1 ತಿಂಗಳಲ್ಲಿ ಭಾರತದ 65 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗೆ ನಿರ್ಬಂಧ, ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ!

By Suvarna NewsFirst Published Jul 3, 2023, 10:44 AM IST
Highlights

ಭಾರತದ ಐಟಿ ನಿಯಮ ಉಲ್ಲಂಘಿಸುವ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಕಾದಿದೆ ಅಪಾಯ. ಮೇ ತಿಂಗಳಲ್ಲಿ ನಿಯಮ ಉಲ್ಲಂಘಿಸಿದ 65 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. 

ನವದೆಹಲಿ(ಜು.03) ಭಾರತದಲ್ಲಿ ಪ್ರತಿ ದಿನ ವ್ಯಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬರೋಬ್ಬರಿ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆದರೆ ಭಾರತದ ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿದೆ. ಹೀಗೆ ಐಟಿ ನಿಯಮ ಉಲ್ಲಂಘಿಸಿದ 65 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗಳನ್ನು ಮೇ ತಿಂಗಳಲ್ಲಿ ವ್ಯಾಟ್ಸ್ಆ್ಯಪ್ ನಿಷ್ಕ್ರೀಯಗೊಳಿಸಿದೆ. ಈ ಮೂಲಕ ಏಪ್ರಿಲ್‌ನಿಂದ ಮೇ ಎರಡು ತಿಂಗಳ ಅವಧಿಯಲ್ಲಿ ಒಟ್ಟು 74 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.

ಮೇ ತಿಂಗಳಲ್ಲಿ 3,912 ಖಾತೆಗಳನ್ನು ಬ್ಯಾನ್ ಮಾಡಬೇಕೆಂಬ ಮನವಿ ಬಂದಿತ್ತು. ಈ ಕುರಿತು ತನಿಖೆ ನಡೆಸಿರುವ ವ್ಯಾಟ್ಸ್ಆ್ಯಪ್ 297 ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ವ್ಯಾಟ್ಸ್ಆ್ಯಪ್ GAC ಸಮಿತಿ ನೀಡಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಮೇ 1 ರಿಂದ 31 ರ ವರೆಗೆ 31,65,08,000  ಖಾತೆಗಳನ್ನು ನಿಷೇಧಿಸಲಾಗಿದೆ. GAC ಸಮಿತಿ ವರಿದಿಗೂ ಮೊದಲೇ 24,20,700 ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿತ್ತು. 

Fact Check ಸರ್ಕಾರದಿಂದ ವ್ಯಾಟ್ಸ್ಆ್ಯಪ್ ಮೆಸೇಜ್, ವಿಡಿಯೋ ಆಡಿಯೋ ಕಾಲ್ ರೆಕಾರ್ಡ್ ಸುದ್ದಿ ಸುಳ್ಳು!

ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2021ರ ಐಟಿ ನಿಯದ ಪ್ರಕಾರ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋಮ ಸಂಘರ್ಷ ಸೃಷ್ಟಿಸುವ, ನಿಂದನೆ, ಅವಹೇಳನ ಸೇರಿದಂತೆ ನಿಯಮ ಬಾಹಿರ ಚಟುವಟಿಕೆಗಳ ಖಾತೆಗಳನ್ನು ವ್ಯಾಟ್ಸ್ಆ್ಯಪ್ ನಿಷ್ಕ್ರೀಯಗೊಳಿಸಲಿದೆ. 

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸಿದೆ. ಬಳಕೆಗಾರರ ಬೇಡಿಕೆ ಹಾಗೂ ಅನೂಕೂಲಕ್ಕೆ ತಕ್ಕಂತೆ ಅತ್ಯಾಧುನಿಕ ಫೀಚರ್ಸ್ ಸೇರಿಸಲಾಗಿದೆ. ಈ ಪೈಕಿ ಕರೆ ಸೈಲೆಂಟ್ ಮಾಡುವ ಫೀಚರ್ ಕೂಡ ಸೇರಿದೆ. ಅಪರಿಚಿತ ಮತ್ತು ಸ್ಪಾಮ್ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್‌ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್‌ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್‌ ಮಾಡುವ ಹೊಸ ಫೀಚರನ್ನು ವಾಟ್ಸಾಪ್‌ ಬಿಡುಗಡೆ ಮಾಡಿತ್ತು. 

