BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ

Suvarna News   | Asianet News
Published : Feb 03, 2021, 11:32 AM IST
BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ

ಸಾರಾಂಶ

ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಹಾಗೂ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಎನ್ಎಲ್) ಇತ್ತೀಚೆಗೆಷ್ಟೇ ಹೊಸದಾದ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಎಂಬ ಓಟಿಟಿ ಪ್ಯಾಕ್ ಆರಂಭಿಸಿದೆ. ಈ ಪ್ಯಾಕ್‌ನಲ್ಲಿ ಗ್ರಾಹಕರು ಹಲವು ಟಿವಿ ಮತ್ತು ಸಾವಿರಾರು ಸಿನಿಮಾಗಳನ್ನು ನೋಡಲು ಸಾಧ್ಯವಾಗಲಿದೆ.

ಬಿಎಸ್ಸೆನ್ನೆಲ್ ಎಂದೇ ಜನಪ್ರಿಯವಾಗಿರುವ ಭಾರತ್ ಸಿಂಚಾರ್ ನಿಗಮ್ ಲಿ. ಆಗಾಗ ಹೊಸ ಹೊಸ ಆಫರ್‌ಗಳನ್ನು  ಘೋಷಣೆ ಮಾಡುತ್ತಿರುತ್ತದೆ. ಬಿಎಸ್ಸೆನ್ನೆಲ್ ಇತ್ತೀಚೆಗಷ್ಟೇ, ಹೊಸ ಓಟಿಟಿ ಪ್ಯಾಕ್‌ವೊಂದನ್ನು ಘೋಷಣೆ ಮಾಡಿದೆ. ಈ ಹೊಸ ಒಟಿಟಿ ಪ್ಯಾಕ್ ಹೆಸರು ಬಿಸ್ಸೆನ್ನೆಲ್ ಸಿನಿಮಾ ಪ್ಲಸ್. ಈ ಪ್ಯಾಕ್ ಅನ್ನು ನೀವು ಖರೀದಿಸಿದರೆ, ಸೋನಿಎಲ್ಐವಿ, ಝೀ5, ವೂಟ್ ಸೆಲೆಕ್ಟ್ ಮ್ತತು ಯುಪ್ ಟಿವಿ ನೋಡಬಹುದು.

ಈ ಓಟಿಟಿ ಪ್ಯಾಕ್ ಪಡೆಯಲು ನೀವು ತಿಂಗಳಿಗೆ 199 ರೂಪಾಯಿ ಕೊಡಬೇಕಾಗುತ್ತದೆ. ಆದರ ಪ್ರಮೋಷನಲ್ ಆಫರ್ ಆಗಿ ಕಂಪನಿ ಮೊದಲ ಮೂರು ತಿಂಗಳಿಗೆ 129 ರೂಪಾಯಿ ಪಡೆದುಕೊಳ್ಳುತ್ತದೆ. ಬಿಎಸ್ಸೆನ್ನೆಲ್‌ ಪರಿಚಯಿಸುತ್ತಿರುವ ಓಟಿಟಿ ಪ್ಯಾಕ್ ಬಗ್ಗೆ ಮೊದಲಿಗೆ ಓನ್ಲೀ ಟೆಕ್, ಬಿಎಸ್ಸೆನ್ನೆಲ್‌ನ ಡೆಪ್ಯುಟಿ ಮ್ಯಾನೇಜರೊಬ್ಬರ ಟ್ವೀಟ್ ಉಲ್ಲೇಖಿಸಿ ವರದಿ ಮಾಡಿದ್ದು, ಬಳಿಕ ಹಲವು ವೆಬ್‌ತಾಣಗಳು ಈ ಕುರಿತು ಪ್ರಕಟಿಸಿವೆ.

ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!

ಬಿಎಸ್ಸೆನ್ನೆಲ್ ಡೆಪ್ಯುಟಿ ಮ್ಯಾನೇಜರ್ ಮಾರ್ಕೆಟಿಂಗ್ ಮತ್ತು ಪಿಆರ್ ನಾಗೆಲ್ಲಾ ತ್ರಿನಾಥ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಎಸ್ಸೆನ್ನೆಲ್ ಗ್ರಾಹಕರು ಇದೀಗ 300ಕ್ಕೂ ಅಧಿಕ ಟಿವಿ ಚಾನೆಲ್‌, 8 ಸಾವಿರಕ್ಕೂ ಅಧಿಕ ಸಿನಿಮಾಗಳು ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಸೇವೆಯ ಮೂಲಕ ನೋಡಬಹುದು ಎಂದು ಹೇಳಿದ್ದರು. ಯುಪ್‌ಟಿವಿ ಸ್ಕೋಪ್‌ನೊಂದಿಗೆ ಒಟಿಟಿಯನ್ನು ಪ್ರಾರಂಭಿಸಲಾಗಿದೆ. ಇದು ಏಕೀಕೃತ ಇಂಟರ್ಫೇಸ್ ಅನ್ನು ನೀಡುವ ಮನರಂಜನೆಯ ಅಗತ್ಯಗಳನ್ನು ಒದಗಿಸುವ ತಾಣವಾಗಿದೆ.  

