ಐಫೋನ್‌ನಲ್ಲಿ ಈ ನಾಲ್ಕು ಅಕ್ಷರ ಟೈಪ್ ಮಾಡಿದ್ರೆ ಫೋನ್ ಕ್ರಾಶ್, ಸೆಕ್ಯೂರಿಟಿ ಸಂಶೋಧಕನ ಎಚ್ಚರಿಕೆ!

By Chethan Kumar  |  First Published Aug 23, 2024, 9:33 AM IST

ನಿಮ್ಮ ಐಫೋನ್ ಕ್ರಾಶ್ ಮಾಡಲು ಕೇವಲ ಅಕ್ಷರ ಸಾಕು. ಹೌದು ಈ ಕ್ಯಾರೆಕ್ಟರ್ ಐಫೋನ್‌ನಲ್ಲಿ ಟೈಪ್ ಮಾಡಿದರೆ ಡಿವೈಸ್ ಕ್ರಾಶ್ ಆಗಲಿದೆ. ಹೊಸ ಐಫೋನ್ ಹಾಗೂ ಐಪ್ಯಾಡ್‌ನಲ್ಲಿ ಈ ಬಗ್ ಪತ್ತೆ ಹಚ್ಚಿದ ಸೆಕ್ಯೂರಿಟಿ ಸಂಶೋಧಕ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಡಿವೈಸ್ ಕ್ರಾಶ್ ಮಾಡುವ ಆ ನಾಲ್ಕು ಅಕ್ಷರ ಯಾವುದು?


ಕ್ಯಾಲಿಫೋರ್ನಿಯಾ(ಆ.23) ಸುರಕ್ಷತೆ, ಗುಣಮಟ್ಟ, ಬಾಳಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಐಫೋನ್‌ಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಇದೀಗ ಬಹುತೇಕರು ಐಫೋನ್ ಬಳಕೆ ಮಾಡುತ್ತಿದ್ದಾರೆ. ವಿಶ್ವದೆಲ್ಲೆಡೆ ಐಫೋನ್ ವಿಶ್ವಾಸಾರ್ಹ ಫೋನ್ ಆಗಿ ಹೊಮ್ಮಿದೆ. ಇದರ ಬೆನ್ನಲ್ಲೇ ಸೆಕ್ಯೂರಿಟಿ ಸಂಶೋಧಕ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಹೊಸ ಐಫೋನ್ ಹಾಗೂ ಐಪ್ಯಾಡ್‌ಗಳಲ್ಲಿನ ಒಂದು ಬಗ್ ನಿಮ್ಮ ಡಿವೈಸ್‌ನ್ನೇ ಕ್ರಾಶ್ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೇವಲ ನಾಲ್ಕು ಅಕ್ಷರ ಟೈಪ್ ಮಾಡಿದರೆ ಸಾಕು ಡಿವೈಸ್ ಕ್ರಾಶ್ ಆಗಲಿದೆ ಎಂದು ಕೊನ್ಸ್‌ಸ್ಟಾಂಟಿನ್ ಸೂಚಿಸಿದ್ದಾರೆ.

ಐಫೋನ್ ಸೆಟ್ಟಿಂಗ್ ಪೇಜ್‌ನ ಸರ್ಚ್ ಬಾರ್‌ನಲ್ಲಿ ಈ ನಾಲ್ಕು ಅಕ್ಷರ ಟೈಪ್ ಮಾಡಿದರೆ ಡಿವೈಸ್ ಕ್ರಾಶ್ ಆಗಲಿದೆ. ನಿಮ್ಮ ಸ್ವಯಂ ರಿಸ್ಕ್‌ನಲ್ಲಿ ಪರಿಶೀಲಿಸಬಹುದು ಎಂದು ಕೊನ್ಸ್‌ಸ್ಟಾಂಟಿನ್ ಸೂಚಿಸಿದ್ದಾರೆ. ಐಫೋನ್, ಐಪ್ಯಾಡ ಕ್ರಾಶ್ ಮಾಡಬಲ್ಲ ಆ ನಾಲ್ಕು ಅಕ್ಷರಗಳೆಂದರೆ " " ::( ಎರಡು ಉದ್ಧರಣ ಚಿಹ್ನೆ ಹಾಗೂ ಎರಡು ಕಾಲನ್ ಚಿಹ್ನೆ). ಈ ಕ್ಯಾರೆಕ್ಟರ್ ಐಫೋನ್ ಡಿವೈಸ್ ಕ್ರಾಶ್ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Latest Videos

undefined

ಐಫೋನ್ ಗಾಗಿ ಹಠ ಹಿಡಿದ ಮಗ, ಹೂ ಮಾರಿ ಫೋನ್ ಕೊಡಿಸಿದ ಅಮ್ಮ!

