ಫ್ರೀ ಡೇಟಾ ಇದ್ದರೂ ಬೇಕಾದಷ್ಟು ಟ್ವೀಟ್ ವೀಕ್ಷಣೆಗಿಲ್ಲ ಅನುಮತಿ, ಟೀಕೆ ಬಳಿಕ ಲಿಮಿಟ್ ಹೆಚ್ಚಿಸಿದ ಮಸ್ಕ್!

By Suvarna News  |  First Published Jul 2, 2023, 11:47 PM IST

ಫ್ರೀ ಡೇಟಾ ಇದೆ ಎಂದು ಇನ್ನು ಮುಂದೆ ಸುಮ್ಮನೆ ಟ್ವೀಟ್ ಮೇಲೆ ಕಣ್ಣಾಡಿಸಲು ಸಾಧ್ಯವಿಲ್ಲ. ಕಾರಣ ಪ್ರತಿ ದಿನ ಇಂತಿಷ್ಟೇ ಟ್ವೀಟ್ ವೀಕ್ಷೆಗಣೆಗೆ ಮಿತಿ ಹೇರಲಾಗಿದೆ. ಭಾರಿ ಟೀಕೆ ವ್ಯಕ್ತವಾದ ಕಾರಣ ಈ ಮಿತಿಯನ್ನು ಕೊಂಚ ಏರಿಕೆ ಮಾಡಲಾಗಿದೆ. ಆದರೂ ಎಲಾನ್ ಮಸ್ಕ್ ಈ ನಿರ್ಧಾರ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.


ನ್ಯೂಯಾರ್ಕ್(ಜು.02): ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಜಾರಿಯಾಗುತ್ತಿರುವ ಹೊಸ ಹೊಸ ನೀತಿಗಳು ಭಾರಿ ವಿರೋಧಕ್ಕೂ ಕಾರಣವಾಗುತ್ತಿದೆ. ನಿನ್ನೆಯಷ್ಟೇ ಟ್ವೀಟ್ ವೀಕ್ಷಣೆಗೆ ಲಾಗಿನ್ ಕಡ್ಡಾಯ ಮಾಡಿದ್ದ ಟ್ವಿಟರ್ ಇದೀಗ ಪ್ರತಿ ದಿನ ಟ್ವೀಟ್ ವೀಕ್ಷಣೆಗೂ ಮಿತಿ ಹೇರಿದೆ. ಬ್ಲೂಟಿಕ್ ಇದ್ದರೂ, ಹೊಸ ಖಾತೆಯಾದರೂ, ಹಳೇ ಖಾತೆಯಾದರೂ ಎಲ್ಲರಿಗೂ ಟ್ವೀಟ್ ವೀಕ್ಷಣೆಗೆ ಮಿತಿ ಹೇರಲಾಗಿದೆ. ಆದರೆ ಈ ಮಿತಿಗೆ ಬಾರಿ ವಿರೋಧ, ಟೀಕೆ ವ್ಯಕ್ತವಾದ ಕಾರಣ ಲಿಮಿಟನ್ನು ಕೊಂಚ ಏರಿಕೆ ಮಾಡಲಾಗಿದೆ. ಆದರೂ ಸಮಸ್ಯೆ ತಪ್ಪಿದ್ದಲ್ಲ.

ಇತರರ ಟ್ವೀಟ್ ಓದಲು ಅಥವಾ ವೀಕ್ಷಿಸಲು ಮಿತಿ ಹೇರಲಾಗಿದೆ. ನಿಮ್ಮದು ಹೊಸ ಖಾತೆಯಾಗಿದ್ದರೆ, ವೀಕ್ಷಣೆ ಮಿತಿ ಮೊದಲು 300. ಟೀಕೆ ಬಳಿಕ 500 ಮಾಡಲಾಗಿದೆ. ಇತ್ತ ಅನ್‌ವೇರಿಫೈಡ್‌ ಖಾತೆ ಹೊಂದಿರುವವರು 600 ಮತ್ತು ವೇರಿಫೈಡ್‌ ಖಾತೆ ಹೊಂದಿರುವವರು 6000 ಟ್ವೀಟ್‌ ವೀಕ್ಷಣೆಗೆ ಮಿತಿ ಹೇರಲಾಗಿತ್ತು. ಆದರೆ ಟೀಕೆ ಬಳಿಕ ವೇರಿಫೈಡ್‌ ಖಾತೆಗೆ 800 ಮಾಡಿ ಮತ್ತೊಮ್ಮೆ 1000 ಮಾಡಲಾಗಿದೆ. ಇತ್ತ ವೆರಿಫೈಡ್ ಖಾತೆದಾರರಿಗೆ 8,000 ಮಾಡಿ ಕೊನೆಗೆ 10,000ಕ್ಕೆ ಏರಿಕೆ ಮಾಡಲಾಗಿದೆ. ಭಾರಿ ವಿರೋಧ ವ್ಯಕ್ತವಾದ ಕಾರಣ ಎರಡೆರಡು ಬಾರಿ ಏರಿಕೆ ಮಾಡಲಾಗಿತ್ತು.

