Govt Schemes App ಕರ್ನಾಟಕ ಸರ್ಕಾರದ ಯೋಜನೆ ಮಾಹಿತಿ ಒಂದೇ ಕ್ಲಿಕ್‌ನಲ್ಲಿ EasyGovನಲ್ಲಿ ಲಭ್ಯ!

Published : Jan 03, 2022, 09:58 PM IST
Govt Schemes App ಕರ್ನಾಟಕ ಸರ್ಕಾರದ ಯೋಜನೆ ಮಾಹಿತಿ ಒಂದೇ ಕ್ಲಿಕ್‌ನಲ್ಲಿ EasyGovನಲ್ಲಿ ಲಭ್ಯ!

ಸಾರಾಂಶ

ಸರ್ಕಾರದ 300ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳ ಮಾಹಿತಿ ಇದರಲ್ಲಿ ಲಭ್ಯ MyJio ಅಪ್ಲಿಕೇಶನ್‌ನಲ್ಲಿ ಇದು ಲಭ್ಯವಿದೆ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಇದನ್ನು ಬಳಸುತ್ತಿದ್ದಾರೆ  

ನವದೆಹಲಿ(ಜ.03): ಕರ್ನಾಟಕ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ(social schemes) ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ. MyJio ಆ್ಯಪ್ ನಲ್ಲಿ ಲಭ್ಯವಿರುವ EasyGov ನ ಮಿನಿ ಅಪ್ಲಿಕೇಶನ್ 'Suvidha' ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಜನ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಶಕ್ತರಾಗಿದ್ದಾರೆ. ಕರ್ನಾಟಕ ಸರ್ಕಾರದ(Karnataka Government) 300 ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳು ಮತ್ತು ನೂತನ ಉದ್ಯೋಗಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯಲಿದೆ. ಈ ಅಪ್ಲಿಕೇಶನ್ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇಸ್ಟೋರ್(Google Playstore) ನಿಂದ ನೇರವಾಗಿಯೂ ಡೌನ್ ಲೋಡ್ ಮಾಡಿಕೊಳ್ಳಬಹುದು.

ನಿಯಮಾಧಾರಿತ ಎಂಜಿನ್ ಅನ್ನು 'ಸುವಿಧಾ'ದಲ್ಲಿ ಅಳವಡಿಸಲಾಗಿದೆ, ಇದು ಅರ್ಹ ನಾಗರಿಕರನ್ನು ಹುಡುಕುವುದಲ್ಲದೆ, ಕ್ಲಪ್ತ ಸಮಯದೊಳಗೆ ನಿಜವಾದ ಫಲಾನುಭವಿಯನ್ನು ಗುರುತಿಸಿ ಖಚಿತಪಡಿಸುತ್ತದೆ. ಬಳಕೆದಾರರ ಡೇಟಾವನ್ನು ದೃಢೀಕರಿಸಲು ಅಥವಾ ಪರಿಶೀಲಿಸಲು 'ಸುವಿಧಾ' ಅಪ್ಲಿಕೇಶನ್ ಅನ್ನು ಸರ್ಕಾರ ಕುಟುಂಬ ಮಾಹಿತಿಗಳಿರುವ ಡೇಟಾಬೇಸ್(Database) 'ಕುಟುಂಬ್' ನೊಂದಿಗೆ ಸಂಯೋಜಿಸಲಾಗಿದೆ. ಇದಲ್ಲದೆ, ಅಪ್ಲಿಕೇಶನ್ KYC ಗಾಗಿ ಆಧಾರ್, ದಾಖಲೆ ಪರಿಶೀಲನೆಗಾಗಿ ಡಿಜಿಲಾಕರ್, ಸರ್ಕಾರದ ಯೋಜನೆಗಳ ಪಾವತಿಗಾಗಿ DBT (ನೇರ ಬ್ಯಾಂಕ್ ವರ್ಗಾವಣೆ) ಜೊತೆಗೆ ಕಾರ್ಯನಿರ್ವಹಿಸುತ್ತದೆ.

Make in India: ವಾರ್ಷಿಕ $50 ಬಿಲಿಯನ್ ಮೌಲ್ಯದ ಆ್ಯಪಲ್‌ ಸರಕು ಉತ್ಪಾದನೆಗೆ ಕೇಂದ್ರ ಪ್ರಸ್ತಾಪ!‌

ಸರ್ಕಾರಿ ಅಧಿಕಾರಿಗಳಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿ ಅನಾಲಿಟಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಒದಗಿಸಲಾಗಿದೆ. ಇದರಿಂದ ಯೋಜನೆಗಳಿಗೆ ಬಂದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವುದು ಸುಲಭವಾಗುತ್ತದೆ. ನಾಗರಿಕರು ಸಲ್ಲಿಸಿದ ಅರ್ಜಿಗಳ ಇ-ಸಹಿ ಮತ್ತು ಸರ್ಕಾರಿ ಬಳಕೆದಾರರಿಂದ ಅವರ ಅನುಮೋದನೆಯನ್ನು ಸಹ ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.

ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಪ್ರತಿ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರಿಗೆ ಕನಿಷ್ಠ ಆರೋಗ್ಯ, ವಸತಿ, ಶಿಕ್ಷಣ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರಬೇಕು. ಇದಕ್ಕಾಗಿ ಅಗತ್ಯವಿರುವವರನ್ನು ಗುರುತಿಸಿ ಪ್ರಯೋಜನ ಒದಗಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು, ಪ್ರಯೋಜನಗಳನ್ನು ಸೂಕ್ತವಾಗಿ ಸುಲಭವಾಗಿ ಸಿಗುವಂತೆ ಮಾಡಲು ಆ್ಯಪ್ ನೆರವಾಗಲಿದೆ ಎಂದು EasyGov ಸಂಸ್ಥಾಪಕ ಮತ್ತು ಸಿಇಒ ಅಮಿತ್ ಶುಕ್ಲಾ ಹೇಳಿದ್ದಾರೆ.

Intel Unit In India: ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಪೂರಕ ಸ್ಪಂದನೆ

ಸುರಜ್ಯಾ ಸರ್ವೀಸ್ ಲಿಮಿಟೆಡ್, ಕರ್ನಾಟಕ ಸರ್ಕಾರಕ್ಕಾಗಿ EasyGov ಡಿಜಿಟಲ್ ಸೊಲ್ಯೂಷನ್(digital solutions) ಅನ್ನು ವಿನ್ಯಾಸಗೊಳಿಸಿದೆ. ಇದು ಈಗ ಮೊದಲಿಗಿಂತ ಹೆಚ್ಚು ಸುಧಾರಿತ ಮತ್ತು ಬಳಸಲು ಸುಲಭವಾಗುವಂತಿದೆ. EasyGov ಆಡಳಿತವನ್ನು ಸುಧಾರಿಸಲು ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ವಿನ್ಯಾಸ ಮತ್ತು ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರವನ್ನು ಹೊರತುಪಡಿಸಿ, EasyGov ಹಲವಾರು ಇತರ ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿದ್ದು, ಅವುಗಳೊಂದಿದಗೆ ಕೆಲಸ ಮಾಡಿದ ಅನುಭವವನ್ನೂ ಹೊಂದಿದೆ.

ಡೇಟಾ ಸುರಕ್ಷತೆಗಾಗಿ, EasyGov ವಿಶ್ವದ ಅತಿದೊಡ್ಡ ಮತ್ತು ವಿಶೇಷ ಕಂಪನಿ SAP ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ. ಅಲ್ಲದೆ, ಅಗತ್ಯವಿರುವವರನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (artificial intelligence) ಅನ್ನು ಬಳಸಲಾಗಿದೆ. 

ಜಾಗೃತ್ ತ್ರಿಪುರ' ಎಂಬುದು EasyGov ನ ಮತ್ತೊಂದು ವೇದಿಕೆಯಾಗಿದೆ. ಈ ವೇದಿಕೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ತ್ರಿಪುರಾದಲ್ಲಿ ಪ್ರಾರಂಭಿಸಲಾಯಿತು. ಇದು ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಅರ್ಹ ನಾಗರಿಕರ ಹುಡುಕಾಟದಲ್ಲಿ ಸಹಾಯ ಮಾಡುತ್ತಿದೆ. ಭಾರತದ ಕಲ್ಯಾಣ ಕಾರ್ಯಕ್ರಮಗಳಲ್ಲಿ ವ್ಯಯಿಸಲಾದ ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಬಳಕೆಯನ್ನು ಖಾತ್ರಿಪಡಿಸುವುದರ ಜೊತೆಗೆ ಸ್ವಾವಲಂಬಿ ಭಾರತಕ್ಕೆ 'ಜಾಗೃತ್ ತ್ರಿಪುರಾ' ದಂತಹ ಪರಿಹಾರಗಳು ದೃಢವಾದ ಹೆಜ್ಜೆಯಾಗಲಿವೆ ಎಂದು ನಂಬಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?