ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

By Suvarna News  |  First Published May 18, 2021, 12:39 PM IST

ನಮಗೆಲ್ಲ ಗೊತ್ತಿರುವ ಹಾಗೆ ಮೈಕ್ರೊಬ್ಲಾಗಿಂಗ್ ಜಾಲತಾಣ ಟ್ವಿಟರ್ ಸೇವೆ ಉಚಿತವಾಗಿದೆ. ಟ್ವೀಟ್ ಮಾಡಲು ಅಥವಾ ಮಾಹಿತಿ ಹಂಚಿಕೊಳ್ಳಲು ನಾವೇನೂ ಪಾವತಿಸಬೇಕಿಲ್ಲ. ಆದರೆ, ಶೀಘ್ರವೇ ಟ್ವಿಟರ್, ‘ಟ್ವಿಟರ್ ಬ್ಲೂ’ ಎಂಬ ಪಾವತಿಸಿ ಸೇವೆ ಪಡೆಯುವ ಆಯ್ಕೆಯನ್ನು ಒದಗಿಸಲಿದೆ. ಈ ಆಯ್ಕೆಯಡಿ ಚಂದಾದಾರರಾದ ಬಳಕೆದಾರರಿಗೆ ವಿಶಿಷ್ಟವಾದ ಫೀಚರ್‌ಗಳನ್ನು ಟ್ವಿಟರ್ ಒದಗಿಸಲಿದೆ ಎನ್ನಲಾಗುತ್ತಿದೆ.


ಜನಪ್ರಿಯ ಹಾಗೂ ದೈತ್ಯ ಮೈಕ್ರೊಬ್ಲಾಗಿಂಗ್ ತಾಣ ಟ್ವಿಟರ್‌ ಹೊಸ ಸೇವೆಯೊಂದನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ. ಈ ಹೊಸ ಫೀಚರ್‌ಗಳೊಂದಿಗೆ ಈ ಹೊಸ ಸೇವೆ ಗ್ರಾಹಕರಿಗೆ ಸಿಗಲಿದೆ. ಅನ್‌ಡು ಟ್ವೀಟ್ಸ್, ಬುಕ್‌ಮಾರ್ಕ್ಸ್ ಕಲೆಕ್ಷನ್‌ನ ಸೇರಿದಂತೆ ಇನ್ನಿತರ ಹೊಸ ಫೀಚರ್‌ಗಳೊಂದಿಗೆ ಹೊಸ ಸೇವೆಯನ್ನು ಆರಂಭಿಸುವ ಸಂಬಂಧ ಟ್ವಿಟರ್ ಕೆಲಸ ಮಾಡುತ್ತಿದೆ ಹೇಳಲಾಗುತ್ತಿದೆ.

ಟ್ವಿಟರ್ ಬ್ಲೂ ಎಂಬ ಪಾವತಿ ಚಂದಾದಾರಿಕೆಯ ಹೊಸ ಸೇವೆಯನ್ನು ಟ್ವಿಟರ್‌ ಆರಂಭಿಸಲಿದ್ದು, ಈ ಫೀಚರ್ ಕೂಡ ಅದರ ಭಾಗವಾಗಿಯೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tap to resize

