Xiaomi Assets Seized 10 ಕೋಟಿ ದೇಣಿಗೆ ಪಡೆಯುವಾಗ ಯಾವ ನಿಯಮ ಇರ್ಲಿಲ್ವೇ? ಟಿಎಂಸಿ ಪ್ರಶ್ನೆ!

By Suvarna NewsFirst Published Apr 30, 2022, 6:20 PM IST
Highlights
  • ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999 ಉಲ್ಲಂಘಿಸಿದ ಶಿಯೋಮಿ
  • 5,551.27 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
  • ಪಿಎಂ ಕೇರ್ಸ್‌ಗೆ 10 ಕೋಟಿ ನೀಡಲು ಅನುಮತಿ , ಇದು ಹೇಗೆ ಸಾಧ್ಯ?

ನವದೆಹಲಿ(ಏ.30): ಭಾರತದ ಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಮೂಲಕ ಶಿಯೋಮಿ ಮೊಬೈಲ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘಿಸಿದ ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪನಿಯ ಬರೋಬ್ಬರಿ 5,551.27 ಕೋಟಿ ರೂಪಾಯಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಡಿ ಹಾಗೂ ಕೇಂದ್ರ ಸರ್ಕಾರವನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ. 

ಇಡಿ 5,551.27 ಕೋಟಿ ರೂಪಾಯಿ ಜಪ್ತಿ ಮಾಡಲು ವಿದೇಶಿ ವಿನಿಮಯ ನೀತಿ ಉಲ್ಲಂಘನೆ ಎಂದಿದೆ. ಇದೇ ಶಿಯೋಮಿ ಕಂಪನಿಯಿಂದ ಪಿಎಂ ಕೇರ್ಸ್ ಫಂಡ್‌ಗೆ 10 ಕೋಟಿ ರೂಪಾಯಿ ದೇಣಿಗೆ ಪಡೆಯಲಾಗಿದೆ. ಈ ವೇಳೆ ಯಾವುದೇ ನಿಯಮ ಇರಲಿಲ್ಲಲ್ಲವೇ ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆಗೆ ಇಡಿ ಶಾಕ್‌: ಶಿಯೋಮಿಗೆ ಸೇರಿದ 5,551.27 ರೂ.ಜಪ್ತಿ

ಪಿಎಂ ಕೇರ್ಸ್ ಫಂಡ್ ಪಾರದರ್ಶಕವಲ್ಲ. ಹೀಗಾಗಿ 10 ಕೋಟಿ ರೂಪಾಯಿ ನೀಡಲು ಅನುಮತಿಸಲಾಗಿದೆ. ಪಾದರ್ಶಕವಲ್ಲದ ಪಿಎಂ ಕೇರ್ಸ್ ಫಂಡ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರವೇ ಇರಲಿಲ್ಲ. ಇಷ್ಟೇ ಅಲ್ಲ ನಮ್ಮ ಪ್ರಶ್ನೆಗಲಿಗೆ ಕಲ್ಲೆಸೆಯಲಾಗಿತ್ತು ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ಇಡಿಯಿಂದ ಶಿಯೋಮಿ ಹಣ ಜಪ್ತಿ ಮಾಡಿದ ಬೆನ್ನಲ್ಲೇ ಬೆನ್ನಲ್ಲೇ ಭಾರತದಲ್ಲಿ ವಹಿವಾಟು ಸ್ಥಗಿತಗೊಳಿಸುವ ಮಾತುಗಳು ಕೇಳಿಬರುತ್ತಿದೆ. ಆದರೆ ಇವೆಲ್ಲಾ ಊಹಾಪೋಹಗಳಾಗಿದ್ದು, ಕಾನೂನು ಹೋರಾಟ ಮಾಡಲು ಶಿಯೋಮಿ ಸಜ್ಜಾಗಿದೆ. ಇಷ್ಟೇ ಅಲ್ಲ ಭಾರತದ ವ್ಯವಹಾರಗಳಲ್ಲಿ ಯಾವುದೇ ಅಡೆ ತಡೆ ಇಲ್ಲ ಎಂದು ಮೂಲಗಳು ಹೇಳಿವೆ.

