ಮನುಷ್ಯನ ಮೆದುಳಿಗೆ ಚಿಪ್ ಅಳವಡಿಸಿ ನ್ಯೂನ್ಯತೆ ಹೊಂದಿದವರಿಗೆ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವರಿಗೆ ಎಲಾನ್ ಮಸ್ಕ್ ಹೊಸ ಯೋಜನೆ ಆಶಾಕಿರಣವಾಗಲು ಎಲ್ಲಾ ಲಕ್ಷಣ ಗೋಚರಿಸುತ್ತಿದೆ.ನ್ಯೂರಾಲಿಂಕ್‌ನಿಂದ ಮೆದುಳಿಗೆ ಚಿಪ್ ಅಳವಡಿಸುವ ಮೊದಲ ಪ್ರಯೋಗ ಯಶಸ್ವಿಯಾಗಿದೆ. ಮೊದಲ ರೋಗಿಯ ಕುರಿತು ಎಲಾನ್ ಮಸ್ಕ್ ಮಹತ್ವದ ಮಾಹಿತಿ ನೀಡಿದ್ದಾರೆ.
ಕ್ಯಾಲಿಫೋರ್ನಿಯಾ(ಫೆ.20) ಉದ್ಯಮಿ ಎಲಾನ್ ಮಸ್ಕ್ ಹೊಸ ಯೋಜನೆ ನ್ಯೂರಾಲಿಂಕ್ ಫಲಪ್ರದವಾಗುವ ಲಕ್ಷಣ ಗೋಚರಿಸಿದೆ. ಮನುಷ್ಯನ ಮೆದುಳಿಗೆ ಚಿಪ್ ಅಳವಡಿಸುವ ಅತೀ ದೊಡ್ಡ ಆರೋಗ್ಯ ಯೋಜನೆಯಲ್ಲಿ ಎಲಾನ್ ಮಸ್ಕ್ ಆರಂಭಿಕ ಯಶಸ್ಸು ಗಳಿಸಿದ್ದಾರೆ. ರೋಗಿಯ ಮೆದುಳಿಗೆ ಚಿಪ್ ಅಳವಡಿಸಿದ ಮೊದಲ ಪ್ರಯೋಗ ಯಶಸ್ವಿಯಾಗಿದೆ. ಇದೀಗ ರೋಗಿ ಉತ್ತಮ ಪ್ರಗತಿ ಸಾಧಿಸಿದ್ದಾನೆ. ರೋಗಿಗೆ ಮೌಸ್ ಬಳಸಲು ಸಾಧ್ಯವಾಗುತ್ತಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಸ್ಪೇಸ್ ಎಕ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಎಲಾನ್ ಮಸ್ಕ್ ತಮ್ಮ ಆರೋಗ್ಯ ಯೋಜನೆಯ ಆರಂಭಿಕ ಯಶಸ್ಸಿನ ಹೆಜ್ಜೆಯನ್ನು ವಿವರಿಸಿದ್ದಾರೆ.
ಮೊಬೈಲ್, ಕಂಪ್ಯೂಟರ್ ಸೇರಿದಂತೆ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಮೆದುಳಿನ ರೀತಿಯಲ್ಲಿ ಕೆಲಸ ಮಾಡುವುದು ಕಂಪ್ಯೂಟರ್ ಚಿಪ್‌ಗಳು. ಗಾತ್ರದಲ್ಲಿ ಸಣ್ಣದಿದ್ದರೂ, ಇಡೀ ಎಲೆಕ್ಟ್ರಾನಿಕ್ ಉಪಕರಣಗಳ ಜೀವನಾಡಿಗಳಿವು. ಇಂಥದ್ದೇ ಚಿಪ್‌ಗಳನ್ನು ಮಾನವನ ಮೆದುಳಿಗೂ ಅಳವಡಿಸಿ ಅದನ್ನು ಸಂವನದ ಮಾಧ್ಯಮವಾಗಿ ಬಳಸುವ ಎಲಾನ್ ಮಸ್ಕ್ ಐತಿಹಾಸಿಕ ಪ್ರಯೋಗವೊಂದು ಆರಂಭಿಕ ಯಶಸ್ಸು ಪಡೆದಿದೆ.
undefined
ಮೊದಲ ಬಾರಿ ಮಾನವನಿಗೆ ವೈರ್‌ಲೆಸ್ ಬ್ರೈನ್ ಚಿಪ್ ಅಳವಡಿಸಿದ ಎಲೋನ್ ಮಸ್ಕ್‌ನ ನ್ಯೂರಾಲಿಂಕ್!
