Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!

Published : Dec 10, 2021, 10:13 PM IST
Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!

ಸಾರಾಂಶ

ಪರಿಸರ ಸಂರಕ್ಷಣೆಗೆ ಮುಂದಾದ ರಿಲಯನ್ಸ್ ಜಿಯೋಗೆ A ಗ್ರೇಡ್ ಪರಿಸರಕ್ಕೆ ಹಾನಿಮಾಡದೇ ಸ್ವಚ್ಛ ಕಂಪನಿಗಳಿಗೆ ನೀಡುವ ಗ್ರೇಡ್ A ದರ್ಜೆ ಪಡೆದ ದೇಶದ ಏಕೈಕ ಟೆಲಿಕಾಂ ಡಿಜಿಟಲ್ ಕಂಪನಿ

ನವದೆಹಲಿ(ಡಿ.10): ಭಾರತದಲ್ಲಿ ಡೇಟಾ(Mobile data) ಹಾಗೂ ಮೊಬೈಲ್ ನೆಟ್‌ವರ್ಕ್(Mobile Network) ಮೂಲಕ ಕ್ರಾಂತಿ ಮಾಡಿರುವ ಜಿಯೋಗೆ ಮತ್ತೊಂದು ಹಿರಿಮೆ ಸೇರಿಕೊಂಡಿದೆ.ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ಮೂಲಕ  ಪರಿಸರ ಸಂರಕ್ಷಣೆಗೆ ಕೈ ಜೋಡಿಸಿರುವ ಕಂಪನಿಗಳಿಗೆ ನೀಡುವ ಗ್ರೇಡ್‌ಗಳಲ್ಲಿ ಈ ಬಾರಿ ರಿಲಯನ್ಸ್ ಜಿಯೋ(Reliance Jio) ಎ ಗ್ರೇಡ್ ಪಡೆದುಕೊಂಡಿದೆ. ಪರಿಸರಕ್ಕೆ ಹಾನಿಮಾಡದೇ ಸ್ವಚ್ಛ ಕಂಪನಿಗಳಿಗೆ CDP(carbon disclosure project) ನೀಡುವ ಗ್ರೇಡ್ ಸರ್ಟಿಫಿಕೇಟ್ ಇದಾಗಿದೆ.

CDP 2021ನೇ ಸಾಲಿನಲ್ಲಿ A ದರ್ಜೆ ಪಡೆದ ದೇಶದ ಏಕೈಕ ಟೆಲಿಕಾಂ ಡಿಜಿಟಲ್ ಕಂಪನಿ(Telecom and Digital Company) ರಿಲಯನ್ಸ್ ಜಿಯೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಕಳೆದ ವರ್ಷ  ‘B’ ದರ್ಜೆ ಪಡೆದಿದ್ದ ಜಿಯೋ, ಒಂದೇ ವರ್ಷದಲ್ಲಿ  ‘A’ ದರ್ಜೆಗೆ ಏರಿದೆ. ಭಾರ್ತಿ ಏರ್ಟೆಲ್(bharti airtel) ಕಳೆದ ವರ್ಷ  ‘D’ ದರ್ಜೆಯಲ್ಲಿದ್ದು, ಈ ಸಾಲಿನಲ್ಲಿ  ‘C’ ದರ್ಜೆಗೇರಿದೆ. ದೇಶದಲ್ಲಿ ಅತ್ಯಂತ ಕಡಮೆ ಅವಧಿಯಲ್ಲಿ ಮೊಬೈಲ್ ಕರೆ ಮತ್ತು ಡೇಟಾ ಸೇವೆ ಒದಗಿಸುವಲ್ಲಿ ಅಗ್ರಸ್ಥಾನಕ್ಕೆ ಏರಿರುವ ರಿಲಯನ್ಸ್ ಜಿಯೋ ಅಷ್ಟೇ ತ್ವರಿತಗತಿಯಲ್ಲಿ ಸಿಡಿಪಿಯ  ‘A’ ದರ್ಜೆಗೆ ಏರಿರುವುದು ವಿಶೇಷ.

ಜಿಯೋ ಟ್ರಯಲ್‌ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ರಸ್ತೆ ದುರಸ್ತಿ

ಜಗತ್ತಿನಾದ್ಯಂತ 12 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಇರುವ 272 ಕಂಪನಿಗಳು ಕೈಗೊಂಡಿರುವ ಹವಾಮಾನ ಬದಲಾವಣೆ, ಪರಿಸರ ರಕ್ಷಣೆ, ಅರಣ್ಯ ಮತ್ತು ನೀರಿನ ಸುರಕ್ಷತೆ ಮೇಲಿನ ಕಾರ್ಯಕ್ಷಮತೆ ಆಧಾರದ ಮೇಲೆ  ದರ್ಜೆ ಪಡೆದುಕೊಂಡಿವೆ. ಈ ಪೈಕಿ ರಿಲಯನ್ಸ್ ಜಿಯೋ ಕೂಡಾ ಸೇರಿದೆ ಎಂದು ಸಿಡಿಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಇದರೊಂದಿಗೆ, ಜಿಯೋ ಜಾಗತಿಕ ಮಟ್ಟದ  ‘A’  ಅಥವಾ ‘A’ ದರ್ಜೆ ಪಡೆಯುವ ಕೆಲವೇ ಕೆಲವು ಶ್ರೇಷ್ಠ ಭಾರತೀಯ ಕಂಪನಿಗಳ ಪಟ್ಟಿಗೆ ಸೇರಿದೆ.  ಇಂಗಾಲ ಹೊರಸೂಸುವಿಕೆ, ತಡೆಗಟ್ಟುವಿಕೆ, ಮಾಹಿತಿ ಬಹಿರಂಗಪಡಿಸುವಿಕೆಯ ಅರಿವು ಮತ್ತು ನಿರ್ವಹಣೆಯಲ್ಲಿ ನಾಯಕರೆಂದು ಪರಿಗಣಿಸುವ  ನೂರು ಕಂಪನಿಗಳಿದ್ದು ಜಿಯೋ ಆ ಕಂಪನಿಗಳ ಪಟ್ಟಿಗೆ ಸೇರಿದೆ.

