ಆಪಲ್‌ನ ಟ್ವಿಟರ್ ಖಾತೆಯಲ್ಲಿ ಒಂದೂ ಟ್ವೀಟ್ ಇಲ್ಲ, ಯಾರನ್ನೂ ಫಾಲೋ ಮಾಡ್ತಿಲ್ಲ!

By Suvarna News  |  First Published Feb 4, 2021, 5:36 PM IST

ಜಗತ್ತಿನ ಅತಿ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಟ್ವಿಟರ್‌ನಲ್ಲಿ ತನ್ನ ವಿವಿಧ ಪ್ರಾಡಕ್ಟ್‌ಗಳ ಹೆಸರಲ್ಲಿ ಟ್ವಿಟರ್ ಖಾತೆಯನ್ನು ಹೊಂದಿದೆ. ಆದರೆ, Apple @Apple ಖಾತೆ ಮಾತ್ರ ತುಸು ವಿಚಿತ್ರವಾಗಿದೆ. ಈ ಖಾತೆ ಯಾರನ್ನೂ ಫಾಲೋ ಮಾಡುತ್ತಿಲ್ಲ ಮತ್ತು ಈವರೆಗೂ ಒಂದೂ ಟ್ವೀಟೂ ಮಾಡಿಲ್ಲ. ಆಪಲ್ ಕಂಪನಿಯ ಇತರ ಅಧಿಕೃತ ಟ್ವಿಟರ್  ಖಾತೆಗಳು ತುಂಬ  ಸಕ್ರಿಯವಾಗಿವೆ.


ಆಪಲ್ ತನ್ನ ಐಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್ ಖದರು ಬದಲಿಸಿದ  ಕಂಪನಿ. ಅಂಗೈಗಲ ಸಾಧನದಲ್ಲಿ ಇಡೀ ಜಗತ್ತನ್ನೇ ಒಂದೇ ಟ್ಯಾಪ್‌ನಡಿ ತರುವ ಸಾಧ್ಯಸಾಧ್ಯತೆಯನ್ನು ಅನಾವರಣ ಮಾಡಿದ್ದೇ ಆಪಲ್. ಈ ಕಂಪನಿ ಟ್ವಿಟರ್‌ನಲ್ಲಿ ಹಲವು ಖಾತೆಗಳನ್ನು ಹೊಂದಿದೆ. ಆದರೆ, ಒಂದು ಖಾತೆ ಮಾತ್ರ ನಿಮ್ಮ ಗಮನ ಸೆಳೆಯುತ್ತಿದೆ.

ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!

Latest Videos

undefined

@Apple ಖಾತೆ ಮಾತ್ರ ವಿಶಿಷ್ಟವಾಗಿದೆ. 2011ರಲ್ಲಿ ಈ ಖಾತೆ ಆರಂಭಿಸಲಾಗಿದೆ. ಟ್ವಿಟರ್ ಈ ಖಾತೆಗೆ ಬ್ಲೂ ಟಿಕ್ ಮಾರ್ಕ್ ಕೂಡ ನೀಡಿದೆ. ಅಂದರೆ, ಆಪಲ್‌ನ ಅಧಿಕೃತ ಖಾತೆಯಾಗಿದೆ. ಆದರೆ, ಈವರೆಗೆ ಒಂದೇ ಒಂದೂ ಟ್ವೀಟ್ ಕೂಡ ಮಾಡಿಲ್ಲ! ಈ ಖಾತೆಯಡಿ ಯಾವುದೇ ಫೋಟೋ ಆಗಲಿ, ವಿಡಿಯೋ ಆಗಲಿ ಅಥವಾ ಇನ್ನಾವುದೇ ಮಾಹಿತಿಯನ್ನು ಷೇರ್ ಮಾಡಿಕೊಂಡಿಲ್ಲ. ಹಾಗಂತ, ಈ ಆಪಲ್‌ನ ಟ್ವೀಟ್‌ ಖಾತೆಯಲ್ಲಿ ಫಾಲೋವರ್ಸ್ ಇಲ್ಲ ಅಂತಲ್ಲ. ಬರೋಬ್ಬರಿ 5.9 ಮಿಲಿಯನ್ ಜನರಿದ್ದಾರೆ. ಅಂದರೆ 59 ಲಕ್ಷ ಮಂದಿ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಮತ್ತೂ ಆಶ್ಚರ್ಯಕರ ಸಂಗತಿ ಏನೆಂದರೆ, @Apple ಖಾತೆ ಯಾರನ್ನೂ ಫಾಲೋ ಮಾಡುತ್ತಿಲ್ಲ. ಫಾಲೋವಿಂಗ್ ಶೂನ್ಯ ತೋರಿಸುತ್ತದೆ.

