4G in Pangong Lake ಲಡಾಖ್ ಪ್ಯಾಂಗಾಂಗ್ ಸರೋವರದ ಬಳಿ ಜಿಯೋ 4ಜಿ ಸೇವೆ ಆರಂಭ!

Published : Jun 07, 2022, 09:38 PM ISTUpdated : Jun 07, 2022, 09:46 PM IST
4G in Pangong Lake  ಲಡಾಖ್ ಪ್ಯಾಂಗಾಂಗ್ ಸರೋವರದ ಬಳಿ ಜಿಯೋ 4ಜಿ ಸೇವೆ ಆರಂಭ!

ಸಾರಾಂಶ

ಭಾರತ-ಚೀನಾ ಸಂಘರ್ಷಕ್ಕೆ ಕಾರಣವಾಗಿದ್ದ ಪ್ಯಾಂಗಾಂಗ್ ಸರೋವರ ಸರೋವರದ ಹತ್ತಿರದ ಹಳ್ಳಿಗೆ ಜಿಯೋದಿಂದ 4 ಜಿ ಸೇವೆ ಸಂಸದ ಜಮ್ಯಾಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಉದ್ಘಾಟನೆ  

ಶ್ರೀನಗರ(ಜೂ. 07): ಲಡಾಖ್‌ನಲ್ಲಿನ ಪಾಂಗ್ಯಾಂಗ್ ಸರೋವರ ಕಳೆದೆರಡು ವರ್ಷದಿಂದ ಭಾರಿ ಸುದ್ದಿಯಲ್ಲಿದೆ. ಅತೀ ಸುಂದವರವಾದ ಈ ಸರೋವರ ಭಾರತ ಹಾಗೂ ಚೀನಾ ನಡುವಿನ ಸಂಘರ್ಷಕ್ಕೂ ಕಾರಣವಾಗಿದೆ. ಇದೀಗ ಪ್ಯಾಂಗಾಂಗ್ ಸರೋವರದ ಬಳಿ ಇರುವ ಹಳ್ಳಿಗೆ ರಿಲಾಯನ್ಸ್ ಜಿಯೋ 4ಜಿ ಸೇವೆ ಒದಗಿಸಿದೆ. 

ಪಾಂಗ್ಯಾಂಗ್‌ ಸರೋವರದ ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ 4G ಧ್ವನಿ ಮತ್ತು ಡೇಟಾ ಸೇವೆಯನ್ನು ರಿಲಾಯನ್ಸ್‌ ಜಿಯೋ ಆರಂಭಿಸಿದೆ.  ಈ ಜನಪ್ರಿಯ ಪ್ರವಾಸಿ ತಾಣದ ಸುತ್ತಮುತ್ತ 4G ಮೊಬೈಲ್‌ ಸಂಪರ್ಕವನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ರಿಲಾಯನ್ಸ್‌ ಆಗಿದೆ. ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ ಜಿಯೋ ಮೊಬೈಲ್‌ ಟವರ್ ಅನ್ನು ಲಡಾಖ್‌ನ ಲೋಕಸಭೆ ಸದಸ್ಯ ಜಮ್ಯಾಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಉದ್ಘಾಟನೆ ಮಾಡಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಮತ್ತೆ ಜಿಯೋ ಹವಾ, ಹೊಸ ಪ್ಲಾನ್‌ಗೆ ಗ್ರಾಹಕರು ಫುಲ್‌ ಖುಷ್!

ಈ ಟವರ್ ಉದ್ಘಾಟನೆಯಿಂದಾಗಿ ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಈ ಪ್ರದೇಶದಲ್ಲಿನ ಆರ್ಥಿಕತೆ ವೃದ್ಧಿಯಾಗುತ್ತದೆ ಮತ್ತು ಪ್ರವಾಸಿಗರಿಗೆ ಹಾಗೂ ಸೇನಾಪಡೆಗಳಿಗೆ ಈ ಪ್ರದೇಶದಲ್ಲಿ ಉತ್ತಮ ಸಂಪರ್ಕ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲರಿಗೂ ಡಿಜಿಟಲ್‌ ಸಂಪರ್ಕ ಸಾಧ್ಯವಾಗಿಸುವುದು ಮತ್ತು ಸಮಾಜಗಳನ್ನು ಸಬಲೀಕರಿಸುವ ಧ್ಯೇಯಕ್ಕೆ ಅನುಗುಣವಾಗಿ ಲಡಾಖ್‌ ಪ್ರದೇಶದಲ್ಲಿ ತನ್ನ ನೆಟ್‌ವರ್ಕ್‌ ಅನ್ನು ನಿರಂತರವಾಗಿ ಜಿಯೋ ವೃದ್ಧಿಸುತ್ತಿದೆ.
ಅತ್ಯಂತ ಕಡಿದಾದ ಪ್ರದೇಶ ಮತ್ತು ತೀಕ್ಷ್ಣ ಹವಾಮಾನದ ಮಧ್ಯೆಯೂ ಜಿಯೋ ತಂಡವು ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಕುಗ್ರಾಮಗಳನ್ನೂ ತಲುಪುವ ಪ್ರಯತ್ನ ಮಾಡುತ್ತಿದೆ ಎಂದು ರಿಲಾಯನ್ಸ್‌ ಜಿಯೋ ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಸ್ಥಳದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ ಎಂದ ಸರ್ಕಾರ!