2022ರ ಫೆಬ್ರವರಿ ತಿಂಗಳಲ್ಲಿ ಶಿಯೋಮಿ ಕಂಪನಿ ಅಕ್ರಮವಾಗಿ ಭಾರತದಿಂದ ಹಣ ವರ್ಗಾವಣೆ ಮಾಡಿದೆ. ಈ ಕುರಿತ ತನಿಖೆ ನಡೆಸಿದ ಇಡಿ ಇದೀಗ ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999 ಸ್ಪಷ್ಟ ಉಲ್ಲಂಘನೆ ಕಂಡು ಬಂದಿದೆ. 2014ರಲ್ಲಿ ಶಿಯೋಮೀ ಭಾರತದಲ್ಲಿ ತನ್ನ ವಹಿಪಾಟು ಆರಂಭಿಸಿತ್ತು. 

ಶಾಓಮಿ ಅವ್ಯವಹಾರ ತನಿಖೆ: ಗ್ಲೋಬಲ್ ಉಪಾಧ್ಯಕ್ಷ ಮನು ಕುಮಾರ್ ಜೈನ್‌ಗೆ ED ಸಮನ್ಸ್‌ ?

2015ರಿಂದ ಚೀನಾದಲ್ಲಿರುವ ಕಂಪನಿಯ ಮುಖ್ಯಕಚೇರಿಗೆ ಹಣ ವರ್ಗಾವಣೆ ಮಾಡಲು ಆರಂಭಿಸಿದೆ. ಇದುವರೆಗೆ ಅಕ್ರಮವಾಗಿ 5,551.27 ಕೋಟಿ ರೂಪಾಯಿಗೆ ಸಮನಾದ ವಿದೇಶಿ ಕರೆನ್ಸಿಯನ್ನು ರವಾನೆ ಮಾಡಿದೆ. ಈ ಹಣ ವರ್ಗಾವಣೆಯಲ್ಲಿ ಭಾರತದ ವಿದೇಶಿ ನೀತಿ ಉಲ್ಲಂಘನೆಯಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ರಾಯಲ್ಟಿ ಹೆಸರಲ್ಲಿ ಶಿಯೋಮಿ ಕಂಪನಿ ಈ ರೀತಿ ಹಣ ವರ್ಗಾವಣೆ ಮಾಡಿದೆ. ಈ ರೀತಿ ಹಣ ವರ್ಗಾವಣೆ ವಿವಿಧ ಹಂತಗಳಲ್ಲಿ ಹಾಗೂ ವಿವಿಧ ಘಟಕಗಳಿಗೆ ಮಾಡಲಾಗಿದೆ. ಇದರಲ್ಲಿ  ಅಮೆರಿಕ ಆಧಾರಿತ ಸಂಬಂಧವಿಲ್ಲದ ಘಟಕಳಿಗೆ ಹಣ ವರ್ಗಾವಣೆಯಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಭಾರತದಲ್ಲಿ ಶಿಯೋಮಿ ಕಂಪನಿ ಮಿ(MI) ಬ್ರ್ಯಾಂಡ್್ ಅಡಿಯಲ್ಲಿ ಮೊಬೈಲ್ ವ್ಯಾಪಾರ ನಡೆಸುತ್ತಿದೆ. ಅತೀ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ಹಾಗೂ ಅತ್ಯುತ್ತಮ ಫೋನ್ ನೀಡುತ್ತಿದೆ. ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಶಿಯೋಮಿ 48 ಎಂಪಿ ಕ್ಯಾಮಾರಾ ಫೋನ್ ಬಿಡುಗಡೆ ಮಾಡಿತ್ತು.  48 ಮೆಗಾಪಿಕ್ಸೆಲ್‌ ಕ್ಯಾಮರಾ ಇರುವ ವನ್‌ಪ್ಲಸ್‌ ಸೆವೆನ್‌ ಪ್ರೋ ಮಾರುಕಟ್ಟೆಗೆ ಬಂದು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಹೊಸ ಮಾಡೆಲ್‌ ಮಾರುಕಟ್ಟೆಗೆ ತರುತ್ತಿದೆ. ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವ ಶಿಯೋಮಿ ನೋಟ್‌ ಸೆವೆನ್‌ ಎಸ್‌ ವಿಶೇಷ ಎಂದರೆ 48 ಮೆಗಾಪಿಕ್ಸೆಲ್‌ ಕೆಮರಾ.

click me!