ಇನ್ನು ಆಪಲ್ ಕಂಪನಿಗೆ ಸೇರಿದ ಹಲವು ಖಾತೆಗಳಿವೆ.  ಹೆಚ್ಚು ಸಕ್ರಿಯವಾಗಿದೆ. ಇದಕ್ಕೂ ಕೂಡ ಬ್ಲೂ ಟಿಕ್ ಮಾರ್ಕ್ ಇದ್ದು, ಅಧಿಕೃತ ಖಾತೆಯಾಗಿದೆ. ಈ ಖಾತೆ 28 ಟ್ವೀಟ್ ಖಾತೆಗಳನ್ನು ಫಾಲೋ ಮಾಡುತ್ತಿದೆ. ಈ ಪೈಕಿ ಎಲ್ಲವೂ ಆಪಲ್ ಕಂಪನಿಗೆ ಸೇರಿದ ಇತರ ಪ್ರಾಡಕ್ಟ್‌ಗಳ ಟ್ವೀಟ್ ಖಾತೆಗಳಾಗಿವೆ. 1.2 ದಶಲಕ್ಷ ಫಾಲೋರ್ಸ್ ಇದ್ದಾರೆ.  Apple Arcade @ AppleArcade, Apple @Apple,  @AppStoreES, @AppleMusicJapan, @AppleMusicES, @AppleNewsUK,  @AppleNewsAU, @AppStoreJP, @iTunesJapan, @AppleNews, @BeatsSupport, @tim_cook  ಸೇರಿ  28 ಅಕೌಂಟ್‌ಗಳನ್ನು ಆಪಲ್ ಸಪೋರ್ಟ್ ಫಾಲೋ ಮಾಡುತ್ತಿದೆ.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

ಆಪಲ್ ಸಪೋರ್ಟ್ ಖಾತೆಯಲ್ಲಿ ನೀಡಲಾಗಿರುವ ವಿವರಣೆಯಂತೆ, ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀಡಲು ನಾವು ಇಲ್ಲಿದ್ದೇವೆ. ನಾವು ನಿಮಗೆ ಟಿಪ್ಸ್ ಮತ್ತು ಟ್ರಿಕ್ಸ್ ಸಹಾಯಕ ಮಾಹಿತಿಯನ್ನು ಒದಗಿಸುತ್ತವೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಎಂದು ಹೇಳಲಾಗಿದೆ. ಅಂದ ಹಾಗೆ ಈ ಖಾತೆಯನ್ನು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮದಾರ್ ಷಾ ಕೂಡ ಫಾಲೋ ಮಾಡುತ್ತಿದ್ದಾರೆ.

BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ

ಇನ್ನು ಆಪ್ ಸ್ಟೋರ್(App Store @AppStore) ಹೆಸರಿನ ಖಾತೆ ಇದ್ದು ಇದಕ್ಕೂ ಟ್ವಿಟರ್ ಬ್ಲೂ ಟಿಕ್ ಮಾರ್ಕ್ ನೀಡಿದೆ. ಅಂದರೆ ಇದು ಕೂಡ ಆಪಲ್‌ನ ಅಧಿಕೃತ ಖಾತೆಯಾಗಿದೆ. ಈ ಖಾತೆ ಕೂಡ ಆಪಲ್‌ಗೆ ಸಂಬಂಧಿಸಿದ 28 ಖಾತೆಗಳನ್ನು ಫಾಲೋ ಮಾಡುತ್ತಿದೆ. ಹಾಗೆಯೇ ಈ ಆಪ್‌ಸ್ಟೋರ್  ಖಾತೆಯನ್ನು 4.5 ಮಿಲಿಯನ್ ಜನರು ಅನುಸರಿಸುತ್ತಿದ್ದಾರೆ. ಆದರೆ, @Apple ಖಾತೆ ಮಾತ್ರ ಯಾರನ್ನೂ ಫಾಲೋ ಮಾಡುತ್ತಿಲ್ಲ ಮತ್ತು ಯಾವುದೇ ಟ್ವೀಟ್ ಕೂಡ ಮಾಡಿಲ್ಲ ಎಂಬುದು ಆಶ್ಚರ್ಯವನ್ನುಂಟು ಮಾಡುತ್ತದೆ.

click me!