ಬರೋಬ್ಬರಿ 50 ವರ್ಷ ಬೇಕಿಲ್ಲ ಚಾರ್ಜ್, ನಾಣ್ಯಗಾತ್ರದ ಬ್ಯಾಟರಿ ಬಿಡುಗಡೆ ಮಾಡಿದ ಚೀನಾ!

By Suvarna News  |  First Published Jan 16, 2024, 4:47 PM IST

ಫೋನ್ ಚಾರ್ಜಿಂಗ್ ಹೆಚ್ಚೆಂದರೆ ಎಷ್ಟು ದಿನ ಬರುತ್ತೆ? ಒಂದು ಅಥವಾ ಎರಡು. ಅತ್ಯುತ್ತಮ ವಾಹನ ಚಾರ್ಜ್ ಮಾಡಿದರೆ ಗರಿಷ್ಠ 400 ರಿಂದ 700 ಕಿ.ಮೀ. ಆದರೆ ಈ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿಸುವ ಸಂಶೋಧನೆಯನ್ನು ಚೀನಾ ಮಾಡಿದೆ. ಚೀನಾ ಇದೀಗ ನಾಣ್ಯಗಾತ್ರದ ಬ್ಯಾಟರಿ ಬಿಡುಗಡೆ ಮಾಡಿದೆ. ಈ ಬ್ಯಾಟರಿ ಬರೋಬ್ಬರಿ 50 ವರ್ಷ ಯಾವುದೇ ಚಾರ್ಜ್ ಮಾಡದೇ ಬಳಕೆ ಮಾಡಬಹುದು. 
 


ಚೀನಾ(ಜ.16) ಡಿಜಿಟಲ್ ಯುಗದಲ್ಲಿ ಬ್ಯಾಟರಿ ಪಾತ್ರ ಅತ್ಯಂತ ಮುಖ್ಯ. ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಎಲೆಕ್ಚ್ರಿಕ್ ವಾಹನ ಸೇರಿದಂತೆ ಎಲ್ಲ ಡಿಜಿ ಸಲಕರಣೆಗೆ ಬ್ಯಾಟರಿ ಪ್ರಧಾನ. ಐಫೋನ್ ಅಥವಾ ಇನ್ಯಾವುದೇ ಉತ್ತಮ ಫೋನ್ ಚಾರ್ಜ್ ಗರಿಷ್ಠ 2 ದಿನ ಬಳಕೆ ಮಾಡಬಹುದು. ಇನ್ನು ಎಲೆಕ್ಟ್ರಿಕ್ ವಾಹನವಾದರೆ ನಿಗದಿತ ಕಿಲೋಮೀಟರ್ ಬಳಿಕ ಬ್ಯಾಟರಿ ಖತಂ. ಬ್ಯಾಟರಿ ಕ್ಷೇತ್ರದ ಅತೀ ದೊಡ್ಡ ಸಮಸ್ಯೆಗೆ ಇದೀಗ ಚೀನಾ ಉತ್ತರ ಕಂಡುಕೊಂಡಿದೆ. ಚೀನಾ ನಾಣ್ಯಗಾತ್ರದ ನ್ಯೂಕ್ಲಿಯರ್ ಬ್ಯಾಟರಿ ಅಭಿವೃದ್ಧಪಡಿಸಿದೆ. ಈ ಬ್ಯಾಟರಿ ಬರೋಬ್ಬರಿ 50 ವರ್ಷ ಕಾಲ ಚಾರ್ಜ್ ಮಾಡದೇ ಬಳಕೆ ಮಾಡಲು ಸಾಧ್ಯವಿದೆ. ಚೀನಾದ ಬೆಟಾವೋಲ್ಟ್ ಸ್ಟಾರ್ಟ್‌ಅಪ್ ಕಂಪನಿ ಈ ಬ್ಯಾಟರಿಯನ್ನು ಬಿಡುಗಡೆ ಮಾಡಿದೆ.

ಬೀಜಿಂಗ್‌ನ ಬೆಟಾವೋಲ್ಟ್ ಸ್ಟಾರ್ಟ್ಅಪ್ ಕಂಪನಿ ಈ ಹೊಚ್ಚ ಹೊಸ ನ್ಯೂಕ್ಲಿಯರ್ ಬ್ಯಾಟರಿ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಈ ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹಾಗೂ ಇತರ ಸ್ಮಾರ್ಟ್ ಡಿಜಿ ಗ್ಯಾಜೆಟ್ಸ್‌ನಲ್ಲಿ ಉಪಯೋಗವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇದು ಅತ್ಯಂತ ಸಣ್ಣ ಗಾತ್ರ. ಹೀಗಾಗಿ ಇನ್ನುಮುಂದೆ ಸ್ಮಾರ್ಟ್‌ಫೋನ್ ಗಾತ್ರದಲ್ಲೂ ಮಹತ್ತರ ಬದಲಾವಣೆಯಾಗಲಿದೆ.

