ಭಾರತದಲ್ಲಿ ಜಿಯೋ ಈಗಾಗಲೇ 5ಜಿ ಸಂಪರ್ಕ ನೀಡುತ್ತಿದೆ. ಇದೀಗ ಗ್ರಾಹಕರಿಗೆ 5ಜಿ ಅನುಭವ ಹೆಚ್ಚಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಜಿಯೋ ಹಾಗೂ ಒನ್‌ಪ್ಲಸ್ ಒಪ್ಪಂದ ಭಾರತದಲ್ಲಿ ಹೊಸ ಕ್ರಾಂತಿ ಮಾಡಲಿದೆ.
ಬೆಂಗಳೂರು(ಜ.29): ಭಾರತದಲ್ಲಿ 5ಜಿ ಸಂಪರ್ಕ ದೇಶಾದ್ಯಂತ ಲಭ್ಯವಿದೆ. ಇದೀಗ ಗ್ರಾಹಕರಿಗೆ 5ಜಿ ತಂತ್ರಜ್ಞಾನದ ಅನುಭವ ಹೆಚ್ಚಿಸಲು ರಿಲಯನ್ಸ್ ಜಿಯೋ ಮುಂದಾಗಿದೆ. ಇದಕ್ಕಾಗಿ ಜಿಯೋ ಹಾಗೂ ಒನ್‌ಪ್ಲಸ್ ಒಪ್ಪಂದ ಮಾಡಿಕೊಂಡಿದೆ. ಈ ಸಹಯೋಗವು ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡಲಿದ್ದು, ಜಿಯೋದ ಮೂಲಸೌಕರ್ಯ ಮತ್ತು ಒನ್ ಪ್ಲಸ್ ತಾಂತ್ರಿಕ ನಾವೀನ್ಯತೆಯನ್ನು ಒಟ್ಟುಗೂಡಿಸುತ್ತದೆ. ಒನ್ ಪ್ಲಸ್ ಮತ್ತು ಜಿಯೋ ಟ್ರೂ 5ಜಿ ಬಳಕೆದಾರರಿಗೆ ವಿಭಿನ್ನ ವೈಶಿಷ್ಟ್ಯಗಳನ್ನು ಮತ್ತು ಅದ್ಭುತವಾದ ನೆಟ್‌ವರ್ಕ್ ಅನುಭವವನ್ನು ಒದಗಿಸುವ ಗುರಿ ಹೊಂದಿದೆ.
ಅತ್ಯಾಧುನಿಕ 5ಜಿ ಇನ್ನೋವೇಶನ್ ಲ್ಯಾಬ್ ಸ್ಥಾಪನೆಯನ್ನು ಘೋಷಿಸಿವೆ. ಈ ಸ್ಥಳವು ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಕೇಂದ್ರವಾಗಿ ಜಿಯೋ ಹಾಗೂ ಒನ್‌ಪ್ಲಸ್ ಕಾರ್ಯನಿರ್ವಹಿಸಲಿದೆ. ಒನ್ ಪ್ಲಸ್ ಮತ್ತು ಜಿಯೋ ಟ್ರೂ 5ಜಿ ಬಳಕೆದಾರರು ಅದ್ಭುತವಾದ ಭವಿಷ್ಯದ ಅನುಭವವನ್ನು ಆನಂದಿಸುತ್ತಾರೆ ಎಂದು ಖಚಿತಪಡಿಸುತ್ತದೆ.
3 ಸಾವಿರ ಕೂಪನ್ ಗೆಲ್ಲುವ ಅವಕಾಶ, ಗಣರಾಜ್ಯೋತ್ಸವ ಆಫರ್ ಘೋಷಿಸಿದ ಜಿಯೋ!
