆಸೇಜ್, ಬಳಸುವುದು ಹೇಗೆ?

ಡಿಲೀಟ್ ಫಾರ್ ಎವ್ರಿವನ್ ಮೆಸೇಜ್ ರೀಡ್ ಮಾಡಲು ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್ ಎಕ್ಸ್‌ಟೆನ್ಶನ್(WA Web Plus Extension) ಮೂಲಕ ಸಾಧ್ಯವಿದೆ. ಕ್ರೋಮ್‌ನಲ್ಲಿ ನೀವು ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್ ಎಕ್ಸ್‌ಟೆನ್ಶನ್ ಹಾಕಿಕೊಳ್ಳಬೇಕು. ಬಳಿಕ ಕೆಲವೇ ಕೆಲವು ಹಂತದ ಮೂಲಕ ಅಳಿಸಿ ಹೋದ ಮೆಸೇಜ್ ರೀಡ್ ಮಾಡಲು ಸಾಧ್ಯ.

ಕ್ರೋಮ್‌ಗೆ ತೆರಳಿ ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್ ಎಕ್ಸ್‌ಟೆನ್ಶನ್ ಸರ್ಚ್ ಮಾಡಬೇಕು. ಬಳಿಕ ಎಕ್ಸ್‌ಟೆನ್ಶನ್ ಸೇರಿಸಿಕೊಳ್ಳಬೇಕು. ಎಕ್ಸ್‌ಟೆನ್ಶನ್ ಪೇಜ್‌ನ ಬಲಭಾಗದ ತುದಿಯಲ್ಲಿ ಆ್ಯಡ್ ಟು ಕ್ರೋಮ್ ಬಟನ್ ಕ್ಲಿಕ್ ಮಾಡಬೇಕು. ಬಳಿಕ ಇನ್‌ಸ್ಟಾಲ್ ಮಾಡಬೇಕು. ಇನ್‌ಸ್ಟಾಲ್ ಆದ ಬಳಿಕ ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು. ಬಳಿಕ ವ್ಯಾಟ್ಸ್ಆ್ಯಪ್ ವೆಬ್‌ಗೆ ತೆರಳಿ, ಕ್ರೋಮ್ ಬ್ರೌಸರ್‌ಗೆ ಎಕ್ಸ್‌ಟೆನ್ಶನ್ ಆ್ಯಡ್ ಮಾಡಬೇಕು. ಈ ವೇಳೆ ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್ ಎಕ್ಸ್‌ಟೆನ್ಶನ್ ಸಕ್ರಿಯಗೊಳ್ಳಲಿದೆ.

ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್ ಲಿಂಕ್ ಮಾಡಿದ ಬಳಿಕ ಆಪ್ಶನ್ ಲಿಸ್ಟ್ ಲಭ್ಯವಾಗಲಿದೆ. ಇಲ್ಲಿ ರಿಸ್ಟೋರ್ ಡಿಲೀಟ್ ಮೆಸೇಜ್ ಆಯ್ಕೆ ಮಾಡಿಕೊಂಡರೆ ಸಾಕು. ಹೆಚ್ಚಿನ ಮೆಸೇಜ್ ಡಿಲೀಟ್ ಆಗಿದ್ದರೆ ಕೆಲ ಕ್ಷಣಗಳು ತೆಗೆದುಕೊಳ್ಳಲಿದೆ. ಪಕ್ರಿಯೆ ಮುಗಿದ ಬಳಿಕ ಡಿಲೀಟ್ ಆಗಿರುವ ಮೆಸೇಜ್‌ಗಳು ನಿಮ್ಮ ವ್ಯಾಟ್ಸ್ಆ್ಯಪ್ ವೆಬ್ ಪ್ಲಸ್‌ನಲ್ಲಿ ಕಾಣಿಸಲಿದೆ. ಇದೇ ವೇಳೆ ಈ ಮೆಸೇಜ್ ಪಕ್ಕದಲ್ಲೇ ಡಿಲೀಟ್ ಫಾರ್ ಎವ್ರಿವನ್ ಲೇಬಲ್ ಕೂಡ ಕಾಣಿಸಲಿದೆ. 

ನೀವು ವ್ಯಾಟ್ಸಾಪ್ ಪ್ರೈವೈಸಿ ಕಾಪಾಡಿಕೊಂಡಿದ್ದೀರಾ? ಖಾತೆ ಸುರಕ್ಷಿತವಾಗಿಡಲು ಇಲ್ಲಿದೆ 5 ಟಿಪ್ಸ್!
 

click me!