ಮೊಬೈಲ್ ಕೊಳ್ಳುವವರ ಸಂಖ್ಯೆಯಲ್ಲಿ ಭಾರತೀಯರದ್ದು ಸಿಂಹಪಾಲು. ಭಾರತದಲ್ಲಿ ಇದಕ್ಕೆ ಅಗಾಧ ಮಾರುಕಟ್ಟೆ ಇದೆ ಎಂಬುದನ್ನು ಕಂಪನಿಗಳೂ ಅರಿತಿವೆ. ಅದರ ಜೊತೆಗೆ ಫೋಟೋ ಎಂದರೆ ಬಹುತೇಕರಿಗೆ ಪ್ರಾಣ. ಅದಕ್ಕೆಂದೇ ಎಷ್ಟೋ ಮೊಬೈಲ್‌ಗಳಲ್ಲಿ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರಲ್ಲೂ ಸೆಲ್ಫೀ ಕ್ಯಾಮೆರಾಗಳಿಗೂ ಆದ್ಯತೆಯನ್ನು ಕೊಟ್ಟಿರುತ್ತವೆ. ಇಷ್ಟಾದರೂ ಸಾಲದ ಕೆಲವರು ಫೋಟೋಗಳಿಗಾಗಿ ಇರುವ ಕ್ಯಾಮೆರಾ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿರುತ್ತಾರೆ. ಆದರೆ, ಅವುಗಳಲ್ಲಿ ಕೆಲವು ಭದ್ರತಾ ಲೋಪವುಳ್ಳದ್ದು ಇವೆ ಎಂದು ಕಂಡುಹಿಡಿದಿರುವ ಗೂಗಲ್ ಡಿಲೀಟ್ ಮಾಡಿವೆ. ಅವು ಯಾವುವು ಎಂಬುದನ್ನು ಗಮನಿಸುವುದರ ಜೊತೆಗೆ ನಿಮ್ಮಲ್ಲೂ ಆ ಆ್ಯಪ್‌ಗಳು ಇದ್ದರೆ ತಡ ಮಾಡದೆ ಡಿಲೀಟ್ ಮಾಡಿ ಬಿಡಿ.
ಇಂದು ತಂತ್ರಜ್ಞಾನಗಳು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ಅಪಾಯಗಳನ್ನೂ ಹೊತ್ತು ತರುತ್ತಿವೆ. ಇಲ್ಲಿ ನಾವು ಎಷ್ಟು ಎಚ್ಚರಿಕೆಯನ್ನು ವಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅಂದರೆ ನಮ್ಮ ಆಯ್ಕೆ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹೊಸತು ಬಂದಿತು ಎಂದು ಕಣ್ಣುಮುಚ್ಚಿಕೊಂಡು ಅದನ್ನು ಒಪ್ಪಿ, ಅಪ್ಪಿಕೊಂಡರೆ ನಿಮ್ಮ ಖಾಸಗಿ ಮಾಹಿತಿಗಳು ಅನ್ಯಪಾಲಾಗುತ್ತೆ ಎಚ್ಚರ..!
ಹೌದು. ಈಗ ಮೊದಲು ಗೊತ್ತಿಲ್ಲದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅದೆಷ್ಟೋ ಆ್ಯಪ್ಗಳು ಸೇರಿಕೊಂಡು ಬಿಟ್ಟಿರುತ್ತವೆ. ಅದನ್ನು ಬಳಕೆ ಮಾಡಿದಾಗಲೇ ಗೊತ್ತಾಗುವುದು, ಮಾಹಿತಿ ಕಳುವಾಗುತ್ತದೆ ಎಂದು. ಆದರೆ, ಸಾಮಾನ್ಯ ಬಳಕೆದಾರರಿಗೆ ಆ ವಿಷಯವೂ ತಿಳಿಯುವುದಿಲ್ಲ. ಇಂತಹ ನಿಟ್ಟಿನಲ್ಲಿ ಸದಾ ಕಣ್ಣಿಟ್ಟಿರುವ ಗೂಗಲ್ ಈಗ ಆ್ಯಂಡ್ರಾಯ್ಡ್ ಬಳಕೆದಾರರ ಹಕ್ಕಿಗೆ ವಿರುದ್ಧವಾಗಿರುವ 36 ಕ್ಯಾಮೆರಾ ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ.