ಯುಪ್‌ಟಿವಿ ಸ್ಕೋಪ್ ಎಂಟರ್ನೈಮೆಂಟ್ ಪ್ಯಾಕ್ ಮೂಲಕ ನೀವು ವೋಟ್ ಸೆಲೆಕ್ಟ್, ಝೀ5 ಪ್ರಿಮಿಯಂ, ಸೋನಿಲೈವ್ ಸ್ಪೇಷಲ್ ಮತ್ತು ಯುಪ್‌ಟಿವಿ ಪ್ರೀಮಿಯಂ ಪ್ಯಾಕ್‌ ಆಫರ್ ಪಡೆದುಕೊಳ್ಳಬಹುದಾಗಿದೆ. ಕೇವಲ ಸಿಂಗಲ್ ಟ್ಯಾಪ್ ಮೂಲಕ ಗ್ರಾಹಕರು ಬಹು ಪ್ರೀಮಿಯಂ ಓಟಿಟಿಯನ್ನು ಯಾವುದೇ ಸಮಯದಲ್ಲಿ ಯಾವುದೇ ಸಾಧನದಲ್ಲಿ ಪಡೆದುಕೊಳ್ಳಬುಹದಾಗಿದೆ. ಜೊತೆಗೆ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಶಿಫಾರಸು ಮೂಲಕ ಕೆಂಟೆಂಟ್ ಅನ್ನು ಪ್ರತ್ಯೇಕಿಸಲೂ ಬಹುದು.

ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್?

ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್‌ಗೆ ನೋಂದಣಿ ಹೇಗೆ?
ಬಿಎಸ್ಸೆನ್ನೆಲ್ ಚಂದಾದಾರರು ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಸೇವೆಯನ್ನು ಕಂಪನಿಯ ಜಾಲತಾಣದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಬಿಎಸ್ಸೆನ್ನೆಲ್ ಜಾಲತಾಣದಲ್ಲಿ ನಂಬರ್ ನೀಡಿ ಸೈನ್ ಅಪ್ ಮಾಡಬೇಕಾಗುತ್ತದೆ ಮತ್ತು ನಿಮ್ಮ ಬಿಎಸ್ಸೆನ್ನೆಲ್ ಫೋನ್ ನಂಬರ್ ಅನ್ನು ದಾಖಲಿಸಬೇಕಾಗುತ್ತದೆ.  ಇಷ್ಟು ಮಾತ್ರವಲ್ಲದೇ, ಫೋನ್ ನಂಬರ್ ಜೊತೆಗೆ, ಟೆಲಿಕಾಂ ಸರ್ಕಲ್, ಇಮೇಲ್ ಐಡಿ, ಪೂರ್ತಿ ಹೆಸರನ್ನೂ ದಾಖಲಿಸಬೇಕಾಗುತ್ತದೆ. ಒಮ್ಮೆ ಈ ಮಾಹಿತಿಯನ್ನು ದಾಖಲಿಸಿ ಸೈನ್ ಅಪ್ ಮಾಡಿದರೆ, ಆಪ್ ಮೂಲಕ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಸೇವೆ ದೊರೆಯಲಾರಂಭಿಸುತ್ತದೆ. ಅಂದರೆ, ಈ ಆಪ್ ಆಂಡ್ರಾಯ್ಡ್, ಐಫೋನ್, ಆಂಡ್ರಾಯ್ಡ್ ಟಿವಿ ಮತ್ತು ಫೈರ್ ಟಿವಿ ಸಾಧನಗಳಿಗೂ ಸಪೋರ್ಟ್ ಮಾಡುತ್ತದೆ. ಡೆಸ್ಕ್ ಟಾಪ್ ಮತ್ತು ಲ್ಯಾಪ್‌ಟ್ಯಾಪ್‌ಗಳಲ್ಲಿ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಸೇವೆಯನ್ನು ಬ್ರೌಸರ್ ಮೂಲಕವೂ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರತಿಸ್ಪರ್ಧಿ ಕಂಪನಿಗಳಾದ ರಿಲಯನ್ಸ್‌ ಜಿಯೋ, ಏರ್‌ಟೆಲ್, ವೋಡಾಫೋನ್-ಐಡಿಯಾಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಈ ಟೆಲಿಕಾಂ ಸೇವಾ ಪೂರೈಕೆದಾರ ಬಿಎಸ್ಸೆನ್ನೆಲ್ ಕಂಪನಿ ಗ್ರಾಹಕರನ್ನು ಸೆಳೆಯಲು ಅನೇಕ ಆಫರ್‌ಗಳನ್ನು ಆಗಾಗ ಘೋಷಿಸುತ್ತಲೇ ಇರುತ್ತದೆ. ದೇಶದ ಹಲವು ಸರ್ಕಲ್‌ಗಳಲ್ಲಿ 4ಜಿ ಸೇವೆಯನ್ನು ಆರಂಭಿಸಿರುವ ಬಿಎಸ್ಸೆನ್ನೆಲ್ ಅನೇಕ ಆಫರ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ಪ್ರೀಪೇಡ್, ಪೋಸ್ಟ್ ಪೇಡ್ ಮತ್ತು ಬ್ರಾಡ್‌ಬ್ರಾಂಡ್ ಸೇವೆಗಳಿಗೆ ಚಂದಾದಾರನ್ನು ಹೆಚ್ಚಿಸುವ ಸಲುವಾಗಿ ಪ್ರಯತ್ನ ನಡೆಸುತ್ತಿದೆ. ಇದರ ಭಾಗವಾಗಿಯೇ ಇದೀಗ ಕಂಪನಿ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಸೇವೆಯನ್ನೂ ಆರಂಭಿಸಿದೆ ಎಂದು ಹೇಳಬಹುದು.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಅತೀ ಕಡಿಮೆ ಬೆಲೆ ಆಯ್ಕೆ ಇಲ್ಲಿದೆ