ಬೆಂಗಳೂರಿನ ಸ್ಯಾಮ್ಸಂಗ್ ಒಪೆರಾ ಹೌಸ್‌ಗೆ 4ನೇ ವರ್ಷದ ಸಂಭ್ರಮ, ಪಾಪ್ ಹಾಡಿಗೆ ಹೆಜ್ಜೆ!

Published : Sep 15, 2022, 08:42 PM IST
ಬೆಂಗಳೂರಿನ ಸ್ಯಾಮ್ಸಂಗ್ ಒಪೆರಾ ಹೌಸ್‌ಗೆ 4ನೇ ವರ್ಷದ ಸಂಭ್ರಮ, ಪಾಪ್ ಹಾಡಿಗೆ ಹೆಜ್ಜೆ!

ಸಾರಾಂಶ

ಸ್ಯಾಮ್ಸಂಗ್ ಒಪರಾ ಹೌಸ್ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.   ಬೆಂಗಳೂರಿನ ವಿವಿಧ ಶಾಲಾ ಕಾಲೇಜು ಹಾಗೂ ಸ್ಯಾಮ್ಸಂಗ್ ಸದಸ್ಯರೂ ಸೇರಿ  5,000 ಕ್ಕೂ ಹೆಚ್ಚು ಮಂದಿ ಒಪೆರಾ ಹೌಸ್ 4ನೇ ವರ್ಷಾಚರಣೆಗೆ ಸಾಕ್ಷಿಯಾಗಿತ್ತು.

ಬೆಂಗಳೂರು(ಸೆ.15)  2018 ರಲ್ಲಿ ಆರಂಭವಾದ ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿರುವ ಸ್ಯಾಮ್‌ಸಂಗ್‌ನ ವಿಶಿಷ್ಟ ಅನುಭವ ಕೇಂದ್ರ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ತನ್ನ ನಾಲ್ಕನೇ ವರ್ಷವನ್ನು ಆಚರಿಸಿಕೊಂಡಿದೆ. ವಾರ್ಷಿಕೋತ್ಸವದಲ್ಲಿ ಸ್ಯಾಮ್‌ಸಂಗ್‌ ಒಪೆರಾ ಹೌಸ್ ಆಕರ್ಷಕ ಕೆ-ಫಿಯೆಸ್ಟಾ ಎಂಬ ಕೊರಿಯನ್‌ ಪಾಪ್‌ ಥೀಮ್‌ ಸಾಂಸ್ಕೃತಿಕ ಮತ್ತು ಸಂಗೀತ ಹಬ್ಬವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಯುವ ಕೆ ಪಾಪ್‌ ಅಭಿಮಾನಿಗಳು ಬೆಂಗಳೂರಿನ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದರು. ಸ್ಯಾಮ್‌ಸಂಗ್‌ ಸದಸ್ಯರೂ ಇದರಲ್ಲಿ ಜೊತೆಯಾಗಿ ಭಾರತೀಯ ಕೆ-ಪಾಪ್ ಬ್ಯಾಂಡ್‌ ಜೊತೆಗೆ ಕೆ-ಪಾಪ್‌ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೆ-ಪಾಪ್‌ ಕಾನ್ಸರ್ಟ್‌ ಸ್ಕ್ರೀನಿಂಗ್‌ಗಳು, ಸಿನಿಮಾ ಸ್ಕ್ರೀನಿಂಗ್‌, ಡ್ಯಾನ್ಸ್‌ ಕಾರ್ಯಕ್ರಮಗಳು, ಕಾಸ್‌ಪ್ಲೇ ಸ್ಫರ್ಧೆ ಮತ್ತು ಆಕರ್ಷಕ ಕೊರಿಯನ್ ತಿನಿಸು ವರ್ಕ್‌ಶಾಪ್ ಅನ್ನು ಯುವ ಪ್ರೇಕ್ಷಕರು ಆನಂದಿಸಿದರು. 

ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ(Samsung Opera House) ನಡೆದ ಕಾರ್ಯಕ್ರಮದಲ್ಲಿ ಮಿನಿ ಫ್ಲೀ ಮಾರ್ಕೆಟ್ ಇತ್ತು. ಇದರಲ್ಲಿ ಕೆ-ಮೆರ್ಚ್‌, ಕೆ-ಫುಡ್‌, ಕೆ-ಬ್ಯೂಟಿ ಮತ್ತು ಹ್ಯಾನ್‌ಬಾಕ್ (ಸಾಂಪ್ರದಾಯಿಕ ಕೊರಿಯನ್ ಬಟ್ಟೆಗಳು) ಟ್ರಯಲ್ ಸ್ಟಾಲ್‌ಗಳು ಇದ್ದವು. ಎರಡು ದಿನದ ಕಾರ್ಯಕ್ರಮದಲ್ಲಿ 5,000 ಕ್ಕೂಹೆಚ್ಚು ಸ್ಯಾಮ್‌ಸಂಗ್ ಮತ್ತು ಕೆ-ಪಾಪ್‌ ಅಭಿಮಾನಿಗಳು(Bengaluru) ಹಾಜರಾಗಿದ್ದರು.

 

ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 5ಜಿ ಫೋನ್ ಬೆಲೆ ಕಡಿತ, ಖರೀದಿಸಲು ಇಲ್ಲಿವೆ 5 ಕಾರಣ!

ಭಾರತದಲ್ಲಿ ಕೆ-ಪಾಪ್‌ ಮತ್ತು ಕೆ-ಡ್ರಾಮ್‌ ಅಭಿಮಾನಿಗಳ ವೇದಿಕೆಯಾಗಿರುವ ಟೀಮ್‌ ಇಂಡ್‌ಹಾಂಗುಲ್‌ ಸಮುದಾಯವು ಸ್ಯಾಮ್‌ಸಂಗ್‌ ಒಪೆರಾ ಹೌಸ್ ಸಹಭಾಗಿತ್ವದಲ್ಲಿ ಪ್ರತಿಭಾ ಶೋಧ ಸ್ಫರ್ಧೆ “ಪುಟ್ ಯುವರ್ ಸ್ನೀಕರ್ಸ್‌ ಆನ್‌” ಅನ್ನು ಆಯೋಜಿಸಿತ್ತು. ಇದರಲ್ಲಿ ಟೀಮ್ ಡ್ಯಾನ್ಸ್‌, ಸೋಲೋ ಡ್ಯಾನ್ಸ್‌ ಮತ್ತು ವೋಕಲ್ಸ್‌ ಹಾಗೂ ಕೆ-ಪಾಪ್‌ ಫ್ಯಾನ್‌ಗಳಿಗೆ ಹಲವು ಆಟಗಳು ಇದ್ದವು.

ಈ ಎರಡು ದಿನದ ಕಾರ್ಯಕ್ರಮವು ಕೊರಿಯನ್(Korean) ಸಂಸ್ಕೃತಿಯ ಆಚರಣೆಯಷ್ಟೇ ಅಲ್ಲ, ಅನುಭವ ಕೇಂದ್ರಕ್ಕಿಂತ ಹೆಚ್ಚಿನದಾಗಿರುವ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನ ಸಂಭ್ರಮಾಚರಣೆಯೂ ಆಗಿತ್ತು. ಸ್ಯಾಮ್‌ಸಂಗ್‌ ಒಪೆರಾ ಹೌಸ್ ಎಂಬುದು ಒಂದು ಯುವ ತಲೆಮಾರಿನವರಿಗೆ ಕೇಂದ್ರವಾಗಿದ್ದು, ಇಲ್ಲಿ ಹೊಸ ಮತ್ತು ಅನ್ವೇಷಣೀಯ ಐಡಿಯಾಗಳನ್ನು ಹಂಚಿಕೊಳ್ಳುವುದು, ಸಂಪರ್ಕ ಸಾಧಿಸುವುದು, ಕಲಿಯುವುದು ಮತ್ತು ಸ್ಫೂರ್ತಿ ಪಡೆಯುವುದು ನಡೆಯುತ್ತದೆ.

