
ನವದೆಹಲಿ(ಜೂ.09): ಬಿಲ್ ಪೇಮೆಂಟ್, ಮೊಬೈಲ್ ರೀಚಾರ್ಜ್ ಸೇರಿದಂತೆ ಹಣ ಪಾವತಿಗೆ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದ್ದ ಕಂಪನಿಗಳೆಲ್ಲಾ ಇದೀಗ ಸೈಲೆಂಟ್ ಆಗಿ ಬಳಕೆಗಾರರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದೀಗ ಪೇಟಿಎಂ ಮೂಲಕ ಮೊಬೈಲ್ ರಿಚಾರ್ಜ್ ಮಾಡಿದರೆ ಶುಲ್ಕ ನೀಡಬೇಕಾಗಿದೆ. ಇದು ಪೇಟಿಎಂ ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಪೇಟಿಎಂ ಬಳಕೆದಾರರು ಈ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ. ಪೇಟಿಎಂ ಆ್ಯಪ್ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದರೆ 1 ರಿಂದ 6 ರೂಪಾಯಿ ವರೆಗೂ ಶುಲ್ಕ ವಿಧಿಸಲಾಗುತ್ತಿದೆ. ಈ ಕುರಿತು ಬಳಕೆದಾರರು ಟ್ವಿಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಅಧಿಕೃತ ಸೂಚನೆಗಳಿಲ್ಲದ ಶುಲ್ಕ ವಿಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
UPI Payments Safety: ಹಣ ಪಾವತಿಗಾಗಿ UPI ಬಳಸುತ್ತಿರಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ಕ್ರಮ ತಪ್ಪದೇ ಪಾಲಿಸಿ!
ಪೇಟಿಎಂ ಯಾವುದೇ ಕನ್‌ವಿನ್ಸ್ ಹಾಗೂ ಟ್ರಾನ್ಸಾಕ್ಷನ್ ಚಾರ್ಜ್ ವಿಧಿಸುತ್ತಿಲ್ಲ. ಬಳಕೆದಾರರು ಯಾವುದೇ ವಿಧಾನದಲ್ಲಿ ಹಣ ಪಾವತಿ, ಬಿಲ್ ಪೇಮೆಂಟ್, ರಿಚಾರ್ಜ್ ಮಾಡಿದರೆ ಯಾವುದೇ ಶುಲ್ಕವಿರುವುದಿಲ್ಲ. ಇದು ಯುಪಿಐ, ಕಾರ್ಡ್ ಅಥವಾ ವಾಲೆಟ್ ಆಗಿದ್ದರೂ ಶುಲ್ಕ ಇರುವುದಿಲ್ಲ ಎಂದು 2019ರಲ್ಲಿ ಪೇಟಿಎಂ ಟ್ವೀಟ್ ಮಾಡಿತ್ತು.
2019ರಲ್ಲಿ ಶುಲ್ಕ ಇಲ್ಲ ಎಂದಿದ್ದ ಕಂಪನಿ ಇದೀಗ ಏಕಾಏಕಿ ಶುಲ್ಕ ವಿಧಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ರಿಚಾರ್ಜ್ ಮೊತ್ತದ ಆಧಾರದಲ್ಲಿ ಪೇಟಿಎಂ ಸದ್ಯ ಶುಲ್ಕ ವಿಧಿಸುತ್ತಿದೆ. 148 ರೂಪಾಯಿ ರಿಚಾರ್ಜ್ ಮಾಡಲು ಪೇಟಿಎಂನಲ್ಲಿ 149 ರೂಪಾಯಿ ಪಾವತಿಸಬೇಕು. ಇನ್ನು ಕೆಲವು ಬಳಕೆದಾರರು 6 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗಿ ಬಂದಿದೆ.
