ಅನ್‌ಲಿಮಿಟೆಡ್ ಡಾಟಾ, 30 ದಿನ ಉಚಿತ ಟ್ರಯಲ್; ಭರ್ಜರಿ ಆಫರ್ ಘೋಷಿಸಿದ ಜಿಯೋಫೈಬರ್!

By Suvarna News  |  First Published Aug 31, 2020, 7:23 PM IST
  • ಜಿಯೋಫೈಬರ್ ಯಾವುದೇ ಷರತ್ತುಗಳಿಲ್ಲದ 30-ದಿನಗಳ ಉಚಿತ ಟ್ರಯಲ್: 
  • ಜಿಯೋಫೈಬರ್ ಹೋಮ್ ಟ್ಯಾರಿಫ್ ಪ್ಲಾನ್‌ಗಳು ಈಗ ನಿಜವಾದ ಅಪರಿಮಿತ ಅಂತರಜಾಲವನ್ನು ನೀಡುತ್ತವೆ.
  • ಎಲ್ಲ ಹೋಮ್ ಪ್ಲಾನ್‌ಗಳೂ ಸಿಮೆಟ್ರಿಕ್ ಸ್ಪೀಡ್ ಹೊಂದಿರಲಿದ್ದು, ಡೌನ್‌ಲೋಡ್ ವೇಗ ಮತ್ತು ಅಪ್‌ಲೋಡ್ ವೇಗಗಳು ಸರಿಸಮಾನವಾಗಿರಲಿವೆ.

ಮುಂಬಯಿ(ಆ.31): ತನ್ನ ಗ್ರಾಹಕ ಕೇಂದ್ರಿತ ಮನೋವೃತ್ತಿಯನ್ನು ಮತ್ತಷ್ಟು ಬಲಪಡಿಸಲು, ಹೊಸ ಇಂಡಿಯಾದ ಹೊಸ ಜೋಶ್ ಅನ್ನು ಸಂಭ್ರಮಿಸಲು, ಮತ್ತು ಪ್ರತಿ ಭಾರತೀಯ ಮನೆಯನ್ನೂ ಸಬಲೀಕರಣಗೊಳಿಸಲು ಜಿಯೋಫೈಬರ್ ತನ್ನ ಟ್ಯಾರಿಫ್ ಪ್ಲಾನ್‌ಗಳನ್ನು ಪರಿಷ್ಕರಿಸಿದೆ. ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವು ಅತ್ಯಗತ್ಯವಾಗಿರುವ ಇಂದಿನ ಸವಾಲಿನ ಸಮಯದಲ್ಲಿ ಈ ಹೊಸ ಟ್ಯಾರಿಫ್ ಪ್ಲಾನ್‌ಗಳು ಅದನ್ನು ಎಲ್ಲರಿಗೂ ಎಟುಕುವಂತೆ ಮಾಡುತ್ತಿವೆ.

ಜಿಯೋ ಧಮಾಕಾ: 5 ತಿಂಗಳವರೆಗೆ ಡೇಟಾ, ಕರೆ ಸಂಪೂರ್ಣ ಉಚಿತ!

Tap to resize

Latest Videos

undefined

ಹೊಸ ಜಿಯೋಫೈಬರ್ ಪ್ಲಾನ್‌ಗಳು ನಿಜವಾದ ಅಪರಿಮಿತ ಅಂತರಜಾಲವನ್ನು ನೀಡಲಿದ್ದು, ಸಿಮೆಟ್ರಿಕ್ ಸ್ಪೀಡ್ (ಅಪ್‌ಲೋಡ್ ವೇಗ = ಡೌನ್‌ಲೋಡ್ ವೇಗ) ಹೊಂದಿರಲಿವೆ. ಪ್ಲಾನ್‌ಗಳು ತಿಂಗಳಿಗೆ ಕೇವಲ ರೂ. 399ರಿಂದ ಪ್ರಾರಂಭವಾಗಲಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಾಪ್ 12 ಪೇಯ್ಡ್ ಓಟಿಟಿ ಆಪ್‌ಗಳ ಚಂದಾದಾರಿಕೆಯನ್ನು ನೀಡಲಿವೆ. 

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!...

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೋ ನಿರ್ದೇಶಕ ಶ್ರೀ ಆಕಾಶ್ ಅಂಬಾನಿ, "ಒಂದು ದಶಲಕ್ಷಕ್ಕೂ ಹೆಚ್ಚು ಸಂಪರ್ಕಿತ ಮನೆಗಳನ್ನು ಹೊಂದಿರುವ ಜಿಯೋಫೈಬರ್ ಈಗಾಗಲೇ ದೇಶದ ಅತಿದೊಡ್ಡ ಫೈಬರ್ ಪ್ರೊವೈಡರ್ ಆಗಿದೆಯಾದರೂ ಭಾರತ ಮತ್ತು ಭಾರತೀಯರಿಗಾಗಿ ನಮ್ಮ  ದೂರದೃಷ್ಟಿ ಇನ್ನೂ ದೊಡ್ಡದಾಗಿದೆ. ನಾವು ಫೈಬರ್ ಅನ್ನು ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಸಶಕ್ತರಾಗಿಸಲು ಬಯಸುತ್ತೇವೆ.

