ಅಶ್ಲೀಲ ಚಿತ್ರ ವೀಕ್ಷಿಸುವ ಮೊಬೈಲ್ ಬಳಕೆದಾರರೇ ಎಚ್ಚರ, ಮೈಮೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ!

By Suvarna News  |  First Published Sep 19, 2022, 8:20 PM IST

ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರು ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಇದು ಬಹದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ನವದೆಹಲಿ(ಸೆ.19):  ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ, ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗೆ ತೆರಳಿ ಚಿತ್ರಗಳ ವೀಕ್ಷಿಸುವುದು ಬಹುದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಯ ಮಹತ್ವದ ವರದಿ ನೀಡಿದೆ. ವಿದೇಶಗಲ್ಲಿ ಹೆಚ್ಚಾಗಿದ್ದ ಟ್ರೋಜನ್ ಫೋನ್ ವೈರಸ್ ಇದೀಗ ಭಾರತದಲ್ಲಿ ಸದ್ದು ಮಾಡತೊಡಗಿದೆ. ಯಾರೆಲ್ಲಾ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಾರೋ, ಅವರ ಮೊಬೈಲ್ ಫೋನ್‌ಗೆ ಸದ್ದಿಲ್ಲದೆ  SOVA ಆ್ಯಂಡ್ರಾಯ್ಡ್ ಟ್ರೋಜನ್ ಫೋನ್ ವೈರಸ್ ಸೇರಿಕೊಳ್ಳುತ್ತಿದೆ. ಬಳಿಕ ಈ ವೈರಸ್ ಅಮೇಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರ ಐಕಾನ್‌ಗಳ ಹೆಸರಿನಲ್ಲಿ ಮೊಬೈಲ್‌ನಲ್ಲಿ ಭದ್ರವಾಗಲಿದೆ. ಇದು ಅಮೇಜಾನ್, ಇದು ಫ್ಲಿಪ್‌ಕಾರ್ಟ್, ಅಥವಾ ಇನ್ಯಾವುದೇ ಜನಪ್ರಿಯ ಆ್ಯಪ್‌ಗಳ ರೂಪದಲ್ಲಿ ಹೈಡ್ ಆಗಲಿದೆ. ಡಿಲೀಟ್ ಮಾಡಲು ಹೊರಟರೆ ಅದು ಸಾಧ್ಯವಾಗುವುದಿಲ್ಲ. ಕಾರಣ ಒಮ್ಮೆ ಮೊಬೈಲ್ ಒಳಗೆ ಸೇರಿಕೊಂಡರೆ ಈ ವೈರಸ್‌ನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕು ಈ ವೈರಸ್ ಮೊಬೈಲ್ ಸೇರಿಕೊಂಡರೆ ಸಮಸ್ಯೆ ಏನು? ಅಂತೀರಾ. ಈ  SOVA ಆ್ಯಂಡ್ರಾಯ್ಡ್ ಟ್ರೋಜನ್ ಫೋನ್ ವೈರಸ್ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲಿದೆ. ಈ ಮೂಲಕ ಖಾತೆಯಲ್ಲಿರುವ ಎಲ್ಲಾ ಹಣವನ್ನು, ಕ್ರಿಡಿಟ್ ವ್ಯವಸ್ಥೆಗಳಿದ್ದರೆ ಗರಿಷ್ಠ ಮಿತಿ ಹಣವೂ ಖಾಲಿಯಾಗಲಿದೆ. ಈ ವೈರಸ್ ಸುಲಭವಾಗಿ ಅಶ್ಲೀಲ ಚಿತ್ರ ವೀಕ್ಷಣೆಯಿಂದಲೇ ಮೊಬೈಲ್ ಫೋನ್ ಸೇರಿಕೊಳ್ಳಲಿದೆ.

ಅಶ್ಲೀಲ ಚಿತ್ರ(Porn Videos) ವೀಕ್ಷಿಸುವ ಮೊಬೈಲ್ ಬಳಕೆದಾರರ ಫೋನ್ ಸೇರಿಕೊಳ್ಳುವ ಟ್ರೋಜನ್ ಫೋನ್ ವೈರಸ್, ನಿಮ್ಮ ಫೋನ್‌ನಲ್ಲಿ ಇತರ ಜನಪ್ರಿಯ ಆ್ಯಪ್ ಐಕಾನ್ ಅಥವಾ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಆದರ ಇದರ ನಿಜವಾದ ಕಾರ್ಯ ಬೇರೇಯೇ ಆಗಿರುತ್ತದೆ. ಅಶ್ಲೀಲ ವೆಬ್‌ಸೈಟ್ ಅಥವಾ ಅಶ್ಲೀಲ ಚಿತ್ರಗಳ ಲಿಂಕ್ ಒತ್ತಿದರೆ ಸಾಕು, ಈ ವೈರಸ್(SOVA Malware phone virus) ಫೋನ್ ಸೇರಿಕೊಳ್ಳಲಿದೆ. ಬಳಿಕ ಎಲ್ಲಾ ಮಾಹಿತಿಗಳನ್ನು ಹ್ಯಾಕರ್ ಸುಲಭವಾಗಿ  ಹ್ಯಾಕ್(hackers) ಮಾಡಿ ಬ್ಯಾಂಕ್ ಖಾತೆಗೆ(Bank Account) ಕನ್ನ ಹಾಕುತ್ತಾರೆ.

