ಪೊರ್ಟ್ ತಪ್ಪಿಸಲು ಜಿಯೋ ಬಂಪರ್ ಆಫರ್, ಕೇವಲ 75 ರೂ ರಿಚಾರ್ಜ್‌ಗೆ ಉಚಿತ ಕರೆ, ಡೇಟಾ!

By Chethan Kumar  |  First Published Aug 18, 2024, 3:48 PM IST

ಜಿಯೋ ಇದೀಗ ಮತ್ತೊಂದು ಆಫರ್ ನೀಡಿದೆ. ಕೇವಲ 75 ರೂಪಾಯಿ ರಿಚಾರ್ಜ್ ಪ್ಲಾನ್. 23 ದಿನ ವ್ಯಾಲಿಟಿಡಿ, ಉಚಿತ ಕರೆ, ಡೇಟಾ ಸೇರಿದಂತೆ ಹಲವು ಕೊಡುಗೆಗಳು ಈ ಪ್ಲಾನ್‌ನಲ್ಲಿದೆ.


ಬೆಂಗಳೂರು(ಆ.18) ರಿಲಯನ್ಸ್ ಜಿಯೋ ಇತ್ತೀಚೆಗೆ ನೆಟ್‌ವರ್ಕ್ ಹಾಗೂ ದುಬಾರಿ ರೀಚಾರ್ಜ್‌ನಿಂದ ಆತಂಕ ಎದುರಿಸಿದೆ. ಗ್ರಾಹಕರು ಪೋರ್ಟ್ ಆಯ್ಕೆಗೆ ಒತ್ತು ನೀಡಿದ್ದರು. ಇದೀಗ ಜಿಯೋ ಮತ್ತೊಂದು ಕೊಡುಗೆ ಮೂಲಕ ಗ್ರಾಹಕರ ಮನತಣಿಸಿದೆ. ಕೇವಲ 75 ರೂಪಾಯಿ ರೀಚಾರ್ಜ್ ಪ್ಲಾನ್ ಜಾರಿಗೆ ತಂದಿದೆ. ಈ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 23 ದಿನ ವ್ಯಾಲಿಟಿಡಿ ಸಿಗಲಿದೆ. ಉಚಿತ ಕರೆ, ಡೇಟಾ ಸೇರಿದಂತೆ ಇತರ ಕೆಲ ಪ್ರಯೋಜನಗಳು ಈ ಆಫರ್ ಪ್ಲಾನ್‌ನಲ್ಲಿದೆ. ಅತೀ ಕಡಿಮೆ ಮೊತ್ತಕ್ಕೆ ಇದೀಗ ಜಿಯೋ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.

ಜಿಯೋ ಗ್ರಾಹಕರು ಅಂದರೆ ಹೆಚ್ಚಾಗಿ ಡೇಟಾ ಬಳಸದೆ ಕರೆಗಾಗಿ ಫೋನ್ ಬಳಕೆ ಮಾಡುತ್ತಿರುವ ಗ್ರಾಹಕರಿಗಾಗಿ ಈ ಪ್ಲಾನ್ ಜಾರಿಗೆ ತರಲಾಗಿದೆ. 75 ರೂಪಾಯಿ ರಿಚಾರ್ಜ್ ಮಾಡಿದರೆ 23 ದಿನ ವ್ಯಾಲಿಟಿಡಿ ಸಿಗಲಿದೆ. 23 ದಿನ ಕರೆಗಳು ಸಂಪೂರ್ಣ ಉಚಿತವಾಗಿದೆ. ಯಾವುದೇ ನೆಟ್‌ವರ್ಕ್‌ಗೆ ಕರೆ ಉಚಿತವಾಗಿದೆ. ಇದರ ಜೊತೆಗೆ ಪ್ರತಿ ದಿನ 100 ಎಂಬಿ ಡೇಟಾ ಉಚಿತವಾಗಿ ಸಿಗಲಿದೆ. 23 ದಿನದಲ್ಲಿ ಒಟ್ಟು 2.5ಜಿಬಿ ಡೇಟಾ ಉಚಿತವಾಗಿ  ಸಿಗಲಿದೆ.