ಕಳೆದ ನಾಲ್ಕು ವರ್ಷಗಳಲ್ಲಿ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ 600 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಇದರಲ್ಲಿ ಉತ್ಪನ್ನ ಬಿಡುಗಡೆಗಳು(Samsung Products), ಲೈವ್ ಮ್ಯೂಸಿಕ್, ಒಟಿಟಿ ಸಿನಿಮಾ ಪ್ರೀಮಿಯರ್, ಸಾಂಸ್ಕೃತಿಕ ಕಾರ್ಯಕ್ಷಮತೆಗಳು, ಫ್ಯಾಷನ್ ಶೋಗಳು, ಗೇಮಿಂಗ್ ಟೂರ್ನಮೆಂಟ್‌ಗಳು, ಸ್ಟಾಂಡ್‌ ಅಪ್‌ ಆಕ್ಟ್‌ಗಳು ಮತ್ತು ಗ್ಯಾಲಾಕ್ಸಿ ವರ್ಕ್‌ಶಾಪ್‌ಗಳೂ ಒಳಗೊಂಡಿವೆ. ಸ್ಯಾಮ್‌ಸಂಗ್‌ನ ಸಿಎಸ್‌ಆರ್‌ ಇನಿಶಿಯೇಟಿವ್ ಆಗಿರುವ ಸಾಲ್ವ್ ಫಾರ್ ಟುಮಾರೋದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದು ಯುವಕರಿಗೆ ಶಿಕ್ಷಣ ಮತ್ತು ಅನ್ವೇಷಣೆ ಸ್ಫರ್ಧೆಯಾಗಿರುತ್ತದೆ. ಗೇಮಿಂಗ್‌ ಜಗತ್ತಿನಲ್ಲಿ ಮುಳುಗಿಹೋಗಬಹುದು, ಹೋಮ್‌ ಥಿಯೇಟರ್‌ನಲ್ಲಿ ಶಕ್ತಿಯುತ ಆಡಿಯೋ ಸಿಸ್ಟಮ್ ಅನುಭವ ಪಡೆಯಬಹುದು, ಲೈವ್‌ ಬಹು ಸಾಧನ ಅನುಭವ ಪಡೆಯಬಹುದು ಮತ್ತು ಶೆಫ್‌ ಕಿಚನ್ ವರ್ಕ್‌ಶಾಪ್‌ನಲ್ಲಿ ಅಡುಗೆ ಕೌಶಲವನ್ನೂ ಪ್ರದರ್ಶಿಸಬಹುದಾಗಿದೆ.  

Samsung Galaxy Z Flip 4, Galaxy Z Fold 4ಗೆ ಡಿಮ್ಯಾಂಡ್, 12 ಗಂಟೆಯಲ್ಲಿ 50000 ಬುಕಿಂಗ್‌

ಸ್ಯಾಮ್‌ಸಂಗ್ ಒಪೆರಾ ಹ ಔಸ್‌ 1900 ರ ಕಾಲದ ಅಸಲಿ ಲುಕ್‌ ಅನ್ನು ಹೊಂದಿದೆ. ಒಳಭಾಗದಲ್ಲಿ ಇದು ಆಧುನಿಕ ಲುಕ್ ನೀಡುತ್ತದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಮತ್ತು ವೇರಬಲ್‌ ಸಾಧನಗಳ ಜೊತೆಗೆ ಫ್ಲಾಗ್‌ಶಿಪ್‌ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಇದು ಪ್ರದರ್ಶಿಸುತ್ತದೆ. ಇದು ಸಂಪೂರ್ಣ ಕಾರ್ಯನಿರ್ವಹಣೆಯ ಗ್ರಾಹಕ ಸೇವಾ ಕೇಂದ್ರವನ್ನೂ ಹೊಂದಿದೆ ಮತ್ತು ಹೋಮ್ ಆಫೀಸ್ ಝೋನ್‌ನಿಂದ ಕೆಲಸ ಮಾಡಲು ಬಯಸುವವರಿಗೆ ಅಧಿಕ ವೇಗದ ಇಂಟರ್ನೆಟ್ ಅನ್ನೂ ಹೊಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್