Titan ಹೊಸ ಸ್ಮಾರ್ಟ್ ಗ್ಲಾಸ್‌ಗಳು ಬ್ಲೂಟೂತ್ v5 ಮೂಲಕ Android ಮತ್ತು iOS ಸಾಧನಗಳೊಂದಿಗೆ ಕನೆಕ್ಟ್ ಆಗುತ್ತವೆ. ಸ್ಮಾರ್ಟ್ ಗ್ಲಾಸ್‌ಗಳನ್ನು ನಿಯಂತ್ರಿಸಲು ಬಳಕೆದಾರರು ಎರಡೂ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು.
Tech Desk: ಟೈಟಾನ್ ಐ+ (Titan Eye Plus) ಹೊಸ ವರ್ಷದಲ್ಲಿ ತನ್ನ ಮೊದಲ ಸ್ಮಾರ್ಟ್ ಗ್ಲಾಸ್‌ಗಳನ್ನು ಬಿಡುಗಡೆ ಮಾಡಿದೆ. ಟೈಟಾನ್ ಐಎಕ್ಸ್ ಫಿಟ್‌ನೆಸ್ ಟ್ರ್ಯಾಕಿಂಗ್ ಸಿಸ್ಟಮ್‌ಗಳ ಜೊತೆಗೆ ಓಪನ್-ಇಯರ್ ಸ್ಪೀಕರ್‌ಗಳು, ಟಚ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ. ಟೈಟಾನ್‌ನ ಹೊಸ ಸ್ಮಾರ್ಟ್ ಗ್ಲಾಸ್‌ಗಳು Android ಮತ್ತು iOS ಸಾಧನಗಳೊಂದಿಗೆ ಹೊಂದಿಕೊಳ್ಳುತ್ತವೆ ಮತ್ತು ಬ್ಲೂಟೂತ್ v5 ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಇನ್ ಬಿಲ್ಟ್ ಟ್ರ್ಯಾಕರ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54-ರೇಟೆಡ್ ಬಿಲ್ಡ್ ಸಹ ಇದರಲ್ಲಿದೆ. Titan EyeX ಒಂದೇ ಚಾರ್ಜ್‌ನಲ್ಲಿ 8 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಸ್ಮಾರ್ಟ್ ಗ್ಲಾಸ್‌ಗಳು ಹೆಸರಿಸದ Qualcomm ಪ್ರೊಸೆಸರ್‌ನಿಂದ ಚಾಲಿತವಾಗಿವೆ. ಓಪನ್ ಇಯರ್ ಸ್ಪೀಕರ್‌ಗಳು ಧ್ವನಿ ಆಧಾರಿತ (voice-based) ನ್ಯಾವಿಗೇಶನ್ ಮತ್ತು ಧ್ವನಿ ಅಧಿಸೂಚನೆಗಳನ್ನು (Notifications) ಸಹ ಒದಗಿಸುತ್ತವೆ.
ಭಾರತದಲ್ಲಿ ಟೈಟಾನ್ ಐಎಕ್ಸ್ ಬೆಲೆ, ಲಭ್ಯತೆ
undefined
ಜನವರಿ 5 ರಂದು ಬಿಡುಗಡೆಯಾದ ಟೈಟಾನ್ ಐಎಕ್ಸ್ ರೂ. 9,999 ಬೆಲೆಯಲ್ಲಿ ಲಭ್ಯವಿದೆ. ಆದರೆ ರೂ. 9,999ರಲ್ಲಿ ಸ್ಮಾರ್ಟ್ ಗ್ಲಾಸ್‌ನ ಫ್ರೇಮ್ ಮಾತ್ರ ಸಿಗಲಿದ್ದು ಪ್ರಿಸ್ಕ್ರಿಪ್ಷನ್ ಕನ್ನಡಕಗಳೊಂದಿಗೆ ಬೆಲೆ ರೂ. 11,198 ವರಗೆ ಹೋಗಬಹುದು. ಸ್ಮಾರ್ಟ್ ಗ್ಲಾಸ್‌ಗಳು ಜನವರಿ 10 ರಿಂದ ಶಿಪ್ಪಿಂಗ್ ಪ್ರಾರಂಭವಾಗಲಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಟೈಟಾನ್ ಸ್ಮಾರ್ಟ್ ಗ್ಲಾಸ್‌ಗಳನ್ನು ಏಕೈಕ ಕಪ್ಪು ಫ್ರೇಮ್ ಬಣ್ಣದಲ್ಲಿ ಲಭ್ಯವಿದೆ. ಅವುಗಳನ್ನು ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ Titan Eye+ ರಿಟೇಲ್ ಅಂಗಡಿಗಳ ಮೂಲಕ ಖರೀದಿಸಬಹುದು.
ಇದನ್ನೂ ಓದಿ: Noise Colorfit Caliber: ದೇಹದ ಉಷ್ಣತೆಯನ್ನೂಅಳೆಯುವ ಸ್ಮಾರ್ಟ್‌ವಾಚ್ ಜನವರಿ 6ರಂದು ಬಿಡುಗಡೆ!
