ವೊಡಾಫೋನ್‌- ಐಡಿಯಾ ಬಂದ್‌? ಕೇಂದ್ರಕ್ಕೆ ಬಿರ್ಲಾ ಎಚ್ಚರಿಕೆ!

By Web Desk  |  First Published Dec 7, 2019, 8:04 AM IST

 ವೊಡಾಫೋನ್‌- ಐಡಿಯಾ ಬಂದ್‌?| ಸಂಸ್ಥೆ ಮುಖ್ಯಸ್ಥ ಕುಮಾರ ಮಂಗಳಂ ಬಿರ್ಲಾ ಎಚ್ಚರಿಕೆ| 53000 ಕೋಟಿ ಎಜಿಆರ್‌ ಶುಲ್ಕ ಪಾವತಿ ಹೊರೆ ಹಿನ್ನೆಲೆ


ನವದೆಹಲಿ[ಡಿ.07]: ಆದಾಯ ಹಂಚಿಕೆ ಪಾವತಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಾರದೇ ಹೋದಲ್ಲಿ ವೊಡಾಫೋನ್‌- ಐಡಿಯಾ ಲಿ.ಕಥೆ ಮುಗಿದಂತೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಕಂಪನಿಗಳ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಭಾರತದಲ್ಲಿ ನಾವು ಬಂಡವಾಳ ಹೂಡುವುದು ಅಸಾಧ್ಯ ಎಂಬ ವೊಡಾಪೋನ್‌ ಸಿಇಒ ನಿಕ್‌ ರೀಡ್‌ ಅವರ ಇತ್ತೀಚಿನ ಹೇಳಿಕೆ ಬೆನ್ನಲ್ಲೇ ಬಿರ್ಲಾ ಅವರಿಂದ ಮಾತುಗಳು ಹೊರಬಿದ್ದಿದೆ.

ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ

Latest Videos

ಇಲ್ಲಿ ಕಾರ್ಯಕ್ರಮವೊಂದರಲ್ಲಿ ವೊಡಾಫೋನ್‌- ಐಡಿಯಾದ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಿದ ವೇಳೆ ‘ಸರ್ಕಾರದ ಕಡೆಯಿಂದ ನಮಗೇನೂ ಸಿಗದೇ ಇದ್ದರೆ, ಭಾರತದಲ್ಲಿ ವೊಡಾಫೋನ್‌ ಐಡಿಯಾದ ಕತೆ ಮುಗಿದಂತೆæ ಎಂದು ಹೇಳಿದ್ದಾರೆ. ಅಲ್ಲದೇ ಕಂಪನಿಗೆ ಹೆಚ್ಚಿನ ಬಂಡವಾಳ ಹೂಡಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕೆಟ್ಟದರ ಹಿಂದೆ ಒಳ್ಳೆ ಹಣ ಹೂಡಿಕೆ ಮಾಡುವುದು ತರವಲ್ಲ. ಅದರಿಂದ ನಮ್ಮ ಕತೆ ಮುಗಿದ ಹಾಗೆ. ನಾವು ಕಾರ್ಯಾರಚರಣೆ ಸ್ಥಗಿತ ಮಾಡುತ್ತೇವೆ. ಅಲ್ಲದೇ ಟೆಲಿಕಾಂ ವಲಯ ಉಳಿಯಬೇಕಾಗಿರುವುದರಿಂದ ಸರ್ಕಾರ ನೆರವಿಗೆ ನಿಲ್ಲುತ್ತೇವೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಹೊಂದಿಸಲಾದ ಆದಾಯದಿಂದ ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಕೆಲ ದಿನಗಖಳ ಹಿಂದೆ ಆದೇಶ ನೀಡಿತ್ತು. ಇದರನ್ವಯ ವೊಡಾಫೋನ್‌-ಐಡಿಯಾ ಸರ್ಕಾರಕ್ಕೆ 53,038 ಕೋಟಿ ಪಾವತಿ ಮಾಡಬೇಕಿದೆ.

ಟೆಲಿಕಾಂ ಕಂಪನಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್!

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!