ಜಿಯೋ ಗ್ರಾಹಕರಿಗೆ 8ನೇ ವಾರ್ಷಿಕೋತ್ಸವದ ಬಂಪರ್, ರಿಚಾರ್ಜ್ ಮೇಲೆ ಕೂಪನ್ ಸೇರಿ 700 ರೂ ಆಫರ್!

By Chethan Kumar  |  First Published Sep 5, 2024, 5:12 PM IST

ಜಿಯೋ ಟೆಲಿಕಾಂ ಸರ್ವೀಸ್‌ಗೆ 8ನೇ ವರ್ಷಾಚರಣೆ ಸಂಭ್ರಮ. ಇದರ ಪ್ರಯುಕ್ತ ಜಿಯೋ ಗ್ರಾಹಕರಿಗೆ ಜಿಯೋ ಬಂಪರ್ ಆಫರ್ ಘೋಷಿಸಿದೆ. ರಿಚಾರ್ಜ್ ವೇಳೆ ಕೂಪನ್ ಸೇರಿದಂತೆ 700 ರೂಪಾಯಿವರೆಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗಿದೆ.
 


ಬೆಂಗಳೂರು(ಸೆ.05)  ರಿಲಯನ್ಸ್ ಜಿಯೋ ಆರಂಭಗೊಂಡು ಇಂದಿಗೆ 8  ವರ್ಷ ಸಂದಿದೆ. ಜಿಯೋ ಇದೀಗ 8ನೇ ವರ್ಷಾಚರಣೆ ಸಂಭ್ರಮದಲ್ಲಿದೆ.  ಈ ಸಂಭ್ರಮದಲ್ಲಿ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ.ರಿಚಾರ್ಜ್ ಮಾಡುವ ಗ್ರಾಹಕರಿಗೆ ರಿಯಾಯಿತಿ, ಕೂಪನ್ ಸೇರಿದೆತೆ ರೂಪಾಯಿ 700 ವರೆಗೆ ಕೆಲ ಸೌಲಭ್ಯಗಳನ್ನು ಜಿಯೋ ಘೋಷಿಸಿದೆ. ಆಯ್ದೆ ರಿಚಾರ್ಜ್ ಮಾಡುವ ಗ್ರಾಹಕರಿಗೆ 175 ರೂಪಾಯಿ ಒಟಿಟಿ ಸಬ್‌ಸ್ಕ್ರಿಪ್ಶನ್, ಜೋಮ್ಯಾಟೋದಲ್ಲಿ 3 ತಿಂಗಳ ಉಚಿತ ಗೋಲ್ಡ್ ಸದಸ್ಯತ್ವ, ಅಜಿಯೋ ವೋಚರ್ ಸೇರಿದಂತೆ ಹಲವು ಉಡುಗೊರೆಗಳನ್ನು ಜಿಯೋ ನೀಡುತ್ತಿದೆ. 

899 ರೂಪಾಯಿ, 999 ರೂಪಾಯಿ ತ್ರೈಮಾಸಿಕ ಪ್ಲಾನ್ ಹಾಗೂ 3599 ರೂಪಾಯಿ ವಾರ್ಷಿಕ ಪ್ಲಾನ್ ರಿಚಾರ್ಜ್ ಮಾಡುವ ಗ್ರಾಕರಿಗೆ 700 ರೂಪಾಯಿ ಬೆನಿಫಿಟ್ ಪಡೆಯಲಿದ್ದಾರೆ.  28 ದಿನದ ವ್ಯಾಲಿಟಿಯೊಂದಿಗೆ 10 ಒಟಿಟಿ ಆ್ಯಪ್ಲಿಕೇಶನ್ ಸಬ್‌ಸ್ಕ್ರಿಪ್ಶನ್ ಜೊತೆಗೆ 10 ಜಿಬಿ ಡೇಟಾ ಪ್ಯಾಕ್ , ರೂಪಾಯಿ 2,999 ರೂಪಾಯಿಕ್ಕಿತಂ ಹೆಚ್ಚಿನ ರಿಚಾರ್ಜ್ ಮಾಡಿದ ಗ್ರಾಹಕರಿಗೆ 500 ರೂಪಾಯಿ ಅಜೀಯೋ ವೋಚರ್ ಸೇರಿದಂತೆ ಹಲವು ಆಫರ್ ಲಭ್ಯವಿದೆ. ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 10ರ ನಡುವೆ ರಿಚಾರ್ಜ್ ಮಾಡುವ ಗ್ರಾಹಕರಿಗೆ ಈ ಆಫರ್ ಲಭ್ಯವಿದೆ. 8ನೇ ವರ್ಷಾಚರಣೆ ಪ್ರಯುಕ್ತ ಜಿಯೋ ಈ ಆಫರ್ ನೀಡಿದೆ. 5 ದಿನಗಳ ವರೆಗೆ ಮಾತ್ರ ಈ ಆಫರ್ ಚಾಲ್ತಿಯಲ್ಲಿರಲಿದೆ. 

