ಬೇರೆಯವರಿಗೆ ಜಿಯೋ ರೀಚಾರ್ಜ್ ಮಾಡಿ, ನೀವು ಗಳಿಸಿ ಕಮಿಷನ್!

By Suvarna News  |  First Published Apr 18, 2020, 8:30 PM IST
  • ಜಿಯೋ ಟುಗೇದರ್: ಸವಾಲಿನ ಸಮಯದಲ್ಲಿ ಜಿಯೋ ಬಳಕೆದಾರರಿಗೆ ಆಫರ್
  • ಎಲ್ಲಾ ಜಿಯೋ ಗ್ರಾಹಕರಿಗೆ ಒಳ ಬರುವ ಕರೆಗಳು ಮುಂದುವರೆಯಲಿದೆ
  • ಜಿಯೋ ಬಳಕೆದಾರರು ಇತರೆ ಜಿಯೋ ಬಳಕೆದಾರರಿಗೆ ರೀಚಾರ್ಜ್ ಮಾಡಿ ಕಮಿಷನ್ ಗಳಿಸಬಹುದು
     

ಬೆಂಗಳೂರು (ಏ.18): ಜಿಯೋ ತನ್ನ ಗ್ರಾಹಕರರಿಗೆ ಮತ್ತೊಂದು ಸೌಲಭ್ಯ ನೀಡಿದೆ. ಪ್ರತಿ ಜಿಯೋ ಬಳಕೆದಾರರಿಗೂ ಒಳಬರುವ ಕರೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸುವುದಾಗಿ ಕಂಪನಿಯು ಪ್ರಕಟಿಸಿದೆ. ಆ ಮೂಲಕ ಈ ಸವಾಲಿನ ಸಮಯದಲ್ಲಿ ರೀಚಾರ್ಜ್ ಮಾಡಲು ಸಾಧ್ಯವಾಗದ ಎಲ್ಲರಿಗೂ ಪ್ರಯೋಜನ ಸಿಗಲಿದೆ.

ಏಪ್ರಿಲ್ 20ರಿಂದ ಬಹುತೇಕ ರೀಚಾರ್ಜ್ ಮಳಿಗೆಗಳು ಲಭ್ಯವಿರುತ್ತವೆ, ಅಲ್ಲಿಯವರೆಗೆ ಥರ್ಡ್ ಪಾರ್ಟಿ ಆ್ಯಪ್‌‌ಗಳಿಂದ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ, ಎಂದು ಕಂಪನಿಯು ಹೇಳಿದೆ.

Tap to resize

Latest Videos

ಅಸೋಸಿಯೇಟ್ ಪ್ರೋಗ್ರಾಂ ಎಂಬ ಹೊಸ ಸೌಲಭ್ಯವನ್ನು ಜಿಯೋ ಪರಿಚಯಿಸಿದೆ, ಇದರ ಮೂಲಕ ಯಾವುದೇ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಪರಿಚಯಸ್ಥರಿಗೆ ರೀಚಾರ್ಜ್ ಮಾಡಬಹುದು ಮತ್ತು ಹಾಗೆ ಪ್ರತಿ ಬಾರಿ ರೀಚಾರ್ಜ್ ಮಾಡುವಾಗ ಹಣವನ್ನು ಗಳಿಸಬಹುದು. ಒಮ್ಮೆ ರೀಚಾರ್ಜ್ ಮಾಡಿದರೆ 4% ಕಮೀಷನ್ ಸಹ ಪಡೆಯಬಹುದಾಗಿದೆ!

ಇದನ್ನೂ ಓದಿ | ಒನ್‌ಪ್ಲಸ್ ಇಟ್ ಈಕ್ವಲ್ ಟು 8 ಲೆಕ್ಕಾಚಾರ ಶುರು!...

ರೀಚಾರ್ಜ್ ಮಾಡುವ ಡಿಜಿಟಲ್ ವಿಧಾನಗಳ ಬಗ್ಗೆ ತಿಳಿದಿಲ್ಲದ ಮತ್ತು ಈ ಸಮಯದಲ್ಲಿ ಹೊರಗೆ ಹೋಗಲು ಸಾಧ್ಯವಾಗದ ಇತರರಿಗೆ ನೆರವಾಗುವ ನಿಟ್ಟಿನಲ್ಲಿ ರೀಚಾರ್ಜ್ ಮಾಡಲು ಬಳಕೆದಾರರನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ.

ರಿಲಯನ್ಸ್ ಜಿಯೋ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜಿಯೋ ಪೋಸ್ (JioPOS) ಲೈಟ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿಕೊಂಡು ನೆಟ್‌ವರ್ಕ್‌ನಲ್ಲಿರುವ ಯಾವುದೇ ಚಂದಾದಾರರ ಫೋನನ್ನು ರೀಚಾರ್ಜ್ ಮಾಡಬಹುದಾಗಿದೆ.

ಇದನ್ನೂ ಓದಿ | ಕೊರೋನಾ ವೈರಸ್‌ನಿಂದ ಫೇಸ್ ಬುಕ್ ಕಾರ್ಯಕ್ರಮ ರದ್ದು!...

ಈ ಮೊದಲು JioPOS ಬಳಕೆ ಮಾಡಲು ರೂ.1,000 ಸೇರ್ಪಡೆ ಶುಲ್ಕ ನೀಡಬೇಕಾಗಿತ್ತು, ಆದರೆ ಕಂಪನಿಯು ಅದರಿಂದ ವಿನಾಯಿತಿ ಕೊಟ್ಟಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಜಿಯೋ ಗ್ರಾಹಕರು ಮೊದಲ ಬಾರಿಗೆ ಕನಿಷ್ಠ ರೂ.1,000 ಗಳನ್ನು ಲೋಡ್ ಮಾಡಬೇಕಾಗುತ್ತದೆ ಮತ್ತು ನಂತರ ಅವರು ಕನಿಷ್ಠ ರೂ. 200 ರೀಚಾರ್ಜ್  ಮಾಡಿಸಬೇಕಾಗುತ್ತದೆ.

ಈ ಜಿಯೋ ಪೋಸ್ (JioPOS) ಆ್ಯಪನ್ನು ಈಗಾಗಲೇ ಐದು ಲಕ್ಷ ಜನರು ಡೌನ್‌ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಲಾಕ್‌ಡೌನ್ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ ಸುಲಭ ರೀತಿಯಲ್ಲಿ ರಿಚಾರ್ಜ್ ಮಾಡಿಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಲಿದೆ.

click me!