ಟೈಟಾನ್ ಐಎಕ್ಸ್ specifications
ಮೊದಲೇ ಹೇಳಿದಂತೆ, Android ಮತ್ತು iOS-ಚಾಲಿತ ಸಾಧನಗಳಿಗೆ ಸಂಪರ್ಕಿಸಲು Titan EyeX ಬ್ಲೂಟೂತ್ v5 ಅನ್ನು ಹೊಂದಿದೆ. ಕನ್ನಡಕವು ಎರಡೂ OS ಗಳಿಗೆ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಸಹ ಹೊಂದಿದೆ. ಟೈಟಾನ್ ಐಎಕ್ಸ್ ಕ್ವಾಲ್ಕಾಮ್ ಪ್ರೊಸೆಸರ್ ಮೂಲಕ ಚಾಲಿತವಾಗಿದೆ. ಟೈಟಾನ್‌ನ ಸ್ಮಾರ್ಟ್ ಗ್ಲಾಸ್‌ಗಳು ಟ್ರು ವೈಯರ್‌ಲೆಸ್ ಸ್ಟಿರಿಯೊ (TWS) ಕಾರ್ಯನಿರ್ವಹಣೆಯೊಂದಿಗೆ ಒಪನ್ ಇಯರ್ ಸ್ಪೀಕರ್‌ಗಳನ್ನು ಒಳಗೊಂಡಿವೆ. ಇದು Titan EyeX ಅನ್ನು ಹೊರಾಂಗಣದಲ್ಲಿ ಬಳಸಲು ಸುಲಭವಾಗಿಸುತ್ತದೆ. ಹಾಗಾಗಿ ಕಂಪನಿಯು ಹೇಳಿಕೊಂಡಂತೆ ಸುತ್ತಮುತ್ತಲು ಕೇಳಿಸುತ್ತಿರುವ ಶಬ್ದಗಳ ಕಡೆಗೆ ಗಮನ ಹರಿಸುವುದರ ಜತೆಗೆ ಬಳಕೆದಾರರು ಸಂಗೀತವನ್ನು ಕೂಡ ಕೇಳಬಹುದು.
ಇದನ್ನೂ ಓದಿ: Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!
Titan EyeX ತನ್ನ ಒಪನ್ ಇಯರ್ ಸ್ಪೀಕರ್‌ಗಳ ಮೂಲಕ ಧ್ವನಿ-ಆಧಾರಿತ ನ್ಯಾವಿಗೇಷನ್ ಮತ್ತು ಧ್ವನಿ ಆಧಾರಿತ ಅಧಿಸೂಚನೆಗಳಿಗೆ ಬೆಂಬಲವನ್ನು ಹೊಂದಿದೆ. ಇದರ ಕ್ಲಿಯರ್ ವಾಯ್ಸ್ ಕ್ಯಾಪ್ಚರ್ (CVC) ತಂತ್ರಜ್ಞಾನವು ಡೈನಾಮಿಕ್ ವಾಲ್ಯೂಮ್ ಕಂಟ್ರೋಲ್‌ನೊಂದಿಗೆ ಸ್ಪಷ್ಟ ಧ್ವನಿ ಗುಣಮಟ್ಟವನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಸುತ್ತುಮುತ್ತಲಿನ ಶಬ್ದದ ಆಧಾರದ ಮೇಲೆ ವಾಲ್ಯೂಮ್ ಮಟ್ಟವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.
ಇದು ಫಿಟ್‌ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಸಹ ಹೊಂದಿದ್ದು ಇನ್ ಬಿಲ್ಟ್ ಪೆಡೋಮೀಟರ್ ಅನ್ನು ಬಳಸಿಕೊಂಡು ಕ್ಯಾಲೊರಿಗಳು, ಸ್ಟೆಪ್ಸ್ ಮತ್ತು ದೂರವನ್ನು ಸಹ ಎಣಿಸಬಹುದು. Titan EyeX ಬಳಕೆದಾರರಿಗೆ ಆರೋಗ್ಯಕರವಾಗಿರಲು ಸಹಾಯ ಮಾಡಲು ಅವರ ಸ್ಕ್ರೀನ್ ಟೈಮ್ (Screen Time) ಹೆಚ್ಚಿದ್ದರೆ ಎಚ್ಚರಿಸುವ ವೈಶಿಷ್ಟ್ಯ ಕೂಡ ಹೊಂದಿದೆ. ಇದಲ್ಲದೆ, ಅವರು ಪ್ಲೇ, ಸ್ಕಿಪ್, ಪಾಸ್ ಮತ್ತು ಪ್ರಿವೆಂಟ್‌ಗಾಗಿ ಸ್ಪರ್ಶ ಆಧಾರಿತ (touch-based ) ನಿಯಂತ್ರಣಗಳನ್ನು ಹೊಂದಿದೆ. ಟೈಟಾನ್ ಐಎಕ್ಸ್ ಕನ್ನಡಕವನ್ನು ಪತ್ತೆಹಚ್ಚಲು ಇನ್‌ಬಿಲ್ಟ್ ಟ್ರ್ಯಾಕರ್ ಅನ್ನು ನೀಡಿದೆ. ಇದು ಒಂದೇ ಚಾರ್ಜ್‌ನಲ್ಲಿ ಎಂಟು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದ್ದು ಸ್ಮಾರ್ಟ್ ಗ್ಲಾಸ್‌ಗಳು 124x140x40mm ಅಳತೆ ಹೊಂದಿವೆ.