Fact Check ಸರ್ಕಾರದಿಂದ ವ್ಯಾಟ್ಸ್ಆ್ಯಪ್ ಮೆಸೇಜ್, ವಿಡಿಯೋ ಆಡಿಯೋ ಕಾಲ್ ರೆಕಾರ್ಡ್ ಸುದ್ದಿ ಸುಳ್ಳು!

By Suvarna NewsFirst Published Jul 2, 2023, 3:23 PM IST
Highlights

ಕೇಂದ್ರ ಸರ್ಕಾರ ವ್ಯಾಟ್ಸ್ಆ್ಯಪ್ ಮೆಸೇಜ್ ಮಾನಿಟರ್, ವಿಡಿಯೋ ಹಾಗೂ ಆಡಿಯೋ ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಿದೆ. ಗ್ರೂಪ್ ಆಡ್ಮಿನ್ ಸೇರಿದಂತೆ ವ್ಯಾಟ್ಸ್ಆ್ಯಪ್ ಬಳಕೆದಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಅನ್ನೋ ಸಂದೇಶ ಭಾರಿ ಹರಿದಾಡುತ್ತಿದೆ. 3 ರೆಡ್ ಟಿಕ್ ಇದ್ದರೆ ನಿಮ್ಮ ವಿರುದ್ಧ ವಿಚಾರಣೆ ಆರಂಭಿಸಲಾಗಿದೆ ಅನ್ನೋ ಸಂದೇಶಗಳು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?
 

ನವದೆಹಲಿ(ಜು.02): ವ್ಯಾಟ್ಸ್ಆ್ಯಪ್ ಸೇರಿದಂತೆ ಹಲವು ಮೆಸೇಜಿಂಗ್ ಪ್ಲಾಟ್‌ಫಾರ್ಮ್, ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ನೀವು ಕಳುಹಿಸುವ ಪ್ರತಿಯೊಂದು ವ್ಯಾಟ್ಸ್ಆ್ಯಪ್ ಸಂದೇಶವನ್ನು ಕೇಂದ್ರ ಸರ್ಕಾರ ಮಾನಿಟರ್ ಮಾಡುತ್ತದೆ. ಆಡಿಯೋ-ವಿಡಿಯೋ ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ಇನ್ನು ವ್ಯಾಟ್ಸ್ಆ್ಯಪ್ ಗ್ರೂಪ್ ನಿಯಮದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಒಂದು ಟಿಕ್ ಇದ್ದರೆ ಮಸೇಜ್ ಸೆಂಡ್ ಆಗಿದೆ ಎಂದು ಆರ್ಥ.ಅದೇ 3 ರೆಡ್ ಟಿಕ್ ಇದ್ದರೆ ನಿಮ್ಮ ವಿರುದ್ದ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ಸಮನ್ಸ್ ಬರಲಿದೆ ಎಂದರ್ಥ ಎಂಬ ಸಂದೇಶ ಹರಿದಾಡುತ್ತಿದೆ. ಈ ಸಂದೇಶ ಮುಂದಿಟ್ಟುಕೊಂಡು ಕೆಲವರು ಕೇಂದ್ರ ಸರ್ಕಾರವನ್ನು ಟೀಕಿಸುವ, ಕೇಂದ್ರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ. ಈ ರೀತಿಯ ಯಾವುದೇ ನಿಯವನ್ನು ಸರ್ಕಾರವಾಗಲಿ, ವ್ಯಾಟ್ಸ್ಆ್ಯಪ್ ಆಗಲಿ ಜಾರಿ ಮಾಡಿಲ್ಲ ಎಂದು ನಂಬಲರ್ಹ ಮೂಲಗಳು ಸ್ಪಷ್ಟಪಡಿಸಿದೆ.

