
ಕ್ಯಾಲಿಫೋರ್ನಿಯಾ(ಏ.06) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಇದೀಗ ಜನಸಾಮಾನ್ಯರು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸುತ್ತಿದ್ದಾರೆ. ಇತ್ತೀಚೆಗೆ ಒಪನ್ಎಐ ಚಾಟ್‌ಜಿಪಿಟಿ ಹೊರತಂದ ಘಿಬ್ಲಿ ಆರ್ಟ್ ಬಹುತೇಕರು ಬಳಸಿದ್ದಾರೆ. ಎಐ ಬಳಕೆ ಹೆಚ್ಚಾಗುತ್ತಿರುವುದು ಮಾತ್ರವಲ್ಲ ಅನಿವಾರ್ಯವಾಗುತ್ತಿದೆ. ಸದ್ಯ ಓಪನ್ಎಐ, ಗೂಗಲ್ ಜೆಮಿನಿ, ಚೀನಾದ ಡೀಪ್‌ಸೀಕ್ ಸೇರಿದಂತೆ ಹಲವು ಎಐ ಟೂಲ್ ಲಭ್ಯವಿದೆ. ಇದೀಗ ಈ ಎಲ್ಲಾ ಎಐ ಟೂಲ್‌ಗೆ ಠಕ್ಕರ್ ನೀಡಲು ಮಾರ್ಕ್ ಜುಕರ್‌ಬರ್ಗ್ ಅವರ ಮೆಟಾ ಸಂಸ್ಥೆ ಹೊಸ ಲಾಮಾ 4 ಎಐ ಮಾದರಿ ಬಿಡುಗಡೆ ಮಾಡಿದೆ.
ಮೆಟಾ ಜಗತ್ತಿನ ಅತೀ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಯಾಗಿದೆ. ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್, ಥ್ರೆಡ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮಾತೃ ಕಂಪನಿಯಾದ ಮೆಟಾ, ಎಐ ಮಾಡೆಲ್‌ಗಳೊಂದಿಗೆ ಲಾಮ 4 ಬಿಡುಗಡೆ ಮಾಡಿದೆ. ಲಾಮ ಸ್ಕೌಟ್, ಲಾಮ 4 ಮೇವರಿಕ್, ಲಾಮ 4 ಬೆಹೆಮೊತ್ ಎಂಬ ಮೂರು ವಿಭಿನ್ನ ಮಾದರಿಗಳನ್ನು ಲಾಮ 4 ಸರಣಿ ಒಳಗೊಂಡಿದೆ.
AI ಮೇಲೆ ಗೂಗಲ್ ಭಾರಿ ಹೂಡಿಕೆ, ಉದ್ಯೋಗಿಗಳ ಭವಿಷ್ಯಕ್ಕಿದೆಯಾ ಆತಂಕ?
ಚೀನಾದ ಕಂಪನಿಯಾದ ಡೀಪ್‌ಸೀಕ್‌ನ ಎಐ ಮಾದರಿಗಳನ್ನು ಎದುರಿಸಲು ಮೆಟಾ ಈ ಹೊಸ ಎಐ ಸರಣಿಯನ್ನು ಪರಿಚಯಿಸಿದೆ ಎಂದು ವರದಿಯಾಗಿದೆ. ಆರ್1, ವಿ3 ಎಂಬ ಕಡಿಮೆ ಬಂಡವಾಳದ ಎಐ ಮಾದರಿಗಳನ್ನು ಡೀಪ್‌ಸೀಕ್ ಬಿಡುಗಡೆ ಮಾಡಿತ್ತು. ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಹೂಡಿಕೆ ಮಾಡಿದ ಓಪನ್ ಎಐ, ಮೆಟಾ, ಗೂಗಲ್ ಎಲ್ಲರಿಗೂ ಡೀಪ್‌ಸೀಕ್‌ನ ಆಗಮನವು ದೊಡ್ಡ ಹೊಡೆತ ನೀಡಿತ್ತು.
ಮೆಟಾದ ಈಗಿನ ಎಐ ಮಾದರಿಗಳಿಗೆ ಹೋಲಿಸಿದರೆ, ಡೀಪ್‌ಸೀಕ್‌ನ ಮಾದರಿಗಳು ದೊಡ್ಡ ಮುನ್ನಡೆ ಸಾಧಿಸಿವೆ. ಇದರಿಂದಾಗಿ, ಹೆಚ್ಚು ಶಕ್ತಿಯುತವಾದ ಎಐ ಮಾದರಿಗಳನ್ನು ಪರಿಚಯಿಸಲು ಮೆಟಾ ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಲಾಮ 4 ಸರಣಿಯಲ್ಲಿ ಸ್ಕೌಟ್ ಮತ್ತು ಮೇವರಿಕ್ ಅನ್ನು ಮಾತ್ರ ಮೆಟಾ ಬಿಡುಗಡೆ ಮಾಡಿದೆ.
ಹಗ್ಗಿಂಗ್ ಫೇಸ್‌ನಂತಹ ಮೆಟಾದ ಪಾಲುದಾರ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಇವು ಲಭ್ಯವಿವೆ. ಆದರೆ, ಲಾಮ 4 ಬೆಹೆಮೊತ್ ಮಾದರಿ ಇನ್ನೂ ನಿರ್ಮಾಣ ಹಂತದಲ್ಲಿದೆ. 40 ದೇಶಗಳಲ್ಲಿ ಲಭ್ಯವಿರುವ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಸೇರಿದಂತೆ ಮೆಟಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಲಾಮ 4 ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
ಒಂದೂವರೆ ತಿಂಗಳಲ್ಲಿ ಕೆಎಸ್‌ಆರ್‌ಟಿಸಿಗೆ ತೊಂದರೆಯಾಗಿದ್ದ 66,410 ಕೆಜಿ ತ್ಯಾಜ್ಯವನ್ನು ತೆಗೆದುಹಾಕಲಾಗಿದೆ, ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುವುದು.
ಗೂಗಲ್ ಬಳಿಕ, ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಿರುವ ಮೆಟಾ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.