ಜಿಯೋದೊಂದಿಗೆ ಭಾರತವನ್ನು ಮೊಬೈಲ್ ಸಂಪರ್ಕದಲ್ಲಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿ ಮಾಡಿದ ನಂತರ, 1,600ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಬ್ರಾಡ್‌ಬ್ಯಾಂಡ್ ಒದಗಿಸುವ ಮೂಲಕ ಜಿಯೋಫೈಬರ್ ಭಾರತವನ್ನು ಜಾಗತಿಕ ಬ್ರಾಡ್‌ಬ್ಯಾಂಡ್ ನಾಯಕತ್ವಕ್ಕೆ ಕೊಂಡೊಯ್ಯಲಿದೆ. ಭಾರತವನ್ನು ವಿಶ್ವದ ಬ್ರಾಡ್‌ಬ್ಯಾಂಡ್ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ಯಲು ಜಿಯೋ ಫೈಬರ್ ಚಳವಳಿಗೆ ಸೇರುವಂತೆ ನಾನು ಎಲ್ಲರನ್ನೂ ಕೋರುತ್ತೇನೆ. ” ಎಂದು ಹೇಳಿದ್ದಾರೆ.

ಜಿಯೋಫೈಬರ್ ಯಾವುದೇ ಷರತ್ತುಗಳಿಲ್ಲದ 30-ದಿನಗಳ ಉಚಿತ ಟ್ರಯಲ್:

ಈ ಯೋಜನೆಯಡಿ ಗ್ರಾಹಕರು 150 ಎಂಬಿಪಿಎಸ್ ನಿಜವಾದ ಅಪರಿಮಿತ ಅಂತರಜಾಲ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಾಪ್ 10 ಪೇಯ್ಡ್ ಒಟಿಟಿ ಅಪ್ಲಿಕೇಶನ್‌‌ಗಳಿಗೆ ಪ್ರವೇಶಾವಕಾಶವಿರುವ 4ಕೆ ಸೆಟ್ ಟಾಪ್ ಬಾಕ್ಸ್ ಹಾಗೂ ಉಚಿತ ವಾಯ್ಸ್ ಕಾಲಿಂಗ್ ಸೌಲಭ್ಯಗಳೊಂದಿಗೆ ಜಿಯೋ ಫೈಬರ್ ಅನ್ನು 30 ದಿನಗಳವರೆಗೆ ಪ್ರಯತ್ನಿಸಬಹುದಾಗಿದೆ.

ಸೇವೆ ಇಷ್ಟವಾಗದಿದ್ದರೆ ಈ ಸೌಲಭ್ಯಗಳನ್ನು ಹಿಂದಿರುಗಿಸಬಹುದಾಗಿದ್ದು, ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. 30-ದಿನಗಳ ಈ ಉಚಿತ ಟ್ರಯಲ್ ಎಲ್ಲ ಹೊಸ ಗ್ರಾಹಕರಿಗೂ ಅನ್ವಯವಾಗುತ್ತದೆ.

ಜಿಯೋಫೈಬರ್ ಉತ್ಪನ್ನವು ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ:
1.ಅತಿವೇಗದ ಅಂತರಜಾಲ: ಮನೆಯ ಎಲ್ಲ ಸದಸ್ಯರಿಗೂ ಶಿಕ್ಷಣ, ವೃತ್ತಿ, ಆರೋಗ್ಯ ಮತ್ತು ಶಾಪಿಂಗ್ ಅನುಭವಗಳನ್ನು ನೀಡುವ ಸಂಪೂರ್ಣ ವಿಶ್ವಾಸಾರ್ಹ ಅಂತರಜಾಲ ಮತ್ತು ವೈಫೈ.

2. ಮನರಂಜನೆ: ಆನ್-ಡಿಮ್ಯಾಂಡ್ ವೀಡಿಯೊಗಳು, ಲೈವ್ ಟಿವಿ, ಚಲನಚಿತ್ರಗಳು ಮತ್ತು ಇನ್ನೂ ಹೆಚ್ಚಿನವುಗಳ ಜೊತೆಗೆ ಮನರಂಜನೆಯ ಅನುಭವವು ಹೊಸ ರೂಪ ಪಡೆದುಕೊಳ್ಳುತ್ತದೆ. ಯಾವುದೇ           ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್‌ಸ್ಟಾರ್ ಮುಂತಾದ ಟಾಪ್ 12 ಪೇಯ್ಡ್ ಓಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶಾವಕಾಶ ಪಡೆಯಿರಿ. ಟಿವಿಯಲ್ಲಿ ಯೂಟ್ಯೂಬ್‌ನಿಂದ ಹಿಡಿದು ನಿಮ್ಮ ನೆಚ್ಚಿನ ಹಳೆಯ ಟಿವಿ ಕಾರ್ಯಕ್ರಮಗಳ ಬಿಂಜ್ ವಾಚಿಂಗ್‌ವರೆಗೆ ಎಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ - ಜಿಯೋಟಿವಿ ಪ್ಲಸ್.