ಅಂದಹಾಗೆ ಈ ಆ್ಯಪ್‌ಗಳು 2019ರ ಮಧ್ಯಭಾಗದಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಸೇರಿಕೊಂಡಿವೆ ಎಂದು ಹೇಳಲಾಗಿದೆ. ಡೆವೆಲಪರ್‌ಗಳು ಗೂಗಲ್ ಸೆಕ್ಯುರಿಟಿ ಸ್ಕ್ಯಾನ್‌ಗೆ ಸಹ ಮಣ್ಣೆರೆಚಿ ಈ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದು, ತಕ್ಷಣಕ್ಕೆ ಅದರೊಳಗಿರುವ ಭದ್ರತಾಲೋಪಗಳನ್ನು ಕಂಡುಹಿಡಿಯಲಾಗಲಿಲ್ಲ. ವೈಟ್ ಊಪ್ಸ್ ಎಂಬ ಕಂಪನಿ ಇಂತಹ ಕ್ಯಾಮೆರಾ ಆ್ಯಪ್‌ಗಳ ಬಗ್ಗೆ ವರದಿ ಮಾಡಿತ್ತು. ಈ ಆ್ಯಪ್ ಬಳಸಿದರೆ ದೃಢೀಕರಣಗೊಳ್ಳದ ಹಾಗೂ ಸಂಬಂಧರಹಿತ URL ಗಳು ತೆರೆದುಕೊಳ್ಳುತ್ತವೆ. ಇದರ ಜೊತೆಗೆ ಈ ಆ್ಯಪ್‌ಗಳನ್ನು ಡಿಲೀಟ್ ಮಾಡುವುದು ಸಹ ಸುಲಭದ ಕೆಲಸವಲ್ಲ. ಇವುಗಳ ಐಕಾನ್‌ಗಳು ತನ್ನಿಂದ ತಾನೇ ಅಡಗಿ (ಹೈಡ್) ಕುಳಿತುಬಿಟ್ಟಿರುತ್ತವೆ. ಒಂದು ವೇಳೆ ಈ ಕೆಳಗೆ ನೀಡಲಾಗಿರುವ ಆ್ಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಇದನ್ನು ಗೂಗಲ್ ಈಗಾಗಲೇ ಡೌನ್‌ಲೋಡ್ ಮಾಡಿಯಾಗಿದೆ.
1. ಕಾರ್ಟೂನ್ ಫೋಟೋ ಎಡಿಟರ್ & ಸೆಲ್ಫೀ ಆರ್ಟ್ ಕ್ಯಾಮೆರಾ: ಇದು ಸುರಕ್ಷಿತವಲ್ಲ. ಈ ಆ್ಯಪ್ ಈಗಾಗಲೇ 10 ಲಕ್ಷ ಡೌನ್‌ಲೋಡ್ ಆಗಿದೆ.
2. ಯೂರೋಕೋ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷ ಡೌನ್‌ಲೋಡ್ ಆಗಿದೆ.
ಇದನ್ನು ಓದಿ: ಭಾರತ ಚೀನಾ ಆ್ಯಪ್ ಡಿಲೀಟ್ ಮಾಡಿದಾಗ ಪಬ್‌ಜೀ ಉಳಿದುಕೊಂಡಿದ್ದು ಹೇಗೆ?
3. ಸೊಲು ಕ್ಯಾಮೆರಾ: ಈ ಆ್ಯಪ್ ಈಗಾಗಲೇ 5 ಲಕ್ಷ ಡೌನ್‌ಲೋಡ್ ಆಗಿದೆ.
4. ಲೈಟ್ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷ ಡೌನ್‌ಲೋಡ್‌ಗಳನ್ನು ಕಂಡಿದೆ.
5. ಬ್ಯೂಟಿ ಕೊಲ್ಯಾಜ್ ಲೈಟ್: ಈ ಆ್ಯಪ್ ಈಗಾಗಲೇ 5 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
6. ಬ್ಯೂಟಿ & ಫಿಲ್ಟರ್ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
7. ಫೋಟೋ ಕೊಲ್ಯಾಜ್ & ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಅನ್ನು 1 ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
8. ಬ್ಯೂಟಿ ಕ್ಯಾಮೆರಾ ಸೆಲ್ಫೀ: ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.
9. ಗ್ಯಾಟಿ ಬ್ಯೂಟಿ ಕ್ಯಾಮೆರಾ 1.0.1 APK: ಇದು ಹೆಚ್ಚು ಪ್ರಚಾರಕ್ಕೆ ಬಾರದಿದ್ದರೂ ಸುಮಾರು 10 ಸಾವಿರ ಡೌನ್‌ಲೋಡ್‌ಗಳನ್ನು ಕಂಡಿದೆ.
