ಚಾಟಿಂಗ್ ರಹಸ್ಯವಾಗಿಡಲು ವಾಟ್ಸ್‌ಆ್ಯಟ್‌ನಲ್ಲಿ ಬಂದಿದೆ ಚಾಟ್‌ ಲಾಕ್‌ ಫೀಚರ್‌: ಬಳಕೆ ಮಾಡುವುದು ಹೀಗೆ..

By Kannadaprabha News  |  First Published May 16, 2023, 3:46 PM IST

ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.


ನವದೆಹಲಿ (ಮೇ 16, 2023): ಪರಸ್ಪರ ರವಾನಿಸಿದ ಸಂದೇಶಗಳನ್ನು ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಕಾಪಾಡುವ ಹೊಸ ಫೀಚರ್‌ ಒಂದನ್ನು ವಾಟ್ಸಪ್‌ ಅನಾವರಣಗೊಳಿಸಿದೆ. ಹೀಗಾಗಿ ಒಂದು ವೇಳೆ ಮೊಬೈಲ್‌ನಲ್ಲಿ ವಾಟ್ಸಪ್‌ ಆ್ಯಪ್‌ ಅನ್ನು ಯಾರೇ ವೀಕ್ಷಿಸಿದರೂ, ಚಾಟ್‌ ಲಾಕ್‌ ಆಗಿರುವ ಸಂದೇಶಗಳನ್ನು ಯಾರೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಫೀಚರ್‌ ಆಯ್ಕೆ ಮಾಡಿಕೊಂಡರೆ ಸಂದೇಶ ಬಂದಾಗ ನೋಟಿಫಿಕೇಷನ್‌ನಲ್ಲೂ ಅದು ಕಾಣದು.

ಏನಿದು ಚಾಟ್‌ ಲಾಕ್‌?
ಇದು ವಾಟ್ಸಪ್‌ನ (WhatsApp) ಮಾತೃ ಸಂಸ್ಥೆ ಮೆಟಾ (Meta) ಬಿಡುಗಡೆ ಮಾಡಿರುವ ಹೊಸ ಫೀಚರ್‌ (Feature). ಈ ಆಪ್ಷನ್‌ ಅನ್ನು ಬಳಸಿಕೊಂಡರೆ ನಾವು ಇನ್ಯಾವುದೇ ವಾಟ್ಸಪ್‌ ಬಳಕೆದಾರರೊಂದಿಗೆ ನಡೆಸಿದ ಚಾಟ್‌ (Chat) ಸಂಪೂರ್ಣ ರಹಸ್ಯವಾಗಿರುತ್ತದೆ (Secret). ಹೀಗೆ ವಿನಿಮಯ ಮಾಡಿಕೊಂಡ ಸಂದೇಶಗಳು (Messages) ಬೇರೊಂದು ಫೋಲ್ಡರ್‌ನಲ್ಲಿ (Folder) ಸಂಗ್ರಹವಾಗುವ ಕಾರಣ ಅದು ಯಾರಿಗೂ ಕಾಣಿಸದು. ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ (Chat Lock) ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

Tap to resize

Latest Videos

undefined

ಇದನ್ನು ಓದಿ: ವಾಟ್ಸಾಪ್‌ನಿಂದ ಹೊಸ ಫೀಚರ್‌ ರಿಲೀಸ್‌: ಇನ್ಮುಂದೆ ಒಂದೇ ವಾಟ್ಸಾಪ್‌ ಖಾತೆ ಮೂಲಕ 4 ಫೋನ್‌ಗಳಲ್ಲಿ ಬಳಕೆ!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.8.2 ಅಪ್‌ಡೇಟ್‌ಗಾಗಿ ಕಳೆದ ತಿಂಗಳ ವಾಟ್ಸ್‌ಆ್ಯಪ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿತ್ತು. ಭವಿಷ್ಯದ ಅಪ್‌ಡೇಟ್‌ನಲ್ಲಿ ಇದನ್ನು ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು WaBetaInfo ಏಪ್ರಿಲ್‌ನಲ್ಲಿ ವರದಿ ಮಾಡಿತ್ತು. ವಾಟ್ಸ್‌ಆ್ಯಪ್ ಡೆವಲಪರ್‌ಗಳು ಈ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ತಿಳಿದುಬಂದಿತ್ತು. 