Latest Videos

undefined

10 ನಿಮಿಷ ಕಾರು ಚಾರ್ಜ್ ಮಾಡಿ 400 ಕಿ.ಮೀ ಪ್ರಯಾಣಿಸಿ; ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಸಂಚಲನ!

ನೂತನ ಬ್ಯಾಟರಿಗೆ ಬಿವಿ100 ಎಂದು ಹೆಸರಿಡಲಾಗಿದೆ. ನಿಕೆಲ್‌ಗಳನ್ನು 63 ಸಣ್ಣ ಹಾಳೆಗಳ ಪದರಗಳಾಗಿ ಮಾಡಿ ಜೊತೆಗೆ ಕ್ರಿಸ್ಟಲ್ ಡೈಮೆಂಡ್ ಸೆಮಿಕಂಡಕ್ಟರ್ ಬಳಕೆ ಮಾಡಿ ಈ ನ್ಯೂಕ್ಲಿಯರ್ ಬ್ಯಾಟರಿ ಅಭಿವೃದ್ಧಿಪಡಿಸಲಾಗಿದೆ. ಲಿಥಿಯಂ ಬ್ಯಾಟರಿಗೆ ಹೋಲಿಸಿದರೆ 10 ಪಟ್ಟು ಹೆಚ್ಚು ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಹೊಂದಿದೆ. ಬರೋಬ್ಬರಿ 3,300 ವೆಘಾವ್ಯಾಟ್ ಗಂಟೆಗಳ ಕಾಲ ವಿದ್ಯುತ್ ಶಕ್ತಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಒಂದು ಬಾರಿ ಈ ನ್ಯೂಕ್ಲಿಯರ್ ಬ್ಯಾಚರಿ ಚಾರ್ಜ್ ಮಾಡಿದರೆ ಸರಿಸುಮಾರು 50 ವರ್ಷ ಶಕ್ತಿಯನ್ನುಹಿಡಿದಿಟ್ಟುಕೊಂಡು ಬಳಕೆಗೆ ನೀಡಲಿದೆ. ಹೀಗಾಗಿ ಈ ಬ್ಯಾಟರಿ 50 ವರ್ಷ ಕಾಲ ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲ, ಜೊತೆಗೆ ನಿರ್ವಹಣೆಯೂ ಬೇಕಿಲ್ಲ. ಬೆಟಾವೋಲ್ಟ್ ನ್ಯೂಕ್ಲಿಯರ್ ಬ್ಯಾಟರಿ ಇದೀಗ ವಿಶ್ವದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಕಾರಣ ಸ್ಮಾರ್ಟ್‌ಫೋನ್ ಗ್ಯಾಜೆಟ್ಸ್ ತನ್ನ ಸ್ವರೂಪ, ಬ್ಯಾಟರಿ ಬಾಳಿಕೆ, ಬೆಲೆ ಎಲ್ಲದರಲ್ಲೂ ಮಹತ್ತರ ಬದಲಾವಣೆಯಾಗಲಿದೆ.

ಕರ್ನಾಟಕದಲ್ಲಿ ಅಮೆರಿಕದ ಬ್ಯಾಟರಿ ಕಂಪನಿ ಉತ್ಪಾದನಾ ಘಟಕ ಸ್ಥಾಪನೆ, 8,000 ಕೋಟಿ ರೂ ಹೂಡಿಕೆ!

ಸದ್ಯ ಬಿವಿ100 ನ್ಯೂಕ್ಲಿಯರ್ ಬ್ಯಾಟರಿ ಬಿಡುಗಡೆಯಾಗಿದೆ. ಆದರೆ ಉತ್ಪಾದನೆ ಆರಂಭಗೊಂಡಿಲ್ಲ. ಈಗಷ್ಟೆ ಬೆಟಾವೋಲ್ಟ್ ಅಭಿವೃದ್ಧಿಪಡಿಸಿ ಬ್ಯಾಟರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಶೀಘ್ರದಲ್ಲೇ ಮಾಸ್ ಪ್ರೊಡಕ್ಷನ್ ಆರಂಭಿಸಲಿರು ಕಂಪನಿ, ಫೋನ್‌ ಹಾಗೂ ಇತರ ಕಂಪನಿಗಳ ಬೇಡಿಕೆಗೆ ತಕ್ಕಂತೆ ಬ್ಯಾಟರಿ ಉತ್ಪಾದಿಸಲಿದೆ.

click me!