ಎಲಾನ್ ಮಸ್ಕ್ ಹೊಸ ಸ್ಟಾರ್ಟ್ ಅಪ್ ಮೂಲಕ ಚಿಪ್ ಅಳವಡಿಕೆ ಯೋಜನೆ ಆರಂಭಗೊಂಡಿದೆ. ನ್ಯೂರಾಲಿಂಗ್ ಮೂಲಕ ರೋಗಿಗೆ ಸರ್ಜರಿ ಮೂಲಕ ಚಿಪ್ ಅಳವಡಿಸಲಾಗಿದೆ. ರೋಗಿ ಮೌಸ್ ಬಟನ್‌ಗಳನ್ನು ಪ್ರೆಸ್ ಮಾಡುತ್ತಿದ್ದಾರೆ. ಕಳೆದ ತಿಂಗಳು ಮಾನವ ರೋಗಿಗೆ ಚಿಪ್ ಅಳವಡಿಕೆ ಯಶಸ್ವಿಯಾಗಿ ಮಾಡಲಾಗಿತ್ತು. ಇದೀಗ ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಸ್ಕ್ ಹೇಳಿದ್ದಾರೆ.
2023ರ ಸೆಪ್ಟೆಂಬರ್ ತಿಂಗಳಲ್ಲಿ ಮಾನವನ ಮೆದುಳಿಗೆ ಚಿಪ್ ಅಳವಡಿಯೆಕ ಎಲಾನ್ ಮಸ್ಕ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ನ್ಯೂರಾಲಿಂಕ್‌ಗೆ ಅನುಮತಿ ನೀಡಿತ್ತು. ನ್ಯೂರಾಲಿಂಕ್ ಕಂಪನಿ, ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದರೊಳಗೆ ಚಿಪ್ ಕೂರಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಆರಂಭಿಕ ಯಶಸ್ಸು ಪಡೆದಿರುವ ನ್ಯೂರಾಲಿಂಕ್, ಸಂಪೂರ್ಣ ಯಶಸ್ವಿಯಾದರೆ ಪಾರ್ಶ್ವವಾಯು ಸೇರಿದಂತೆ ದೈಹಿಕವಾಗಿ ನ್ಯೂನತೆ ಹೊಂದಿರುವ ವ್ಯಕ್ತಿಗಳು ತಮ್ಮ ಹಲವು ಕೆಲಸಗಳನ್ನು ಯಾರ ಸಹಾಯವೂ ಇಲ್ಲದೇ ಕೇವಲ ತಲೆಯಲ್ಲಿ ಯೋಚಿಸುವ ಮೂಲಕವೇ ಮಾಡಬಹುದಾಗಿದೆ. ಹೀಗಾಗಿಯೇ ಈ ಪ್ರಯೋಗದ ಫಲಿತಾಂಶದ ಕುರಿತು ಇಡೀ ವಿಶ್ವವೇ ಕುತೂಹಲದ ಕಣ್ಣಿಟ್ಟಿದೆ.
ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ;ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್‌ಗೆ ಒಲಿದ ಅಗ್ರಸ್ಥಾನ
ಮಸ್ಕ್‌ರ ನ್ಯೂರಾಲಿಂಕ್ ಕಂಪನಿ ಚಿಕ್ಕದಾದ ಹಲವು ದಾರದ ರೀತಿಯ ವೈರ್‌ಗಳನ್ನು ಒಳಗೊಂಡ ಅತ್ಯಂತ ಸಣ್ಣದಾದ ಚಿಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಟೆಲಿಪಥಿ ಎಂದು ಹೆಸರಿಡಲಾಗಿದೆ. ಇದನ್ನು ಅಳವಡಿಸಿಕೊಂಡ ವ್ಯಕ್ತಿಯ ಮಾಡುವ ಚಿಂತನೆಗಳನ್ನು ಈ ಚಿಪ್ ಗ್ರಹಿಸಿ ದೇಹದ ಹೊರಗೆ ಇರುವ ಮೊಬೈಲ್, ಕಂಪ್ಯೂಟರ್‌ನಂಥ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸಂದೇಶ ರವಾನಿಸುತ್ತದೆ. ಅಂದರೆ ಮೊಬೈಲ್ ಆನ್ ಮಾಡುವುದು, ಯಾರಿಗಾದರೂ ಕರೆ ಮಾಡುವುದು, ಕಂಪ್ಯೂಟರ್‌ನಲ್ಲಿ ಯಾವುದೇ ಕೆಲಸ ಮಾಡುವ ಕುರಿತ ಮಾನವನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಈ ಚಿಪ್ ಮಾಡುತ್ತದೆ.