Latest Videos

undefined

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

ಆಪ್ ಸಂಶೋಧಕ ಜೇನ್ ಮಂಚುನ್ ವಾಂಗ್ ಅವರು ಈ ಫೀಚರ್ ಅನ್ನು ಗುರುತಿಸಿದ್ದು, ಟ್ವಿಟರ್ ಬ್ಲೂ ಸೇವೆಯನ್ನು ಪಡೆಯಲು 2.99 ಡಾಲರ್‌ ಪಾವತಿಸಬೇಕಾಗಬಹುದು(ರೂಪಾಯಿ ಲೆಕ್ಕದಲ್ಲಿ ಅಂದಾಜು 219). ಈ ಹಿನ್ನೆಲೆಯಲ್ಲಿ ಟ್ವಿಟರ್ ಬಹು ಹಂತದ ಚಂದಾದಾರಿಕೆ ಮಾದರಿಯನ್ನು ರೂಪಿಸುವ ಬಗ್ಗೆ ಟ್ವಿಟರ್ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂಬುದು ಆಪ್ ಸಂಶೋಧಕ ಜೇನ್ ಮಂಚುನ್ ವಾಂಗ್ ಅವರ ಅಭಿಪ್ರಾಯವಾಗಿದೆ. ದಿ ವರ್ಜ್ ಪ್ರಕಾರ ಹೇಳುವುದಾರೆ, ಹೆಚ್ಚು ತುಟ್ಟಿಯ ಚಂದಾದಾರಿಕೆಯು ಗ್ರಾಹಕರಿಗೆ ಹೊಸ ಫೀಚರ್‌ಗಳನ್ನು  ನೀಡಲಿದ್ದು, ಯಾವುದೇ ತೊಂದರೆಯ ಪ್ರಮಾಣವು ತೀರಾ ಕಡಿಮೆಯಾಗಿರುತ್ತದೆ.

ಟ್ವಿಟರ್ ಬ್ಲೂ ಪಾವತಿ ಸೇವೆಯ ಬಗ್ಗೆ ಈವರೆಗೆ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರವೇ ವರದಿಯಾಗುತ್ತಿದೆ. ಆದರೆ, ಈ ಹೊಸ ಫೀಚರ್‌ಗಳ ಬಗ್ಗೆ ಟ್ವಿಟರ್ ಮಾತ್ರ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಆದರೆ, ಆಪ್ ಸಂಶೋಧಕ ಜೇನ್ ಮಂಚುನ್ ವಾಂಗ್ ಅವರು ಊಹಿಸುವ ಬಹುತೇಕ ಮುಂಬರುವ ಮತ್ತು ಈಗಾಗಲೇ ಪರೀಕ್ಷೆ ಹಂತದಲ್ಲಿರುವ ಸಂಗತಿಗಳು ಬಹುತೇಕ ನಿಜವಾಗಿವೆ ಮತ್ತು ನಿಖರವಾಗಿರುತ್ತವೆ.

ಕಳೆದ ವರ್ಷವೇ ಟ್ವಿಟರ್ ಚಂದಾದಾರಿಕೆ ಸೇವೆಯ ಆಯ್ಕೆಗಳ ಬಗ್ಗೆ ಆವಿಷ್ಕಾರ ಮಾಡುತ್ತಿರುವುದನ್ನು ಟ್ವಿಟರ್ ಹೇಳಿಕೊಂಡಿತ್ತು. ಕಳೆದ ವರ್ಷ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಅವರು, ಟ್ವಿಟರ್‌ನ ಕೆಲವು ಸಂಗತಿಗಳನ್ನು ಪಡೆಯಲು ಗ್ರಾಹಕರಿಗೆ ಹಣ ಕೇಳುವ ಬಗ್ಗೆ ಯೋಜನೆಗಳಿವೆ ಎಂದು ಹೇಳುವ ಮೂಲಕ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬುಹದು.

ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!

ಈಗಾಗಲೇ ಟ್ವಿಟರ್ ಕಳೆದ ಕೆಲವು ವಾರಗಳಲ್ಲಿ ತನ್ನ ವೇದಿಕೆಯಲ್ಲಿ ಹಣ ಗಳಿಕೆ ಕೇಂದ್ರೀಕೃತ ಆಯ್ಕೆಗಳನ್ನು ಪರಿಚಯಿಸಿದೆ. ಉದಾಹರಣೆಗೆ, ಟ್ವಿಟರ್ ಸೂಪರ್ ಫಾಲೋಸ್ ಆಯ್ಕೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಈ ಆಯ್ಕೆಯ ಮೂಲಕ ಟ್ವಿಟರ್ ಬಳಕೆದಾರರಿಗೆ ತಮ್ಮ ಫಾಲೋವರ್‌ಗಳಿಗೆ ವಿಶೇಷ ಮತ್ತು ಹೆಚ್ಚುವರಿ ವಿಷಯಕ್ಕಾಗಿ ಶುಲ್ಕ ವಿಧಿಸಲು ಅನುವು ಮಾಡಿಕೊಡುತ್ತದೆ.