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

2000 ರಲ್ಲಿ ಸ್ಥಾಪಿಸಲಾದ ಸಿಡಿಪಿ 110 ಟ್ರಿಲಿಯನ್ ಡಾಲರ್ ಮೀರಿದ ಆಸ್ತಿ ಹೊಂದಿರುವ 590 ಹೂಡಿಕೆದಾರರು, 5.5 ಟ್ರಿಲಿಯನ್ ಡಾಲರ್ ಮೌಲ್ಯದ ಖರೀದಿದಾರರನ್ನು ಒಳಗೊಂಡಂತೆ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದೆ. ಕಡಮೆ ಇಂಗಾಲ ಹೊರಸೂಸುವಿಕೆ ಗುರಿಗಾಗಿ ಜಲ ಸಂಪನ್ಮೂಲ ಮತ್ತು ಅರಣ್ಯ ಸಂಪನ್ಮೂಲ ರಕ್ಷಣೆಗೆ ಪ್ರೇರೇಪಿಸುತ್ತಿದೆ.

ಸಿಡಿಪಿ ಕಂಪನಿಗಳಿಗೆ  ‘D’ ಯಿಂದ  ‘A’ ವರೆಗೆ ದರ್ಜೆ ನೀಡುತ್ತದೆ. ಇದು ಅರಿವು, ನಿರ್ವಹಣೆ ಮತ್ತು ಅಂತಿಮವಾಗಿ ನಾಯಕತ್ವಕ್ಕೇರುವ ಪ್ರಯಾಣವನ್ನು ಸೂಚಿಸುತ್ತದೆ.  ‘A’ ಅಥವಾ  ‘A -’ ದರ್ಜೆಗೇರಿದವರು ನಾಯಕತ್ವದ ಮಟ್ಟ, ಆದರೆ  ‘B’ಅಥವಾ  ‘B-’ ದರ್ಜೆ ಹೊಂದಿರುವವರು ನಿರ್ವಹಣಾ ಮಟ್ಟ,  ‘C’ ಮತ್ತು  ‘C -’ ದರ್ಜೆ ಹೊಂದಿರುವ  ಸಂಸ್ಥೆಗಳು ಅರಿವಿನ ಮಟ್ಟ,  ‘D’ ಮತ್ತು  ‘D -’ ದರ್ಜೆ ಹೊಂದಿರುವವರು ಇಂಗಾಲ ಪ್ರಮಾಣ ಬಹಿರಂಗಪಡಿಸುವಿಕೆಯ ಪ್ರಾರಂಭಿಕಮಟ್ಟದಲ್ಲಿ ಇದ್ದಾರೆಂದು ಪರಿಗಣಿಸಲಾಗುತ್ತದೆ.

2021 ರ ದರ್ಜೆ ಪ್ರಕಾರ,  12 ಟ್ರಿಲಿಯನ್ ಡಾಲರ್ ಮಾರುಕಟ್ಟೆ  ಮೌಲ್ಯ ಹೊಂದಿರುವ ವಿಶ್ವದಾದ್ಯಂತ ಇರುವ ಕಂಪನಿಗಳ ಪೈಕಿ ಕೇವಲ ಶೇ.2 ರಷ್ಟು ಕಂಪನಿಗಳು ಪರಿಸರ ನಾಯಕತ್ವದ  ‘A-’ ದರ್ಜೆ ಪಟ್ಟಿಯಲ್ಲಿ ಸೇರಿವೆ ಎಂದು ಸಿಡಿಪಿ ತಿಳಿಸಿದೆ.  ಸೆಪ್ಟೆಂಬರ್ 2019ರಲ್ಲಿ ರಿಲಯನ್ಸ್ ಜಿಯೋ ಸ್ವಯಂಪ್ರೇರಿತವಾಗಿ ಹವಾಮಾನ ಬದಲಾವಣೆ ಮತ್ತು ಇಂಗಾಲ ಸೋರಿಕೆ ತಗ್ಗಿಸುವ ಗುರಿಗಳಿಗೆ ಬದ್ಧವಾಗಿತ್ತು. ನಿರಂತರವಾಗಿ ಪರಿಸರ ಸಂರಕ್ಷಣೆ ಮಾಡುತ್ತಾ 2035ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವ ಕಂಪನಿಯಾಗುವ ಗುರಿಯನ್ನು ರಿಲಯನ್ಸ್ ಜಿಯೋ ಹೊಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?