ಕರ್ನಾಟಕದ ಎಲ್ಲಾ ಜಿಲ್ಲೆ, 200ಕ್ಕೂ ಹೆಚ್ಚು ನಗರ ಪಟ್ಟಣಗಳಲ್ಲಿ ಜಿಯೋ ಫೈಬರ್ ಸೇವೆ!

By Suvarna News  |  First Published Feb 22, 2024, 8:55 PM IST

ಜಿಯೋ ಏರ್‌ಫೈಬರ್ ಇದೀಗ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಾಗಿದೆ. ಈ ಮೂಲಕ ಕರ್ನಾಟಕದ ಗ್ರಾಹಕರಿಗೆ ಜಿಯೋ ಬಂಪರ್ ಕೊಡುಗೆಯನ್ನು ನೀಡಿದೆ. ಜಿಯೋಫೈಬರ್ ಇದೀಗ ಅತ್ಯುತ್ತಮ ಪ್ಲಾನ್ ಕೂಡ ಗ್ರಾಹಕರಿಗೆ ನೀಡಿದೆ.


ಬೆಂಗಳೂರು(ಫೆ.22)   ಜಿಯೋ ಏರ್ ಫೈಬರ್ ಈಗ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಇನ್ನೂರಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಮಟ್ಟಣಗಳಲ್ಲಿ ಲಭ್ಯ ಇದೆ. ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳಲ್ಲೂ ಜಿಯೋಏರ್ ಫೈಬರ್ ಅನುಕೂಲಗಳು ಸಿಗಲಿದೆ. ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 1.5 ಮಿಲಿಯನ್, ಅಂದರೆ ಹದಿನೈದು ಲಕ್ಷ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ.ಇದೀಗ ಸಂಪೂರ್ಣ ಜಿಯೋ ಫೈಬರ್ ಸೇವೆ ನೀಡಲು ಜಿಯೋ ಸಜ್ಜಾಗಿದೆ.  

1. ಡಿಜಿಟಲ್ ಎಂಟರ್ ಟೇನ್ ಮೆಂಟ್ 
- ಎಲ್ಲ ಪ್ರಮುಖ 550+ ಡಿಜಿಟಲ್ ಟಿವಿ ಚಾನೆಲ್‌ಗಳು: ನಿಮ್ಮ ಮೆಚ್ಚಿನ ಎಲ್ಲ ಟಿವಿ ಚಾನೆಲ್‌ಗಳು ಹೈ-ಡೆಫಿನಿಷನ್‌ನಲ್ಲಿ ಲಭ್ಯವಿದೆ
- ಕ್ಯಾಚ್-ಅಪ್ ಟಿವಿ: ಬಳಕೆದಾರರು ಈಗ ಅವರು ಬಯಸಿದಷ್ಟು ಹಿಂದಿನ ತನಕ ಕಾರ್ಯಕ್ರಮಗಳನ್ನು ಹೆಕ್ಕಿ, ನೋಡಬಹುದು.
- ಅತ್ಯಂತ ಜನಪ್ರಿಯ 16+ ಒಟಿಟಿ ಅಪ್ಲಿಕೇಷನ್‌ಗಳು: ಜಿಯೋಏರ್ ಫೈಬರ್ ಬಳಕೆದಾರರು ಪ್ರಮುಖ ಒಟಿಟಿ ಅಪ್ಲಿಕೇಷನ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು. ಬಳಕೆದಾರರು ಈ ಚಂದಾದಾರಿಕೆಯನ್ನು ಬಳಸಿಕೊಳ್ಳಬಹುದು ಮತ್ತು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಅವರ ಆಯ್ಕೆಯ ಯಾವುದೇ ಸಾಧನಗಳಳು ಎಲ್ಲದರಲ್ಲೂ ಅಪ್ಲಿಕೇಷನ್‌ಗಳನ್ನು ಬಳಸಬಹುದು.

Latest Videos

undefined

2. ಬ್ರಾಡ್ ಬ್ಯಾಂಡ್
- ಒಳಾಂಗಣ ವೈಫೈ ಸೇವೆ: ಜಿಯೋದ ವಿಶ್ವಾಸಾರ್ಹ ವೈಫೈ ಸಂಪರ್ಕ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರ ಸ್ಥಳದ ಪ್ರತಿ ಮೂಲೆಯಲ್ಲಿಯೂ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಅನುಭವ ದೊರೆಯುತ್ತದೆ.

ನೆಟ್‌ಫ್ಲಿಕ್ಟ್‌, ಅಮೆಜಾನ್‌ ಪ್ರೈಂಗೆ ಭರ್ಜರಿ ಪೈಪೋಟಿ; ಬೃಹತ್ OTT ಒಪ್ಪಂದಕ್ಕೆ ಸಹಿ ಹಾಕಲಿರುವ ಮುಕೇಶ್ ಅಂಬಾನಿ!