ಸದ್ಯ ಹರಿದಾಡುತ್ತಿರುವ ಫಾರ್ವರ್ಡ್ ಸಂದೇಶ ಸಂಪೂರ್ಣ ನಕಲಿಯಾಗಿದೆ. ಈ ರೀತಿಯ ಯಾವುದೇ ನಿಯಮಗಳು ಜಾರಿಯಾಗಿಲ್ಲ. ಸರ್ಕಾರ ಯಾವುದೇ ಮಾಹಿತಿಗಳನ್ನು ಸಂದೇಶಗಳನ್ನು ಮಾನಿಟರ್ ಮಾಡುತ್ತಿಲ್ಲ. ಜೊತೆಗೆ ಆಡಿಯೋ, ವಿಡಿಯೋ ಕಾಲ್ ರೆಕಾರ್ಡ್ ಮಾಡುತ್ತಿಲ್ಲ. ಈ ರೀತಿಯ ಯಾವುದೇ ನೀತಿಗಳು ಭಾರತದಲ್ಲಿ ಜಾರಿಯಾಗಿಲ್ಲ ಎಂದು ಅರ್ಹ ಮೂಲಗಳು ಸ್ಪಷ್ಟಪಡಿಸಿದೆ.

ಐಟಿ ತಿದ್ದುಪಡಿ ನಿಯಮಕ್ಕೆ ವಿರೋಧ: ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ; ರಾಜೀವ್‌ ಚಂದ್ರಶೇಖರ್‌

ಹೊಸ ಸಂವಹನ ನೀತಿ ಎಂದು 11 ಬದಲಾವಣೆಯನ್ನು ಪಟ್ಟಿ ಮಾಡಿರುವ ಸಂದೇಶ ಹರಿದಾಟುತ್ತಿದೆ. ಇದರ ಜೊತೆಗೆ ವ್ಯಾಟ್ಸ್ಆ್ಯಪ್ ಗ್ರೂಪ್ ಸದಸ್ಯರಿಗೆ ಹೊಸ ನಿಯಮ ಎಂದು 7 ಅಂಶಗಳ ಪಟ್ಟಿಯನ್ನು ಈ ಫಾರ್ವರ್ಡ್ ಸಂದೇಶದಲ್ಲಿ ನೀಡಲಾಗಿದೆ.

ಫಾರ್ವರ್ಡ್ ಸಂದೇಶದಲ್ಲಿ ಏನಿದೆ?

ನೂತನ ಸಂವಹನ ನೀತಿ ವ್ಯಾಟ್ಸ್ಆ್ಯಪ್ ಹಾಗೂ ವ್ಯಾಟ್ಸ್ಆ್ಯಪ್ ಕಾಲ್(ಆಡಿಯೋ, ವಿಡಿಯೋ)ನಾಳೆಯಿಂದ ಜಾರಿ:
1 ಎಲ್ಲಾ ಕರೆಗಳು ರೆಕಾರ್ಡ್ ಆಗಲಿದೆ
2 ರೆಕಾರ್ಡ್ ಆಗಿರುವ ಎಲ್ಲಾ ಕರೆಗಳು ಸೇವ್ ಆಗಲಿದೆ
3 ವ್ಯಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಸರ್ಕಾರ ಮೇಲ್ವಿಚಾರಣೆ ಮಾಡಲಿದೆ
4 ನಿಮ್ಮ ಡಿವೈಸನ್ನು ಸಚಿವರ ಸಿಸ್ಟಮ್ ಜೊತೆ ಕನೆಕ್ಟ್ ಮಾಡಲಾಗುತ್ತದೆ
5 ಯಾರಿಗಾದರೂ ಸಂದೇಶ ಕಳಹಿಸುವ ಮುನ್ನ ಎಚ್ಚರಿಕೆಯಿಂದ ಇರಿ
6 ಮಕ್ಕಳು, ಸಹೋದರರು, ಗೆಳಯರು, ಆಪ್ತರು, ಸಂಬಂಧಿಕರು ಸೇರಿದಂತೆ ಆಪ್ತರ ಕುರಿತು ಎಚ್ಚರಿಕೆ ವಹಿಸಿ
7 ಸರ್ಕಾರದ ವಿರುದ್ಧ, ಪ್ರಧಾನಿ ವಿರುದ್ಧ, ಸದ್ಯದ ರಾಜಕೀಯ ಸ್ಥಿತಿಗತಿ, ಸದ್ಯದ ಪರಿಸ್ಥಿತಿ ಕುರಿತು ಯಾವುದೇ ಸಂದೇಶ ಕಳುಹಿಸಬೇಡಿ
8 ರಾಜಕೀಯ ವಿರುದ್ಧ, ಧಾರ್ಮಿಕತೆ ಕುರಿತು ಕೆಟ್ಟ ಸಂದೇಶ ಕಳುಹಿಸುವುದು ಅಪರಾಧ ಎಂದು ಪರಗಣಿಸಲಾಗುತ್ತದೆ. ಈ ನಡೆಗೆ ವಾರೆಂಟ್ ಇಲ್ಲದೆ ಬಂಧನವಾಗಲಿದೆ.
9 ಪೊಲೀಸರಿಂದ ಒಂದು ನೋಟಿಫಿಕೇಶನ್ ಬರಲಿದೆ. ಬಳಿಕ ಸೈಬರ್ ಕ್ರೈಮ್ ಈ ಪ್ರರಕರಣದ ತನಿಖೆ ನಡೆಸಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
10 ಎಲ್ಲಾ ಗ್ರೂಪ್ ಸದಸ್ಯರು ಸೇರಿದಂತೆ ವ್ಯಾಟ್ಸ್ಆ್ಯಪ್ ಬಳಕೆದಾರರು ಈ ಸಂದೇಶದ ಕುರಿತು ಗಮನವಿಡಿ
11 ಸಂದೇಶ ಕಳುಹಿಸುವಾಗ ಎಚ್ಚರಿಕೆ ವಹಿಸಿ, ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಜಾಗೃತೆಯಾಗಿರಿ