10. ಪ್ಯಾಂಡ್ ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ 50 ಸಾವಿರ ಡೌನ್‌ಲೋಡ್ ಆಗಿದೆ.
11. ಬೆನ್ಬು ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷ ಡೌನ್‌ಲೋಡ್ ಆಗಿದೆ.
12. ಪಿನುಟ್ ಸೆಲ್ಫೀ ಬ್ಯೂಟಿ ಕ್ಯಾಮೆರಾ- ಬೆಸ್ಟ್ ಸೆಲ್ಫೀ ಕ್ಯಾಮೆರಾ & ಫೋಟೋ ಎಡಿಟರ್: ಈ ಆ್ಯಪ್ ಈಗಾಗಲೇ 10 ಲಕ್ಷ ಡೌನ್‌ಲೋಡ್ ಆಗಿದೆ.
13. ಮೂಡ್ ಫೋಟೋ ಎಡಿಟರ್ & ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 5 ಲಕ್ಷ ಡೌನ್‌ಲೋಡ್ ಆಗಿದೆ.
14. ರೋಸ್ ಫೋಟೋ ಎಡಿಟರ್ & ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
15. ಸೆಲ್ಫಿ ಬ್ಯೂಟಿ ಕ್ಯಾಮೆರಾ & ಫೋಟೀ ಎಡಿಟರ್: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
16. ಫಾಗ್ ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
17. ಫಸ್ಟ್ ಸೆಲ್ಫೀ ಬ್ಯೂಟಿ ಕ್ಯಾಮೆರಾ & ಫೋಟೋ ಎಡಿಟರ್: ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
18. ವನು ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
ಇದನ್ನು ಓದಿ: ನಿಮ್ಮ ಫೇಸ್‌ಬುಕ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ
19. ಸನ್ ಪ್ರೋ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
20. ಫನ್ನಿ ಸ್ವೀಟ್ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
21. ಲಿಟಲ್ ಬೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
22. ಬ್ಯೂಟಿ ಕ್ಯಾಮೆರಾ & ಫೋಟೋ ಎಡಿಟರ್ ಪ್ರೋ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
23. ಗ್ರಾಸ್ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
24. ಎಲೆ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
25. ಫ್ಲವರ್ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
26. ಬ್ಯೂಟಿ ಕ್ಯಾಮೆರಾ-ಬೆಸ್ಟ್ ಸೆಲ್ಫೀ ಕ್ಯಾಮೆರಾ & ಫೋಟೋ ಎಡಿಟರ್: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
27. ಆರೇಂಜ್ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
28. ಸನ್ನಿ ಬ್ಯೂಟಿ ಕ್ಯಾಮೆರಾ ಫ್ರೀ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
29. ಲ್ಯಾಂಡಿ ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
30. ನಟ್ ಸೆಲ್ಫೀ ಕ್ಯಾಮೆರಾ: ಈ ಆ್ಯಪ್ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
31. ರೋಸ್ ಫೋಟೋ ಎಡಿಟರ್ & ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಅನ್ನು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.
32. ಆರ್ಟ್ ಬ್ಯೂಟಿ ಕ್ಯಾಮೆರಾ-2019: ಈ ಆ್ಯಪ್ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
33. ಎಲಿಗೆಂಟ್ ಬ್ಯೂಟಿ ಕ್ಯಾಮ್-2019: ಈ ಆ್ಯಪ್ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ.
ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸ್‌ಗೆ ಗೂಗಲ್ ಆ್ಯಪ್!.
34. ಸೆಲ್ಫೀ ಬ್ಯೂಟಿ ಕ್ಯಾಂಎರಾ & ಫನ್ನಿ ಫಿಲ್ಟರ್: ಈ ಆ್ಯಪ್ ಅನ್ನು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.
35. ಸೆಲ್ಫೀ ಬ್ಯೂಟಿ ಕ್ಯಾಮೆರಾ ಪ್ರೋ: ಈ ಆ್ಯಪ್ ಅನ್ನು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.
36. ಪ್ರೋ ಸೆಲ್ಫೀ ಬ್ಯೂಟಿ ಕ್ಯಾಮೆರಾ: ಈ ಆ್ಯಪ್ ಅನ್ನು ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.