Jio Offers ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಭರ್ಜರಿ ಕೊಡುಗೆ, ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್!

Published : Feb 25, 2022, 09:21 PM ISTUpdated : Feb 25, 2022, 09:23 PM IST
Jio Offers ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಭರ್ಜರಿ ಕೊಡುಗೆ, ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್!

ಸಾರಾಂಶ

2 ಹೊಸ ಯೋಜನೆಗಳು ₹1,499 ಮತ್ತು ₹4,199 ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ ಪ್ರಯೋಜನಗಳು ಹಾಟ್‌ಸ್ಟಾರ್‌ ಪ್ರೀಮಿಯಂ ಕೂಪನ್ ಕೋಡ್ ಸೇರಿ ಆಫರ್ ವಿವರ ಇಲ್ಲಿವೆ

ಬೆಂಗಳೂರು(ಫೆ.25):  ದೇಶದಲ್ಲಿ ಇದೇ ಮೊದಲ ಬಾರಿಗೆ   4K ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ದೊಡ್ಡ ಪರದೆಯಲ್ಲಿ ನೋಡುವ ಪ್ರೀಮಿಯಂ ಯೋಜನೆಯನ್ನು ಜಿಯೋ ಘೋಷಿಸಿದೆ. ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ, ಡಿಸ್ನಿ+ ಹಾಟ್‌ಸ್ಟಾರ್ ಜೊತೆಯಾಗಿ ಹೊಸದಾಗಿ ಎರಡು ಯೋಜನೆಗಳನ್ನು ಲಾಂಚ್ ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆ ಹೊಂದಿರುವ ₹1,499 ಮತ್ತು ₹4,199 ಬೆಲೆಯ ತನ್ನ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಈ ಯೋಜನೆಯು ಜಿಯೋ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ, ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನ ಅತ್ಯಂತ ವಿಶೇಷ ಸದಸ್ಯತ್ವವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಚಂದಾದಾರಿಕೆಯು ಬಳಕೆದಾರರಿಗೆ ಒಂದೇ ಸಮಯದಲ್ಲಿ 4 ಸಾಧನಗಳಲ್ಲಿ ತಮ್ಮ ನೆಚ್ಚಿನ ವಿಷಯವನ್ನು 4K ನಲ್ಲಿ ಆನಂದಿಸಲು ಅನುಮತಿಸುತ್ತದೆ. ಈ ಸೇವೆಯನ್ನು ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಟಿವಿಗಳಲ್ಲಿ ಬಳಸಬಹುದು.

Broadband Service ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಜಿಯೋ ಸ್ಪೇಸ್ ಟೆಕ್ನಾಲಜಿ ಆರಂಭ!

ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ ಪ್ರಯೋಜನಗಳು:
ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು. ಜೊತೆಗೆ ಡಿಸ್ನಿ+ ಚಲನಚಿತ್ರಗಳು (ಇಂಗ್ಲಿಷ್ + ಡಬ್ ಮಾಡಲಾದ) ಸಿನಿಮಾಗಳನ್ನು ಹಾಗೂ ಡಿಸ್ನಿ + ಓರಿಜಿನಲ್ಸ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಆನಂದಿಸಬಹದು. ಮತ್ತೂ 4 ಕೆ ಗುಣಮಟ್ಟದಲ್ಲಿ 4 ಸ್ಕ್ರೀನ್‌ಗಳಲ್ಲಿ  ಡಿಸ್ನಿ+ ಹಾಟ್‌ಸ್ಟಾರ್‌ ನೋಡುವ ಅವಕಾಶ ದೊರೆಯಲಿದೆ.

2 ಹೊಸ ಜಿಯೋ ಯೋಜನೆಗಳ ವಿವರಗಳು:
₹1,499 ಪ್ಲಾನ್:
·        ₹1499 ಮೌಲ್ಯದ 1-ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ -
·        ಕಾಂಪ್ಲಿಮೆಂಟರಿ ಜಿಯೋ ₹719 ಯೋಜನೆ: ದಿನ 2 GB ಡೇಟಾದೊಂದಿಗೆ 84 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. 

JioPhone 5G: ಭಾರತದ ಅತಿ ಅಗ್ಗದ ರಿಲಯನ್ಸ್‌ 5G ಫೋನ್ ಬಿಡುಗಡೆ ಸಾಧ್ಯತೆ: ಫೀಚರ್ಸ್‌ ಲೀಕ್!‌

₹4199 ಪ್ಲಾನ್:
·        ₹1499 ಮೌಲ್ಯದ 1-ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ -
·        ಕಾಂಪ್ಲಿಮೆಂಟರಿ ಜಿಯೋ ₹4,199 ಯೋಜನೆ: ದಿನ  3 GB ಡೇಟಾದೊಂದಿಗೆ 365 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

₹1499 ಅಥವಾ ₹4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಅನ್ನು ಹೇಗೆ ಸಕ್ರಿಯಗೊಳಿಸುವುದು

1.     ಒಮ್ಮೆ ನೀವು ₹1499 ಅಥವಾ ₹4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ, ನಿಮ್ಮ ಮೈಜಿಯೋ ಖಾತೆಯಲ್ಲಿ ನೀವು ಅನನ್ಯವಾದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಕೂಪನ್ ಕೋಡ್ ಅನ್ನು ಸ್ವೀಕರಿಸುತ್ತೀರಿ.
2.     1 ವರ್ಷದ Disney+ Hotstar ಪ್ರೀಮಿಯಂ ಸದಸ್ಯತ್ವವನ್ನು ಪಡೆಯಲು ನೀವು ಈ ಕೂಪನ್ ಕೋಡ್ ಅನ್ನು ಬಳಸಬಹುದು.

3.     1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲು:
a)     ಭೇಟಿ ನೀಡಿ: https://www.hotstar.com/in/subscribe/promo
b)     ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಿ ಮತ್ತು OTP ಅನ್ನು ನಮೂದಿಸಿ
c)     ನಂತರ ಅನನ್ಯ ಕೂಪನ್ ಕೋಡ್ ಅನ್ನು ನಮೂದಿಸಿ
d)     ದೃಢೀಕರಣವನ್ನು ಒದಗಿಸಿ ಮತ್ತು ನಿಮ್ಮ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗಿದೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್