ಐಪೋನ್ ಹೋಮ್ ಸ್ಕ್ರೀನ್‌ನಲ್ಲಿ ಪಾಸ್ಟ್ ವಿಸಿಟ್ ಪೇಜ್ ಸ್ವೈಪ್ ಮಾಡಿದ ಬಳಿಕ ಈ ನಾಲ್ಕು ಕ್ಯಾರೆಕ್ಟರ್‌ನ್ನು ಆ್ಯಪ್ ಲೈಬ್ರೈರಿಯಲ್ಲಿ ಸರ್ಚ್ ಮಾಡಿ. ಈ ವೇಳೆ ಐಫೋನ್ ಲಾಕ್‌ಸ್ಕ್ರೀನ್ ರಿಲೋಡ್ ಆಗಲಿದೆ. ಜೊತೆಗೆ ಈ " " :: ನಾಲ್ಕು ಕ್ಯಾರೆಕ್ಟರ್ ಟೈಪ್ ಮಾಡಿದರೆ ಆ್ಯಪಲ್ ಐಫೋನ್ ಸ್ಪ್ರಿಂಗ್‌ಬೋರ್ಡ್( ಆ್ಯಪಲ್ ಮೊಬೈಲ್ ಯೂಸರ್ ಇಂಟರ್‌ಫೇಸ್) ಸುಲಭವಾಗಿ ಕ್ರಾಶ್ ಆಗಲಿದೆ ಎಂದಿದ್ದಾರೆ.ಕೆಲವು ಸಂದರ್ಬದಲ್ಲಿ ಲಾಕ್‌ಸ್ಕ್ರೀನ್ ರಿಲೋಡಿಂಗ್‌ಗೆ ಮೊದಲು ಬ್ಲಾಕ್ ಸ್ಕ್ರೀನ್ ಫ್ಲಾಶ್ ಆಗಲಿದೆ ಎಂದಿದ್ದಾರೆ.

ಇದೇ ವೇಳೆ ಈ ಕ್ರಾಶ್‌ನಿಂದ ಫೋನ್‌ನಲ್ಲಿ ಸೈಬರ್ ಸೆಕ್ಯೂರಿಟಿ ಸಮಸ್ಯೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ ಹೊಸ ಐಫೋನ್‌ಗಳಲ್ಲಿ ಪತ್ತೆಯಾಗಿದೆ. iOS 17 ವರ್ಷ, iOS18, ಹೊಸ iOS ಅಪ್‌ಡೇಟ್, 17.6.2 ಸೇರಿದಂತೆ ಹೊಸ ಫೋನ್ ವರ್ಶನ್‌ನಲ್ಲಿ ಈ ಬಗ್ ಕಾಣಿಸಿಕೊಂಡಿದೆ ಎಂದು ಫೋನ್ ಸೆಕ್ಯೂರಿಟಿ ತಜ್ಞರು ಹೇಳಿದ್ದಾರೆ.  

ಸೋಶಿಯಲ್ ಮೀಡಿಯಾದಲ್ಲಿ ಕೊನ್ಸ್‌ಸ್ಟಾಂಟಿನ್  ಈ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷಿಸಬೇಕು ಎಂದಿದ್ದರೆ, ನಿಮ್ಮ ರಿಸ್ಕ್‌ನಲ್ಲಿ ಈ ಪ್ರಯತ್ನ ಮಾಡಿ ನೋಡಿ ಎಂದಿದ್ದಾರೆ. ಇದೇ ವೇಳೆ ಕೆಲ ಬಳಕೆದಾರರು ಪ್ರಯತ್ನಿಸಿದ್ದಾರೆ. ಆರಂಭಿಕ 3 ಕ್ಯಾರೆಕ್ಟರ್ ಟೈಪ್ ಮಾಡಿದರೂ ಸಾಕು ಡಿವೈಸ್ ಕ್ರಾಶ್ ಆಗಲಿದೆ ಎಂದು ಸೂಚಿಸಿದ್ದಾರೆ.

ಬೆಂಗಳೂರಿಗನಿಗೆ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸಿಕ್ಕಿತು ಐಫೋನ್, ಮುಂದಾಗಿದ್ದೇ ರೋಚಕ!
 

click me!