Fact Check: ಸ್ಮೃತಿ ಇರಾನಿ ಓದುತ್ತಿರುವುದು ಪ್ರಧಾನಿ ಮೋದಿ ಕುರಿತ ಪುಸ್ತಕ ರಾಹುಲ್ ಗಾಂಧಿಯದ್ದಲ್ಲ

ವ್ಯಾಟ್ಸ್ಆ್ಯಪ್ ಗ್ರೂಪ್ ಸದಸ್ಯರಿಗೆ ಅತ್ಯಂತ ಮಹತ್ವದ ಸಂದೇಶ
1. ಒಂದು ಟಿಕ್( ✓ )= ಸಂದೇಶ ಸೆಂಡ್ ಮಾಡಲಾಗಿದೆ ಎಂದು ಅರ್ಥ
2. ಎರಡು ಟಿಕ್ ( ✓✓ ) = ಕಳುಹಿಸಿದ ಸಂದೇಶ ತಲುಪಿದೆ ಎಂದರ್ಥ
3. ಎರಡು ಬ್ಲೂ ಟಿಕ್ ( ✓✓)= ಸಂದೇಶವನ್ನು ಓದಿದ್ದಾರೆ ಎಂದರ್ಥ
4 ಮೂರು ಬ್ಲೂ ಟಿಕ್(✓✓✓ )= ಸರ್ಕಾರ ನಿಮ್ಮ ಸಂದೇಶದ ಕುರಿತು ಗಮನಹರಿಸಿದ ಎಂದರ್ಥ 
5 ಎರಡು ಬ್ಲೂಟಿಕ್( ✓✓ ) ಒಂದು ರೆಡ್ ಟಿಕ್(✓)= ಸರ್ಕಾರ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಲಿದೆ ಎಂದರ್ಥ 
6. ಒಂದು ಬ್ಲೂ ಟಿಕ್ (✓ ) ಎರಡು ರೆಡ್ ಟಿಕ್( ✓✓) =  ಸರ್ಕಾರ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎಂದರ್ಥ 
7 ಮೂರು ರೆಡ್ ಟಿಕ್( ✓✓✓) = ಸರ್ಕಾರ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸಿದೆ ಎಂದರ್ಥ  

click me!