ಮಹದೇಶ್ವರ ಬೆಟ್ಟದಲ್ಲಿ 4ಜಿ ಸೇವೆ ಪರಿಚಯಿಸಿದ ಜಿಯೋ
ದೂರವಾಣಿ ಸಂಪರ್ಕ ನೆಟ್‌ವರ್ಕ್ ಕಂಪೆನಿ ಜಿಯೋ ಚಾಮರಾಜನಗರ ಜಿಲ್ಲೆಯ ಹನೂರಿನ ಮಲೆಮಹದೇಶ್ವರ ಬೆಟ್ಟದಲ್ಲಿ ತನ್ನ 4ಜಿ ಸೇವೆಯನ್ನು ಪ್ರಾರಂಭಿಸಿದೆ.ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ಮೊಬೈಲ್‌ ನೆಟ್‌ವರ್ಕ್ ಸಂಪರ್ಕ ಇಲ್ಲದ್ದರಿಂದ ಸ್ಥಳೀಯರಿಗೆ ಹಾಗೂ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದೂರವಾಣಿ ಸಂವಹನಕ್ಕೆ ತೊಂದರೆಯಾಗಿತ್ತು.

ಜಿಯೋ 4ಜಿ ಡಿಜಿಟಲ್‌ ಸೇವೆಯನ್ನು ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ. ಆ ಪ್ರದೇಶದ ಜನರು ಸಂವಹನ ಸಾಧಿ​ಸಲು, ವಿದ್ಯಾರ್ಥಿಗಳು ಆನ್‌ಲೈನ್‌ ಪಾಠ ಆಲಿಸಲು, ಯುವ ಜನರು ತಮ್ಮ ಉದ್ಯೋಗಾವಕಾಶಗಳನ್ನು ತಾವಿರುವ ಸ್ಥಳದಿಂದಲೇ ನಿರ್ವಹಿಸಲು ಸಹಾಯಕವಾಗಿದೆ.

ನೆಟ್‌ವರ್ಕ್ ಸಮಸ್ಯೆಯಿಂದ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮನೆಗಳಿಗೆ ಕರೆ ಮಾಡಲು, ಆನ್‌ಲೈನ್‌ ಸಂಪರ್ಕ ಸಾ​ಧಿಸಲು ಕಷ್ಟಪಡಬೇಕಾಗಿತ್ತು. ಈಗ ಜಿಯೋ 4ಜಿ ನೆಟ್‌ವರ್ಕ್ನಿಂದಾಗಿ ಸುಲಲಿತ ಸಂವಹನಕ್ಕೆ ನೆರವಾಗಿದೆ. ಸ್ಥಳೀಯ ಕುಟುಂಬಗಳಿಗೂ ಇದರಿಂದ ಬಹಳ ಅನುಕೂಲವಾಗಿದೆ. ಸ್ಥಳೀಯರು ಜಿಯೋಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದಂಥ ದುರ್ಗಮ ಪ್ರದೇಶದಲ್ಲಿ ಸಂಪರ್ಕ ನೀಡುವ ಮೂಲಕ ಜಿಯೋ, ಜಿಲ್ಲೆಯಾದ್ಯಂತ ತನ್ನ ದೃಢವಾದ ನೆಟ್‌ವರ್ಕ್ ಅನ್ನು ಮತ್ತಷ್ಟುಬಲಪಡಿಸಿದೆ. ಮುಂದೆಯೂ ಮಲೆ ಮಹದೇಶ್ವರ ಬೆಟ್ಟದ ಯಾತ್ರಾರ್ಥಿಗಳಿಗೆ ಅಡಚಣೆ ರಹಿತ ಸೇವೆಯನ್ನು ಸದಾ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಜಿಯೋದ ಡಿಸ್ನಿ ಹಾಟ್‌ಸ್ಟಾರ್‌ ಪ್ರೀಮಿಯಂ ಪ್ಲಾನ್‌
1,499ರು. ಹಾಗೂ 4,199 ರು.ಗಳ ಎರಡು ಹೊಸ ಪ್ಲಾನ್‌ ಜಿಯೋ ಘೋಷಿಸಿದೆ. 1499 ರು.ಗಳ ಪ್ಯಾಕ್‌ ಹಾಕಿಸಿದ್ರೆ ಒಂದು ವರ್ಷ ಡಿಸ್ನಿ ಹಾಟ್‌ಸ್ಟಾರ್‌ ಪ್ರೀಮಿಯಂ ಆಯ್ಕೆ ಉಚಿತವಾಗಿ ದೊರೆಯಲಿದೆ. ಜೊತೆಗೆ 84 ದಿನಗಳಿಗೆ ನಿತ್ಯ 2 ಜಿಬಿ ಡಾಟಾ, ಅನಿಯಮಿತ ಕಾಲಿಂಗ್‌, ಪ್ರತೀ ದಿನ 100 ಎಸ್‌ಎಂಎಸ್‌ ಸಿಗುತ್ತದೆ. 4199 ರು.ಗಳ ಪ್ಲಾನ್‌ ಹಾಕಿಸಿಕೊಂಡರೆ 1 ವರ್ಷ ಕಾಲ ಡಿಸ್ನಿ ಹಾಟ್‌ಸ್ಟಾರ್‌ ಪ್ರೀಮಿಯಂ ಜೊತೆಗೆ 3 ಜಿಬಿ ಡಾಟಾದ ಜೊತೆಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?