ಯುವಜನ ಸಬಲೀಕರಣಗೊಳಿಸಲು ಸ್ಯಾಮ್‌ಸಂಗ್ ಮಹತ್ವದ ಹೆಜ್ಜೆ, ಇನೋವೇಶನ್ ಕ್ಯಾಂಪಸ್ ಆರಂಭ!

By Suvarna NewsFirst Published Sep 22, 2022, 4:38 PM IST
Highlights

ಆರ್ಟಿಫಿಶೀಯಲ್ ಇಂಟೆಲೆಜೆನ್ಸ್, ಬಿಗ್ ಡೇಟಾ ಕೋಡಿಂಗ್ ಸೇರಿ ಟೆಕ್ ಡೊಮೇನ್‌ಗಳಲ್ಲಿ ಯುವಕರ ಪ್ರತಿಭೆ ಹೆಚ್ಚಿಸಲು ಸ್ಯಾಮ್‌ಸಂಗ್ ಇನೋವೇಶನ್ ಕ್ಯಾಂಪಸ್ ಆರಂಭಿಸಿದೆ.  ಕೇಂದ್ರ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಸ್ಯಾಮ್‌ಸಂಗ್ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿ(ಸೆ.22): ಯುವಜನ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಸ್ಯಾಮ್‌ಸಂಗ್ ಇಂಡಿಯಾ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.  ಸ್ಯಾಮ್‌ಸಂಗ್ ಇಂಡಿಯಾ ಭಾರತದಲ್ಲಿ ಆರ್ಟಿಫಿಶೀಯಲ್ ಇಂಟೆಲೆಜೆನ್ಸ್, ಬಿಗ್ ಡೇಟಾ ಕೋಡಿಂಗ್, ಪ್ರೋಗಾಮಿಂಗ್ ಸೇರಿ ಟೆಕ್ ಡೋಮೇನ್‌ಗಳಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಹಾಗೂ ಯುವ ಸಮೂಹದ ಪ್ರತಿಭಾ ಕೌಶಲ್ಯಕ್ಕೆ ವೇದಿಕೆ ಒದಗಿಸಲು ಸ್ಯಾಮ್‌ಸಂಗ್ ಇನೋವೇಷನ್ ಕ್ಯಾಂಪಸ್ ಆರಂಭಿಸಿದೆ. ಸ್ಯಾಮ್‌ಸಂಗ್ ಸಿಎಸ್ಆರ್ ಪ್ರೋಗ್ರಾಂ ಅಡಿಯಲ್ಲಿ ಈ ಕ್ಯಾಂಪಸ್ ಆರಂಭಿಸಿದೆ. ಕೇಂದ್ರ ಸರ್ಕಾರದ ಜೊತೆಗಿನ ಒಪ್ಪಂದದ ಪ್ರಕಾರ ಕಡಿಮೆ ಸೌಲಭ್ಯ ಹೊಂದಿರುವ 3,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಒಪ್ಪಂದಕ್ಕೆ ಸ್ಯಾಮ್‌ಸಂಗ್ ಸಹಿ ಹಾಕಿದೆ. ಒಪ್ಪಂದ ತಿಳುವಳಿಕಾ ಪತ್ರವನ್ನು ಕೇಂದ್ರ ರಾಜ್ಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಸಚಿವ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ಪ್ರತಿಭೆಗಳಿಗೆ(Yout SKills) ಕೊರತೆ ಇಲ್ಲ. ಭಾರತೀಯ ಪ್ರತಿಭೆಗಳಿಗೆ ವಿಶ್ವದ ಎಲ್ಲಾ ಕಡೆ ಭಾರಿ ಬೇಡಿಕೆ ಇದೆ. ಈ ಪ್ರತಿಭೆಗಳ ಕೌಶಲ್ಯವನ್ನು ವೃದ್ಧಿಸಿ ಅವರಿಗೆ ಇಲ್ಲೇ ವೇದಿಕೆ ಒದಗಿಸುವ ಕೆಲಸಗಳು ನಡೆಯುತ್ತಿದೆ. ಕೌಶಲ್ಯ ಯುವಕರನ್ನು ಉದ್ಯೋಗ(Employemnet) ಕೌಶಲ್ಯಗಳೊಂದಿಗೆ ತಯಾರಿಗೊಳಿಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್(Rajeev Chandrasekhar) ಹೇಳಿದ್ದಾರೆ.  