ಇಂದಿನಿಂದ 3 ದಿನ SBI ಮತ್ತು Yono ಸೇವೆ ಸಿಗಲ್ಲ!

By Suvarna NewsFirst Published May 21, 2021, 3:51 PM IST
Highlights

ಸ್ಟೇಟ್‌ ಬ್ಯಾಂಕ್ ಇಂಡಿಯಾ(SBI) ಗ್ರಾಹಕರಿಗೆ ಇದೊಂದು ಸೂಚನೆಯಾಗಿದ್ದು, ಮೇ 21ರಿಂದ 23ರವರೆಗೆ ಯುಪಿಐ, ಯೋನೋ ಆನ್‌ಲೈನ್ ಸೇವೆಗಳು ಲಭ್ಯವಾಗುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ, ನಿರ್ವಹಣೆಯ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

ದೇಶದ ಹಾಗೂ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ(ಎಸ್‌ಬಿಐ) ಗ್ರಾಹಕರಿಗೆ ಸೇವೆಯಲ್ಲಿ ಮೂರು ದಿನಗಳ ಕಾಲ ವ್ಯತ್ಯಯವಾಗಲಿದೆ. ಈ ಎಸ್‌ಬಿಐ ಈಗಾಗಲೇ ಸೂಚನೆ ನೀಡಿದ್ದು, ಮೇ 21ರಿಂದ 23ರವರೆಗೂ ಡಿಜಿಟಲ್ ಸೇವೆಯಲ್ಲಾಗುವ ವ್ಯತ್ಯಯದ ಬಗ್ಗೆ ತಿಳಿಸಿದೆ.

ಎಸ್‌ಬಿಐ ಗ್ರಾಹಕರು ಈ ಮೂರು ದಿನಗಳಲ್ಲಿ ಯುಪಿಐ, ಯೋನೋ ಸೇವೆ ಸೇರಿದಂತೆ ಆನ್‌ಲೈನ್ ಸೇವೆಯನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಶುಕ್ರವಾರ(ಮೇ 21) ದಿಂದಲೇ ಈ ಸೇವೆಗಳು ದೊರೆಯುವುದಿಲ್ಲ ಎಂದು ಹೇಳಿದೆ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

ಮೂರು ದಿನಗಳ ಕಾಲ ಅಂದರೆ ಈ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಯುಪಿಐ, ಯೋನೋ ಆನ್‌ಲೈನ್ ಸೇವೆಗಳು ದೊರೆಯುವುದಿಲ್ಲ ಎಂದು ಮಾಡಿದೆ. ಮೇ 20, ಗುರುವಾರವೇ  ಬ್ಯಾಂಕ್ ಈ ಬಗ್ಗೆ ಟ್ವೀಟ್ ಮಾಡಿ, ಗ್ರಾಹಕರಿಗೆ ಮಾಹಿತಿಯನ್ನು ಒದಗಿಸಿದೆ.  ಬ್ಯಾಂಕ್ ಆನ್‌ಲೈನ್ ವ್ಯವಸ್ಥೆಯ ನಿರ್ವಹಣೆಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಯುಪಿಐ ಮತ್ತು ಯೋನೋ ಆನ್‌ಲೈನ್ ಸೇವೆಯನ್ನು ಒದಗಿಸಲು ಆಗುತ್ತಿಲ್ಲ ಎಂದು ತಿಳಿಸಿದೆ.

 

We request our esteemed customers to bear with us as we strive to provide a better banking experience. pic.twitter.com/a3zwn5qprb

— State Bank of India (@TheOfficialSBI)

 

ಸ್ಟೇಟ್  ಬ್ಯಾಂಕ್ ಇಂಡಿಯಾ ಒದಗಿಸುವ ಯುಪಿಐ, ಐಎನ್‌ಬಿ, ಯೋನೋ, ಯೋನೋ ಲೈಟ್ ಸೇವೆಗಳು ಅಲಭ್ಯವಾಗಲಿವೆ. ಹಾಗೆಯೇ, ಮೇ 21(ಶುಕ್ರವಾರ)  ಬೆಳಗ್ಗೆ 10.45ರಿಂದ ಮೇ 22 ಮಧ್ಯಹ್ನಾ 1.15ರ ತನಕ ಎಸ್‌ಬಿಐ ಒದಗಿಸುವ ಯುಪಿಐ, ಐಎನ್‌ಬಿ, ಯೋನೋ ಮತ್ತು ಯೋನೋ ಲೈಟ್ ಸೇವೆಗಳು ಗ್ರಾಹಕರಿಗೆ ಸಿಗುವುದಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದೆ. ಅತ್ಯುತ್ತಮ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಪ್ರಯತ್ನದಲ್ಲಿದ್ದೇವೆ. ಹಾಗಾಗಿ, ಗ್ರಾಹಕರು ಈಗ ಎದುರಾಗುತ್ತಿರುವ ಅಡಚಣೆಗೆ ಸಹಕರಿಸಬೇಕು ಎಂದು  ಬ್ಯಾಂಕ್ ಕೇಳಿಕೊಂಡಿದೆ.

