ಆಗಸ್ಟ್‌ 1 ರಿಂದ ಜೀಮೇಲ್‌ ಸ್ಥಗಿತ, ಗೂಗಲ್‌ ಕೊಟ್ಟ ಸ್ಪಷ್ಟನೆ ಇದು

By Suvarna News  |  First Published Feb 25, 2024, 8:20 PM IST

ಬರುವ ಆಗಸ್ಟ್‌ ತಿಂಗಳಿನಲ್ಲಿ ಜಿ ಮೇಲ್‌ ಅನ್ನು ಗೂಗಲ್‌ ಬಂದ್‌ ಮಾಡಲಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಗೂಗಲ್‌, ಇ-ಮೇಲ್‌ ಸೇವೆಯನ್ನು ನೀಡುತ್ತಿರುವ ಜಿ ಮೇಲ್‌ ಅನ್ನು ಸ್ಥಗಿತಗೊಳಿಸುತ್ತಿಲ್ಲ ಎಂದು ಶುಕ್ರವಾರ ಹೇಳಿದೆ.


ನ್ಯೂಯಾರ್ಕ್‌ (ಫೆ.25): ಬರುವ ಆಗಸ್ಟ್‌ ತಿಂಗಳಿನಲ್ಲಿ ಜಿ ಮೇಲ್‌ ಅನ್ನು ಗೂಗಲ್‌ ಬಂದ್‌ ಮಾಡಲಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಗೂಗಲ್‌, ಇ-ಮೇಲ್‌ ಸೇವೆಯನ್ನು ನೀಡುತ್ತಿರುವ ಜಿ ಮೇಲ್‌ ಅನ್ನು ಸ್ಥಗಿತಗೊಳಿಸುತ್ತಿಲ್ಲ ಎಂದು ಶುಕ್ರವಾರ ಹೇಳಿದೆ. ಜಿ ಮೇಲ್‌ ಅನ್ನು ಬಂದ್‌ ಮಾಡಲಾಗುತ್ತಿದೆ ಎಂದು ಸ್ವತಃ ಗೂಗಲ್‌ ತನ್ನ ಬಳಕೆದಾರರಿಗೆ ಮೇಲ್‌ ಮಾಡಿದೆ ಎಂಬ ನಕಲಿ ಸ್ಕ್ರೀನ್‌ಶಾಟ್‌ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಗೂಗಲ್‌ ಪ್ಲೇಸ್ಟೋರ್‌ಗೆ ಟಕ್ಕರ್ ನೀಡಲು ‘ಇಂಡಸ್‌ ಆ್ಯಪ್‌ಸ್ಟೋರ್‌’ ಎಂಟ್ರಿ, ಕನ್ನಡ ಸಹಿತ 12 ಭಾಷೆಗಳಲ್ಲಿ ಲಭ್ಯ

Latest Videos

undefined

ಬಳಿಕ ‘ತನ್ನ ಜಿ ಮೇಲ್‌ ಅನ್ನು ಈ ವರ್ಷದ ಆಗಸ್ಟ್‌ನಲ್ಲಿ ಗೂಗಲ್‌ ಸಂಸ್ಥೆ ಬಂದ್‌ ಮಾಡುತ್ತಿದೆ. ಇನ್ನು ಮುಂದೆ ಅದು ಆ ಸೇವೆಯನ್ನು ನೀಡುವುದಿಲ್ಲ’ ಎಂಬ ಭಾರೀ ವದಂತಿಗಳು ಹಬ್ಬಿದ್ದವು. ಆದರೆ ಇದು ನಿಜವಲ್ಲ ಎಂಬುದನ್ನು ಸ್ವತಃ ಗೂಗಲ್‌ ತಿಳಿಸಿದೆ.

ಏನಿಲ್ಲ ಏನಿಲ್ಲ ನಮ್ಮ ನಡುವೆ ವೈಷಮ್ಯವಿಲ್ಲ, ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

ವೈರಲ್‌ ಆಗಿದ್ದ ನಕಲಿ ಸ್ಕ್ರೀನ್‌ಶಾಟ್‌: ‘ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಬೆಳೆಸುವ ಗೀಮೇಲ್‌ನ ಪ್ರಯಾಣವು ಕೊನೆಗೊಳ್ಳುತ್ತಿದೆ. ಆಗಸ್ಟ್ 1, 2024 ರಿಂದ ಜೀಮೇಲ್‌ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ. ಇದರರ್ಥ ಜೀಮೇಲ್‌ ಇಮೇಲ್‌ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಇನ್ನು ಮುಂದೆ ಬೆಂಬಲಿಸುವುದಿಲ್ಲ’ ಎಂದು ಗೂಗಲ್‌ ಮೇಲ್‌ ಮಾಡಿದೆ ಎಂಬ ನಕಲಿ ಸ್ಕ್ರೀನ್‌ಶಾಟ್‌ನಿಂದ ವದಂತಿಗಳು ಹಬ್ಬಿದ್ದವು.

ಗೂಗಲ್‌ನ ಇಮೇಲ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಎಕ್ಸ್‌ (ಹಿಂದಿನ ಟ್ವಿಟ್ಟರ್) ಸಿಇಒ ಎಲಾನ್ ಮಸ್ಕ್,  ಎಕ್ಸ್‌ ಮೇಲ್ ಬರಲಿರುವ ಬಗ್ಗೆ ಘೋಷಿಸಿದ್ದರು. ಜೀ ಮೇಲ್‌ ಗೆ ಪ್ರತಿಸ್ಪರ್ಧಿಯಾಗಿ ಎಕ್ಸ್‌ ಮೇಲ್ ಬರಲಿದೆಯಂತೆ. ಗೂಗಲ್‌ ಜೀಮೇಲ್‌ ನಿಲ್ಲಿಸುತ್ತಿಲ್ಲ. ಇನ್ನು ಎಕ್ಸ್ ಮೇಲ್‌ ಯಾವ ರೀತಿ ಇರಲಿದೆ ಕಾದು ನೋಡಬೇಕಿದೆ.

click me!