Tap to resize

Latest Videos

undefined

Malware App ಪ್ಲೇಸ್ಟೋರ್‌ನ 35 ಆ್ಯಪ್ ಅಪಾಯಕಾರಿ, ನಿಮ್ಮ ಫೋನ್‌ನಲ್ಲಿದ್ದರೆ ತಕ್ಷಣ ಡಲೀಟ್ ಮಾಡಿ!

ಅನಗತ್ಯ ಲಿಂಕ್ ಒತ್ತುವುದು, ಅನಧಿಕೃತ ವೆಬ್‌ಸೈಟ್‌ಗಳ ಪ್ರವೇಶ, ಅಶ್ಲೀಲ ಚಿತ್ರಗಳ ವೀಕ್ಷಣೆ ಸಾಹಸ ಮಾಡಿದರೆ ನೇರವಾಗ ವೈರಸ್ ಫೋನ್ ಪ್ರವೇಶಿಸಲಿದೆ. ಹೀಗಾಗಿ ನಿಮ್ಮ ಮೊಬೈಲ್ ಫೋನ್‌ನಲ್ಲಿ(Mobile Phone) ನೀವು ಡೌನ್ಲೋಡ್ ಮಾಡದೇ ಇರುವ ಯಾವುದೇ ಆಪ್ಲಿಕೇಶನ್ ಇದ್ದರೆ ತಕ್ಷಣವೇ ಫೋನ್‌ನಿಂದ ಡಿಲೀಟ್(Delete) ಮಾಡುವುದು ಅಥವಾ ಫಾರ್ಮ್ಯಾಟ್ ಮಾಡುವುದು ಉತ್ತಮ.  ಫೋನ್‌ನಲ್ಲಿ ಜಾಹೀರತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದರೂ ಅಪಾಯದ ಸೂಚನೆಯಾಗಿದೆ. ಕಾರಣ ಅನಗತ್ಯ ಲಿಂಕ್ ಒತ್ತಿರುವ ಕಾರಣ ಹಲವು ಆ್ಯಪ್‌ಗಳು(Apps), ವೈರಸ್‌ಗಳು ನಿಮ್ಮ ಫೋನ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು.

ಈ ವೈರಸ್ ರಷ್ಯಾದಲ್ಲಿ ಹುಟ್ಟಿಕೊಂಡು ಅಮೆರಿಕಾ, ಯುಕೆ, ಸ್ಪೇನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. 2022ರ ಜುಲೈ ತಿಂಗಳಿನಿಂದ ಈ ವೈರಸ್ ಹಾವಳಿ ಹೆಚ್ಚಾಗಿದೆ. ಸುಮಾರು 200ಕ್ಕೂ ಹೆಚ್ಚು ಮೊಬೈಲ್ ಆ್ಯಪ್ಲಿಕೇಶನ್ ಹೆಸರಿನಲ್ಲಿ ಇದು ನಿಮ್ಮ ಮೊಬೈಲ್‌ನಲ್ಲಿ ಭದ್ರವಾಗಿ ನೆಲೆಯೂರಿರುವ ಸಾಧ್ಯತೆ ಇದೆ. ಹೀಗಾಗಿ ವ್ಯಾಟ್ಸ್ಆ್ಯಪ್ ಮೂಲಕ ಹಾಗೂ ಮೆಸೇಜ್ ಮೂಲಕ ಬರುವ ಸಂದೇಶಗಳ ಲಿಂಕ್ ಕ್ಲಿಕ್ ಮಾಡುವ ಮುನ್ನ ಪರಿಶೀಲನೆ ಅಗತ್ಯ. ಅನಧಿಕೃತ ಸಂದೇಶಗಳಲ್ಲಿರುವ ಲಿಂಕ್ ಕ್ಲಿಕ್ ಮಾಡಬೇಡಿ. ನಿಮ್ಮ ಹೆಸರಿನಲ್ಲಿ ಅನಧಿಕೃತ ಸಂದೇಶಗಳು ಬರವು ಸಾಧ್ಯತೆ ಇದೆ. ಜೊತೆಗೆ ಲಿಂಕ್ ಕ್ಲಿಕ್ ಮಾಡಲು ಆಯ್ಕೆಯನ್ನು ಕೊಟ್ಟಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅನಧಿಕೃತ ಸಂದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಡಿ.

BRATA Malware: ನಿಮ್ಮ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೇ ಈ ಮಾಲ್ವೇರ್, ಹುಷಾರ್!
 

click me!