ಮೆಟಾ ಸೇವೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಮೆಸೆಂಜರ್, ಥ್ರೆಡ್ ಸೇವೆಗಳು ತಾತ್ಕಾಲಿಕ ಸ್ಥಗಿತಗೊಂಡು ಬಳಕೆದಾರರು ಪರದಾಡಿದ್ದರು. ಅಂಬಾನಿ ಮದುವೆಯಲ್ಲಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಬ್ಯೂಸಿಯಾದ ಕಾರಣ ಸೇವೆ ಸ್ಥಗಿತಗೊಂಡಿದೆ ಅನ್ನೋ ಮೀಮ್ಸ್ ಹರಿದಾಡುತ್ತಿದೆ.
ನವದೆಹಲಿ(ಮಾ.05) ಫೇಸ್‌ಬುಕ್, ಮೆಸೆಂಜರ್, ಥ್ರೆಡ್, ಇನ್‌ಸ್ಟಾಗ್ರಾಂನಲ್ಲಿ ತಾಂತ್ರಿಕ ಸಮಸ್ಸೆ ಕಾಣಿಸಿಕೊಂಡಿತ್ತು. ಇದರ ಪರಿಣಾಮ ವಿಶ್ವದ ಹಲವು ದೇಶದ ಬಳಕೆದಾರರು ಪರದಾಡಿದ್ದರು. ಡೌನ್‌ಡಿಟೆಕ್ಟರ್ ಡಾಟ್ ಕಾಮ್ ಪ್ರಕರಾ ಮೆಟಾ ಸರ್ವರ್ ಡೌನ್ ತಾಂತ್ರಿಕ ಸಮಸ್ಯೆಯಿಂದ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ ಎಂದು ವರದಿ ಮಾಡಿತ್ತು.ಕೆಲ ಹೊತ್ತಿನ ಬಳಿಕ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿತ್ತು, ಮೆಟಾ ಸೇವೆಗಳು ಮತ್ತೆ ಆರಂಭಗೊಂಡಿದೆ. ಆದರೆ ಫೇಸ್‌ಬುಕ್ ಸೇರಿದಂತೆ ಮೆಟಾದ ಕೆಲ ಸೇವೆಗಳು ತಾತ್ಕಾಲಿಕ ಸ್ಥಗಿತಗೊಳ್ಳುತ್ತಿದ್ದಂತೆ ಟ್ರೋಲ್, ಮೀಮ್ಸ್ ಹರಿದಾಡುತ್ತಿದೆ.
ಮೆಟಾ ಸೇವೆ ಸ್ಥಗಿತಗೊಂಡಿರುವುದಕ್ಕೆ ಸಿಇಒ ಮಾರ್ಕ್ ಜುಕರ್‌ಬರ್ಗ್ ಕುರಿತು ಹಲವು ಮೀಮ್ಸ್ ಹರಿದಾಡುತ್ತಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್‌ಗಾಗಿ ಜಾಮ್ನಗರಕ್ಕೆ ಆಗಮಿಸಿದ್ದರು. ಅಂಬಾನಿ ಮದುವೆಯಲ್ಲಿ ಬ್ಯೂಸಿಯಾಗಿರುವ ಕಾರಣ ಮೆಟಾ ಸೇವೆಗಳು ತಾತ್ಕಾಲಿಕವಾಗಿ ಸ್ಥಿಗಿತಗೊಂಡಿದೆ. ಮದುವೆ ಮುಗಿಸಿ ಮರಳಿದ ಬೆನ್ನಲ್ಲೇ ಸರಿಹೋಗಲಿದೆ ಎಂದು ಮೀಮ್ಸ್ ಮಾಡಿದ್ದಾರೆ.
undefined
ದಿಢೀರ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಸೇರಿ ಮೆಟಾ ಸೇವೆ ಸ್ಥಗಿತ, ಬಳಕೆದಾರರ ಪರದಾಟ!
ಮೆಟಾ ಸರ್ವರನ್ ಡೌನ್‌ನಿಂದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಸಂಪೂರ್ಣ ಖುಷಿಯಾಗಿದ್ದಾರೆ. ಇದಕ್ಕೆ ಮಿಸ್ಟರ್ ಬೀನ್ ಒಂದು ವಿಡಿಯೋ ಹಂಚಿಕೊಂಡು ಮಸ್ಕ್ ಹಾಗೂ ಜುಕರ್‌ಬರ್ಗ್ ಹೋಲಿಕೆ ಮಾಡಿದ್ದಾರೆ. ಫೇಸ್‌ಬುಕ್ ಡೌನ್ ಆಗುತ್ತಿದ್ದಂತೆ ಲಕ್ಷಾಂತರ ಮಂದಿ ಟ್ವಿಟರ್‌ನಲ್ಲಿ ಇಣುಕಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
Elon Musk after seen Mark Zuckerberg both Instagram down and Facebook down 👇 pic.twitter.com/AMi41Xqu9V
— Sunny. (@jabsheleft)
ಇತ್ತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಮೆಟಾ ಸೇವೆಗಳು ಮತ್ತೆ ಆರಂಭಗೊಳ್ಳುತ್ತಿದ್ದಂತೆ ಮತ್ತೆ ಟ್ರೋಲ್ ಮಾಡಲಾಗುತ್ತದೆ. ಅಂಬಾನಿ ಮದುವೆಯಲ್ಲಿ ಸೆಲೆಬ್ರೆಟಿಗಳ ಡ್ಯಾನ್ಸ್ ವಿಡಿಯೋವನ್ನು ಹರಿಬಿಟ್ಟು ಟ್ರೋಲ್ ಮಾಡಲಾಗುತ್ತದೆ.
When Facebook and Instagram went down 💀💀
Everyone : pic.twitter.com/fO8sd1ckQC
So insta and Facebook started working?
pic.twitter.com/IPoovcxUBe