ಉದ್ಯೋಗ ಆಧಾರಿತ ಕೌಶಲ್ಯ ವಿದ್ಯಾರ್ಥಿಗಳು(Students), ಯುವ ಸಮೂಹಕ್ಕೆ ಅತ್ಯಂತ ಮುಖ್ಯವಾಗಿದೆ. ದೇಶದ ಯಾವುದೇ ಮೂಲೆಯಿಂದ ಬಂದಿರುವ ವಿದ್ಯಾರ್ಥಿ, ಯುವ ಸಮೂಹ ಸೇರಿದತೆ ಪ್ರತಿಯೊಬ್ಬ ಭಾರತೀಯರಿಗೂ ಡಿಜಿಟಲ್ ಅವಕಾಶ(Digital opportunity) ಸಮಾನವಾಗಿ ಲಭ್ಯವಾಗಬೇಕು. 2 ಮತ್ತು 3ನೇ ಶ್ರೇಣಿ ನಗರಗಳಲ್ಲಿನ ವಿಶ್ವವಿದ್ಯಾಲಯ, ಕಲಿಕಾ ಸಂಸ್ಥೆಗಳು ಈ ಪ್ರಯತ್ನಗಳನ್ನು ಮಾಡಬೇಕು ಎಂಬುದು ಪ್ರಧಾನಿ ಮೋದಿ ದೂರದೃಷ್ಟಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಯುವ ಭಾರತೀಯ ಸಮೂಹವನ್ನು ಸಬಲೀಕರಣಗೊಳಿಸಲು  ESSCI ಜೊತೆ ಸ್ಯಾಮ್‌ಸಂಗ್(Samsung India) ಒಪ್ಪಂದವನ್ನು ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ. ಇದರಿಂದ ಭಾರತೀಯರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ. ದೇಶ ಹಾಗೂ ವಿದೇಶಗಳಲ್ಲಿ ಉದ್ಯೋಗ ಆಧಾರಿತ ಕೌಶಲ್ಯಕ್ಕೆ ಬಾರಿ ಬೇಡಿಕೆ ಇದೆ. ಈ ಅವಕಾಶಗಳು ಭಾರತೀಯರಿಗೆ ಹೆಚ್ಚಾಗಿ ಲಭ್ಯವಾಗಲಿದೆ. ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಅವಕಾಶ ಸಿಗಲು, ಸ್ಯಾಮ್‌ಸಂಗ್ 2 ಮತ್ತು 3ನೇ ಶ್ರೇಣಿ ನಗರಗಳಲ್ಲಿ ಸ್ಯಾಮ್‌ಸಂಗ್ ಈ ರೀತಿಯ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕಳೆದ 26 ವರ್ಷಗಳಿಂದ ಸ್ಯಾಮ್‌ಸಂಗ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಭಾರತ ಹಾಗೂ ಕಂಪನಿ ಬೆಳವಣಿಗೆಯಲ್ಲಿ ಮಹತ್ವದ ಪಾಲುದಾರರಾಗಿದ್ದೇವೆ. ನಾವು ಸರ್ಕಾರದ ಯೋಜನೆಗಳಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಇದೀಗ ಸ್ಯಾಮ್‌ಸಂಗ್ ಇನೋವೇಷನ್ ಕ್ಯಾಂಪಸ್ ಮೂಲಕ ಯುವ ಸಮೂಹವನ್ನು ಸಬಲೀಕರಣಗೊಳಿಸಲು ಬದ್ಧರಾಗಿದ್ದೇವೆ. ಭವಿಷ್ಯದ ಟೆಕ್ ಡೋಮೇನ್‌ಗಳಲ್ಲಿ ಸೃಷ್ಟಿಯಾಗುವ ವಿಫುಲ ಅವಕಾಶಗಳನ್ನು ಭಾರತೀಯ ಯುವ ಸಮೂಹ ಬಳಸಿಕೊಳ್ಳಲು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾ ಅಧ್ಯಕ್ಷ ಕೆನ್ ಕಾಂಗ್ ಹೇಳಿದ್ದಾರೆ. 

click me!