ಅದು ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ. ಈ ಲಾಕ್ ಆಗಿರುವ ಚಾಟ್‌ಗಳನ್ನು ಪ್ರತ್ಯೇಕ ವಿಭಾಗದಲ್ಲಿ ವೀಕ್ಷಿಸಲು ಬಳಕೆದಾರರಿಗೆ ಸಾಧ್ಯವಾಗುವಂತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಇದು ಪಾಸ್‌ಕೋಡ್‌ 
ಇಲ್ಲದ ಯಾರಿಗಾದರೂ ಈ ಚಾಟ್‌ಗಳನ್ನು ವೀಕ್ಷಿಸಲು ಅಸಾಧ್ಯವಾಗಬಹುದು ಎಂದೂ ವರದಿಯಾಗಿತ್ತು.

ಇದನ್ನೂ ಓದಿ: ಇನ್ಮುಂದೆ ನಿಮ್ಮ ವಾಟ್ಸ್‌ಆ್ಯಪ್ ಬೇರೆಯವ್ರು ಕದ್ದು ನೋಡೋಕಾಗಲ್ಲ: ಶೀಘ್ರದಲ್ಲೇ ಚಾಟ್‌ ಲಾಕ್‌ ಸೌಲಭ್ಯ

ಚಾಟ್‌ ಲಾಕ್‌ ಹೇಗೆ?

  • ವಾಟ್ಸಪ್‌ನ ಹೊಸ ಅಪ್‌ಡೇಟ್‌ ವರ್ಷನ್‌ ಡೌನ್‌ಲೋಡ್‌ ಮಾಡಿ
  • ವಾಟ್ಸಪ್‌ ಓಪನ್‌ ಮಾಡಿ, ನೀವು ಯಾವ ಚಾಟ್‌ ಲಾಕ್‌ ಮಾಡಬೇಕೋ ಅಲ್ಲಿಗೆ ಹೋಗಿ
  • ಅಲ್ಲಿ ಕಾಂಟ್ಯಾಕ್ಟ್ ಅಥವಾ ಗ್ರೂಪ್‌ನ ಪ್ರೊಫೈಲ್‌ ಪಿಕ್ಚರ್‌ ಮೇಲೆ ಕ್ಲಿಕ್‌ ಮಾಡಿ
  • ಅಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಮೆನು ಕೆಳಗೆ ಚಾಟ್‌ ಲಾಕ್‌ ಕಾಣಿಸುತ್ತದೆ
  • ಚಾಟ್‌ ಲಾಕ್‌ ಎನೇಬಲ್‌ ಮಾಡಿ ಮತ್ತು ಪಾಸ್‌ವರ್ಡ್‌ ಬಳಸಿ ಖಚಿತಪಡಿಸಿ

ಚಾಟ್‌ ಲಾಕ್‌ ಅನ್‌ಲಾಕ್‌ ಹೇಗೆ?

  • ವಾಟ್ಸಪ್‌ ಓಪನ್‌ ಮಾಡಿ ಹೋಮ್‌ಪೇಜ್‌ಗೆ ಹೋಗಿ
  • ಸ್ಕ್ರೀನ್‌ ಸ್ವೈಪ್‌ ಮಾಡಿದರೆ ಲಾಕ್ಡ್‌ ಚಾಟ್‌ ಸಿಗುತ್ತದೆ
  • ನಿಮಗೆ ಬೇಕಾದ ಚಾಟ್‌ ಅನ್ನು ಟ್ಯಾಪ್‌ ಮಾಡಿ
  • ಪಾಸ್‌ವರ್ಡ್‌ ಬಳಸಿ, ಅದನ್ನು ಖಚಿತಪಡಿಸಿದರೆ ಅದು ಅನ್‌ಲಾಕ್‌ ಆಗುತ್ತದೆ.
     

ಇದನ್ನೂ ಓದಿ: WhatsAppನಲ್ಲಿಇನ್ಮುಂದೆ ಸಿಕ್ಕ ಸಿಕ್ಕ ಸ್ಟೇಟಸ್‌ ಅಪ್ಡೇಟ್‌ ಮಾಡೋ ಹಾಗಿಲ್ಲ..!

click me!