ಮತ್ತೊಂದೆಡೆ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬ್ಯಾಂಕುಗಳ ಕೆಲಸದ ಅವಧಿಯೂ ಕಿರಿದುಗೊಂಡಿದೆ. ಹಲವು ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಲಾಕ್‌ಡೌನ್ ಹೇರಿರುವುದರಿಂದ ಬ್ಯಾಂಕುಗಳು ಕೂಡ ಸಂಪೂರ್ಣವಾಗಿ ತೆರೆಯುವ ಸ್ಥಿತಿಯಲ್ಲಿ ಇಲ್ಲ.  ಇಂಡಿಯನ್ ಬ್ಯಾಂಕ್ ಅಸೋಶಿಯೇಷನ್(ಐಬಿಎ) ನಿರ್ದೇಶದನದ ಮೇರೆಗೆ ಸರ್ಕಾರಿ ಮತ್ತು ಖಾಸಗಿ  ವಲಯದ ಬ್ಯಾಂಕುಗಳ ತಮ್ಮ ಕಾರ್ಯನಿರ್ವಹಣೆಯ ಅವಧಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿವೆ.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಬ್ಯಾಂಕ್‌ಗಳು ಕೆಲಸ ಮಾಡಬೇಕು ಎಂದು ಇಂಡಿಯನ್ ಬ್ಯಾಂಕ್ ಅಸೋಶಿಯೇಷನ್ ಸೂಚಿಸಿದೆ. ಈ ನಿರ್ದೇಶನವು ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಮೇ 31ರವರೆಗೂ ಕಟ್ಟುನಿಟ್ಟಾಗಿ ಅನ್ವಯವಾಗಲಿದೆ ಎಂದು ಹೇಳಿಕೊಂಡಿದೆ.

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ಅತ್ಯಾಧುನಿಕ ತಾಂತ್ರಿಕ ಆಧರಿತ ಸೇವೆಗಳ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ. ನಿರ್ವಹಣೆಯ ಹಿನ್ನೆಲೆಯಲ್ಲಿ ಸಂದರ್ಭಾನುಸಾರ ಸೇವೆಯಲ್ಲಿ ವ್ಯತ್ಯಯವಾಗುವುದು ಸಹಜ. ಈಗಲೂ ಅದೇ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಬ್ಯಾಂಕ್ ತನ್ನ ಆನ್‌ಲೈನ್ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತಿಲ್ಲ.

ನೇಮಕಾತಿ ಮಾಡಿಕೊಳ್ಳುತ್ತಿರುವ ಎಸ್‌ಬಿಐ
ಎಸ್‌ಬಿಐ ಇತ್ತೀಚೆಗಷ್ಟೇ ಸ್ಟೇಟ್ ಬ್ಯಾಂಕ್ ಇಂಡಿಯಾ, ಜ್ಯೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಆಹ್ವಾನಿಸಿದ್ದ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತಷ್ಟು ವಿಸ್ತರಿಸಿತ್ತು. ಎಸ್‌ಬಿಐನ ಜ್ಯೂನಿಯರ್ ಅಸೋಸಿಯೇಟ್ಸ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಮೇ ೨೦ರವರೆಗೂ ಸಮಯಾವಕಾಶ ನೀಡಲಾಗಿತ್ತು. ಕರ್ನಾಟಕದ ೫೦೯ ಹುದ್ದೆಗಳು ಸೇರಿದಂತೆ ದೇಶಾದ್ಯಂತ ಖಾಲಿಯಿರುವ ಒಟ್ಟು ೫೨೩೭ ಹುದ್ದೆಗಳಿಗೆ ಎಸ್‌ಬಿಐ ಅರ್ಜಿ ಆಹ್ವಾನಿಸಿತ್ತು ಬ್ಯಾಂಕ್.

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

ಈ ಮುಂಚೆ ಹೊರಡಿಸಲಾಗಿದ್ದ ನೋಟಿಸ್‌ನಲ್ಲಿ ಎಸ್‌ಬಿಐ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ ೧೭ ಕೊನೆಯ ದಿನವಾಗಿತ್ತು. ಅದನ್ನು ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಲಾಗಿತ್ತು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮೇ ೨೦ರೊಳಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಎಸ್‌ಬಿಐ ಅಧಿಕೃತ ವೆಬ್‌ಸೈಟ್  https://sbi.co.in.ನಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ಸ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು.

click me!