2019ರಲ್ಲಿ ಎಂದಿಗೂ ಶುಲ್ಕ ವಿಧಿಸುವುದಿಲ್ಲ ಎಂದಿದ್ದ ಕಂಪನಿ ಇದೀಗ ದ್ವಂದ್ವ ನೀತಿ ಅನುಸರಿಸುತ್ತಿರುವುದೇಕೆ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಖಾತೆ ಬೇಡ: ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ತಡೆ
ಮಹತ್ವದ ವಿದ್ಯಮಾನವೊಂದರಲ್ಲಿ ಹೊಸ ಖಾತೆದಾರರನ್ನು ಸೇರಿಸಿಕೊಳ್ಳದಂತೆ ‘ಪೇಟಿಎಂ ಪೇಮೆಂಟ್ ಬ್ಯಾಂಕ್’ಗೆ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ), ಶುಕ್ರವಾರ ಆದೇಶಿಸಿದೆ.‘ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಕೆಲ ಆರ್ಥಿಕ ನಿರ್ವಹಣಾ ವ್ಯವಸ್ಥೆಯಲ್ಲಿ ಕೆಲವು ಅನುಮಾನಗಳು ಮೂಡಿವೆ. ಹೀಗಾಗಿ ಈ ಸೂಚನೆ ನೀಡಲಾಗಿದೆ’ ಎಂದು ಆರ್‌ಬಿಐ ಹೇಳಿದೆ.
Paytm Book Now, Pay Later: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡಿ, ತಿಂಗಳ ನಂತರ ಪಾವತಿಸಿ!
‘ಪೇಟಿಎಂ ಪೇಮೆಂಟ್ ಬ್ಯಾಂಕ್ ಲೆಕ್ಕಪತ್ರಗಳ ಸಮಗ್ರ ಲೆಕ್ಕಪರಿಶೋಧನೆ ನಡೆಯಬೇಕು. ಇದಕ್ಕಾಗಿ ಆದಾಯ ತೆರಿಗೆ ಲೆಕ್ಕಪರಿಶೋಧನಾ ಕಂಪನಿಯನ್ನು ಅದು ನೇಮಿಸಬೇಕು’ ಎಂದೂ ಅದು ಸೂಚಿಸಿದೆ. ‘ಹೊಸ ಖಾತೆದಾರರನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇರಿಸಿಕೊಳ್ಳಬೇಕು ಎಂದರೆ ಅದಕ್ಕೆ ರಿಸವ್‌ರ್ ಬ್ಯಾಂಕ್ ಅನುಮತಿ ಬೇಕು. ಲೆಕ್ಕಪರಿಶೋಧಕರು ನೀಡುವ ವರದಿ ಆಧರಿಸಿ ಆರ್‌ಬಿಐ ಅನುಮತಿ ನೀಡುತ್ತದೆ. ಬ್ಯಾಂಕ್ ವ್ಯವಹಾರದಲ್ಲಿ ಕೆಲವು ಅನುಮಾನಗಳು ಮೂಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದೂ ರಿಸವ್‌ರ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಪೇಟಿಎಂ ಪೇಮೇಂಟ್ ಬ್ಯಾಂಕ್ 2016ರ ಆಗಸ್ಟ್‌ನಲ್ಲಿ ಘೋಷಣೆ ಆಗಿತ್ತು ಹಾಗೂ 2017ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.
ಕಾರು ಡಿಕ್ಕಿ: ಪೇಟಿಎಂ ಸಂಸ್ಥಾಪಕ ಶರ್ಮಾ ಬಂಧನ, ಬಿಡುಗಡೆ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ದೆಹಲಿ ಪೊಲೀಸರು ಬಂಧಿಸಿ, ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಫೆ.22ರಂದು ಶರ್ಮಾ ಅವರ ಕಾರು ಡಿಸಿಪಿ ಬೆನಿಟಾ ವರ್ಮಾ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಬಗ್ಗೆ ಕಾರಿನ ಚಾಲಕ ನೀಡಿದ ದೂರಿನ ಅನ್ವಯ ಅದೇ ದಿನ ಶರ್ಮಾ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.