“ಯಾವುದು ಸಾಧ್ಯವಿದೆಯೋ ಆ ಗಡಿಗಳನ್ನು ಮೀರುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಮತ್ತು ಜಿಯೋ ಜೊತೆಗಿನ ಈ ಪಾಲುದಾರಿಕೆಯು ಆ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪಾಲುದಾರಿಕೆಯು ಭವಿಷ್ಯದ ಸಂಪರ್ಕದ ಕಡೆಗೆ ದಿಟ್ಟ ಹೆಜ್ಜೆಯನ್ನು ಸೂಚಿಸುತ್ತದೆ. ಅಲ್ಲಿ ನಾವೀನ್ಯತೆಗೆ ಯಾವುದೇ ಮಿತಿಯಿಲ್ಲ. ಒಟ್ಟಾಗಿ, ಜಿಯೋ ಮತ್ತು ಒನ್‌ಪ್ಲಸ್ ದೇಶದಲ್ಲಿ 5ಜಿ ರೂಪು-ರೇಖೆಗಳನ್ನು ಮರುವ್ಯಾಖ್ಯಾನಿಸಲು, ಮುಂದೆ ಇರುವ ಮಿತಿಯಿಲ್ಲದ ಸಾಧ್ಯತೆಗಳ ಬಗ್ಗೆ ಬಳಕೆದಾರರಿಗೆ ನೋಟವನ್ನು ನೀಡುತ್ತವೆ ಎಂದು ಒನ್‌ಪ್ಲಸ್ ವಕ್ತಾರರು ಹೇಳಿದ್ದಾರೆ.
“ಜಿಯೋ ಟ್ರೂ 5ಜಿ ಭಾರತದಲ್ಲಿ ಅತ್ಯುತ್ತಮ 5ಜಿ ನೆಟ್‌ವರ್ಕ್ ಆಗಿದೆ. ಇಂದು ಜಿಯೋ ಟ್ರೂ 5ಜಿ ದೃಢವಾದ ಟ್ರೂ 5ಜಿ ನೆಟ್‌ವರ್ಕ್‌ನೊಂದಿಗೆ ಇಡೀ ದೇಶವನ್ನು ಆವರಿಸಿದೆ. ಭಾರತದಲ್ಲಿ ಸಂಪೂರ್ಣ 5ಜಿ ನಿಯೋಜನೆಯ ಶೇ 85ರಷ್ಟು ಜಿಯೋದಿಂದ ಆಗಿದೆ. ನಮ್ಮ ಬಳಕೆದಾರರಿಗೆ 5ಜಿ ಮಾಂತ್ರಿಕ ಅನುಭವಗಳನ್ನು ತೆರೆದಿಡುವ ಸಮಯ ಬಂದಿದೆ ಮತ್ತು ಒನ್ ಪ್ಲಸ್ ಜೊತೆಗಿನ ಈ ಪಾಲುದಾರಿಕೆಯು ಆ ದಿಕ್ಕಿನಲ್ಲಿ ಮುಖ್ಯ ಹೆಜ್ಜೆಯಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ನಮ್ಮ ಬಳಕೆದಾರರು ಅತ್ಯುತ್ಕೃಷ್ಟ ಮತ್ತು ವರ್ಧಿತ ಗೇಮಿಂಗ್, ಸ್ಟ್ರೀಮಿಂಗ್ ಮತ್ತು 5ಜಿ ಉತ್ತಮ ಬಳಕೆಯ ಅನುಭವವನ್ನು ಪಡೆಯುತ್ತಾರೆ,” ಎಂದು ಜಿಯೋ ವಕ್ತಾರರು ಹೇಳಿದ್ದಾರೆ.
ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್; ಅತೀ ಕಡಿಮೆ ಬೆಲೆಗೆ ಅನ್‌ಲಿಮಿಡೆಟ್ ಕಾಲ್, ದಿನಕ್ಕೆ 3GB ಡೇಟಾ!
ಈ ಉತ್ತಮ ಸಹಯೋಗವು ಹೊಸ ವೈಶಿಷ್ಟ್ಯಗಳು ಮತ್ತು ಅನುಭವಗಳಲ್ಲಿ ಕ್ರಾಂತಿಕಾರವಾದ ಅಭಿವೃದ್ಧಿ ಹಾಗೂ ಪರೀಕ್ಷೆಗಳನ್ನು ಮಾಡಲಿದೆ. ಇದರ ಪರಿಣಾಮವಾಗಿ ಬಳಕೆದಾರರಿಗೆ ವೇಗವಾದ ಅನುಷ್ಠಾನ ಮತ್ತು ವಿತರಣೆ ಆಗುತ್ತದೆ.