ಇದಕ್ಕಾಗಿ ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿ ಸೈಲೆಂಟ್‌ ಅನ್‌ನೋನ್‌ ನಂಬ​ರ್‍ಸ್ ಆಯ್ಕೆಯನ್ನು ಎನೇಬಲ್‌ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್‌ ಸೈಲೆಂಟ್‌ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್‌ ಬಗ್‌ರ್‍, ಈಗ ವಾಟ್ಸಾಪ್‌ ಅನ್‌ನೋನ್‌ ಕಾಲ್‌ಗಳನ್ನು ಸೈಲೆಂಟ್‌ ಮಾಡಲಿದೆ. ಆ್ಯಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ವಾಟ್ಸಾಪ್‌ನಲ್ಲಿ ಸ್ಪಾ್ಯಮ್‌ ಕರೆಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಫೀಚರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ವಾಟ್ಸಾಪ್‌ ಬಳಕೆ ಮಾಡಿಕೊಂಡಿದ್ದು,. ಇದು ಸ್ಪಾ್ಯಮ್‌ ಕರೆಗಳ ಪ್ರಮಾಣವನ್ನು ಶೇ.50ರಷ್ಟುಕಡಿಮೆ ಮಾಡಲಿದೆ ಎಂದು ಕಂಪನಿ ಹೇಳಿದೆ.

ಹೆಚ್ಚಾಗ್ತಿದೆ ಪಿಂಕ್‌ ವ್ಯಾಟ್ಸ್‌ಆಪ್‌ ಸ್ಕ್ಯಾಮ್‌, ಮೊಬೈಲ್‌ನ ಹ್ಯಾಕ್‌ ಮಾಡೋಕೆ ಬಳಸ್ತಾರೆ ಖದೀಮರು!

ಮೊಬೈಲ್‌ ಚಾಟಿಂಗ್‌ ಚುಟುಕು ಮಾಧ್ಯಮವಾದ ವಾಟ್ಸಾಪ್‌ನಲ್ಲಿ ಕೂಡ ಫೇಸ್‌ಬುಕ್‌, ಟ್ವೀಟರ್‌ ರೀತಿ ‘ಎಡಿಟ್‌ ಮೆಸೇಜ್‌’ ಆಯ್ಕೆ ನೀಡಲಾಗಿದೆ. ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಆಯ್ಕೆಯು ಇನ್ನು ಎಲ್ಲ ಬಳಕೆದಾರರಿಗೂ ಲಭ್ಯ ಆಗಲಿದೆ ಎಂದು ವಾಟ್ಸಾಪ್‌ ಮಾತೃಸಂಸ್ಥೆ ಕಂಪನಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಹಲವರ ಮೊಬೈಲ್‌ನಲ್ಲಿ ಈ ಆಯ್ಕೆ ಲಭ್ಯವಾಗಿದ್ದು, ಕೆಲವರಿಗೆ ಇನ್ನಷ್ಟೇ ಲಭ್ಯ ಆಗಬೇಕಿದೆ. ಸಂದೇಶ ಕಳಿಸಿ 15 ನಿಮಿಷದೊಳಗೆ ಸಂದೇಶವನ್ನು ಎಡಿಟ್‌ ಮಾಡಬಹುದಾಗಿದೆ. ಸಂದೇಶ ಕಳಿಸಿ ಇನ್ನೂ 15 ನಿಮಿಷ ಮೀರದ ವೇಳೆ ಸಂದೇಶದ ಮೇಲೆ ಬೆರಳನ್ನು ಒತ್ತಿ ಹಿಡಿಯಬೇಕು. ಆಗ ‘ಎಡಿಟ್‌ ಮೆಸೇಜ್‌’ ಆಯ್ಕೆಯು ತೆರೆದುಕೊಳ್ಳುತ್ತದೆ. ಆಗ ಸಂದೇಶವನ್ನು ಎಡಿಟ್‌ ಮಾಡಿ ಮತ್ತೆ ಕಳಿಸಬಹುದು ಎಂದು ವಾಟ್ಸಾಪ್‌ ಹೇಳಿದೆ. ಆದರೆ ಸಂದೇಶ ಸ್ವೀಕರಿಸಿದವರು ಅದನ್ನು ಓದಿದ್ದರೆ ಸಂದೇಶ ಎಡಿಟ್‌ ಆಗದು. ಈವರೆಗೆ ಸಂದೇಶ ಎಡಿಟ್‌ ಮಾಡಲು ಸೌಲಭ್ಯ ಇರಲಿಲ್ಲ. ‘ಡಿಲೀಟ್‌’ ಆಯ್ಕೆ ಇತ್ತು.
 

click me!