3. ಸ್ಮಾರ್ಟ್ ಹೋಮ್ ಸೇವೆ:
- ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಕ್ಲೌಡ್ ಪಿಸಿ
- ಭದ್ರತೆ ಮತ್ತು ಕಣ್ಗಾವಲು ಸಲ್ಯೂಷನ್ಸ್
- ಹೆಲ್ತ್ ಕೇರ್
- ಶಿಕ್ಷಣ
- ಸ್ಮಾರ್ಟ್ ಹೋಮ್ ಐಒಟಿ
- ಗೇಮಿಂಗ್
-ಹೋಮ್ ನೆಟ್ ವರ್ಕಿಂಗ್

4. ಹೆಚ್ಚುವರಿ ವೆಚ್ಚವಿಲ್ಲದೆ ಗೃಹ ಸಾಧನಗಳು:
- ನಿಮ್ಮ ಮನೆ ಅಥವಾ ವ್ಯಾಪಾರದ ಸ್ಥಳದಲ್ಲಿ ಯಾವಾಗಲೂ ಉತ್ತಮ ಕವರೇಜ್‌ಗಾಗಿ ವೈಫೈ ರೂಟರ್
- 4ಕೆ ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್
- ಧ್ವನಿ ನೆರವಿನಿಂದ ಕಾರ್ಯ ನಿರ್ವಹಿಸುವ ರಿಮೋಟ್

ಜಿಯೋ ಏರ್‌ಫೈಬರ್ ಸಂಪರ್ಕಗಳು ಹೆಚ್ಚಾಗುವುದರಿಂದ ಭಾರತೀಯರು ಮನರಂಜನೆಗಾಗಿ ಬಳಕೆ ಮಾಡುವ ಅಭ್ಯಾಸದಲ್ಲಿ ಭಾರೀ ಬದಲಾವಣೆ ಆಗುತ್ತದೆ. ಹವಾಮಾನ ಪರಿಸ್ಥಿತಿಗಳು ಮತ್ತು ತಾಂತ್ರಿಕ ದೋಷಗಳಿಂದ ಉಂಟಾಗುವ ಸೇವಾ ಅಡೆತಡೆಗಳು ಉಂಟಾಗುವ ಡಿಟಿಎಚ್ ಸೇವೆಗಳಿಗಿಂತ ಭಿನ್ನವಾಗಿ, ಜಿಯೋ ಏರ್ ಫೈಬರ್  ಸಂಪರ್ಕಗಳು ದೃಢವಾದ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ನೀಡುತ್ತವೆ.

Paytm ವಾಲೆಟ್ ಖರೀದಿಸ್ತಾರಾ ಅಂಬಾನಿ? ವರದಿ ಬೆನ್ನಲ್ಲೇ ಜಿಯೋ ಷೇರು ಶೇ.13ರಷ್ಟು ಜಿಗಿತ!

ಜಿಯೋ ಸಂಪರ್ಕಗಳು ಅಡೆತಡೆಯಿಲ್ಲದ ಸೇವೆಯನ್ನು ಖಾತ್ರಿ ಪಡಿಸುತ್ತದೆ, ಉತ್ತಮ ಕಾರ್ಯಕ್ಷಮತೆಯನ್ನು ಸಹ ಒದಗಿಸುತ್ತವೆ. ಆದ್ದರಿಂದ ಇದು ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ. ಒಟಿಟಿ ಅಪ್ಲಿಕೇಷನ್‌ಗಳು ಮತ್ತು ಜಿಯೋ ಸಿನಿಮಾ ಮತ್ತು ಜಿಯೋಟಿವಿಯಂಥ ಪ್ಲಾಟ್‌ಫಾರ್ಮ್‌ಗಳ ಹೆಚ್ಚಳವು ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಪ್ಲಾಟ್‌ಫಾರ್ಮ್‌ಗಳು ಜಿಯೋ ಏರ್‌ಫೈಬರ್ ಸಂಪರ್ಕಗಳ ಮೂಲಕ ಕೂಡ ದೊರೆಯುತ್ತವೆ. ಕ್ರೀಡೆಗಳ ನೇರಪ್ರಸಾರ, ಇತ್ತೀಚಿನ ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಜನಪ್ರಿಯ ಟಿವಿ ಕಾರ್ಯಕ್ರಮಗಳು ಸೇರಿದಂತೆ ಭಾರತೀಯ ವೀಕ್ಷಕರ ವಿವಿಧ ಅಭಿರುಚಿಗಳಿಗೆ ತಕ್ಕಂತೆ ಅತ್ಯುತ್ಕೃಷ್ಟ ಗುಣಮಟ್ಟದ ಎಚ್ ಡಿ ಕಂಟೆಂಟ್ ಗಳನ್ನು ಪೂರೈಸುತ್ತವೆ. ಈಗ ದೇಶದಲ್ಲಿ ಮನರಂಜನಾ ಜಗತ್ತಿನಲ್ಲಿ ಅತಿ ದೊಡ್ಡ ಬದಲಾವಣೆ ಆಗುತ್ತಿದೆ. ಡಿಟಿಎಚ್ ಸೇವೆಗಳಿಗಿಂತ ಜಿಯೋಏರ್ ಫೈಬರ್ ಗೆ ಪ್ರಾತಿನಿಧ್ಯ ನೀಡುತ್ತಿರುವುದು ಭಾರತೀಯ ಮನರಂಜನಾ ಲೋಕದ ಅನೂಹ್ಯ ಬದಲಾವಣೆಗೆ ಸಾಕ್ಷಿಯಾಗಿದೆ.
 

click me!