Tap to resize

Latest Videos

undefined

ಟ್ವಿಟರ್‌ನಲ್ಲಿ ಮಹತ್ತರ ಬದಲಾವಣೆ ಮಾಡಿದ ಎಲಾನ್ ಮಸ್ಕ್, ಟ್ವೀಟ್ ವೀಕ್ಷಿಸಲು ಸೈನ್ ಇನ್ ಕಡ್ಡಾಯ!

ಟ್ವೀಟರ್‌ ಬಳಕೆದಾರರಿಗೆ ದೈನಂದಿನ ವೀಕ್ಷಣೆಯ ಮಿತಿ ಹೇರಿದ್ದಾರೆ. ಬ್ಲೂಟಿಕ್‌ ಇಲ್ಲದ ಉಚಿತ ಖಾತೆ ಹೊಂದಿದವರು, ಹೊಸದಾಗಿ ಖಾತೆ ಹೊಂದಿದವರು ಮಾತ್ರವಲ್ಲದೇ, ಮಾಸಿಕ ಚಂದಾ ಪಾವತಿ ಮಾಡಿ ಬ್ಲೂಟಿಕ್‌ ಹೊಂದಿದವರಿಗೂ ದೈನಂದಿನ ಇಷ್ಟೇ ಟ್ವೀಟ್‌ಗಳನ್ನು ವೀಕ್ಷಣೆ ಮಾಡಬಹುದು ಎಂಬ ಮಿತಿ ಹೇರಿದ್ದಾರೆ. ಅವರ ದಿಢೀರ್‌ ನಿರ್ಧಾರ ಪರಿಣಾಮ, ವೀಕ್ಷಣೆಯ ಮೀತಿ ಮೀರಿದ ಸಾವಿರಾರು ಜನರಿಗೆ ಟ್ವೀಟ್‌ಗಳು ವೀಕ್ಷಣೆಗೆ ಲಭ್ಯವಿರಲಿಲ್ಲ. ದತ್ತಾಂಶ ದುರುಪಯೋಗ ತಡೆ, ಜಾಹೀರಾತುದಾರರನ್ನು ಸೆಳೆಯಲು ಈ ಕ್ರಮ ಎಂದು ಕಂಪನಿ ಹೇಳಿಕೊಂಡಿದೆಯಾದರೂ, ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದಾದ ಬಳಿಕ ವೀಕ್ಷಣೆ ಮಿತಿಯನ್ನು ಅಲ್ಪ ಹೆಚ್ಚಳ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ.

‘ಕೃತಕ ಬುದ್ಧಿಮತ್ತೆ ವ್ಯವಸ್ಥೆ ಬಳಸಿಕೊಂಡು ಟ್ವೀಟರ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಚಾಟ್‌ಜಿಪಿಟಿಯಂಥ ವ್ಯವಸ್ಥೆಯನ್ನು ಇನ್ನಷ್ಟುಸುಧಾರಿಸಲು ಟ್ವೀಟರ್‌ ಡಾಟಾ ಬಳಸಲಾಗುತ್ತಿದೆ’ ಎಂಬುದು ಮಸ್ಕ್ ಆರೋಪ. ಹೀಗಾಗಿ ಅನಧಿಕೃತವಾಗಿ ಮಾಹಿತಿ ಸಂಗ್ರಹ ತಡೆಯಲು ಈ ಕ್ರಮ ಅನಿವಾರ್ಯ ಎಂಬುದು ಟ್ವೀಟರ್‌ ವಾದ.

'ನೀವು ರೈತರಲ್ಲ, ಬಿಲಿಯನ್‌ ಡಾಲರ್‌ ಕಂಪನಿ, ಸರ್ಕಾರದ ನಿಯಮ ಪಾಲಿಸ್ಬೇಕು..' ಟ್ವಿಟರ್‌ಗೆ ಕರ್ನಾಟಕ ಹೈಕೋರ್ಟ್‌ ಎಚ್ಚರಿಕೆ!

ಇದರ ಜೊತೆಗೆ ಟ್ವೀಟರ್‌ನಲ್ಲಿ ಪ್ರಕಟವಾಗುವ ದ್ವೇಷದ ಪೋಸ್ಟ್‌ಗಳು, ಆಕ್ಷೇಪಾರ್ಹ ಸಂಗತಿಗಳು ಬಳಕೆದಾರರ ಮೇಲೆ ದುಷ್ಪರಿಣಾಮ ಬೀರಲು ಆರಂಭಿಸಿದ್ದವು. ಇದು ಚಂದಾ ಪಾವತಿಸಿ ಬಳಕೆ ಮಾಡುವವರ ಆಕ್ಷೇಪಕ್ಕೂ ಕಾರಣವಾಗಿತ್ತು. ಹೀಗಾಗಿ ಜಾಹೀರಾತುದಾರರು ಹಂತಹಂತವಾಗಿ ಟ್ವೀಟರ್‌ನಿಂದ ದೂರ ಸರಿಯಲು ಆರಂಭಿಸಿದ್ದರು. ಈ ಕಾರಣದಿಂದಾಗಿ ಜಾಹೀರಾತುದಾರರನ್ನು ಮರಳಿ ಸೆಳೆಯುವ ಉದ್ದೇಶ ಇಟ್ಟುಕೊಂಡು ಈ ಮಿತಿ ಹೇರಲಾಗಿದೆ.

click me!