3.ಕಂಟೆಂಟ್‌ನ ಸುಲಭ ಅನ್ವೇಷಣೆ: ಜಿಯೋ ರಿಮೋಟ್‌ನಲ್ಲಿ ವಾಯ್ಸ್ ಸರ್ಚ್‌ನೊಂದಿಗೆ ಕಂಟೆಂಟ್‌ನ ಅತಿದೊಡ್ಡ ಗ್ರಂಥಾಲಯದಲ್ಲಿ ಹುಡುಕಾಟ ಸುಲಭವಾಗಿದೆ.
4. ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಿ: ಉಚಿತ ಎಚ್‌ಡಿ ವಾಯ್ಸ್ ಕಾಲಿಂಗ್ ಮೂಲಕ ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಕೆಲಸದ ಸ್ಥಳದೊಂದಿಗೆ ಸಂಪರ್ಕ ಸಾಧಿಸಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಯಾರೊಂದಿಗಾದರೂ ವೀಡಿಯೊ ಕರೆಗಳು ಮತ್ತು ಕಾನ್ಫರೆನ್ಸ್‌ಗಳನ್ನು ಮಾಡಿ.
5 ಮನೆಯಿಂದ ಕೆಲಸ: ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ, ಯಾವುದೇ ಮಿತಿಗಳಿಲ್ಲದೆ ಮನೆಯಿಂದ ಕೆಲಸ ಮಾಡಿ
6. ಮನೆಯಲ್ಲಿ ಆರೋಗ್ಯ: ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕವು ವೈದ್ಯರನ್ನು ದೂರದಿಂದಲೇ ಸಂಪರ್ಕಿಸಲು ಮತ್ತು ಪ್ರಮುಖ ರೋಗನಿರ್ಣಯವನ್ನು ಮಾಡಲು ನಿಮಗೆ ನೆರವಾಗುತ್ತದೆ
7. ಮನೆಯಲ್ಲಿ ಶಿಕ್ಷಣ: ಜಿಯೋಮೀಟ್ ಆಪ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಮನೆಯಲ್ಲಿ ಕಲಿಯುವುದನ್ನು ಆನಂದಿಸಿ
 8 ಮನೆಯಲ್ಲಿ ಆಟಗಳು: ಆನಂದದಾಯಕ ಗೇಮಿಂಗ್ ಅನುಭವಕ್ಕಾಗಿ ಆಸಕ್ತಿದಾಯಕ ಗೇಮಿಂಗ್ ಆಯ್ಕೆಗಳನ್ನು ಜಿಯೋಗೇಮ್ಸ್ ಒದಗಿಸುತ್ತದೆ

9. ಪ್ರಮುಖ ದಿನಾಂಕಗಳು:
ಸೆಪ್ಟೆಂಬರ್ 1ರಿಂದ ಸಕ್ರಿಯರಾಗುವ ಹೊಸ ಜಿಯೋಫೈಬರ್ ಗ್ರಾಹಕರು 30-ದಿನಗಳ ಉಚಿತ ಟ್ರಯಲ್ ಪಡೆಯುತ್ತಾರೆ. ನಿಷ್ಠೆಯನ್ನು ಗೌರವಿಸುವುದರಲ್ಲಿ ಜಿಯೋ ಯಾವಾಗಲೂ ನಂಬಿಕೆ ಇಟ್ಟಿರುವುದರಿಂದ, ಸದ್ಯದ ಜಿಯೋಫೈಬರ್ ಬಳಕೆದಾರರು ಕೂಡ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹೊಸ ಟ್ಯಾರಿಫ್ ಪ್ಲಾನ್‌ಗಳ ಪ್ರಯೋಜನಗಳಿಗೆ ಸರಿಹೊಂದುವಂತೆ ಸದ್ಯದ ಎಲ್ಲ ಜಿಯೋಫೈಬರ್ ಗ್ರಾಹಕರ ಪ್ಲಾನ್‌ಗಳನ್ನೂ ನವೀಕರಿಸಲಾಗುತ್ತದೆ. ಆಗಸ್ಟ್ 15ರಿಂದ 31ರ ನಡುವೆ ಸೇರ್ಪಡೆಯಾಗಿರುವ ಜಿಯೋಫೈಬರ್ ಗ್ರಾಹಕರು ಕೂಡ 30-ದಿನಗಳ ಉಚಿತ ಟ್ರಯಲ್  ಪ್ರಯೋಜನವನ್ನು ಮೈಜಿಯೋದಲ್ಲಿನ ವೋಚರ್ ಆಗಿ ಪಡೆಯುತ್ತಾರೆ.

click me!