Latest Videos

undefined

ಪೊರ್ಟ್ ತಪ್ಪಿಸಲು ಜಿಯೋ ಬಂಪರ್ ಆಫರ್, ಕೇವಲ 75 ರೂ ರಿಚಾರ್ಜ್‌ಗೆ ಉಚಿತ ಕರೆ, ಡೇಟಾ!
 
2026ರ ಸೆಪ್ಟೆಂಬರ್ 5 ರಂದ ಜಿಯೋ ಆರಂಭಗೊಂಡಿತು. ಅತೀ ಕಡಿಮೆ ಬೆಲೆಯಲ್ಲಿ ಡೇಟಾ  ಒದಗಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿತು. ಭಾರತದಲ್ಲಿನ ಡೇಟಾ ಮಾದರಿಯನ್ನೇ ಜಿಯೋ ಬದಲಿಸಿತ್ತು. ಅನ್‌ಲಿಮಿಟೆಡ್ ಕಾಲ್, ಡೇಟಾ, ಎಸ್ಎಂಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಜಿಯೋ ಒದಗಿಸಿತು. ಇದೀಗ 8 ವರ್ಷದಲ್ಲಿ ಜಿಯೋ ಭಾರತದ ಅತೀ ದೊಡ್ಡ ಟೆಲಿಕಾಂ ಸರ್ವೀಸ್ ಪ್ರೊವೈಡರ್ ಆಗಿ ಹೊರಹೊಮ್ಮಿದೆ.

ಕಳೆದ 8 ವರ್ಷದಲ್ಲಿ ಜಿಯೋ ವೈಯರ್‌ಲೆಸ್ ಹಾಗೂ ವೈಯರ್ ಲೈನ್ ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಗುರುತಿಸಿಕೊಂಡಿದೆ. ಕಳೆದ 8 ವರ್ಷದಲ್ಲಿ ಜಿಯೋ ಬರೋಬ್ಬರಿ 13 ಕೋಟಿ ಗ್ರಾಹಕರನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಜೊತೆಗೆ 49 ಕೋಟಿ ಹೆಚ್ಚು ಚಂದಾರರನ್ನು ಜಿಯೋ ಹೊಂದಿದೆ. ದೇಶದಲ್ಲಿ ಅತೀ ವೇಗ ಸ್ಟ್ಯಾಂಡ್ ಅಲೋನ್ 5ಜಿ ನೆಟ್‌ವರ್ಕ್ ತಂದ ಹೆಗ್ಗಳಿಕೆಯೂ ಜಿಯೋಗಿದೆ. ಹಲವು ಹೊಸತನದ ಮೂಲಕ ಜಿಯೋ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.

ವೈಯುಕ್ತಿ, ಕುಟುಂಬ ಸಂಪತ್ತು ಮುಖ್ಯವಲ್ಲ, ನಾನು ಸಾಮಾನ್ಯ ಟ್ರಸ್ಟಿ ಅಷ್ಟೆ:ಅಂಬಾನಿ ಸರಳತೆಗೆ ಮೆಚ್ಚುಗೆ!

ಇತ್ತೀಚೆಗೆ 47ನೇ ಜಿಯೋ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೆಲ ಘೋಷಣೆಗಳನ್ನು ಮಾಡಿದೆ. ಈ ಪೈಕಿ ಗ್ರಾಹಕರಿಗೆ 100 ಜಿಬಿ ತನಕ ಉಚಿತ ಕ್ಲೌಡ್ ಸ್ಟೋರೇಜ್ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದೆ. ಗೂಗಲ್ ಸೇರಿದಂತೆ ಇತರ ಕ್ಲೌಡ್ ಸ್ಟೋರೇಜ್ ಪ್ರೊವೈಡರ್ ಕೆಲವೇ ಕೆಲವು ಜಿಬಿ ಉಚಿತವಾಗಿ ನೀಡಿ ಬಳಿಕ ಶುಲ್ಕ ವಿಧಿಸುತ್ತದೆ. ಆದರೆ ಜಿಯೋ ಬರೋಬ್ಬರಿ 100 ಜಿಬಿ ಕ್ಲೌಡ್ ಸ್ಟೋರೇಜ್ ನೀಡಲು ಮುಂದಾಗಿದೆ. ಇದು ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಜೊತೆಗೆ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಅಭಿವೃದ್ಧಿಪಡಿಸುವುದಾಗಿ ಸಾಮಾನ್ಯ ಸಭೆಯಲ್ಲಿ ಘೋಷಿಸಿತ್ತು.
 

click me!