Tap to resize

Latest Videos

undefined

ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ

ಪ್ರತಿ ದಿನ 100 ಎಂಬಿ ಡೇಟಾ ಬಳಕೆ ಮಾಡಿದ ಬಳಿಕವೂ ಚಿಂತೆ ಇಲ್ಲ. ಕಾರಣ ಇಂಟರ್ನೆಟ್ ಸೇವೆ ಬಂದ್ ಆಗುವುದಿಲ್ಲ. ಕೇವಲ ಇಂಟರ್ನೆಟ್ ಸ್ಪೀಡ್ 64kbps ಇಳಿಕೆಯಾಗಲಿದೆ. ಇದರ ಜೊತೆಗೆ 50 ಎಸ್‌ಎಂಎಸ್ ಕೂಡ ಈ ಸೇವೆಯಲ್ಲಿ ಉಚಿತವಾಗಿ ಸಿಗಲಿದೆ. ಈ ಮೂಲಕ ಜಿಯೋ ಗ್ರಾಹಕರಿಗೆ ಅತೀ ಕಡಿಮೆ ಮೊತ್ತದಲ್ಲಿ ಹೊಸ ಪ್ಲಾನ್ ಪರಿಚಯಿಸಿದೆ.

75 ರೂಪಾಯಿ ಪ್ಲಾನ್ ಜೊತೆಗೆ 125 ರೂಪಾಯಿ ಪ್ಲಾನ್ ಕೂಡ ಜಾರಿಗೆ ತರಲಾಗಿದೆ. ಈ ಪ್ಲಾನ್ ಕೂಡ 23 ದಿನದ ವ್ಯಾಲಿಟಿಡಿ ಹೊಂದಿದೆ. ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಈ ಪ್ಲಾನ್‌ನಲ್ಲಿ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗೆ ಅವಕಾಶವಿದೆ. ಇದರ ಜೊತೆಗೆ ಪ್ರತಿ ದಿನ  500MB ಡೇಟಾ ಉಚಿತವಾಗಿ ಸಿಗಲಿದೆ. ಇನ್ನು ಉಚಿತ ಎಸ್ಎಂಎಸ್ ಸೌಲಭ್ಯವೂ ನೀಡಲಾಗಿದೆ. 125 ರೂಪಾಯಿ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಹಾಗೂ ಜಿಯೋ ಸೆಕ್ಯೂರಿಟಿ ಸಬ್‌ಸ್ಕ್ರಿಪ್ಶನ್ ಕೂಡ ಲಭ್ಯವಾಗಲಿದೆ.

ಇತ್ತೀಚೆಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಒಂದೆಡೆ ಬಿಎಸ್‌ಎನ್‌ಎಲ್ 4ಜಿ ಸೇವೆ ಮೂಲಕ ಹಲವು ಆಫರ್ ನೀಡಿದೆ. ಶೀಘ್ರದಲ್ಲೇ ಬಿಎಸ್‌ಎನ್ಎಲ್ 5ಜಿ ಸೇವೆ ಲಾಂಚ್ ಮಾಡುತ್ತಿದೆ. ಇದೀಗ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್‌ಗಳನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನೀಡುತ್ತಿದೆ. ಇದರ ಜೊತೆಗೆ ಇತರ ಟಿಲಿಕಾಂ ಸೇವೆಗಳು ಪೈಪೋಟಿ ನೀಡುತ್ತಿದೆ. 

Jio vs Airtel vs BSNL vs Vi: 249 ರೂಪಾಯಿಯ ರೀಚಾರ್ಜ್‌ನಲ್ಲಿ ಯಾವ ಕಂಪನಿಯ ಪ್ಲಾನ್ ಬೆಸ್ಟ್?
 

click me!