ಇತ್ತೀಚೆಗಷ್ಟೇ, ಇದು ಕಂಟೆಂಟ್ ಕ್ರಿಯೇಟರ್ಸ್‌ಗೆ ದೇಣಿಗೆ ನೀಡಲು ಬಳಕೆದಾರರಿಗೆ ಅನುವು ಮಾಡಿಕೊಡಲು ಟಿಪ್ ಜಾರ್ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ಇದು ಕೂಡ ಒಂದು ರೀತಿಯಲ್ಲಿ ಶುಲ್ಕ ಪಾವತಿಸಿ ಸೇವೆ ಪಡೆಯುವ ಗುಣಧರ್ಮವನ್ನು ಹೊಂದಿದೆ. ಇದೇ ರೀತಿಯ ಸೇವೆಯನ್ನು ಅದು ಪರಿಚಯಿಸಲು ಯೋಜಿಸುತ್ತಿದೆ.

5ಜಿ ಸೇವೆ ದೊರೆತರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

ಕಂಟೆಂಟ್ ಕ್ರಿಯೇಟರ್ಸ್ ಇಕೋ ಸಿಸ್ಟಮ್‌ಗೆ ಇನ್ನಷ್ಟು ಉತ್ತೇಜನ ಮತ್ತು ಬಲ ತುಂಬಲು ಟ್ವಿಟರ್ ಕೆಲವು ಸಂಸ್ಥೆಗಳನ್ನು ಸ್ವಾಧೀನಗಳನ್ನು ಮಾಡಿಕೊಂಡಿದೆ. ಈ ತಿಂಗಳ ಆದಿಯಲ್ಲಿ ಟ್ವಿಟರ್ ಸ್ಕ್ರಾಲ್ ನ್ಯೂಸ್ ರೀಡರ್ ಸರ್ವೀಸ್ ಅನ್ನು ಸ್ವಾಧೀನ ಮಾಡಿಕೊಂಡಿತ್ತು. ಈ ಸ್ಕ್ರಾಲ್ ಬಜ್  ಫೀಡ್ ನ್ಯೂಸ್, ಅಟ್ಲಾಂಟಿಕ್ ಮತ್ತು ಯುಎಸ್ಎ ಟುಡೇ ಸೇರಿದಂತೆ ಕೆಲವು ಆಯ್ದ ಪಬ್ಲಿರ್ಸ್ ಜೊತೆ ಕೆಲಸ ಮಾಡುತ್ತಿದೆ. ಚಂದಾದಾರಿಕೆ ಹೊಂದಿರುವ ಗ್ರಾಹಕರಿಗೆ ಟ್ವಿಟರ್ ಈ ಪಬ್ಲಿರ್ಸ್ ಕಂಟೆಂಟ್ ಒದಗಿಸುತ್ತದೆ. ಈ ರೀತಿಯಾಗಿ ಒದಿಸುವ ಸೇವೆಯಲ್ಲಿ ಯಾವುದೇ ಜಾಹೀರಾತುಗಳಿರುವುದಿಲ್ಲ. ಈ ಹಿಂದೆಯೂ ನ್ಯೂಸ್ ಸ್ಲೇಟರ್ ಸ್ಟಾರ್ಟ್ ಅಪ್ ಟ್ವಿಟರ್ ರೆವಿವೂ ಸ್ವಾಧೀನಪಡಿಸಿಕೊಂಡಿತ್ತು.

click me!